ಗಂಡ ಸತ್ತ ನಂತರ ಗೊತ್ತಾಯ್ತು ಆತ ಮಾಡಿದ ಮೋಸ: ಸಿಟ್ಟಿಗೆದ್ದ ಪತ್ನಿ ಮಾಡಿದ್ದೇನು?

By Anusha Kb  |  First Published Oct 7, 2024, 3:58 PM IST

ದಾಂಪತ್ಯ ದ್ರೋಹವನ್ನು ಸಹಿಸಿಕೊಳ್ಳುವುದು ಕಷ್ಟ. ಇಲ್ಲೊಬ್ಬಳು ಮಹಿಳೆಗೆ ಪತಿ ಸತ್ತ ಮೇಲೆ ಆತ ಮಾಡಿದ ಮೋಸದ ಬಗ್ಗೆ ಗೊತ್ತಾಗಿದೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ಮಾಡಿದ ಕಾರ್ಯ ಈಗ ಎಲ್ಲರನ್ನು ಅಚ್ಚರಿಗೊಳಿಸಿದೆ.


ದಾಂಪತ್ಯ ದ್ರೋಹವನ್ನು ಸಹಿಸಿಕೊಳ್ಳುವುದು ಕಷ್ಟ. ಇಲ್ಲೊಬ್ಬಳು ಮಹಿಳೆಗೆ ಪತಿ ಸತ್ತ ಮೇಲೆ ಆತ ಮಾಡಿದ ಮೋಸದ ಬಗ್ಗೆ ಗೊತ್ತಾಗಿದೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ಮಾಡಿದ ಕಾರ್ಯ ಈಗ ಎಲ್ಲರನ್ನು ಅಚ್ಚರಿಗೊಳಿಸಿದೆ.

ಒಬ್ಬ ವ್ಯಕ್ತಿ ಸತ್ತಾಗ ಆತ ಮಾಡಿದ ತಪ್ಪುಗಳನ್ನೆಲ್ಲಾ ಜನ ಮರೆಯುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆಗೆ ತನ್ನ ಗಂಡ ತನಗೆ ಮೋಸ ಮಾಡಿದ್ದಾನೆ ಎಂಬ ವಿಚಾರ ಆತ ಸತ್ತಮೇಲೆ ಗೊತ್ತಾಗಿದೆ. ಕೆನಡಾ ಮೂಲದ ಮಹಿಳೆ ಜೆಸ್ಸಿಕಾ ವೈಟಿ ಎಂಬುವವರು ಗಂಡ ತೀರಿಕೊಂಡ ನಂತರ ಆತನ ಐಪಾಡ್ ಚೆಕ್‌ ಮಾಡಿದ್ದಾರೆ. ಅದರಲ್ಲಿದ್ದ ಬ್ರೌಸಿಂಗ್ ಡಾಟಾವನ್ನು ಜೆಸ್ಸಿಕಾ ಪರೀಕ್ಷಿಸಿದ್ದಾರೆ. ಈ ವೇಳೆ ಜೆಸ್ಸಿಕಾಗೆ ಗಂಡ ತನ್ನ ಜೊತೆಗಿರುವಾಗಲೇ ಹಲವು ಮಹಿಳೆಯರೊಟ್ಟಿಗೆ ಸಂಬಂಧ ಇಟ್ಟುಕೊಂಡಿರುವ ವಿಚಾರ ಗೊತ್ತಾಗಿದೆ. ಅಲ್ಲದೇ ಆತನ ಬ್ರೌಸಿಂಗ್ ಡಾಟಾದಲ್ಲಿ ಆತ ಕಾಲ್‌ಗರ್ಲ್‌ಗಳಿಗಾಗಿ ಹುಡುಕಾಟ ನಡೆಸಿರುವುದು, ನಿಗದಿತ ಸ್ಥಳಗಳಲ್ಲಿ ಅವರಿಗಾಗಿ ಹುಡುಕಾಟ ನಡೆಸಿ ಅವರ ರೇಟ್ ಎಷ್ಟು ಎಂದು ತಿಳಿದುಕೊಂಡಿರುವುದು ಹಾಗೂ ಆತ ದಿನವೂ ಕಾಲ್‌ಗರ್ಲ್‌ಗಳ ಬಳಿ ಹೋಗುತ್ತಿದ್ದು, ತನಗೆ ಮೋಸ ಮಾಡಿದ ಈ ಎಲ್ಲಾ ವಿಚಾರಗಳು ಜೆಸ್ಸಿಕಾಗೆ ಗಂಡ ಸತ್ತ ನಂತರ ತಿಳಿದಿದೆ. 

Tap to resize

Latest Videos

ರಸ್ತೆ ಮಧ್ಯೆ ಪ್ರೇಯಸಿ ಜೊತೆ ಪತ್ನಿ ಕೈಗೆ ತಗಲಾಕೊಂಡ ಪತಿ: ಆಮೇಲೇನಾಯ್ತು ನೋಡಿ

ಗಂಡನ ಕಿತಾಪತಿ ಬರೀ ಇಷ್ಟೇ ಅಲ್ಲ, ಹೆಂಡತಿ ಕೇಳಿದಾಗಲೆಲ್ಲಾ ಆತ ತಾನು ಕೆಲಸದಲ್ಲಿ ಬ್ಯುಸಿಯಾಗಿರುವುದಾಗಿ ಆಕೆಗೆ ಸುಳ್ಳು ಹೇಳಿದ್ದಾನೆ. ಆದರೆ ಆ ಸಮಯದಲ್ಲಿ ಆತ 100ಕ್ಕೂ ಹೆಚ್ಚು ಅಶ್ಲೀಲ ವೀಡಿಯೋಗಳನ್ನು ತನ್ನ ಲ್ಯಾಪ್‌ಟಾಪ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡಿದ್ದ. ಅಲ್ಲದೇ ಅವುಗಳನ್ನು ತುಂಬಾ ಸೇಫಾಗಿ ತನ್ನ ಡೆಸ್ಕ್‌ಟಾಪ್‌ನಲ್ಲಿ ಜೋಡಿಸಿಕೊಂಡಿದ್ದ. ಅಲ್ಲದೇ ಅಮೆರಿಕಾದ ಕೊಲೆರಾಡೋದಲ್ಲಿ ಅಪಾರ್ಟ್‌ಮೆಂಟ್‌ವೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದ ಆತ ಅಲ್ಲಿ ಈ ಕಾಲ್‌ಗಲ್ಸ್‌ಗಳ ಜೊತೆ ಕಾಲ ಕಳೆದಿದ್ದ, ಅವರೊಂದಿಗೆ ಡೇಟ್ ಮಾಡಿದ್ದ ಎಂಬ ವಿಚಾರವೂ ಪತ್ನಿ ಜೆಸ್ಸಿಕಾಗೆ ನಿಧಾನವಾಗಿ ತಿಳಿದಿದೆ. 

ಗಂಡ ಸತ್ತ ಮೇಲೆ ಆತ ಮಾಡಿದ ಮೋಸದ ವಿಚಾರಗಳೆಲ್ಲವೂ ಒಂದೊಂದಾಗಿ ತಿಳಿಯುತ್ತಿದ್ದಂತ ತಾನು ಇಷ್ಟು ದಿನ ನಂಬಿದ್ದೆಲ್ಲವೂ ಭ್ರಮೆ ಎಂಬುದು ಎಂಬ ವಿಚಾರ ಮಹಿಳೆಗೆ ಅರಿವಾಗಿದೆ. ಇದರಿಂದ ಸಿಟ್ಟು ಆಕ್ರೋಶ, ಆತಂಕ ಎಲ್ಲವೂ ಜೊತೆಯಾಗಿ ಬಂದಿದೆ. ಜಗಳ ಮಾಡಿ ಹೊಡೆದಾಡಿ ಸೇಡು ತೀರಿಸಿಕೊಳ್ಳೋಣ ಎಂದರೆ ಗಂಡ ಮುಂದೆ ಇಲ್ಲ, ಮುಂದೇನು ಮಾಡೋದು ಎಂದು ತಿಳಿಯದಾದ ಆಕೆ ಮನಸ್ಸಿಗೆ ತೋಚಿದಂತೆ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ.

ಪತ್ನಿಯ ಸ್ನೇಹಿತೆಯೊಂದಿಗೆ ಏಕಾಂತದಲ್ಲಿರುವಾಗಲೇ ಸಿಕ್ಕಿಬಿದ್ದ ಗಂಡ!

ಇದಕ್ಕಾಗಿ ಯಾರು ಯೋಚನೆಯೂ ಮಾಡಿರದಂತಹ ಕೆಲಸವೊಂದನ್ನು ಆಕೆ ಮಾಡಿದ್ದಾಳೆ. ಗಂಡನನ್ನು ಸುಟ್ಟ ನಂತರ ತೆಗೆದಿರಿಸಿದ ಚಿತಾಭಸ್ಮದಲ್ಲಿ ಸ್ವಲ್ಪವನ್ನು ತೆಗೆದು ತಾನೇ ತಿಂದಿದ್ದಾಳೆ. ಅಲ್ಲದೇ ಉಳಿದ ಚಿತಾಭಸ್ಮದ  ಜೊತೆ ನಾಯಿಯ ಮಲವನ್ನು ಮಿಕ್ಸ್ ಮಾಡಿದ್ದಾಳೆ. ಇದನ್ನು ಆಕೆ ತಾನು ಬರೆದ ಪುಸ್ತಕವೊಂದರಲ್ಲಿ ಹೇಳಿಕೊಂಡಿದ್ದು, ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಅದೇನೆ ಇರಲಿ, ಸಾಯುವ ಮೊದಲು ನಿಮ್ಮ ಬ್ರೌಸಿಂಗ್ ಡಾಟಾವನ್ನು ಕ್ಲಿಯರ್ ಮಾಡಿ ಇಲ್ಲದಿದ್ದರೆ ಸತ್ತ ಮೇಲೂ ಹೀಗೆ ಅನಾಹುತವಾಗುತ್ತೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ. 

click me!