ಗರ್ಭಿಣಿಯಾದ ಬಳಿಕ ವಿವಿಯನ್‌ ರಿಚರ್ಡ್ಸ್‌ಗೆ ಕರೆ ಮಾಡಿದ ಕ್ಷಣಗಳ ನೆನಪಿಸಿಕೊಂಡ ನೀನಾ ಗುಪ್ತಾ!

Published : Mar 23, 2023, 06:03 PM IST
ಗರ್ಭಿಣಿಯಾದ ಬಳಿಕ ವಿವಿಯನ್‌ ರಿಚರ್ಡ್ಸ್‌ಗೆ ಕರೆ ಮಾಡಿದ ಕ್ಷಣಗಳ ನೆನಪಿಸಿಕೊಂಡ ನೀನಾ ಗುಪ್ತಾ!

ಸಾರಾಂಶ

ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ನ ದಿಗ್ಗಜ ಆಟಗಾರ ವಿವಿಯನ್‌ ರಿಚರ್ಡ್ಸ್ ಜೊತೆಗೆ ರಿಲೇಷನ್‌ಷಿಪ್‌ನಲ್ಲಿ ಇರುವಾಗಲೇ ಬಾಲಿವುಡ್‌ ನಟಿ ನೀನಾ ಗುಪ್ತಾ ಗರ್ಭಿಣಿಯಾಗಿದ್ದರು. ಕೊನೆಗೆ ಮಗಳು ಮಸಬಾ ಗುಪ್ತಾ ಜನಿಸಿದ್ದರು. ಈ ನಡುವೆ  ಗರ್ಭಿಣಿಯಾದ ಬಳಿ ಈ ವಿಚಾರವನ್ನು ವಿವಿಯನ್‌ ರಿಚರ್ಡ್ಸ್‌ಗೆ ತಿಳಿಸಿದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.

ನವದೆಹಲಿ (ಮಾ.23): ಹಿರಿಯ ನಟಿ ನೀನಾ ಗುಪ್ತಾ ತಮ್ಮ ಜೀವನದಲ್ಲಿ ಹೆಚ್ಚಾಗಿ ಕಷ್ಟಗಳನ್ನೇ ಕಂಡವರು. ಆದರೆ, ಅದೆಲ್ಲವನ್ನೂ ಧೈರ್ಯವಾಗಿ ಎದುರಿಸಿ ಸಮಾಜದ ಮುಂದೆ ನಿಂತಾಕೆ. ಒಬ್ಬಳೇ ಮಗಳನ್ನು ಆಕೆ ಬೆಳೆಸಿದ್ದ ರೀತಿಗೆ ಇಡೀ ಬಾಲಿವುಡ್‌ ಇಂಡಸ್ಟ್ರಿಯೇ ದಂಗಾಗಿತ್ತು. ಅದಕ್ಕಾಗಿ ಅದೆಷ್ಟು ರಿಜೆಕ್ಷನ್‌ಗಳನ್ನು ಆಕೆ ಎದುರಿಸಿದರೂ ದಿಕ್ಕೆಟ್ಟಿರಲಿಲ್ಲ. ತನ್ನ ಸುತ್ತಮುತ್ತಲಿನ ಅಂಥದೇ ಕೆಲವೊಂದು ವ್ಯಕ್ತಿಗಳಿಗೆ ಆಕೆ ಸ್ಪೂರ್ತಿಯೂ ಆಗಿದ್ದರು. ಯೌವ್ವನದ ದಿನಗಳಲ್ಲಿ ಮಗಳನ್ನು ಬೆಳೆಸುವುದರಲ್ಲಿಯೇ ಹೆಚ್ಚಿನ ಗಮನ ನೀಡಿದ್ದ ನೀನಾ ಗುಪ್ತಾ ಸಾಕಷ್ಟು ಚಿತ್ರಗಳನ್ನು ಅದಕ್ಕಾಗಿ ತ್ಯಾಗ ಮಾಡಿದ್ದರು. ಈಗ ಮತ್ತೆ ನೀನಾ ಗುಪ್ತಾ ಫಿಲ್ಮ್‌ ಆಫರ್‌ಗಳನ್ನು ಪಡೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲವೊಂದು ಬಾಲಿವುಡ್‌ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದ ನೀನಾ ಗುಪ್ತಾ, ತನ್ನ ವೈಯಕ್ತಿಕ ಜೀವನದಲ್ಲಿ ಆದ ಘಟನೆಗಳನ್ನು ಸಾಮಾಜಿಕ ವೇದಿಕೆಯಲ್ಲಿ ಹೇಳುವುದಕ್ಕೆ ಯಾವುದೇ ಹಿಂಜರಿಕೆ ತೋರುತ್ತಿಲ್ಲ. ಇತ್ತೀಚಿನ ಒಂದು ಸಂದರ್ಶನದಲ್ಲಿ ಮದುವೆಗೂ ಮುನ್ನವೇ ವೆಸ್ಟ್‌ ಇಂಡೀಸ್‌ ದಿಗ್ಗಜ ವಿವಿಯನ್‌ ರಿಚರ್ಡ್ಸ್‌ ಅವರ ಪುತ್ರಿಗೆ ಗರ್ಭಿಣಿಯಾಗಿದ್ದು ಹಾಗೂ ಅದನ್ನು ರಿಚರ್ಡ್ಸ್‌ಗೆ ಮೊದಲು ಹೇಳಿದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.

ನೀನಾ ಗುಪ್ತಾ ಅವರ ಮಗಳು ಮಸಬಾ ಗುಪ್ತಾ ಅವರ ತಂದೆ ವಿವಿಯನ್‌ ರಿಚರ್ಡ್ಸ್‌. ಪ್ರಖ್ಯಾತ ವಿನ್ಯಾಸಕಿಯಾಗಿರುವ ಮಸಬಾ ಗುಪ್ತಾ ಇತ್ತೀಚೆಗಷ್ಟೇ ವಿವಾಹವಾಗಿದ್ದರು. ಅದರೆ, ತಾನು ಮಸಬಾಳನ್ನು ಹೊಟ್ಟೆಯಲ್ಲಿ ಇರಿಸಿಕೊಂಡಿದ್ದ ವೇಳೆ ರಿಚರ್ಡ್ಸ್‌ಗೆ ಅದಾಗಲೇ ಮದುವೆಯಾಗಿತ್ತು. ಹಾಗಿದ್ದರೂ ನಾನು ಪೆಗ್ರೆನ್ಸಿ ಮುಂದುವರಿಸಲು ಅವರು ಪ್ರೋತ್ಸಾಹಿಸಿದ್ದರು ಎಂದಿದ್ದಾರೆ.

ಆ ದಿನಗಳನ್ನು ನೆನಪಿಸಿಕೊಂಡ ನೀನಾ, 'ನನಗೇನೂ ಆಗ ತುಂಬಾ ಸಂಭ್ರಮವಾಗಿರಲಿಲ್ಲ. ಆದರೆ, ಆತನನ್ನು ಪ್ರೀತಿ ಮಾಡುತ್ತಿದ್ದ ಕಾರಣಕ್ಕೆ ನನಗೆ ಖುಷಿಯಾಗಿತ್ತು. ನಾನು ಆತನಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಹಾಗೇನಾದರೂ ಇಷ್ಟವಿಲ್ಲ ಎಂದಾದರೆ, ನನಗೂ ಮಗು ಬೇಡ ಎಂದಿದ್ದೆ. ಆದರೆ, ಅದಕ್ಕೆ ಅವರು, ನಿನಗೋಸ್ಕರವಾಗಿ ನನಗೆ ಆ ಮಗು ಬೇಕು ಎಂದು ಹೇಳಿದ್ದರು. ಈ ವೇಳೆ ಎಲ್ಲರೂ ನನಗೆ ಇದು ಸಾಧ್ಯವೇ ಇಲ್ಲ. ನೀನೊಬ್ಬಳೇ ಇದನ್ನು ಹೇಗೆ ಮಾಡಲು ಸಾಧ್ಯ? ಎಂದಿದ್ದರು. ಯಾಕೆಂದರೆ, ಅದಾಗಲೇ ರಿಚರ್ಡ್ಸ್‌ಗೆ ಮದುವೆ ಆಗಿತ್ತು. ನಾನು ಅವರನ್ನು ಮದುವೆಯಾಗಿ ಆಂಟಿಗಾಗೆ ತೆರಳಿ ಅಲ್ಲಿ ಬದುಕೋದು ಸಾಧ್ಯವೇ  ಇಲ್ಲದ ಮಾತಾಗಿತ್ತು. ಅದರೆ, ಯೌವ್ವನದಲ್ಲಿ  ಇದಾವುದರ ಅರಿವೇ ಇರೋದಿಲ್ಲ. ಪ್ರೀತಿಯಲ್ಲಿದ್ದಾಗ ನಿಮಗೆ ಯಾರು ಹೇಳಿದ್ದೂ ಕೇಳಿಸೋದಿಲ್ಲ. ನಾವ ಮಕ್ಕಳು ಕೂಡ ಆ ಸಮಯದಲ್ಲಿ ಪೋಷಕರ ಮಾತನ್ನು ಕೇಳೋದಿಲ್ಲ. ನಾನು ಅದೇ ರೀತಿಯಲ್ಲಿದ್ದೆ' ಎಂದು ಹೇಳಿದ್ದಾರೆ.

ಗರ್ಭಿಣಿ ನೀನಾ ಗುಪ್ತಾರನ್ನು ಮದುವೆಯಾಗಲು ಬಯಸಿದ್ದರು ಸತೀಶ್ ಕೌಶಿಕ್!

ಬದಾಯಿ ಹೋ ಚಿತ್ರದಲ್ಲಿ ನಟಿಸಿ ಮೆಚ್ಚುಗೆ ಗಳಿಸಿರುವ ನೀನಾ ಗುಪ್ತಾ, ತನ್ನ ಕುಟುಂಬ ಆರಂಭದಲ್ಲಿ ನನ್ನ ನಿರ್ಧಾರಕ್ಕೆ ಬೆಂಬಲ ನೀಡಿರಲಿಲ್ಲ. ಕೊನೆಗೆ ತಂದೆ ಮೊದಲಿಗರಾಗಿ ಒಪ್ಪಿದ್ದು ಮಾತ್ರವಲ್ಲದೆ, ನನ್ನ ನಿರ್ಧಾರಕ್ಕೆ ಬಹುದೊಡ್ಡ ಬೆಂಬಲಿಗರಾಗಿ ನಿಂತಿದ್ದರು. ಆದರೆ, ಯಾವುದೇ ಕಾರಣಕ್ಕೂ ಹುಟ್ಟುವ ಮುಗುವಿಗೆ ಯಾವ ವಿಚಾರವನ್ನೂ ಮುಚ್ಚಿಡಬೇಡ ಎಂದು ಹೇಳಿದ್ದರು.'ನಾನು ರಿಚರ್ಡ್ಸ್‌ ಅವರೊಂದಿಗೆ ಕೆಲವೊಮ್ಮೆ ಸಂಪರ್ಕದಲ್ಲಿರುತ್ತಿದ್ದೆ. ಇದನ್ನು ಮಸಬಾಗೆ ಮುಕ್ತವಾಗಿ ಹೇಳುತ್ತಿದ್ದೆ. ನನ್ನ ಮಗುವಿಗೆ ಅಗತ್ಯವನ್ನು ಹೇಳುವುದು ಅಗತ್ಯವಾಗಿತ್ತು. ಇಲ್ಲದೇ ಇದ್ದರೆ, ಅವರು ಬೇರೆ ಕಡೆಯಿಂದ ಸತ್ಯವನ್ನು ತಿಳಿದುಕೊಳ್ಳುತ್ತಾರೆ. ಹಾಗಾಗಿ ಸತ್ಯವನ್ನು ಮಕ್ಕಳಿಗೆ ತಿಳಿಸಿ ಅದರೊಂದಿಗೆ ಬದುಕುವುದನ್ನು ಕಲಿಸಬೇಕು ಎಂದು ಹೇಳಿದ್ದಾರೆ.

ಅವರು ಯಾವತ್ತೂ ನನಗೆ ಪ್ರಮುಖ ಪಾತ್ರ ನೀಡಿಲ್ಲ; ಖ್ಯಾತ ನಿರ್ದೇಶಕನ ವಿರುದ್ಧ ನೀನಾ ಗುಪ್ತ ಅಸಮಾಧಾನ

ಇನ್ನು ಚಿತ್ರಗಳ ವಿಚಾರದಲ್ಲಿ ಕೇಳುವುದಾದರೆ, 60ರ ಆಸುಪಾಸಿನಲ್ಲಿರುವ ನಟಿ ನೀನಾ ಗುಪ್ತಾ ಇತ್ತೀಚೆಗೆ ಬಿಡುಗಡೆಯಾದ ಗುಡ್‌ಬೈ ಹಾಗೂ ಊಂಚಾಯಿ ಚಿತ್ರದಿಂದ ಅಪಾರ ಮೆಚ್ಚುಗೆ ಸಂಪಾದನೆ ಮಾಡಿದ್ದಾರೆ.  ಶಿವ ಶಾಸ್ತ್ರಿ ಬಲ್ಬೋವಾ ಹಾಗೂ ವಧ್‌ ಚಿತ್ರದಲ್ಲಿ ನಟಿಸಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!