ಮೊದಲ ರಾತ್ರಿ ಸಂಭ್ರಮದಲ್ಲಿ ಬಾಗಿಲು ಮುಚ್ಚಿದ ಕೆಲ ಹೊತ್ತಲ್ಲೇ ಪ್ರಜ್ಞೆ ತಪ್ಪಿದ ವರ

Published : Apr 05, 2025, 10:36 PM ISTUpdated : Apr 05, 2025, 10:42 PM IST
ಮೊದಲ ರಾತ್ರಿ ಸಂಭ್ರಮದಲ್ಲಿ ಬಾಗಿಲು ಮುಚ್ಚಿದ ಕೆಲ ಹೊತ್ತಲ್ಲೇ ಪ್ರಜ್ಞೆ ತಪ್ಪಿದ ವರ

ಸಾರಾಂಶ

ಮದುವೆ ಸಂಭ್ರಮಾಚರಣೆ ಮುಗಿದಿದೆ. ಮೊದಲ ರಾತ್ರಿಯ ಕುತೂಹಲದಲ್ಲಿದ್ದ ವರ ಕೋಣೆ ಸೇರಿಕೊಂಡಿದ್ದ. ವಧು ಆಗಮಿಸಿದ ಬಳಿಕ ಬಾಗಿಲು ಮುಚ್ಚಿದ್ದಾನೆ. ಪ್ರೀತಿಯಿಂದ ಆಕೆಯನ್ನು ಮಾತನಾಡಿಸಿದಾಗ ಆಕೆ ಎರಡೇ ವಾಕ್ಯ ನುಡಿದಿದ್ದಾಳೆ. ಇಷ್ಟೇ ನೋಡಿ ವರ ಪ್ರಜ್ಞೆ ತಪ್ಪಿದ್ದಾನೆ. 

ಬರೇಲಿ(ಏ.05) ಅದು ಅದ್ಧೂರಿ ಮದುವೆ. ಕುಟುಂಬಸ್ಥರು, ಹಿರಿಯರು ಸೇರಿದಂತೆ ಎಲ್ಲರು ಒಪ್ಪಿಗೆಯೊಂದಿಗೆ ಮದುವೆ ನಡೆದಿತ್ತು.ಪಕ್ಕಾ ಅರೇಂಜ್ ಮ್ಯಾರೇಜ್. ಮದುವೆ ಮುಗಿದೆ. ಮನೆಗೆ ಬಂದ ವಧು ವರರು ಮನೆಯ ಸಂಜೆಯ ಕಾರ್ಯಕ್ರಮವನ್ನೂ ಮುಗಿಸಿದ್ದಾರೆ. ಹೊತ್ತು ಕಳೆಯುತ್ತಿದ್ದಂತೆ ಸಂಭ್ರಮಾಚರಣೆ ಮುಗಿದಿದೆ. ಇತ್ತ ವರನ ಮೊದಲ ರಾತ್ರಿ ಕೌತುಕ ಹೆಚ್ಚಾಗಿದೆ. ಖುಷಿ ಖುಷಿಯಿಂದ ವರ ಕೋಣೆಯೊಳಗೆ ಸೇರಿಕೊಂಡಿದ್ದಾನೆ. ಇತ್ತ ವಧೂ ಕೂಡ ಆಗಮಿಸಿದ್ದಾಳೆ. ಬಾಗಿಲು ಮುಚ್ಚಿ ವಧುವನ್ನು ಪ್ರೀತಿಯಿಂದ ಮಾತನಾಡಿಸಿದ್ದಾನೆ. ಆಕೆ 2 ಸಾಲುಗಳಲ್ಲಿ ಹೇಳಿದ ಮಾತು ವರನ ಪ್ರಜ್ಞೆ ತಪ್ಪಿಸಿದ ಘಟನೆ ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ನಡೆದಿದೆ.

ಮೊದಲ ರಾತ್ರಿ ಶಾಕ್
ಕೋಣೆಗೆ ಬರುವವರೆಗೆ ವಧುವಿನ ಮುಖದಲ್ಲಿ ನಗುವಿತ್ತು. ಕೋಣೆಯೊಳಗೆ ಪ್ರವೇಶಿಸುತ್ತಿದ್ದಂತೆ ವಧುವಿನ ನಗು ಮಾಯವಾಗಿದೆ. ಆದರೆ ಇದ್ಯಾವುದರ ಅರಿವೇ ಇಲ್ಲದ ವರ ಮಾತ್ರ ನಗುತ್ತಲೇ ಆಕೆಯನ್ನು ಮಾತನಾಡಿಸುವು ಪ್ರಯತ್ನ ಮಾಡಿದ್ದಾನೆ. ಇತ್ತ ಕೋಣೆಯ ಬಾಗಿಲು ಮುಚ್ಚಿದ್ದಾನೆ. ಬಳಿಕೆ ಪ್ರೀತಿಯಿಂದ ಒಂದೆಡೆರು ಮಾತು ಆಡಿದ್ದಾನೆ. ಆದರೆ ಆಕೆ ಆಡಿದ್ದು ಎರಡೇ ಮಾತು. ಒಂದು ನನ್ನ ಮುಟ್ಟಬೇಡ. ಮುಟ್ಟಿದರೆ ನಾನು ಈಗಲೇ ವಿಷ ಕುಡಿಯುತ್ತೇನೆ ಎಂದು ಬೆದರಿಸಿದ್ದಾಳೆ. 

ಪ್ರಯಾಣದಲ್ಲೂ ಖಾಸಗಿ ಸಮಯ ಕಳೆಯಲು ಜೋಡಿಗಳಿಗಾಗಿ ಬೆಂಗಳೂರಿನಲ್ಲಿ ಸ್ಮೂಚ್ ಕ್ಯಾಬ್ ಆರಂಭ

ನಾನು ಬೇರೊಬ್ಬನ ಸ್ವತ್ತು
ಈ ಮಾತುಗಳನ್ನು ಕೇಳಿ ವರ ಶಾಕ್ ಆಗಿದ್ದಾನೆ. ಏನು ಮಾಡಬೇಕು ಅನ್ನೋದೇ ತೋಚಿಲ್ಲ. ಮನೆಯಲ್ಲಿ ಪೋಷಕರು, ಹಿರಿಯರು, ಕುಟುಂಬಸ್ಥರು ಸಂಭ್ರಮದಲ್ಲಿದ್ದಾರೆ. ಆದೆರ ವರನ ಮನಸ್ಸಿನಲ್ಲಿ ತಳಮಳ. ಕೊನಗೂ ಧೈರ್ಯ ಮಾಡಿ ಕಾರಣವೇನು ಎಂದು ಪ್ರಶ್ನಿಸಿದ್ದಾನೆ. ನಾನು ಬೇರೊಬ್ಬನ ಸ್ವತ್ತು. ಮುಟ್ಟಿದರೆ ಜೋಕೆ ಎಂದಿದ್ದಾಳೆ. ಈ ಮಾತುಗಳನ್ನು ಕೇಳಿಸಿಕೊಂಡ ಬೆನ್ನಲ್ಲೇ ವರ ತೀವ್ರ ಅಸ್ವಸ್ಥಗೊಂಡಿದ್ದಾನೆ. 

ನಾನೊಂದು ತೀರ, ನೀನೊಂದು ತೀರ
ಮೊದಲ ರಾತ್ರಿ ವರ ಅಸ್ವಸ್ಥಗೊಂಡಿದ್ದಾನೆ. ಬಿಪಿ ಒಮ್ಮಲೆ ಏರಿಕೆಯಾಗಿದೆ. ಬಾಯಿ, ತುಟಿಗಳು ಒಣಗಿದೆ. ಕೈಕಾಲು ನಡುಗಿದೆ. ಜೀವನವೇ ಶೂನ್ಯ ಎನಿಸಿದೆ. ಯಾರಲ್ಲೂ ಹೇಳುವಂತಿಲ್ಲ, ಕೂಗಾಡುವಂತಿಲ್ಲ. ಕೊನೆಗೆ ಅನಿವಾರ್ಯವಾಗಿ ನಾನೊಂದು ತೀರಾ, ನೀನೋಂದು ತೀರಾ ರೀತಿಯಲ್ಲಿ ಮದುವೆಯ ಮೊದಲ ರಾತ್ರಿ ಕಳೆದಿದೆ. 

ವಧುವಿನ ಪೋಷಕರಿಂದ ಬೆದರಿಕೆ
ಒಂದು ವಾರ ಹೀಗೆ ಏನು ಮಾಡಬೇಕು ಅನ್ನೋದು ತೋಚದೆ, ಯಾರಿಗೂ ಹೇಳದೆ ವರ ಮರುಗಿದ್ದಾನೆ. ಕೊನೆಗೂ ಧೈರ್ಯ ಮಾಡಿ ಮನೆಯವರಿಗೆ ಹೇಳಿದ್ದಾನೆ. ಕೋಲಾಹಲ ಸೃಷ್ಟಿಯಾಗಿದೆ. ವಧುವಿನ ಪೋಷಕರಿಗೆ ಮಾಹಿತಿ ನೀಡಿ ಅನ್ಯಾಯಾವಾಗಿದೆ ಎಂದು ಅಳಲು ತೋಡಿಕೊಂಡಿದ್ದಾನೆ. ಆದರೆ ವಧುವಿನ  ಪೋಷಕರು ವರದಕ್ಷಿಣ ಕೇಸ್ ಹಾಕುವುದಾಗಿ ಬೆದರಿಸಿದ್ದಾನೆ. ಇತ್ತ ವರನ ಕುಟುಂಬಸ್ಥರು ಬೆದರಿದ್ದಾರೆ. ಒಂದೆಡೆ ವಧುವಿನ ಟಾರ್ಟರ್, ಮತ್ತೊಂದೆಡೆಯಿಂದ ಆಕೆಯ ಪೋಷಕರ ಬೆದರಿಕೆ. ಹಲವು ದಿನ ಇದು ಮುಂದುವರಿದಿದೆ. ಕೊನೆಗೂ ಧೈರ್ಯಮಾಡಿದ ವರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ.

ಬರಾದರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ವಧುವನ್ನು ಕರೆಯಿಸಿ ವಿಚಾರಣೆ ಮಾಡಿದ್ದಾರೆ. ಈ ವೇಳೆ ಬೇರೊಬ್ಬರನ್ನು ಪ್ರೀತಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾಳೆ. ಪೋಷಕರ ಒತ್ತಾಯದ ಮೇರೆಗೆ ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದಾಳೆ. ಅಲ್ಲಿಗೆ ವಧುವಿನ ಪೋಷಕರ ನಾಟಕ ಬಯಲಾಗಿದೆ. ಪೋಷಕರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇದೀಗ ವಧುವಿನ ಪೋಷಕರ ವಿಚಾರಣೆ ನಡೆಯುತ್ತಿದೆ. ಇತ್ತ ಸಾಲ ಮಾಡಿ ಮದುವೆ ಮಾಡಿಕೊಂಡ ವರ ಶಾಕ್‌ನಿಂದ ಮೇಲೇಳದಂತಾಗಿದೆ. ತನ್ನ ಬದುಕು ಹಾಳಾಗಿದೆ. ಸಾಲ ಮಾಡಿ ಮದುವೆಯಾಗಿ ಇದೀಗ ತಲೆ ತಗ್ಗಿಸುವಂತಾಗಿದೆ. ನ್ಯಾಯ ಕೊಡಿಸುವಂತೆ ವರ ಪೊಲೀಸರಲ್ಲಿ ಮನವಿ ಮಾಡಿದ್ದಾನೆ. ವರನ ಪೋಷಕರು ಕಂಗಾಲಾಗಿದ್ದಾರೆ. 

ಕೆಲಸ, ಆದಾಯ ಇಲ್ಲದ ಮೇಲೆ ಮದುವೆ ಆಗಿದ್ದೇಕೆ?ನ್ಯಾಯಾಧೀಶರ ಮಾತಿಗೆ ಭಾರಿ ಚರ್ಚೆ
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
Chanakya Niti: ಬೆಳಗ್ಗೆ ಎದ್ದಾಗ ಇವನ್ನೆಲ್ಲಾ ನೋಡ್ಬೇಡಿ.. ಚಾಣಕ್ಯ ಹೇಳಿದ ರಹಸ್ಯಗಳು