550ಕ್ಕೂ ಹೆಚ್ಚು ಮಂದಿಗೆ ವೀರ್ಯದಾನ ಮಾಡಿದ ವ್ಯಕ್ತಿ, ಊರಲ್ಲೆಲ್ಲಾ ಅಣ್ಣ-ತಮ್ಮಂದಿರೇ!

By Vinutha PerlaFirst Published Apr 30, 2023, 10:39 AM IST
Highlights

ವೀರ್ಯ ದಾನದ ಮೂಲಕ 550ಕ್ಕೂ ಹೆಚ್ಚು ಮಕ್ಕಳಿಗೆ ತಂದೆ ಎಂದು ಶಂಕಿಸಲಾಗಿರುವ ವ್ಯಕ್ತಿಗೆ ಇನ್ಮುಂದೆ ವೀರ್ಯ ದಾನ ಮಾಡದಂತೆ ನೆದರ್ಲ್ಯಾಂಡ್ಸ್‌ ಕೋರ್ಟ್‌ ನಿರ್ಬಂಧ ಹೇರಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ನೆದರ್ ಲ್ಯಾಂಡ್: ವೀರ್ಯ ದಾನದ ಮೂಲಕ 550ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾಗಿರುವ ವ್ಯಕ್ತಿಗೆ ಇನ್ಮುಂದೆ ವೀರ್ಯ ದಾನ ಮಾಡದಂತೆ ನೆದರ್ಲ್ಯಾಂಡ್ಸ್‌ ಕೋರ್ಟ್‌ ನಿರ್ಬಂಧ ಹೇರಿದೆ. ಈ ವೀರ್ಯದಾನಿ ಇನ್ನು ಮುಂದೆ ವೀರ್ಯದಾನ ಮಾಡಬಾರದು ಎಂದು ಡಚ್​ನ ನ್ಯಾಯಾಲಯ ಆದೇಶ ಹೊರಡಿಸಿದೆ.  ಫಲವತ್ತತೆಯ ಹಗರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಗೆ ನಿರ್ಬಂಧ ಹೇರಲಾಗಿದೆ. ವೀರ್ಯದಾನಿಯನ್ನು 41 ವರ್ಷ ವಯಸ್ಸಿನ ಜೋನಾಥನ್ ಜಾಕೋಬ್ ಮೈಜರ್ ಎಂದು ಗುರುತಿಸಲಾಗಿದೆ. ಮಗುವಿನ ತಾಯಿಯೊಬ್ಬರು ಫೌಂಡೇಶನ್‌ ಮೂಲಕ ಹೇಗ್‌ ನ ಕೋರ್ಟ್‌ ನಲ್ಲಿ ದಾವೆ ಹೂಡಿದ ನಂತರ  ವ್ಯಕ್ತಿ ವೀರ್ಯ ದಾನ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಸಲ್ಲಿಸಿದ ಅರ್ಜಿಯ ಮೆರೆಗೆ ನ್ಯಾಯಾಲಯ ಈ ತೀರ್ಪನ್ನು ನೀಡಿದೆ.

ಜೋನಾಥನ್‌ ಜಾಕೋಬ್‌ ಮೈಜರ್‌ ಒಂದು ವೇಳೆ ಕೋರ್ಟ್‌ ಆದೇಶ ಉಲ್ಲಂಘಿಸಿ ವೀರ್ಯದಾನ (Sperm donating) ಮಾಡಿದಲ್ಲಿ 1,00,000 ಯುರೋಗಳಷ್ಟು(ಅಂದಾಜು 90,41,657) ದಂಡ (Fine) ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ವೀರ್ಯದಿಂದ ಮಗುವನ್ನು ಪಡೆದ ತಾಯಿಯೊಬ್ಬರು 'ಈತ ಈ ಹಿಂದೆ ವೀರ್ಯದಾನ ಮಾಡಿದ ಸಂಖ್ಯೆಯ ಬಗ್ಗೆ ತಪ್ಪು ಮಾಹಿತಿ (Information) ನೀಡಿದ್ದಾನೆ' ಎಂದು ಸಲ್ಲಿಸಿದ ಅರ್ಜಿಯ ಮೆರೆಗೆ ನ್ಯಾಯಾಲಯ ಈ ತೀರ್ಪನ್ನು ನೀಡಿದೆ. 

ನಕಲಿ ಹೆಸರಿನಲ್ಲಿ ವೀರ್ಯ ದಾನ, 60ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾದ ವ್ಯಕ್ತಿ!

2007ರಲ್ಲಿ ವೀರ್ಯದಾನ ಮಾಡಲು ಆರಂಭಿಸಿದ ಜೋನಾಥನ್‌
ಇನ್ಮುಂದೆ ಜೋನಾಥನ್‌ ಯಾವುದೇ ಕಾರಣಕ್ಕೂ ವೀರ್ಯ ದಾನ ಮಾಡುವುದಾಗಿ ಮಕ್ಕಳನ್ನು (Children) ಪಡೆಯುವ ನಿರೀಕ್ಷೆಯಲ್ಲಿರುವ ಪೋಷಕರನ್ನು ಸಂಪರ್ಕಿಸುವಂತಿಲ್ಲ ಎಂದು ಕೋರ್ಟ್‌ ನಿರ್ದೇಶನ ನೀಡಿದೆ.  ಆದರೆ ಜೋನಾಥನ್‌ 2007ರಲ್ಲಿ ವೀರ್ಯದಾನ ಮಾಡಲು ಆರಂಭಿಸಿದನು. ಪ್ರಸ್ತುತ ಈತ 550 ರಿಂದ 600 ಮಕ್ಕಳಿಗೆ ತಂದೆಯಾಗಿದ್ದಾನೆ ಎಂದು ವರದಿಯಾಗಿದೆ. ಜೊತೆಗೆ ವಿದೇಶಗಳಲ್ಲಿ ಮತ್ತು ಆನ್ಲೈನ್ ನಲ್ಲಿಯೂ ವೀರ್ಯವನ್ನು ದಾನ ಮಾಡಿದ್ದಾನೆ.. ವೀರ್ಯದಾನಕ್ಕೆ ಸಂಬಂಧಿಸಿದ ಡಚ್ ಕಾನೂನಿನ ಪ್ರಕಾರ ಯಾವುದೇ ವೀರ್ಯದಾನಿಗಳು 12ಕ್ಕಿಂತ ಹೆಚ್ಚು ಮಹಿಳೆಯರಿಗೆ (Woman) ವೀರ್ಯವನ್ನು ದಾನಮಾಡಬಾರದು ಹಾಗೂ 25ಕ್ಕಿಂತ ಹೆಚ್ಚು ಮಕ್ಕಳಿಗೆ ತಂದೆಯಾಗಬಾರದು ಎಂದು ಹೇಳುತ್ತದೆ. ಆದರೆ, ಜಾಕೋಬ್ ಈವರೆಗೆ ತನ್ನ ವೀರ್ಯವನ್ನು ಕನಿಷ್ಠ 13 ಕ್ಲಿನಿಕ್​​​ಗಳಿಗೆ ದಾನ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ವ್ಯಕ್ತಿ ಬೇಕಾಬಿಟ್ಟಿ ವೀರ್ಯದಾನ ಮಾಡಿರೋ ಈ ತಪ್ಪಿನಿಂದ ನೂರಾರು ಕುಟುಂಬಗಳಲ್ಲಿ ಮಕ್ಕಳು ತಮಗೆ ಗೊತ್ತಿಲ್ಲದೆ ಸಂಬಂಧದಲ್ಲಿ ಸಹೋದರರಾಗಿದ್ದಾರೆ. ಇದರಿಂದ ಮಕ್ಕಳು ಭವಿಷ್ಯದಲ್ಲಿ ತಮ್ಮ ಸಹೋದರತ್ವದಲ್ಲಿಯೇ ಮದುವೆ (Marriage)ಯಾಗೋ ಸಾಧ್ಯತೆಯಿದೆ. ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಇನ್ನು ಮುಂದೆ ಈ ವ್ಯಕ್ತಿ ವೀರ್ಯ ದಾನ ಮಾಡಬಾರದು ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ಜಾಕೋಬ್ ವೀರ್ಯಾಣು ದಾನ ಮಾಡಿದ ಎಲ್ಲಾ ಚಿಕಿತ್ಸಾಲಯಗಳ ಬಗ್ಗೆ ಮಾಹಿತಿ ನೀಡುವಂತೆ ನ್ಯಾಯಾಲಯವು ಸೂಚಿಸಿದೆ.

ವೀರ್ಯ ದಾನ ಮಾಡಿ..ದುಡ್ಡು ಗಳಿಸಿ, ವಿದ್ಯಾರ್ಥಿಗಳಿಗೆ ಬಂಪರ್ ಆಫರ್ ಕೊಟ್ಟ ಚೀನಾ

ಜೋನಾಥನ್‌ ನೆದರ್ಲ್ಯಾಂಡ್ಸ್‌ ನ 13 ಕ್ಲಿನಿಕ್ಸ್‌ ಗಳಲ್ಲಿ ವೀರ್ಯ ದಾನ ಮಾಡಿರುವುದಾಗಿ ತಿಳಿದುಬಂದಿದೆ. ಡಚ್‌ ವೈದ್ಯಕೀಯ ನಿಯಮಾನುಸಾರ, ವೀರ್ಯ ದಾನಿಗಳು 12ಕ್ಕಿಂತ ಹೆಚ್ಚು ಮಹಿಳೆಯರಿಗೆ ವೀರ್ಯ ದಾನ ಮಾಡುವಂತಿಲ್ಲ ಅಥವಾ 25 ಮಕ್ಕಳಿಗಿಂತ ಹೆಚ್ಚು ಮಕ್ಕಳಿಗೆ ತಂದೆಯಾಗುವಂತಿಲ್ಲ. ವೀರ್ಯದಾನದ ಮೂಲಕ ನೂರಾರು ಮಕ್ಕಳಿಗೆ ತಂದೆಯಾದರೆ, ನಮಗೆ ನೂರಾರು ಮಂದಿ ಒಡಹುಟ್ಟಿದವರು ಇದ್ದಾರೆ ಎಂಬ ವಿಷಯ ಮಕ್ಕಳಲ್ಲಿ ಮಾನಸಿಕ ಆಘಾತಕ್ಕೊಳಗಾಗುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ನೂರಾರು ಮಹಿಳೆಯರಿಗೆ ವೀರ್ಯ ದಾನ ಮಾಡುವುದನ್ನು ತಡೆಯಬೇಕಾಗಿದೆ ಎಂದು ಕೋರ್ಟ್‌ ತಿಳಿಸಿದೆ.

ಜೊನಾಥನ್ ಜಾಕೋಬ್ ಮೈಜರ್, ನೆದರ್ಲ್ಯಾಂಡ್ಸ್ ನಿವಾಸಿಯಾಗಿದ್ದಾನೆ. ಈತನ ವಿರುದ್ಧ ನೂರಾರು ಮಹಿಳೆಯರು ಪ್ರಕರಣ ದಾಖಲಿಸಿದ್ದಾರೆ. ಆ ಮಕ್ಕಳಿಗೆ ಜೊನಾಥನ್ ನಾನೊಬ್ಬನೇ ತಂದೆ ಎಂದು ಹೇಳುತ್ತಾನೆ. 

click me!