
ಮದುವೆ ಸಮಾರಂಭದಲ್ಲಿ (wedding ceremony) ಸಣ್ಣಪುಟ್ಟ ಗಲಾಟೆ ಸಾಮಾನ್ಯ. ಕೊಡುಕೊಳ್ಳುವಿಕೆ ವಿಷ್ಯದಲ್ಲಿ ಅನೇಕ ಬಾರಿ ಪ್ರಕರಣ ಮೆಟ್ಟಿಲೇರೋದಿದೆ. ಆದ್ರೆ ಉತ್ತರ ಪ್ರದೇಶದಲ್ಲಿ ಚಪ್ಪಲಿ (slippers) ಕದ್ದಿಟ್ಟುಕೊಳ್ಳುವ ಶಾಸ್ತ್ರ, ಶಾಸ್ತ್ರವಾಗಿರದೆ ರಣರಂಗವಾಗಿದೆ. ವಧು – ವರನ ಕಡೆಯವರ ಜಗಳ ತಾರಕಕ್ಕೇರುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.
ಏನು ಗಲಾಟೆ? : ಘಟನೆ ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ನಡೆದಿದೆ. ಡೆಹ್ರಾಡೂನ್ನ ಚಕ್ರೋಟದ ಮೊಹಮ್ಮದ್ ಸಬೀರ್ ಮದುವೆ ಬಿಜ್ನೋರ್ನ ಗರ್ಹ್ಮಲ್ಪುರದ ಹುಡುಗಿ ಜೊತೆ ನಡೆಯಬೇಕಿತ್ತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿ ನಡೆದಿತ್ತು. ಕುದುರೆ ಮೇಲೆ ಬಂದ ಮೊಹಮ್ಮದ್ ಸಬೀರ್ ಗೆ ಅದ್ಧೂರಿ ಸ್ವಾಗತ ಸಿಕ್ಕಿತ್ತು. ವೃ ಮತ್ತು ವಧು ಕಡೆಯವರು ಭರ್ಜರಿಯಾಗಿ ನೃತ್ಯ ಮಾಡಿದ್ದರು. ಆದ್ರೆ ಚಪ್ಪಲಿ ಕದಿಯುವ ಆಚರಣೆ ಬಂದಾಗ ಸ್ವಲ್ಪ ಯಡವಟ್ಟಾಯ್ತು. ಅದೇ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರ್ತು.
ವಧುವಿನ ಸೊಂಟಕ್ಕೆ ಕೈ ಹಾಕಿ ಕಾರ್‌ನಲ್ಲಿಯೇ ರೊಚ್ಚಿಗೆದ್ದ ವರ; ತಾಳಿದವನು, ಬಾಳಿಯಾನು ಎಂದ ನೆಟ್ಟಿಗರು
50 ಸಾವಿರ ಕೇಳಿದ ನಾದಿನಿ ! : ಸಂಪ್ರದಾಯದಂತೆ ನಾದಿನಿ ವರನ ಚಪ್ಪಲಿ ಕದ್ದಿದ್ದಾಳೆ. ನಂತ್ರ 50 ಸಾವಿರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಮೊತ್ತ ಕೇಳಿ ದಂಗಾದ ವರ, 5 ಸಾವಿರಕ್ಕೆ ವ್ಯವಹಾರ ಕುದುರಿಸಿಕೊಳ್ಳುವಂತೆ ಹೇಳಿದ್ದಾನೆ. ಆದ್ರೆ ಇದು ನಾದಿಗೆ ಇಷ್ಟವಾಗ್ಲಿಲ್ಲ. ನಂತ್ರ ಚಪ್ಪಲಿಯನ್ನು ಎಲ್ಲರೂ ಮರೆತ್ರು. ಚಪ್ಪಲಿ ಕದಿಯುವ ಸಂಪ್ರದಾಯದಲ್ಲಿ ಕೆಟ್ಟ ಮಾತಿನ ಬಳಕೆ, ಕೋಲಿನ ಬಳಕೆಯಾಯ್ತು.
ವರನ ಕಡೆಯವರನ್ನು ಭಿಕ್ಷುಕರು ಎಂದು ವಧು ಕಡೆಯವರು ನಿಂದಿಸಿದ್ರು. ವರನ ಕಡೆಯವರು, ನಿಮಗೆ ಮದುವೆ ಬೇಡ, ಹಣ ಬೇಕಾಗಿದೆ ಎಂದು ಕೂಗಾಡಿದ್ರು. ಅಷ್ಟೇ ಅಲ್ಲ, ವರನ ಕಡೆಯವರನ್ನು ವಧು ಕಡೆಯವರು ಕೂಡಿ ಹಾಕಿದ್ರು. ಮದುವೆ ಮನೆ, ಕ್ರೈಂ ದೃಶ್ಯ ಶೂಟ್ ಮಾಡುವ ಜಾಗವಾಗಿ ಬದಲಾಯ್ತು.
ವೈರಲ್ ವಿಡಿಯೋದಲ್ಲಿ ಏನಿದೆ? : ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ವಿಡಿಯೋ ಒಂದು ಪೋಸ್ಟ್ ಆಗಿದೆ. @hindipatrakar ಎಂಬ ಬಳಕೆದಾರರು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದ್ರಲ್ಲಿ ವರ ಎಲ್ಲ ಕಥೆಯನ್ನು ಹೇಳಿದ್ದಾನೆ. ನಾದಿನಿ ಶೂ ಕಳ್ಳತನಕ್ಕೆ ವರ ಬಲಿ ಎಂದು ಶೀರ್ಷಿಕೆ ಹಾಕಲಾಗಿದೆ. ಇಂದು ಬಿಜ್ನೋರ್ ಗೆ ವರ ಸಬೀರ್ ಡೆಹ್ರಾಡೂನ್ನಿಂದ ಬಂದಿದ್ದನು. ಶೂ ಕದ್ದಿದ್ದಕ್ಕೆ ನಾದಿನಿ 50,000 ರೂಪಾಯಿ ಕೇಳಿದ್ದಾಳೆ. ಚೌಕಾಸಿ ಮಾಡಿದ ನಂತ್ರ ವರ 5 ಸಾವಿರ ಮಾತ್ರ ಕೊಟ್ಟಿದ್ದಾನೆ. ಆಗ ಯಾರೋ ವರನನ್ನು ಭಿಕ್ಷುಕ ಎಂದು ಕರೆದಿದ್ದಾರೆ. ವರನಿಗೆ ಕೋಪ ಬಂದಿದೆ. ಮದುವೆಯಾಗಲು ಆತ ನಿರಾಕರಿಸಿದ್ದಾನೆ. ಮನವೊಲಿಕೆಯಿಂದ ವಿಷಯ ಬಗೆಹರಿಯದಿದ್ದಾಗ, ವಧುವಿನ ಕುಟುಂಬ ಗೂಂಡಾಗಳನ್ನು ಸೇರಿಸಿ, ವರನ ಕಡೆಯವರನ್ನು ಕೂಡಿ ಹಾಕಿತ್ತು. ವರನ ತಂದೆ, ಅಜ್ಜ, ಸಹೋದರ ಸೇರಿದಂತೆ ಎಲ್ಲರನ್ನೂ ಥಳಿಸಿದ್ದಾರೆ. ಕೆಲವು ಗಂಟೆಗಳ ನಂತ್ರ ಪರಿಸ್ಥಿತಿ ತಿಳಿಯಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ವರ ಮತ್ತು ಅವನ ಕುಟುಂಬವನ್ನು ರಕ್ಷಿಸಿದ್ದಾರೆ. ವರನು ಪೊಲೀಸ್ ಠಾಣೆಯಲ್ಲಿ ತನಗಾದ ಅನ್ಯಾಯವನ್ನು ವಿವರಿಸಿದ್ದಾನೆ.
ದೇವರಕೊಂಡ ಜೊತೆ ಬರ್ತ್‌ಡೇ ಆಚರಿಸಿದ್ರಾ ರಶ್ಮಿಕಾ ಮಂದಣ್ಣ?
ಪೊಲೀಸರಿಗೆ ಸುದ್ದಿ ಹೋಗಿದ್ದು ಹೇಗೆ? : ಗಲಾಟೆ ತಾರಕಕ್ಕೇರುತ್ತಿದ್ದಂತೆ ವ್ಯಕ್ತಿಯೊಬ್ಬರು 100ಕ್ಕೆ ಡಯಲ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಎರಡೂ ಕಡೆಯವರನ್ನು ಸಮಾಧಾನಗೊಳಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಹಳೆ ಘಟನೆ ಮರೆದು ಹೊಸ ಆರಂಭ ಮಾಡುವಂತೆ ಪೊಲೀಸರು ಇಬ್ಬರ ಮನವೊಲಿಸಿದ್ದಾರೆ.
ಎಕ್ಸ್ ನಲ್ಲಿ ಈ ವಿಷ್ಯ ತಿಳಿದ ಬಳಕೆದಾರರು, ಮದುವೆಯಾಗಿರಲಿ ಅಥವಾ ಆಚರಣೆಯಾಗಿರಲಿ, ಎಲ್ಲರ ಗೌರವವನ್ನು ಕಾಪಾಡಿಕೊಳ್ಳಬೇಕು. ಬೂಟು ಕದಿಯುವ ಮುನ್ನ ರೇಟ್ ನಿರ್ಧರಿಸಿಕೊಳ್ಳಿ ಎಂದು ಕಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.