ಇಡೀ ಥಿಯೇಟರ್‌ನಲ್ಲಿ ಒಂದು ಸೀಟು ಬಿಟ್ಟು ಮತ್ತೊಂದು ಸೀಟ್ ಬುಕ್‌: ಪ್ರೇಮಿಗಳ ದಿನಕ್ಕೆ ಪ್ರೇಮಿಗಳಿಗೆ ಸಿಂಗಲ್ಸ್‌ಗಳ ಶಾಕ್

Published : Jan 23, 2026, 09:19 PM IST
Singles revenge

ಸಾರಾಂಶ

 ಪ್ರೇಮಿಗಳ ದಿನದಂದು, ಸಿಂಗಲ್ಸ್‌ಗಳ ಗುಂಪೊಂದು ಪ್ರೇಮಿಗಳು ಜೊತೆಯಾಗಿ ಸಿನಿಮಾ ನೋಡಬಾರದೆಂಬ ಉದ್ದೇಶದಿಂದ ಥಿಯೇಟರ್‌ನ ಎಲ್ಲಾ ಬೆಸ ಸಂಖ್ಯೆಯ ಸೀಟುಗಳನ್ನು ಬುಕ್ ಮಾಡಿದ್ದಾರೆ. ಈ ವಿಚಿತ್ರ ರಿವೇಂಜ್‌ನಿಂದ ಪ್ರೇಮಿಗಳು ಬೇರೆ ಬೇರೆಯಾಗಿ ಕುಳಿತು ಸಿನಿಮಾ ನೋಡಬೇಕಾದ ಪ್ರಸಂಗ ಎದುರಾಗಿದೆ.

ಇನ್ನೇನು ಪ್ರೇಮಿಗಳ ದಿನಕ್ಕೆ ಕೆಲವೇ ದಿನಗಳು ಬಾಕಿ ಇದೆ ಜಗತ್ತಿನೆಲ್ಲೆಡೆ ಪ್ರೇಮಿಗಳು ತಮ್ಮ ಪ್ರೇಯಸಿ/ಪ್ರಿಯಕರನ ಜೊತೆ ಪ್ರೇಮಿಗಳ ದಿನವನ್ನುಅದ್ದೂರಿಯಾಗಿ ಅಚರಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪ್ರೇಮಿಗಳಿಗೆ ಶಾಕ್ ನೀಡುವುದಕ್ಕೆ ಸಿಂಗಲ್ಸ್‌ಗಳ ಗುಂಪೊಂದು ಸಜ್ಜಾಗಿದೆ. ಹೌದು ಚೀನಾದಲ್ಲಿ ಪ್ರೇಮಿಗಳ ದಿನದಂದು ಸಿನಿಮಾ ರೋಮ್ಯಾಂಟಿಕ್ ಸಿನಿಮಾ ನೋಡಿ ಇಡೀ ದಿನವನ್ನು ಎಂಜಾಯ್ ಮಾಡಬೇಕು ಎಂದು ಬಯಸಿದ ಪ್ರೇಮಿಗಲಿಗೆ ಸಿಂಗಲ್ಸ್‌ಗಳು ಶಾಕ್ ನೀಡಿದ್ದಾರೆ.

ಸಿಂಗಲ್ಸ್‌ಗಳ ಗುಂಪೊಂದು ಪ್ರೇಮಿಗಳ ದಿನದಂದು ಚೀನಾದ ಸಿನಿಮಾ ಥಿಯೇಟರ್‌ಗಳಲ್ಲಿ ಪ್ರತಿ ಸಮಸಂಖ್ಯೆಯನ್ನು ಬಿಟ್ಟು ಪ್ರತಿ ಬೆಸ ಸಂಖ್ಯೆಯ ಸೀಟುಗಳನ್ನು ಬುಕ್ ಮಾಡಿದ್ದಾರೆ. ಪ್ರೇಮಿಗಳು ಜೊತೆಯಾಗಿ ಕೂತು ಸಿನಿಮಾ ನೋಡಬಾರದು ಎಂಬುದು ಈ ಖತರ್ನಾಕ್ ಸಿಂಗಲ್ಸ್‌ಗಳ ಉದ್ದೇಶ. ಚೀನಾದ ಶಾಂಘೈನ ಕ್ಸಿಂಟಿಯಾಂಡಿ ಜಿಲ್ಲೆಯಲ್ಲಿ ಸಿಂಗಲ್ಸ್‌ಗಳು ಈ ಪ್ರಯೋಗ ಮಾಡಿದ್ದಾರೆ. ಅಂದು ಅಲ್ಲಿನ ಥಿಯೇಟರ್‌ಗಳಲ್ಲಿ ರೋಮ್ಯಾಂಟಿಕ್ ಸಿನಿಮಾವಾದ 'ಬೀಜಿಂಗ್ ಲವ್ ಸ್ಟೋರಿ' ಸಿನಿಮಾದ ಸ್ಕ್ರೀನಿಂಗ್ ಇದೆ.

ಅನಾಮಿಕರೊಬ್ಬರು ಈ ರೀತಿ ಪ್ರೇಮಿಗಳಿಗೆ ಕ್ವಾಟ್ಲೆ ನೀಡುವುದಕ್ಕೆ ವೇದಿಕೆ ಸಿದ್ಧಪಡಿಸಿದ್ದು, ಯುಪಿ ಹೆಸರಿನ ಮೂಲಕ ಅವರು ಈ ಪ್ರಕ್ರಿಯೆಯನ್ನು ನಿರ್ವಹಿಸಿದ್ದಾರೆ ಎಂದು ವರದಿಯಾಗಿದೆ. ಈ ಅನಾಮಿಕ ಯುಪಿ ತನ್ನನ್ನು ತಾನು ಸಿಂಗಲ್ ಎಂದು ಕರೆದುಕೊಂಡಿದ್ದು, ಇತ್ತೀಚೆಗೆ ಸಂಬಂಧದಿಂದ ಹೊರಬಂದಿದ್ದಾಗಿ ಹೇಳಿಕೊಂಡಿದ್ದಾರೆ. ಇವರು ತಮ್ಮಂತೆ ಸಿಂಗಲ್ ಆಗಿರುವ ಇತರರಿಗೆ ಈ ರೀತಿ ಥಿಯೇಟರ್‌ಗಳ ಎಲ್ಲಾ ಬೆಸ ಸಂಖ್ಯೆಯ ಸೀಟುಗಳನ್ನು ಬುಕ್ ಮಾಡುವಂತೆ ಕರೆ ನೀಡಿ ಸೀಟುಗಳನ್ನು ಬುಕ್ ಮಾಡುವುದಕ್ಕೆ ಸಹಾಯ ಮಾಡಿದ್ದಾರೆ.

ಇದನ್ನೂ ಓದಿ: ಕುಡಿಯುವ ನೀರಿಗೂ ಹಣ ಪಡೆದ ಹೊಟೇಲ್ ಮೇಲೆ ಕೇಸ್ ಹಾಕಿ ಗೆದ್ದ ಗ್ರಾಹಕ: ಸಿಕ್ಕಿದ ಪರಿಹಾರ ಎಷ್ಟು?

ಯಾವುದೇ ಪ್ರೇಮಿಗಳು ಜೊತೆಯಾಗಿ ಕೂರಬಾರದು ಎಂಬುದು ಈ ನಿರ್ಧಾರದ ಹಿಂದಿನ ಉದ್ದೇಶವಾಗಿದೆ. ಇವರ ನಿರ್ಧಾರದಿಂದ ಒಂದು ಸೀಟು ಖಾಲಿ ಇದ್ದರೆ ಮತ್ತೊಂದು ಸೀಟು ಬುಕ್ ಆಗಿರುತ್ತದೆ. ಇದರಿಂದ ಪ್ರೇಮಿಗಳಿಗೆ ಜೊತೆಯಾಗಿ ಕೂರುವುದಕ್ಕೆ ಸಾಧ್ಯವಾಗುವುದಿಲ್ಲ, ಸೀಟುಗಳು ಖಾಲಿ ಇದ್ದರೂ ಪ್ರೇಮಿಗಳಿಗೆ ಜೊತೆಗಿರುವ ಸೀಟುಗಳು ಬುಕ್ ಮಾಡುವುದಕ್ಕೆ ಸಿಗುವುದು ಇಲ್ಲ. ಹೀಗಾಗಿ ಸಿನಿಮಾ ನೋಡಬೇಕಾದರೆ ಅವರು ಅನಿವಾರ್ಯವಾಗಿ ಬೇರೆ ಬೇರೆ ಕಡೆ ಕುಳಿತು ಸಿನಿಮಾ ನೋಡಬೇಕು. ಸಿಂಗಲ್ಸ್‌ಗಳ ಈ ಕಿತಾಪತಿಯಿಂದಾಗಿ ಥಿಯೇಟರ್ ಸಿಬ್ಬಂದಿ ಸಮಸಂಖ್ಯೆಯ ಸೀಟುಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮಸಾಜ್ ಮಾಡಲು ಬಂದು ಗ್ರಾಹಕಿಯ ಮನೆಯಲ್ಲೇ ಆಕೆಯ ಮೇಲೆ ಹಲ್ಲೆ ಮಾಡಿದ ಅರ್ಬನ್ ಕಂಪನಿ ಉದ್ಯೋಗಿ

ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅನೇಕ ನೆಟ್ಟಿಗರು ಸಿಂಗಲ್ಸ್‌ಗಳ ಈ ಅಭಿಯಾನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ನನ್ನ ಜೀವನದಲ್ಲಿ ನಾನು ಈ ರೀತಿ ಎಂದಿಗೂ ಯೋಚಿಸಿಲ್ಲ. ಎಂತಹ ಕೆಟ್ಟ ಸೇಡು ಆದರೆ ಇದನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ, ಕೇವಲ ಶ್ರೀಮಂತ ಸಿಂಗಲ್ಸ್‌ಗಳು ಇದನ್ನು ಮಾಡಬಹುದು. ನಾನು ಆ ಹಣವನ್ನು ಉತ್ತಮ ಆಹಾರ ಇತ್ಯಾದಿಗಳಿಗೆ ಬಳಸಿ ನನ್ನನ್ನು ಸಂತೋಷಪಡಿಸಿಕೊಳ್ಳಲು ಬಳಸುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಸುದ್ದಿ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ..

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ನೇಹಿತೆಯರ ಒಳಉಡುಪು ಕದಿಯುತ್ತಿದ್ದ ಪತಿ; 30 ವರ್ಷಗಳ ಬಳಿಕ ವಿಕೃತ ಹವ್ಯಾಸದಿಂದ ನಡುಬೀದಿಗೆ ಬಂದ ಸಂಸಾರ!
'ಆ ಕಾರಣ'ಕ್ಕೆ ಆತ್ಮ*ಹತ್ಯೆ ಮಾಡಿಕೊಂಡ ಮುಟ್ಠಾಳ.. ಸಿಡಿದೆದ್ದ ರಚಿತಾ ರಾಮ್!