ಶಿವಮೊಗ್ಗ ಮಲೆನಾಡಿನ ಈ ಜೋಡಿ, ಸಾವಿನಲ್ಲೂ ಕೈ ಬಿಡಲಿಲ್ಲ ನೋಡಿ!

By Sathish Kumar KH  |  First Published Jan 11, 2024, 6:59 PM IST

'ಮಲೆನಾಡಿನ ಹೂ'ಮಲೆನಾಡಿನ ಹೂವು ನೀನು...' ಅಂತ ಮದುವೆಯಾಗಿ 65 ವರ್ಷಗಳ ತುಂಬು ಜೀವನ ನಡೆಸಿದ ವೃದ್ಧ ದಂಪತಿ ಈಗ ಸಾವಿನಲ್ಲೂ ಒಂದಾಗಿದ್ದಾರೆ. ವು ನೀನು...' ಅಂತ ಮದುವೆಯಾಗಿ 65 ವರ್ಷಗಳ ತುಂಬು ಜೀವನ ನಡೆಸಿದ ವೃದ್ಧ ದಂಪತಿ ಈಗ ಸಾವಿನಲ್ಲೂ ಒಂದಾಗಿದ್ದಾರೆ.


ಶಿವಮೊಗ್ಗ (ಜ.11): 'ಮಲೆನಾಡಿನ ಹೂವು ನೀನು...' ಅಂತ ಮದುವೆಯಾಗಿ 65 ವರ್ಷಗಳ ತುಂಬು ಜೀವನ ನಡೆಸಿದ ವೃದ್ಧ ದಂಪತಿ ಈಗ ಸಾವಿನಲ್ಲೂ ಒಂದಾಗಿದ್ದಾರೆ. ತನ್ನ ಪತಿ ಅನಾರೋಗ್ಯದಿಂದ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಮಡದಿಯೂ ಕೂಡ ಒಂದು ಗಂಟೆಯ ಅಂತರದಲ್ಲಿ ತಾನೂ ಕೂಡ ಪ್ರಾಣ ಬಿಟ್ಟಿದ್ದಾಳೆ. ಅಪರೂಪದ ಘಟನೆಗೆ ಮಲೆನಾಡಿನ ಹೊಸನಗರ ಸಾಕ್ಷಿಯಾಗಿದೆ.

ಸಾಮಾನ್ಯವಾಗಿ ಮಲೆನಾಡ ಹೆಣ್ಣನ್ನು ಹಲವು ಸಿನಿಮಾಗಳ ಹಾಡುಗಳಲ್ಲಿ ಹಾಡಿ, ಹೊಗಳಿದ್ದಾರೆ. ಯಾಕೆಂದರೆ ಮಲೆನಾಡಿನ ಸೌಂದರ್ಯದ ಜೊತೆಗೆ ಅಲ್ಲಿನ ಮಹಿಳೆಯರಿಗೂ ಗೌರವ ತಂದುಕೊಡುವ ಕಾರ್ಯ ಸಿನಿಮಾದ ಮೂಲಕ ಮಾಡಲಾಗಿದೆ. ಇನ್ನು ಇಲ್ಲಿನ ಜೀವನ ಕ್ರಮ, ದಾಂಪತ್ಯ, ಕುಟುಂಬ ಪದ್ದತಿಯ ಬಗ್ಗೆ ತಿಳಿದುಕೊಳ್ಳಲು ರಾಷ್ಟ್ರಕವಿ ಕುವೆಂಪು ಸೇರಿದಂತೆ ಹಲವರು ಉದಾಹರಣೆಯಾಗಿದ್ದಾರೆ. ಅದರಲ್ಲಿಯೂ ಸಂಸಾರದ ಬಂಡಿಯ ಜೋಡಿಯಾದ ಪತ್ನಿಯ ಮೇಲಿನ ಪ್ರೀತಿಗೂ ಕುವೆಂಪು ಸಾಕ್ಷಿಯಾಗಿದ್ದಾರೆ.

Tap to resize

Latest Videos

ಹೈಸ್ಕೂಲ್ ಹುಡ್ಗೀರಿಗೆ ಹೆಡ್‌ ಮೇಷ್ಟ್ರಿಂದಲೇ ಲೈಂಗಿಕ ಕಿರುಕುಳ: ಸರ್ಕಾರದ ಶಿಕ್ಷೆಗೆ ಬೆಚ್ಚಿಬಿದ್ದ ಶಿಕ್ಷಕ!

ಮಲೆನಾಡಿನ ಭಾಗವೇ ಆಗಿರುವ ಹೊಸನಗರ ತಾಲ್ಲೂಕಿನ ಸಾವಂತೂರು ಗ್ರಾಮದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಸುಮಾರು 65 ವರ್ಷಗಳ ಕಾಲ ತುಂಬು ಜೀವನ ನಡೆಸಿದ ವೃದ್ಧ ದಂಪತಿ ಈಗ ಸಾವಿಲ್ಲಿಯೂ ಒಂದಾಗಿದ್ದಾರೆ. ಪತಿ ಸಾವಿನ ಸುದ್ದಿ ತಿಳಿದ ಒಂದು ಗಂಟೆಯಲ್ಲಿ ಪತ್ನಿಯೂ ತನ್ನ ಉಸಿರು ಚೆಲ್ಲಿದ್ದಾಳೆ. ಇನ್ನು ಕುಟುಂಬದಲ್ಲಿ ಇಬ್ಬರನ್ನು ಕಳೆದುಕೊಂಡ ಕುಟುಂಬ ದುಃಖದ ಮಡುವಿನಲ್ಲಿ ಮುಳುಗಿತ್ತು. ಆದರೆ, ಈ ವೃದ್ಧ ದಂಪತಿಯ ಜೋಡಿ ಮಾತ್ರ ಮದುವೆ ಸಂದರ್ಭದಲ್ಲಿ ಜೊತೆಗೆ ಕೂತಿದ್ದಂತೆಯೇ ಸಾವಿನ ನಂತರವೂ ಕುಳಿತುಕೊಂಡಿದ್ದು ನೋಡಿ ಇದು ಪುಣ್ಯದ ಸಾವು ಎಂದು ಜನರು ಮಾತನಾಡಿಕೊಂಡಿದ್ದಾರೆ.

ಬೆಂಗಳೂರು ನಮ್ಮ ಮೆಟ್ರೋಗೆ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರಾಗಿ ಎಮ್.ಮಹೇಶ್ವರ ರಾವ್ ನೇಮಕ

ಸಾವಿನಲ್ಲೂ ಒಂದಾದ ವೃದ್ದ ದಂಪತಿ ಹೊಳೆಯಪ್ಪ (90) ಹಾಗೂ ಗಂಗಮ್ಮ(84) ಎನ್ನುವವರಾಗಿದ್ದಾರೆ. ಕೃಷಿ  ಕಾರ್ಮಿಕ ದಂಪತಿಗಳಾದ 90ರ ಹರೆಯದ ಹೊಳೆಯಪ್ಪ ಹಾಗೂ 84ರ ಗಂಗಮ್ಮ ದಂಪತಿಗಳು ಇಂದು ಬೆಳಗಿನ ಜಾವ ಒಂದು ಗಂಟೆಯ ಅಂತರದಲ್ಲಿ  ಸಾವಿನಲ್ಲೂ ಒಂದಾಗಿದ್ದಾರೆ. ಪತಿ ಹೊಳೆಯಪ್ಪ ಅವರು ಅನಾರೋಗ್ಯದಿಂದ ಮೃತಪಟ್ಟ ವಿಷಯ ತಿಳಿಯುತಿದ್ದಂತೆ, ಪತ್ನಿ ಗಂಗಮ್ಮ ತೀವ್ರ ಹೃದಯಘಾತದಿಂದ ಗಂಡನೊಂದಿಗೆ ಇಹಲೋಕ ತ್ಯಜಿಸಿದ್ದಾರೆ. ಮೃತ ದಂಪತಿಗಳು  ಇಬ್ಬರು ಗಂಡು ಮಕ್ಕಳು, ಐವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗ ಬಿಟ್ಟಗಲಿದ್ದಾರೆ. ಮೃತ ದಂಪತಿಗಳ ನಿಧನಕ್ಕೆ ಮುಂಬಾರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.

click me!