Family Problems : ಹೆಂಡತಿ ಮನೆಯವರು ಎಲ್ಲದಕ್ಕೂ ಮೂಗು ತೂರಿಸ್ತಾರೆ ಏನ್ ಮಾಡ್ಲಿ?

By Suvarna News  |  First Published Apr 29, 2023, 5:13 PM IST

ಅತ್ತೆ – ಮಾವ ಇಬ್ಬರೂ ಮಗಳ ಜೀವನದಲ್ಲಿ ಸಮಸ್ಯೆಯಾಗ್ಬಾರದು. ಮಗಳಿಗೆ ಸೂಕ್ತ ಸಲಹೆ ನೀಡ್ಬೇಕೆ ಹೊರತೂ ಆಕೆಯ ದಾಂಪತ್ಯ ಜೀವನ ಹಾಳು ಮಾಡುವ ಕೆಲಸ ಮಾಡಬಾರದು. ಇದು ಮಗಳ ಜೀವನ ಸರಿಮಾಡುವ ಬದಲು ದಾಂಪತ್ಯ ಮುರಿಯಲು ಕಾರಣವಾಗುತ್ತದೆ. 
 


ಮದುವೆಯಾದ ಹೆಣ್ಣು ಕುಲದಿಂದ ಹೊರಗೆ ಎನ್ನುವ ಮಾತಿದೆ. ಹೀಗೆ ಹೇಳೋಕೆ ಕಾರಣವೂ ಇದೆ. ಮದುವೆಯಾದ್ಮೇಲೆ ಹೆಣ್ಣು ಮಕ್ಕಳು ತವರು ಮನೆಯ ವಿಷ್ಯದಲ್ಲಿ ತಲೆಹಾಕಬಾರದು. ಹಾಗೆಯೇ ಮಗಳ ಕೌಟುಂಬಿಕ ವಿಷ್ಯದಲ್ಲಿ ತವರು ಮನೆಯವರು ಮಧ್ಯಪ್ರವೇಶ ಮಾಡಬಾರದು. ಒಬ್ಬರ ಮನೆಯ ಗಲಾಟೆಯಲ್ಲಿ ಇನ್ನೊಬ್ಬರ ಮನೆಯವರು ಮೂಗು ತೂರಿಸಿದಾಗ ಸಮಸ್ಯೆ ದೊಡ್ಡದಾಗುವ ಸಾಧ್ಯತೆಯಿರುತ್ತದೆ. ಅನೇಕ ಪಾಲಕರಿಗೆ ಮಕ್ಕಳ ಮೇಲೆ ಅತಿಯಾದ ಪ್ರೀತಿಯಿರುತ್ತದೆ. ಅವರು ಸದಾ ಮಗಳು, ಮಗಳ ಗಂಡ, ಅತ್ತೆ, ಮಾವನ ಬಗ್ಗೆ ಮಗಳ ಜೊತೆ ಚರ್ಚೆ ಮಾಡ್ತಾ, ಆಕೆಗೆ ಸಲಹೆ ನೀಡ್ತಾ ಇರ್ತಾರೆ. ಇದು ಪ್ರೀತಿ ಅಂತ ಅವರು ಅಂದುಕೊಂಡ್ರೆ ಗಂಡನ ಮನೆಯವರು ಇದನ್ನು ದ್ವೇಷಿಸಬಹುದು.

ಈಗ ಈತನ ಕಥೆಯೂ ಭಿನ್ನವಾಗಿಲ್ಲ. ಪತ್ನಿ (Wife) ಮನೆಯವರ ಅನಗತ್ಯ ಪ್ರವೇಶ ಆತನ ಉಸಿರುಗಟ್ಟಿಸುತ್ತಿದೆ. ಮುಂದೇನು ಮಾಡೋದು ಎನ್ನುವ ಪ್ರಶ್ನೆ (Question) ಯನ್ನು ಆತ ಕೇಳಿದ್ದಾನೆ.

Latest Videos

undefined

ಪತ್ನಿ ಮನೆ (Home) ಯವರ ಕಾಟಕ್ಕೆ ಬೇಸತ್ತ ಪತಿ : ಆತನದು ಮಧ್ಯಮ ವರ್ಗದ ಕುಟುಂಬ. ಪಾಲಕರ ಸಲಹೆಯಂತೆ ಮದುವೆಯಾಗಿದ್ದಾನೆ. ಪತ್ನಿ ಮನೆಯವರು ಸ್ವಲ್ಪ ಶ್ರೀಮಂತರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಬರ್ತಾ ಬರ್ತಾ ಅವರ ಕಿರಿಕಿರಿ ಹೆಚ್ಚಾಗಿದೆ. ಮಗಳು ಮನೆಯಲ್ಲಿ ಏನು ಮಾಡ್ತಾಳೆ ಎಂಬುದನ್ನು ಮಾತ್ರ ಅವರು ವಿಚಾರಿಸೋದಿಲ್ಲ, ಮಗಳ ಮನೆಯವರು ಮನೆಯಲ್ಲಿ ಏನು ತಿನ್ನುತ್ತಾರೆ, ಏನು ಮಾಡ್ತಾರೆ ಎಂಬುದೆಲ್ಲ ಅವರಿಗೆ ಬೇಕು. ನಿತ್ಯದ ಕೆಲಸದಲ್ಲಿ ಅವರು ಬರ್ತಿರೋದು ಈತನಿಗೆ ಹಿಂಸೆಯಾಗ್ತಿದೆ. ಹಾಗೆಯೇ ಎಲ್ಲವನ್ನೂ ಕಂಟ್ರೋಲ್ ಮಾಡುವ ಪ್ರಯತ್ನದಲ್ಲಿ ಅವರಿದ್ದಾರೆ. ನನ್ನ ತಂದೆ – ತಾಯಿಯೇ ನನ್ನನ್ನು ಕಂಟ್ರೋಲ್ ಮಾಡಲ್ಲ. ನಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಇದೇ ಕಾರಣಕ್ಕೆ ಅವರು ನಮ್ಮಿಂದ ದೂರವಿದ್ದಾರೆ. ಆದ್ರೆ ಪತ್ನಿಯ ಮನೆಯವರು ತಿಂಗಳ ಖರ್ಚನ್ನು ಕೂಡ ಅವರೇ ನೋಡಿಕೊಳ್ಳುವಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ನಾನು ಪತ್ನಿಗೆ ಹೇಳಿದ್ದೇನೆ. ಅವರ ಜೊತೆ ಮಾತನಾಡುವಂತೆ ಹೇಳಿದ್ದೇನೆ. ಆದ್ರೆ ಆಕೆ ಅದನ್ನು ಪ್ರೀತಿ ಎನ್ನುತ್ತಾಳೆ. ಅವರಿಂದ ನನಗೆ ಅನೇಕ ಬಾರಿ ಅವಮಾನವಾಗಿದೆ. ಅವರ ಜೊತೆ ಮಾತನಾಡಲೂ ನನಗೆ ಮನಸ್ಸು ಬರ್ತಿಲ್ಲ. ಏನು ಮಾಡ್ಲಿ ಎಂದು ವ್ಯಕ್ತಿ ಪ್ರಶ್ನೆ ಮಾಡಿದ್ದಾನೆ.

ಬ್ಯೂಟಿಪಾರ್ಲರ್‌ನಿಂದ ಲವರ್ ಜೊತೆ ಓಡಿ ಹೋದ ವಧು, ಮಂಟಪದಲ್ಲೇ ಕಾದು ಕುಳಿತು ಸುಸ್ತಾದ ವರ!

ತಜ್ಞರು ಹೇಳೋದೇನು? : ಮದುವೆಯಾದ ಆರಂಭದಲ್ಲಿ ಎಲ್ಲವೂ ವಿಶೇಷವಾಗಿರುತ್ತದೆ. ಮಗಳ ಪಾಲಕರಿಗೆ ಕೂಡ, ಮಗಳ ಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಆದ್ರೆ ಅದಕ್ಕೂ ಒಂದು ಮಿತಿಯಿರುತ್ತದೆ ಎನ್ನುತ್ತಾರೆ ತಜ್ಞರು. ಅತ್ತೆ ಮತ್ತು ಮಾವ ನಿಮ್ಮ ಎಲ್ಲೆಯನ್ನು ಮೀರಿ ಎಲ್ಲವನ್ನು ತಿಳಿಯುತ್ತಿದ್ದರೆ  ನಿಮ್ಮ ಒಪ್ಪಿಗೆಯಿಲ್ಲದೆ ಹಸ್ತಕ್ಷೇಪ ಮಾಡುತ್ತಿದ್ದರೆ, ಅದನ್ನು ತೊಡೆದುಹಾಕಲು ಉತ್ತಮ ಮಾರ್ಗವೆಂದರೆ ಅವರ ಜೊತೆ ಮಾತುಕತೆ ನಡೆಸೋದು. 
ಅತ್ತೆ – ಮಾವನ ಜೊತೆ ಮಾತನಾಡುವ ವೇಳೆ ಮಾತಿನ ಬಗ್ಗೆ ಜಾಗೃತಿವಹಿಸುವುದು ಒಳ್ಳೆಯದು. ಮನಸ್ಸುಗೆ ಬಂದ ಹಾಗೆ ಮಾತನಾಡಬೇಡಿ. ಅವರಿಗೆ ಅವಮಾನವಾಗುವಂತೆ ಮಾತನಾಡಬೇಡಿ. ಅವರ ಹಸ್ತಕ್ಷೇಪದಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಏನೆಲ್ಲ ಬದಲಾವಣೆಯಾಗ್ತಿದೆ, ನಿಮಗೆ ಏನೆಲ್ಲ ಸಮಸ್ಯೆಯಾಗುತ್ತಿದೆ, ನೀವು ಎಷ್ಟು ಮುಜುಗರ ಅನುಭವಿಸುತ್ತಿದ್ದೀರಿ ಎಂಬುದನ್ನು ನೀವು ವಿವರವಾಗಿ ಅತ್ತೆ – ಮಾವನಿಗೆ ಹೇಳಬೇಕು ಎನ್ನುತ್ತಾರೆ ತಜ್ಞರು.

Relationship Tips : ಈ ಕಾರಣಕ್ಕೆ ಆದರ್ಶ ಸೊಸೆಯಾಗೋಕೆ ಪ್ರಯತ್ನ ಮಾಡಲ್ಲ ಮಹಿಳೆಯರು..

ಪತ್ನಿ ಜೊತೆ ಮಾತುಕತೆ ನಡೆಸಿ : ಅತ್ತೆ – ಮಾವನ ಜೊತೆ ಮಾತ್ರವಲ್ಲ ಪತ್ನಿ ಜೊತೆ ಕೂಡ ನೀವು ಮಾತನಾಡುವುದು ಮುಖ್ಯವಾಗುತ್ತದೆ. ಹೆತ್ತವರ ಪ್ರೀತಿ ನಿಮಗೆ ಹೇಗೆ ಕಿರಿಕಿರಿ ನೀಡ್ತಿದೆ ಎಂಬುದನ್ನು ಹೇಳಿ. ನಿಮ್ಮ ಭಾವನೆಗಳನ್ನು ಗಂಭೀರವಾಗಿ ಆದ್ರೆ ಶಾಂತವಾಗಿ ವಿವರಿಸುವ ಪ್ರಯತ್ನ ನಡೆಸಿ. 
 

click me!