ಭಾರತದ ರೈಲ್ವೇ ಫ್ಲಾಟ್‌ಪಾರಂ ಹಲವು ಖುಷಿಯ, ಬೇಸರದ ಘಟನೆಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ಕುಟುಂಬಗಳ ಭೇಟಿ, ಬೀಳ್ಕೊಡುಗೆಯಿಂದ ಜನರು ಭಾವುಕರಾಗುವುದನ್ನು ನೋಡಬಹುದು. ಹಾಗೆಯೇ ಸದ್ಯ ರೈಲ್ವೇ ಫ್ಲಾಟ್‌ಫಾರ್ಮ್‌ನಲ್ಲಿ ಹುಡುಗಿಯ ಮನವೊಲಿಸಲು ಹುಡುಗ ಮಾಡ್ತಿರೋ ಕೆಲಸ ಎಲ್ಲೆಡೆ ವೈರಲ್ ಆಗ್ತಿದೆ.
ಪ್ರೀತಿ ಅನ್ನೋದು ಒಂದು ಸುಂದರವಾದ ಭಾವನೆ. ಅಲ್ಲಿ ಮೊಗೆದಷ್ಟೂ ಮೊಗೆದಷ್ಟೂ ಪ್ರೀತಿಯಿರುತ್ತೆ. ಸಂಗಾತಿಗಾಗಿ ಯಾವುದೇ ಕೆಲಸವನ್ನು ಮಾಡಲು ಮನಸ್ಸು ಸಿದ್ಧವಿರುತ್ತೆ. ಅವರ ಖುಷಿಗಾಗಿ ಎಂಥ ಕಷ್ಟವನ್ನೂ ಸಹಿಸಿಕೊಳ್ಳಲು ಮನಸ್ಸು ಮುಂದಾಗುತ್ತೆ. ಪ್ರೀತಿಯಲ್ಲಿದ್ದಾಗ ಯಾವುದೇ ಸಂದರ್ಭದಲ್ಲೂ ಅವನನ್ನು, ಅವಳನ್ನು ಸಂತೋಷವಾಗಿರಿಸುವುದು ಅವರ ಪ್ರಮುಖ ಆದ್ಯತೆಯಾಗಿರುತ್ತದೆ. ಹೀಗಿದ್ದೂ ಸಂಬಂಧಗಳಲ್ಲೂ ಕೆಲವೊಮ್ಮೆ ಮುನಿಸು, ಜಗಳ, ಕಿತ್ತಾಟ ಕಾಣಿಸಿಕೊಳ್ಳೋದಿದೆ. ಇಂಥಾ ಸಂದರ್ಭದಲ್ಲಿ ಸಂಗಾತಿಯ ಮನವೊಲಿಸಲು ಹುಡುಗ ಅಥವಾ ಹುಡುಗಿ ಎಂಥಾ ಕೆಲಸವನ್ನು ಮಾಡಲು ಮುಂದಾಗುತ್ತಾರೆ. ಪದೇ ಪದೇ ಸಾರಿ ಕೇಳುತ್ತಾರೆ, ಗಿಫ್ಟ್‌ಗಳನ್ನು ತಂದು ಕೊಡುತ್ತಾರೆ ಹೀಗೆ.
ರೈಲ್ವೇ ಫ್ಲಾಟ್‌ಫಾರ್ಮ್‌ನಲ್ಲಿ ಲವರ್‌ಗೆ ಶಿಕ್ಷೆ, ವಿಡಿಯೋ ವೈರಲ್
ಭಾರತದ ರೈಲ್ವೇ ಫ್ಲಾಟ್‌ಪಾರಂ ಹಲವು ಖುಷಿಯ, ಬೇಸರದ ಘಟನೆಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ಕುಟುಂಬಗಳ (Family) ಭೇಟಿ, ಬೀಳ್ಕೊಡುಗೆಯಿಂದ ಜನರು ಭಾವುಕರಾಗುವುದನ್ನು ನೋಡಬಹುದು. ಹಾಗೆಯೇ ಸದ್ಯ ರೈಲ್ವೇ ಫ್ಲಾಟ್‌ಫಾರ್ಮ್‌ನಲ್ಲಿ ಹುಡುಗಿಯ ಮನವೊಲಿಸಲು ಹುಡುಗ (Boy) ಮಾಡ್ತಿರೋ ಕೆಲಸ ಎಲ್ಲೆಡೆ ವೈರಲ್ ಆಗ್ತಿದೆ.
ದೂಧ್‌ಸಾಗರ ನೋಡಲು ಹೋದವರಿಗೆ ಬಸ್ಕಿ ಶಿಕ್ಷೆ..!
ಫ್ಲಾಟ್‌ಫಾರ್ಮ್‌ನಲ್ಲಿ ಬಸ್ಕಿ ಹೊಡೆದ ಹುಡುಗ
ವ್ಯಕ್ತಿಗಳು ತಮ್ಮ ಸಂಗಾತಿಯ ಮನವೊಲಿಸಲು ಮತ್ತು ತೃಪ್ತಿಪಡಿಸಲು ಪ್ರಯತ್ನಿಸುವ ಘಟನೆಗಳು ಆಗಾಗ ನಡೆಯುತ್ತಿರುತ್ತದೆ. ಅವರು ತಮ್ಮ ಪಾಲುದಾರರು ನೀಡುವ ಶಿಕ್ಷೆಯನ್ನು (Punishment) ಸಹ ಸಂತೋಷದಿಂದ ಸ್ವೀಕರಿಸುತ್ತಾರೆ. ಆದರೆ ಇಲ್ಲೊಬ್ಬ ಹುಡುಗ, ತನ್ನ ಹುಡುಗಿಯ ಮನವೊಲಿಸಲು ಮಾಡಿರೋ ಕೆಲಸ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ (Social media) ಹರಿದಾಡುತ್ತಿರುವ ವೀಡಿಯೋ ಇದಾಗಿದೆ. ರೈಲ್ವೇ ಫ್ಲಾಟ್‌ಫಾರ್ಮ್‌ನಲ್ಲಿ ಈ ಘಟನೆ ನಡೆದಿರುವುದು ವಿಶೇಷ.
ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ಹುಡುಗನೊಬ್ಬ ತನ್ನ ಕಿವಿಗಳನ್ನು ಹಿಡಿದುಕೊಂಡು ಕುಳಿತುಕೊಂಡಿರುವುದನ್ನು ವೀಡಿಯೊ ತೋರಿಸುತ್ತದೆ. ಮೆಟ್ಟಿಲಿನ ಮೇಲೆ ಹುಡುಗಿ ಕುಳಿತಿದ್ದಾಳೆ. ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ಹುಡುಗ ಸಿಟ್-ಅಪ್ ಮಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಹುಡುಗ ತನ್ನ ಕಿವಿಗಳನ್ನು ಹಿಡಿದಿಟ್ಟುಕೊಂಡು ಸಿಟ್-ಅಪ್ ಮಾಡುವ ಮೂಲಕ ತನ್ನ ಗೆಳತಿಯನ್ನು (Girlfriend) ಮನವೊಲಿಸಲು ಮತ್ತು ತೃಪ್ತಿಪಡಿಸಲು ಪ್ರಯತ್ನಿಸುತ್ತಿದ್ದಾನೆ. ನಂತರ, ವೀಡಿಯೊದಲ್ಲಿ ಹುಡುಗ ಮತ್ತು ಹುಡುಗಿ ಒಟ್ಟಿಗೆ ಮೆಟ್ಟಿಲುಗಳ ಮೇಲೆ ಕುಳಿತಿರುವುದನ್ನು ತೋರಿಸುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಸಿಟ್-ಅಪ್ ಮಾಡುವ ಶಿಕ್ಷೆಯನ್ನು ಸ್ವೀಕರಿಸಿದ ನಂತರ ಹುಡುಗ ಅಂತಿಮವಾಗಿ ತನ್ನ ಗೆಳತಿಯನ್ನು ತೃಪ್ತಿಪಡಿಸುವಲ್ಲಿ ಯಶಸ್ವಿಯಾಗಿದ್ದಾನೆಂದು ತೋರುತ್ತದೆ.
ಬಾಗೇಶ್ವರ ಧಾಮದಲ್ಲಿ ಸಪ್ತಪದಿ ತುಳಿಯುವ ಇಚ್ಛೆ ವ್ಯಕ್ತಪಡಿಸಿದ ಪಬ್‌ಜಿ ಲವರ್ಸ್!
ನಿಜವಾದ ಪ್ರೀತಿ ಎಂದು ಕಮೆಂಟ್ ಮಾಡಿದ ನೆಟ್ಟಿಗರು
ಹಸ್ನಾ ಜರೂರಿ ಹೈ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಕಾಮೆಂಟ್‌ಗಳ ವಿಭಾಗದಲ್ಲಿ ನೆಟಿಜನ್ಸ್ ಘಟನೆಯ ಬಗ್ಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಪ್ರೀತಿ ಹೀಗೆ ಭಸ್ಕಿ ಹೊಡೆಸಿಕೊಳ್ಳೋ ಹಂತಕ್ಕೂ ತಲುಪಿತಾ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ನಿಜವಾದ ಪ್ರೀತಿ' ಎಂದು ಪ್ರತಿಕ್ರಿಯಿಸಿದ್ದಾರೆ. 'ಇದು ಪ್ರೀತಿಯಲ್ಲ, ಗುಲಾಮಗಿರಿ' ಎಂದು ಇನ್ನೊಬ್ಬ ವ್ಯಕ್ತಿ ಹೇಳಿದ್ದಾರೆ. ಒಟ್ನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಡಿಯೋ ನೆಟ್ಟಿಗರಿಂದ ನಾನಾ ರೀತಿಯ ಪ್ರತಿಕ್ರಿಯೆಗಳನ್ನು ಪಡೆದುಕೊಳ್ತಿದೆ.
Viral News: ಇಬ್ಬರು ಹುಡುಗಿಯರು ಪತಿ – ಪತ್ನಿಯಾದ ಕಥೆ: 11 ವರ್ಷದ ನಂತ್ರ ಗೊತ್ತಾಗಿತ್ತು ಸತ್ಯ!
प्यार तो होता हैं ऐसा
😍❤️😂😂😂😂 pic.twitter.com/DO6n45Uwke