ತಂತ್ರಜ್ಞಾನ ಬಳಸಿ ವಿಭಿನ್ನ ರೀತಿಯಲ್ಲಿ ಮದುವೆಯಾಗಲು ಹೋದ ವರಮಹಾಶಯನ ಪ್ಲ್ಯಾನ್ ಉಲ್ಟಾ ಹೊಡೆದು ಫಜೀತಿ ತಂದಿದೆ. ಡ್ರೋನ್ನಲ್ಲಿ ಹಾರ ಹಾಕಿಸಿಕೊಳ್ಳಲು ಹೋಗಿ ಎಡವಟ್ಟಾಗಿದೆ. ಏನಿದು ವೈರಲ್ ವಿಡಿಯೋ?
ತಂತ್ರಜ್ಞಾನ ಎನ್ನುವುದು ಈಗ ಎಲ್ಲಾ ಕಡೆ ಕಾಲಿಟ್ಟುಬಿಟ್ಟಿದೆ. ಈ ತಂತ್ರಜ್ಞಾನ ಬಳಸಿಕೊಂಡು ವಿಶೇಷವಾಗಿ ಮದುವೆಯಾಗಲು ಹಲವು ಯುವಕ- ಯುವತಿಯರು ಯೋಚಿಸುತ್ತಾರೆ. ಅಷ್ಟಕ್ಕೂ ಜೀವನದಲ್ಲಿ ಒಮ್ಮೆಯಾಗುವ ಮದುವೆಯನ್ನು ವಿಶೇಷವಾಗಿಸಲು ಹಲವರು ವಿಭಿನ್ನವಾಗಿ ಆಲೋಚಿಸುವುದು ಇದೆ. ಎಲ್ಲರಂತೆಯೇ ತಮ್ಮ ಮದುವೆ ಆಗಬಾರದು. ಅದು ವಿಶೇಷವಾಗಿ ಇರಬೇಕು, ತಮ್ಮ ಮದುವೆ ವೈರಲ್ ಆಗಬೇಕು, ಈ ಮೂಲಕ ತಾವು ಫೇಮಸ್ ಆಗಬೇಕು ಎಂದೆಲ್ಲಾ ಕನಸು ಕಾಣುವ ದೊಡ್ಡ ವರ್ಗವೇ ಇದೆ. ಈ ಎಲ್ಲಾ ಕನಸುಗಳನ್ನು ನನಸು ಮಾಡುವುದಕ್ಕಾಗಿ ಆಧುನಿಕ ತಂತ್ರಜ್ಞಾನದ ಮೊರೆ ಹೋಗುವುದು ಇದೆ. ಇದಕ್ಕಾಗಿ ವಿಭಿನ್ನ ರೀತಿಯಲ್ಲಿ ಮದುವೆಯ ತಯಾರಿ ಮಾಡುವುದು ಇದೆ.
ಆದರೆ ಹೇಳಿಕೇಳಿ ಅದು ತಂತ್ರಜ್ಞಾನ. ಎಲ್ಲಾ ನಾವು ಅಂದುಕೊಂಡಂತೆಯೇ ಆಗಬೇಕಲ್ಲ! ಕೆಲವೊಮ್ಮೆ ಮಾಡಿದ ಉಪಾಯಗಳು ಉಲ್ಟಾ ಹೊಡೆಯುವುದು ಇದೆ. ಆದರೆ ಪ್ಲ್ಯಾನ್ ಉಲ್ಟಾ ಹೊಡೆದರೆ ಅಂಥ ವಿಡಿಯೋಗಳು ಇನ್ನಷ್ಟು ಹೆಚ್ಚು ಪ್ರಸಾರ ಆಗುವುದೂ ಇದೆ ಅನ್ನಿ. ತಮ್ಮ ಮದುವೆಯನ್ನು ವಿಶೇಷ ರೀತಿಯಲ್ಲಿ ಮಾಡಿ ಫೇಮಸ್ ಆಗಬೇಕು ಎಂದುಕೊಂಡು ಮಾಡಿದ ಉಪಾಯ ಟುಸ್ ಎಂದು ಅದು ತಮಾಷೆಯ ರೂಪ ಪಡೆದುಕೊಂಡರೆ, ಅಂಥ ವಿಡಿಯೋಗಳೇ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚೆಚ್ಚು ಶೇರ್ ಮಾಡಿಕೊಳ್ಳುತ್ತಾರೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ.
ವೈದ್ಯೆ ನಿರ್ಲಕ್ಷ್ಯ- ಡೆಲಿವರಿ ವೇಳೆ ಹೊಟ್ಟೆಯಲ್ಲಿಯೇ ಉಳಿದ ಕತ್ತರಿ! 17 ವರ್ಷಗಳ ಬಳಿಕ ನಡೆದದ್ದೇ ಪವಾಡ...
ಇದರಲ್ಲಿ ಮದುಮಗನೊಬ್ಬ ತನ್ನ ಕೊರಳಿಗೆ ಹಾರ ಹಾಕಲು ವಿಭಿನ್ನ ರೀತಿಯಲ್ಲಿ ಪ್ಲ್ಯಾನ್ ಮಾಡಿದ್ದ. ಮದುಮಗಳ ಬದಲು ಡ್ರೋನ್ ಮೂಲಕ ತನ್ನ ಕೊರಗಳಿಗೆ ಹಾರ ಬಂದು ಬೀಳುವಂತೆ ಮಾಡಿದ್ದ. ಈ ಹೊಸ ರೀತಿಯ ಉಪಾಯಕ್ಕಾಗಿ ಅದಾಗಲೇ ಹಲವಾರು ಮಂದಿ ಕ್ಯಾಮೆರಾಮನ್ಗಳನ್ನೂ ಕರೆಸಿದ್ದ. ಕೊರಳಿಗೆ ಹಾರ ಬಿದ್ದ ತಕ್ಷಣ ಅದು ಸಕತ್ ವೈರಲ್ ಆಗುತ್ತದೆ, ಈ ಮೂಲಕ ಡ್ರೋನ್ನಲ್ಲಿ ಹೀಗೆ ಹಾರ ಹಾಕಿಸಿಕೊಂಡಿರುವ ಮೊದಲ ವರ ತಾನಾಗುತ್ತೇನೆ ಎಂದೆಲ್ಲಾ ಕನಸು ಕಂಡಿದ್ದ ಈ ಮದುಮಗ.
ಆದರೆ ಆದದ್ದೇ ಬೇರೆ. ಡ್ರೋನ್ನಲ್ಲಿ ಬಂದ ಹಾರ ಮದುಮಗನ ಕೊರಳಿಗೆ ಹೋಗದೇ ಪಕ್ಕದಲ್ಲಿ ಹೋಗಿ ಸಿಕ್ಕಾಕಿಕೊಂಡುಬಿಟ್ಟಿದೆ. ಹಾರವನ್ನು ಹಿಡಿಯಲು ಮದುಮಗ ಹಾರಿ ಹಾರಿ ಹೋಗಬೇಕಾಯಿತು. ಡ್ರೋನ್ ತನ್ನ ಕೆಲಸ ಮುಗಿಸಿ ನೆಲಕ್ಕೆ ಬಂದು ಬಿಟ್ಟಿದೆ. ಹಾರ ಮಾತ್ರ ಪಕ್ಕದಲ್ಲಿ ಹೋಗಿ ಸಿಲುಕಿದೆ. ಹಾರವೇನಾದರೂ ನೇರವಾಗಿ ಮದುಮಗನ ಕೊರಳಿಗೆ ಹೋಗಿ ಬಿದ್ದಿದ್ದರೆ ಈ ವಿಡಿಯೋ ಇಷ್ಟೆಲ್ಲಾ ವೈರಲ್ ಆಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಹೀಗೆ ಟುಸ್ ಆಗಿರುವ ಕಾರಣಕ್ಕೆ ಸಕತ್ ಸದ್ದು ಮಾಡುತ್ತಿದೆ. ಇದನ್ನು ನೋಡಿದವರು ಬಿದ್ದೂ ಬಿದ್ದೂ ನಗುವಂತಾಗಿದೆ. ಆದರೆ ಆ ಕ್ಷಣದಲ್ಲಿ ವರ ಮಾತ್ರ ಕಕ್ಕಾಬಿಕ್ಕಿಯಾಗಿರುವುದು ವಿಡಿಯೋದಲ್ಲಿ ನೋಡಬಹುದಾಗಿದೆ.
ಮುಂಬೈ ನೋಡಲು ಮನೆಬಿಟ್ಟ ಮಗ 14 ವರ್ಷಗಳ ಬಳಿಕ ಸಿಕ್ಕ: ಇಲ್ಲಿ ಹೆತ್ತಮ್ಮ, ಅಲ್ಲಿ ಸಾಕಮ್ಮ... ಭಾವುಕ ಘಟನೆ ಇಲ್ಲಿದೆ...