
ಲೈಂಗಿಕತೆ ಬಗ್ಗೆ ಭಾರತೀಯರು ಈಗ್ಲೂ ಬಹಿರಂಗವಾಗಿ ಮಾತನಾಡೋದಿಲ್ಲ. ಆದ್ರೆ ಸೆಕ್ಸ್ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವ ಅಗತ್ಯವಿದೆ. ಸಂಭೋಗದ ಬಗ್ಗೆ ಎಲ್ಲರೂ ತಮ್ಮದೇ ಆದ ಆದ್ಯತೆಯನ್ನು ಹೊಂದಿರುತ್ತಾರೆ. ಕೆಲವರು ವಾರದ ಎಲ್ಲ ದಿನ ಲೈಂಗಿಕ ಸುಖ ಬಯಸಿದ್ರೆ ಮತ್ತೆ ಕೆಲವರು ವಾರಾಂತ್ಯದಲ್ಲಿ ಮಾತ್ರ ಇದನ್ನು ಬಯಸ್ತಾರೆ. ಆದ್ರೆ ಒಂದು ವಾರ, ತಿಂಗಳು ಅಥವಾ ಒಂದೆರಡು ತಿಂಗಳು ಸೆಕ್ಸ್ ನಿಂದ ಬ್ರೇಕ್ ಪಡೆಯುವ ಬಗ್ಗೆ ನೀವು ಆಲೋಚನೆ ಮಾಡಿದ್ದೀರಾ? ಈ ಸೆಕ್ಸ್ ಬ್ರೇಕ್ ಗೆ ಸೆಕ್ಸ್ ಡೆಟಾಕ್ಸ್ ಎಂದು ಕರೆಯುತ್ತಾರೆ. ಈ ಸೆಕ್ಸ್ ಬ್ರೇಕ್, ಲೈಂಗಿಕ ಹಾಗೂ ಭಾವನಾತ್ಮಕ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು.
ಕೆಲವರು ಲೈಂಗಿಕತೆಯ ಚಟ (Addiction) ಹೊಂದಿರ್ತಾರೆ. ಅವರಿಗೆ ಪ್ರತಿ ದಿನ ಶಾರೀರಿಕ ಸುಖಬೇಕು. ಸಂದರ್ಭ ಯಾವುದೇ ಇರಲಿ ಅವರು ಲೈಂಗಿಕ ಸಂತೋಷ ಪಡೆಯಲು ಬಯಸ್ತಾರೆ. ಆದ್ರೆ ಇದು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆರೋಗ್ಯಕ್ಕೆ ಸೆಕ್ಸ್ (Sex) ಅಗತ್ಯ. ಆದ್ರೆ ಪ್ರತಿ ದಿನ ಟೈಂ ಟೇಬಲ್ ಹಾಕಿಕೊಂಡು ಮಾಡುವ ಈ ಕ್ರಿಯೆ, ಆರೋಗ್ಯ (Health) ಹಾಳು ಮಾಡುವ ಸಾಧ್ಯತೆಯಿರುತ್ತದೆ.
ಈ ಕೆಟ್ಟ ಅಭ್ಯಾಸಗಳಿಂದ ನೀವು ಕೆಲಸ ಕಳೆದುಕೊಳ್ಳೋದು ಗ್ಯಾರಂಟಿ
ಸೆಕ್ಸ್ ಡಿಟಾಕ್ಸ್ (Sex Detox ) ಅಂದರೇನು? : ಯಾವುದರ ಮೇಲೆ ನಮಗೆ ಹಿಡಿತವಿಲ್ಲವೋ ಅದು ನಮ್ಮ ನಾಶಕ್ಕೆ ಕಾರಣವಾಗುತ್ತದೆ. ಸೆಕ್ಸ್ ವಿಷ್ಯದಲ್ಲೂ ಇದು ಸತ್ಯ. ಅದ್ರ ಮೇಲೆ ನಿಯಂತ್ರಣ ಸಾಧಿಸಬೇಕು. ಹಿಂದೆಯೋ ಅನೇಕ ಕಾರಣಕ್ಕೆ ಸೆಕ್ಸ್ ಬ್ರೇಕ್ ಪಡೆಯಲಾಗ್ತಿತ್ತು. ಹಬ್ಬ,ವಿಶೇಷ ದಿನದ ಹೆಸರಿನಲ್ಲಿ ಅದಕ್ಕೆ ವಿರಾಮ ನೀಡಲಾಗ್ತಾಯಿತ್ತು. ಈಗ ಸೆಕ್ಸ್ ವಿರಾಮವನ್ನು ಸೆಕ್ಸ್ ಡಿಟಾಕ್ಸ್ ಎಂದು ಕರೆಯಲಾಗುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ನೀವು ಫ್ರೆಶ್ ಆಗಲು ಇದು ನೆರವಾಗುತ್ತದೆ.
ಸೆಕ್ಸ್ ಡಿಟಾಕ್ಸ್ ನಿಂದಾಗುವ ಲಾಭಗಳು :
ಯಾವುದೇ ಒತ್ತಾಯ, ಒತ್ತಡವಿಲ್ಲ : ಪ್ರತಿ ನಿತ್ಯ ಶಾರೀರಿಕ ಸಂಭೋಗ ಬೆಳೆಸಿ ಮನಸ್ಸು ಹಾಗೂ ದೇಹ ಆಸಕ್ತಿ ಕಳೆದುಕೊಂಡಿರುತ್ತದೆ. ಆದ್ರೆ ಸಂಗಾತಿಗೆ ಇದು ಅನಿವಾರ್ಯ ಎಂದು ಭಾವಿಸುವವರು ಮನಸ್ಸಿಲ್ಲದ ಮನಸ್ಸಿನಲ್ಲಿ ಒತ್ತಡಕ್ಕೆ ಒಳಗಾಗಿ ಸಂಬಂಧ ಬೆಳೆಸ್ತಾರೆ. ಆದ್ರೆ ಡಿಟಾಕ್ಸ್ ವೇಳೆ ಈ ಒತ್ತಡ ಅವರನ್ನು ಕಾಡುವುದಿಲ್ಲ. ಅವರ ಇಚ್ಛೆಯಂತೆ ಅವರು ದಿನ ಕಳೆಯಬಹುದು.
ದೈಹಿಕ ಆರೋಗ್ಯಕ್ಕೆ ಸೆಕ್ಸ್ ಡಿಟಾಕ್ಸ್ ಒಳ್ಳೆಯದು : ನಿಯಮಿತವಾಗಿ ಸಂಭೋಗ ಮಾಡುವುದರಿಂದ ಯಾವುದೇ ವಿಶೇಷ ಸಮಸ್ಯೆ ಉಂಟಾಗುವುದಿಲ್ಲ. ಆದರೆ ದೇಹದ ಯಾವುದೇ ಭಾಗಕ್ಕೂ ವಿಶ್ರಾಂತಿ ಸಿಗುವುದಿಲ್ಲ. ಯೋನಿಗೂ ವಿಶ್ರಾಂತಿ ಬೇಕು. ಆದ್ದರಿಂದ ಸೆಕ್ಸ್ ಡಿಟಾಕ್ಸ್ ಯೋನಿ ಆರೋಗ್ಯಕ್ಕೆ ಸಮಯ ನೀಡುತ್ತದೆ. ನಿಯಮಿತ ಸೆಕ್ಸ್, ಯೋನಿ ತುರಿಕೆ ಮತ್ತು ಸೋಂಕಿಗೆ ಕಾರಣವಾಗಬಹುದು. ಕಾಂಡೋಮ್‌ನಲ್ಲಿರುವ ಲ್ಯೂಬ್ ನಿಮ್ಮ ಯೋನಿ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ.
Relationship Tips : ಪರರ ಪತ್ನಿಯರೇಕೆ ಪುರುಷರಿಗೆ ಆಕರ್ಷವಾಗಿ ಕಾಣಿಸ್ತಾರೆ?
ಮತ್ತೆ ಹೆಚ್ಚಾಗುತ್ತೆ ಆಸಕ್ತಿ : ಇಬ್ಬರ ಮಧ್ಯೆ ಕೆಲ ದಿನ ಶಾರೀರಿಕ ಸಂಬಂಧ ಬೆಳೆದಿಲ್ಲವೆಂದ್ರೆ ಇಬ್ಬರ ಮಧ್ಯೆ ಬಾಂಡಿಂಗ್ ಕಡಿಮೆಯಾಗುತ್ತದೆ, ಸೆಕ್ಸ್ ಮೇಲಿನ ಆಸಕ್ತಿ ಕಳೆದುಹೋಗುತ್ತದೆ ಎಂದು ಅನೇಕರು ಭಾವಿಸಿದ್ದಾರೆ. ಆದ್ರೆ ಇದು ಸುಳ್ಳು. ಸ್ವಲ್ಪ ದಿನ ದೂರವಿದ್ದು ಮತ್ತೆ ಒಂದಾದಾಗ ಇಬ್ಬರಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಇಬ್ಬರು ಭಾವೋದ್ರೇಕಕ್ಕೆ ಒಳಗಾಗ್ತಾರೆ. ಇಬ್ಬರ ಮಧ್ಯೆ ಉತ್ಸಾಹ ಹೆಚ್ಚಾಗುತ್ತದೆ.
ಭಾವನಾತ್ಮಕವಾಗಿ ಹತ್ತಿರವಾಗ್ತೀರಿ : ಪ್ರತಿ ದಿನ ಊಟದಂತೆ ಸೆಕ್ಸ್ ಆದಾಗ ಬೇಸರವಾಗುತ್ತದೆ. ಅದೇ ಸ್ವಲ್ಪ ದಿನ ಅದಕ್ಕೆ ವಿರಾಮ ನೀಡಿದ್ರೆ ಪರಸ್ಪರ ಅರ್ಥ ಮಾಡಿಕೊಳ್ಳಲು ಸಮಯ ಸಿಗುತ್ತದೆ. ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳಿದ್ದರೆ ಅಥವಾ ತೊಂದರೆ ಉಂಟುಮಾಡುವ ಯಾವುದೇ ರೀತಿಯ ಭಾವನಾತ್ಮಕ ಸಮಸ್ಯೆಗಳಿದ್ದರೆ ಸೆಕ್ಸ್ ಡಿಟಾಕ್ಸ್ ಭಾವನಾತ್ಮಕ ಅಗತ್ಯಗಳನ್ನು ವ್ಯಕ್ತಪಡಿಸಲು ನೆರವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.