ಅನಿವಾರ್ಯವಾಗಿ ಹೋಟೆಲ್ ನಲ್ಲಿ ತಂಗುವ ಸಮಯ ಬಂದರೂ ಮನೆಗೆ ಯಾವಾಗ ಹೋಗುತ್ತೇವಪ್ಪ ಎಂದು ಬಯಸುವಂತಾಗುತ್ತದೆ. ಆದರೆ, ಚೀನಾದ ಕುಟುಂಬವೊಂದು 300 ದಿನಗಳಿಗಿಂತ ಹೆಚ್ಚು ಕಾಲದಿಂದ ಹೋಟೆಲ್ ನಲ್ಲೇ ಉಳಿದುಕೊಂಡಿದೆ. ಮನೆಯ ಸದಸ್ಯರಿಗೆ ಹೋಟೆಲ್ ವಾಸವೇ ಖುಷಿ ಎನಿಸಿದ್ದರಿಂದ ಜೀವನಪೂರ್ತಿ ಅಲ್ಲಿಯೇ ಇರಲು ಸಹ ನಿರ್ಧರಿಸಿದೆ.
ಎಂದಾದರೂ ಒಂದೆರಡು ದಿನಗಳ ಕಾಲ ಹೋಟೆಲ್ ನಲ್ಲಿ ತಂಗುವ ಅನಿವಾರ್ಯತೆ ಎದುರಾದರೆ, “ಯಾವಾಗ ಈ ಹೋಟೆಲ್ ಸಹವಾಸ ಮುಗಿದು ಮನೆಗೆ ತೆರಳುತ್ತೇವೋ’ ಎಂದು ನಿರೀಕ್ಷೆ ಮಾಡುವಂತಾಗುತ್ತದೆ. ಬೇರೆ ಊರುಗಳಿಗೆ ಹೋದಾಗ ಹೋಟೆಲ್ ಗಳಲ್ಲಿ ಉಳಿಯುವುದು ಅನಿವಾರ್ಯವಾದ್ದರಿಂದ ಜನ ಹೇಗೋ ಅಡ್ಜಸ್ಟ್ ಮಾಡಿಕೊಳ್ಳುತ್ತಾರೆ. ಇನ್ನು, ಎಷ್ಟೋ ಜನರಿಗೆ ಅಪರೂಪಕ್ಕೆ ಒಮ್ಮೆ ಹೋಟೆಲ್ ನಲ್ಲಿ ತಂಗುವುದು ಒಂದು ರೀತಿಯ ರಿಲ್ಯಾಕ್ಸ್ ಅನುಭವ ನೀಡಬಹುದು. ಆದರೆ, ಇರುವ ಊರಿನಲ್ಲೇ ಮನೆಯನ್ನು ಬಿಟ್ಟು ಸದಾಕಾಲ ಹೋಟೆಲ್ ನಲ್ಲೇ ತಂಗುವುದು ಯಾರಿಗೂ ಸಾಧ್ಯವಿಲ್ಲ. ಎಂಥದ್ದೇ ಲಕ್ಸುರಿ ಹೋಟೆಲ್ ಆದರೂ ಅದು ಮನೆಯಲ್ಲ, ಮನೆಯ ಕಂಫರ್ಟ್ ಭಾವನೆಯನ್ನು ಅದು ಮೂಡಿಸುವುದಿಲ್ಲ. ಆದರೆ, ಎಲ್ಲರಲ್ಲೂ ಇದೇ ಭಾವನೆಯಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಚೀನಾದಲ್ಲಿ ಒಂದು ಕುಟುಂಬವಿದೆ. ಆ ಕುಟುಂಬದ ಜನರಿಗೆ ಹೋಟೆಲೇ ಈಗ ಮನೆಯಾಗಿದೆ. ಮನೆಯಲ್ಲಿ ಒಟ್ಟು 8 ಜನ ಸದಸ್ಯರಿದ್ದು, ಇವರ ವಿಭಿನ್ನ ಜೀವನಶೈಲಿಗೆ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ಚೀನಾದ (China) ಈ ಕುಟುಂಬ (Family) ನಾನ್ಯಾಂಗ್ ನಗರದಲ್ಲಿ ವಾಸಿಸುತ್ತಿದೆ. 8 ಜನರ ಈ ಕುಟುಂಬ ಕಳೆದ 299ಕ್ಕೂ ಅಧಿಕ ದಿನಗಳಿಂದ ಹೋಟೆಲ್ ನಲ್ಲಿ ವಾಸಿಸುತ್ತಿದೆ ಎಂದರೆ ಅಚ್ಚರಿಯಾಗುತ್ತದೆ. ಇದು ಉಳಿದುಕೊಂಡಿರುವುದು ಲಕ್ಸುರಿ ಹೋಟೆಲ್ (Luxury Hotel) ನಲ್ಲಿ. ಇಲ್ಲಿ ದಿನವೊಂದಕ್ಕೆ 1 ಸಾವಿರ ಯುವಾನ್ (Yuan) ಅರ್ಥಾತ್ 11 ಸಾವಿರ ರೂಪಾಯಿ ಬಾಡಿಗೆ ದರವಿದೆ. ಕುಟುಂಬ ತಮ್ಮ ಸ್ವಂತ ಅಪಾರ್ಟ್ ಮೆಂಟನ್ನು ಮಾರಿ ಹೋಟೆಲ್ ನಲ್ಲಿ ಉಳಿದುಕೊಂಡಿದೆ. ಕುಟುಂಬ ಹೋಟೆಲಿನಲ್ಲಿ ಉಳಿದುಕೊಂಡಿರುವ ಜಾಗ ಒಂದು ಲಿವಿಂಗ್ ರೂಮ್, ಎರಡು ಕೋಣೆಗಳನ್ನು ಒಳಗೊಂಡಿದ್ದು, ನೀರು, ವಿದ್ಯುತ್, ಪಾರ್ಕಿಂಗ್, ಹೀಟಿಂಗ್ ಎಲ್ಲ ಸೇರಿ ಒಟ್ಟಾರೆ ದಿನಕ್ಕೆ 11 ಸಾವಿರ ರೂಪಾಯಿ ಬಾಡಿಗೆ (Rent) ನೀಡಬೇಕು.
ದುಡ್ಡು ಮಾಡೋದು ಹೇಗೆ? ಮಿಡಲ್ ಕ್ಲಾಸಿನವರೇಕೆ ಸಿರಿವಂತರಾಗೋಲ್ಲ?
ಹೋಟೇಲೇ ಕಂಫರ್ಟ್
ಕುಟುಂಬದ ಸದಸ್ಯರಾಗಿರುವ ಮು ಕ್ಸುಯೆ ಎನ್ನುವವರು ತಮ್ಮ ಜೀವನಶೈಲಿಯ (Lifestyle) ಬಗ್ಗೆ ಮಾಹಿತಿ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರ ಕುಟುಂಬದ ವೀಡಿಯೋವೊಂದು ಬೆಳಕಿಗೆ ಬರುತ್ತದೇ ವೈರಲ್ ಆಗಿದೆ. ಅದರಲ್ಲಿ ಮನೆಯಲ್ಲಿರುವ ಎಲ್ಲ ಸಲಕರಣೆಗಳನ್ನು ತೋರಿಸಲಾಗಿದೆ. ಮು ಕ್ಸುಯೆ ಹೇಳುವ ಪ್ರಕಾರ, ಅವರ ಕುಟುಂಬ ಹೋಟೆಲ್ ಗೆ ಶಿಫ್ಟ್ (Shift) ಆಗಿ 299 ದಿನಗಳಾಗಿವೆ. ಮನೆಯ ಸದಸ್ಯರು ಹೋಟೆಲ್ ನಲ್ಲಿ ಭಾರೀ ಖುಷಿಯಿಂದ, ಕಂಫರ್ಟ್ (Comfort) ಆಗಿ ತಂಗಿದ್ದಾರೆ. ಅಲ್ಲದೆ, ಮನೆಯಲ್ಲಿ ಉಳಿದುಕೊಳ್ಳುವುದಕ್ಕಿಂತ ಹೋಟೆಲ್ ನಲ್ಲಿ ತಂಗುವುದು ಆರ್ಥಿಕವಾಗಿ ಲಾಭದಾಯಕ ಎನ್ನುವುದು ಅವರ ಅಭಿಪ್ರಾಯ. ಹೀಗಾಗಿ, ಮುಂದಿನ ಇಡೀ ಜೀವನವನ್ನು (Life) ಹೋಟೆಲ್ ನಲ್ಲಿಯೇ ಕಳೆಯಲು ತೀರ್ಮಾನಿಸಿದ್ದಾರೆ. ದೀರ್ಘಕಾಲದ ಬಾಡಿಗೆಗೆ ಕಡಿಮೆ ದರದಲ್ಲಿ ಮನೆ ನೀಡುವುದಾಗಿ ಹೋಟೆಲ್ ಕೂಡ ಕ್ಸುಯೆ ಕುಟುಂಬಕ್ಕೆ ಭರವಸೆ ನೀಡಿದೆ.
3 ಸಾವಿರ ಜನಸಂಖ್ಯೆಯ ಈ ಹಳ್ಳಿಯಲ್ಲಿದ್ದಾರೆ 1110 ಯೂಟ್ಯೂಬರ್‌ಗಳು!
6 ಕಡೆ ಆಸ್ತಿ
ಮು ಅವರ ಕುಟುಂಬ ಒಟ್ಟು 6 ಕಡೆ ಆಸ್ತಿ (Asset) ಹೊಂದಿದ್ದು, ಹಣಕಾಸು ಸ್ಥಿತಿ ಉತ್ತಮವಾಗಿದೆ. ಈ ಹಿಂದೆ ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ಕಿರಿಕಿರಿ ಎನಿಸಿದ್ದರಿಂದ ಅದನ್ನು ಮಾರಾಟ ಮಾಡಿ ಹೋಟೆಲ್ ನಲ್ಲಿ ಇವರ ಕುಟುಂಬ ಬೀಡುಬಿಟ್ಟಿದೆ. “ಹೀಗೆ ಹೋಟೆಲ್ ನಲ್ಲಿ ಉಳಿದುಕೊಳ್ಳುವುದರಿಂದ ಹಣಕಾಸಿನ ಉಳಿತಾಯವೂ ಆಗುತ್ತದೆ. ಇಲ್ಲಿ ಎಲ್ಲವೂ ಸುಸಂಬದ್ಧವಾಗಿದೆ ಎನಿಸುತ್ತದೆ, ನಾವೆಲ್ಲರೂ ಖುಷಿಯಾಗಿದ್ದೇವೆ, ಹೀಗಾಗಿ ಜೀವನಪೂರ್ತಿ ಇಲ್ಲಿಯೇ ಇರುತ್ತೇವೆ’ ಎನ್ನುತ್ತಾರೆ ಮು. ಇವರ ವಿಭಿನ್ನ ಜೀವನಶೈಲಿಗೆ ಸಾಕಷ್ಟು ಜನ ಬೆರಗಾಗಿದ್ದಾರೆ.