12th Fail ಸಿನಿಮಾಗೆ ಇವರೇ ಸ್ಫೂರ್ತಿ, ಹಳೆಯ ಫೋಟೋ ಹಂಚಿಕೊಂಡ ಐಪಿಎಸ್ ಜೋಡಿ

By Vinutha Perla  |  First Published Jan 11, 2024, 3:26 PM IST

ಜೀವನದಲ್ಲಿ ಕಷ್ಟಪಟ್ಟು ಐಪಿಎಸ್‌ ಅಧಿಕಾರಿಯಾದ ವ್ಯಕ್ತಿಯ ಜೀವನಗಾಥೆ ಆಧರಿಸಿರುವ  ಸಿನಿಮಾ 12th Fail.ಈ ಸಿನಿಮಾಗೆ ಸ್ಫೂರ್ತಿಯಾಗಿರುವ ಜೋಡಿ ಸದ್ಯ ತಮ್ಮ ಜೀವನದ ಥ್ರೋ ಬ್ಯಾಕ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಗಿದೆ.


12th Fail ಸದ್ಯ ಎಲ್ಲೆಡೆ ಹೆಚ್ಚು ಚರ್ಚೆಯಾಗುತ್ತಿರುವ ಸಿನಿಮಾ. IPS ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಜೀವನಾಧಾರಿತ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಸಾಮಾನ್ಯ ವ್ಯಕ್ತಿಯೊಬ್ಬರು ಕಠಿಣ ಪರಿಶ್ರಮದಿಂದ ಐಪಿಎಸ್‌ ಆಫೀಸರ್‌ ಆಗುವುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಮನೋಜ್ ಕುಮಾರ್ ಶರ್ಮಾ, ಐಪಿಎಸ್ ಅಧಿಕಾರಿಯಾಗಲು ಪಟ್ಟ ಕಷ್ಟಗಳನ್ನು ಈ ಸಿನಿಮಾದಲ್ಲಿ ತಿಳಿಸಲಾಗಿದೆ. ಚಿತ್ರದ ಕುರಿತಾಗಿ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿರೋ ಬೆನ್ನಲ್ಲೇ ಈ ಸಿನಿಮಾದ ಸ್ಪೂರ್ತಿಯಾಗಿರುವ ಮನೋಜ್ ಶರ್ಮಾ ಪತ್ನಿಯೊಂದಿಗೆ ಮುದ್ದಾದ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. 

ನಿಜ ಜೀವನದ '12th ಫೇಲ್' IPS ಅಧಿಕಾರಿ, ಪತ್ನಿಯೊಂದಿಗೆ ಮುದ್ದಾದ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. '12th ಫೇಲ್' ಚಿತ್ರದ ನಿಜ ಜೀವನದ ಸ್ಫೂರ್ತಿ, ಅವರ ಪತ್ನಿ ಐಆರ್‌ಎಸ್ ಅಧಿಕಾರಿ ಶ್ರದ್ಧಾ ಜೋಶಿ. ಮನೋಜ್ ಕುಮಾರ್‌ ತಮ್ಮ ಪತ್ನಿ ಶ್ರದ್ಧಾರೊಂದಿಗೆ ನಿಂತಿರುವ ಹೃದಯಸ್ಪರ್ಶಿ ಫೋಟೋವನ್ನು ಶೇರ್ ಮಾಡಿದ್ದಾರೆ. ಪೋಸ್ಟ್ ಅವರ ಮದುವೆಯ ಕೆಲವು ದಿನಗಳ ನಂತರ ತೆಗೆದ ಥ್ರೋಬ್ಯಾಕ್ ಚಿತ್ರವನ್ನು ಒಳಗೊಂಡಿದೆ. ಇದು ದಂಪತಿಗಳ ಪ್ರೇಮವಿವಾಹದ ಬಗ್ಗೆ ತಿಳಿಸುತ್ತದೆ.  

Tap to resize

Latest Videos

ಬ್ಯೂಟಿ ವಿತ್‌ ಬ್ರೈನ್‌, ಭಾರತದ ಅತ್ಯಂತ ಕಿರಿಯ ಮಹಿಳಾ ಐಎಎಸ್‌ ಅಧಿಕಾರಿ ಈ ಸೆಲ್ಫಿ ಕ್ವೀನ್‌!

'12th Fail' ಸಿನಿಮಾದ ಅಸಲಿ ಜೋಡಿಯ ಫೋಟೋ ವೈರಲ್
'ಇಂದು ನಾನು ಮದುವೆಯಾದ ಕೆಲವು ದಿನಗಳ ನಂತರ ತೆಗೆದ ಫೋಟೋ ನನಗೆ ದೊರಕಿದ್ದು, ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ' ಎಂದು ಈ ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ. ಪೋಸ್ಟ್ ಶೇರ್ ಮಾಡಿಕೊಂಡ ಕೇವಲ ಒಂದು ಗಂಟೆಯೊಳಗೆ 130k ವೀಕ್ಷಣೆಗಳನ್ನು ಗಳಿಸಿದೆ. ದಂಪತಿಗಳ ನಡುವಿನ ಪ್ರೀತಿ, ನಂಬಿಕೆ ಬಲವಾದ ಸಂಬಂಧಕ್ಕಾಗಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದರು.

IRS ಶ್ರದ್ಧಾ ಜೋಶಿ ಶರ್ಮಾ ಅವರ ಪಯಣವೂ ಅಷ್ಟೇ ಶ್ಲಾಘನೀಯ. ಅವರು 2005 ರಲ್ಲಿ ಪಿಸಿಎಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು, ನೈನಿತಾಲ್‌ನಲ್ಲಿ ಡೆಪ್ಯೂಟಿ ಕಲೆಕ್ಟರ್ ಆದರು. ನಂತರ UPSCಯ 2007 ರ ನಾಗರಿಕ ಸೇವೆಗಳ ಪರೀಕ್ಷೆಗಳಲ್ಲಿ 121 ರ ಪ್ರಭಾವಶಾಲಿ ಅಖಿಲ ಭಾರತ ಶ್ರೇಣಿಯನ್ನು ಗಳಿಸಿದರು, ಭಾರತೀಯ ಕಂದಾಯ ಸೇವೆಗೆ (IRS) ಸೇರಿದರು. UPSC ತಯಾರಿಯ ಸಮಯದಲ್ಲಿ, ಶ್ರದ್ಧಾ ಜೋಶಿ, ಮನೋಜ್‌ ಶರ್ಮಾಗೆ ಮಾರ್ಗದರ್ಶನ ಮಾಡಿದರು. 

ಸಿಎ, ಐಐಎಂ ಪದವೀಧರೆಯಾದ್ರೂ ಬೆಂಗಳೂರಲ್ಲಿ ಪುಟ್ಟ ಹೋಟೆಲ್ ತೆರೆದ ಈಕೆ ತಿಂಗಳ ಗಳಿಕೆ ಈಗ 4.5 ಕೋಟಿ

UPSCತಯಾರಿಯ ದಿನಗಳಲ್ಲಿ, ಜೋಶಿಯವರು ಶರ್ಮಾರನ್ನು ಕಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಈ ಸಂದರ್ಭದಲ್ಲಿ ವೃತ್ತಿಪರವಾದ ಭೇಟಿ ಇಬ್ಬರ ನಡುವೆ ಉತ್ತಮ ಸಂಬಂಧ ರೂಪುಗೊಳ್ಳಲು ಕಾರಣವಾಯಿತು. ಇಬ್ಬರೂ ಪರಸ್ಪರ ಮದುವೆಯಾಗುವ ನಿರ್ಧಾರಕ್ಕೆ ಬಂದರು.

ಮನೋಜ್ ಕುಮಾರ್ ಶರ್ಮಾ ಪಾತ್ರದಲ್ಲಿ ವಿಕ್ರಾಂತ್ ಮಿಸ್ಸೆ ಮತ್ತು ಶ್ರದ್ಧಾ ಜೋಶಿ ಪಾತ್ರದಲ್ಲಿ ಮೇಧಾ ಶಂಕರ್ ಕಾಣಿಸಿಕೊಂಡಿರುವ ವಿಧು ವಿನೋದ್ ಚೋಪ್ರಾ ಅವರ ಚಿತ್ರ '12th ಫೇಲ್. ಸಂಕಷ್ಟಗಳ ನಡುವೆಯೇ ಜೋಡಿಯ ವಿಶಿಷ್ಟ ಪ್ರೇಮಕಥೆಯು ಹೆಚ್ಚು ಪ್ರಶಂಸಿಸಲ್ಪಟ್ಟಿದೆ. IFS ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಹೈಲೈಟ್ ಮಾಡಿದ ಒಂದು ನಿರ್ದಿಷ್ಟ ದೃಶ್ಯ, ಜೋಶಿ ಅವರು ತಮ್ಮ ಸಂದರ್ಶನಕ್ಕಾಗಿ UPSC ಕಟ್ಟಡದಲ್ಲಿ ಶರ್ಮಾ ಅವರನ್ನು ಡ್ರಾಪ್ ಮಾಡಿರುವುದು ಇದು ಚಿತ್ರದ ಯಶಸ್ಸನ್ನು ಹೆಚ್ಚಿಸಿದೆ.

ಒಟ್ನಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದಿರುವ 12th fail ಸಿನಿಮಾ ದಂಪತಿಗಳ ಸ್ಪೂರ್ತಿದಾಯಕ ಪ್ರಯಾಣಕ್ಕೆ ಸಾಕ್ಷಿಯಾಗಿದೆ. ಸಾಧನೆಗೆ ಸಂಗಾತಿಗಳ ಸಾಥ್‌ ಎಷ್ಟು ಮುಖ್ಯವಾಗಿರುತ್ತದೆ ಎಂಬುದನ್ನು ತಿಳಿಸುತ್ತದೆ.

शादी के कुछ दिन बाद का एक फ़ोटो मिला आज
….🙏 pic.twitter.com/kPqSsbcWt9

— Manoj Sharma (@ManojSharmaIPS)
click me!