ವಯಸ್ಸಾದ ಜೋಡಿಯ ಪ್ರೇಮ ಕಥೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರೌಢಶಾಲೆಯಲ್ಲಿ ಪ್ರೀತಿಸಿ ಈಗ ಪ್ರಪೋಸ್ ಮಾಡಿದ ಅಜ್ಜನ ಪ್ರೇಮ ನಿವೇದನೆಗೆ ಅಜ್ಜಿ ಓಕೆ ಎಂದಿದ್ದಾಳೆ. ಮದುವೆಗೆ ತಯಾರಿ ಜೋರಾಗಿ ನಡೆದಿದೆ.
ಶುದ್ಧ ಪ್ರೀತಿಗೆ ಸಾವಿಲ್ಲ.. ನಿಮ್ಮ ಪ್ರೀತಿ ಸತ್ಯವಾಗಿದ್ರೆ ಆ ಪ್ರೀತಿ ಒಂದಲ್ಲ ಒಂದು ದಿನ ನಿಮಗೆ ಸಿಗುತ್ತೆ. ಈ ಮಾತು ಇವರನ್ನು ನೋಡಿದ್ರೆ ನೂರಕ್ಕೆ ನೂರು ಸತ್ಯ ಎನ್ನಿಸುತ್ತೆ. ಪ್ರೌಢಶಾಲೆಯಲ್ಲಿ ಪ್ರೀತಿಸಿದ್ದ ಜೋಡಿ 63 ವರ್ಷ ಕಳೆದ್ರೂ ಒಬ್ಬರನ್ನೊಬ್ಬರು ಮರೆಯಲಿಲ್ಲ. ಕೊನೆಗೂ ಈಗ ಆ ಜೋಡಿಗೆ ಮದುವೆಯ ಭಾಗ್ಯ ಕೂಡಿ ಬಂದಿದೆ. ಇವರಿಬ್ಬರ ಪ್ರೇಮ ಕಥೆ ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿದೆ.
ಈ ಕಥೆ (Story)ಯ ಹೀರೋ 78 ವರ್ಷ ವಯಸ್ಸಿನ ಥಾಮಸ್ ಮೆಕ್‌ಮೀಕಿನ್ ಮತ್ತು ಹಿರೋಯಿನ್ 68 ನ್ಯಾನ್ಸಿ ಗ್ಯಾಂಬೆಲ್. ಇಬ್ಬರೂ ಅಮೆರಿಕ (America) ವಾಸಿಗಳು. ಇಬ್ಬರೂ 60 ರ ದಶಕದ ನಂತ್ರ ಮತ್ತೆ ಭೇಟಿಯಾಗಿದ್ದಾರೆ. ಥಾಮಸ್ ಪ್ರೌಢಶಾಲೆ (Highschool) ಯಲ್ಲಿರುವಾಗ ಮೊದಲ ನೋಟದಲ್ಲೇ ನ್ಯಾನ್ಸಿಯ ಪ್ರೀತಿಗೆ ಬಿದ್ದಿದ್ದರು. ಕಾಲಕ್ರಮೇಣ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಯಿತು. ಆದರೆ ಶಾಲೆ ಮುಗಿದ ನಂತರ ಬೇರೆ ಬೇರೆ ಕಾಲೇಜುಗಳಲ್ಲಿ ಪ್ರವೇಶ ಪಡೆದು ಇಬ್ಬರೂ ಬೇರೆಯಾದರು. ಆದಾಗ್ಯೂ, ಕೆಲವೊಮ್ಮೆ ಇಬ್ಬರೂ ಒಟ್ಟಿಗೆ ವಾಕ್ ಅಥವಾ ಪಾರ್ಟಿಗೆ ಹೋಗುತ್ತಿದ್ದರು.
ಡೈವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದ 15 ಜೋಡಿಗಳನ್ನು ಮತ್ತೆ ಒಂದುಗೂಡಿಸಿದ ಲೋಕ ಅದಾಲತ್
ಆದರೆ ನ್ಯಾನ್ಸಿ ಮತ್ತು ಥಾಮನ್ ದಾರಿ ಬೇರೆಯಾಯ್ತು. ಇಬ್ಬರೂ ಬೇರೆ ಮದುವೆಯಾದ್ರು. ಅವರ ನಡುವೆ ವರ್ಷಗಳವರೆಗೆ ಯಾವುದೇ ಸಂಪರ್ಕ ಇರಲಿಲ್ಲ. ಆದ್ರೆ 2012 ರಲ್ಲಿ ಶಾಲೆಯಲ್ಲಿ ನಡೆದ ಪುನರ್ಮಿಲನ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಭೇಟಿಯಾದರು. ಇಬ್ಬರ ಮಧ್ಯೆ ಮತ್ತೆ ಸಂಭಾಷಣೆ ಶುರುವಾಗಿತ್ತು. ಈ ವೇಳೆಗಾಗ್ಲೇ ನ್ಯಾನ್ಸಿಯ ಪತಿ ತೀರಿಹೋಗಿದ್ದರು. ಥೋಮನ್ ಹೆಂಡತಿಯೂ ಈಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ ದಂಪತಿ ಇಬ್ಬರೂ ಒಟ್ಟಿಗೆ ಜೀವನದಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ. ಇದಕ್ಕೆ ಕುಟುಂಬ ಸದಸ್ಯರ ಒಪ್ಪಿಗೆಯೂ ಸಿಕ್ಕಿದೆ.
ಸಿನಿಮಾ ಶೈಲಿಯಲ್ಲಿ ಪ್ರಪೋಸ್ : ಮದುವೆ ನಿರ್ಧಾರ ತೆಗೆದುಕೊಂಡ್ಮೇಲೆ ಥೋಮನ್, ನ್ಯಾನ್ಸಿ ಭೇಟಿಗೆ ಪ್ಲಾನ್ ಮಾಡಿದ್ದಾರೆ. ಟ್ಯಾಂಪಾ ವಿಮಾನ ನಿಲ್ದಾಣದಲ್ಲಿ ಸಿನಿಮಾ ಶೈಲಿಯಲ್ಲಿ ಪ್ರಪೋಸ್ ಮಾಡಿ, ನ್ಯಾನ್ಸಿಗೆ ಸರ್ಪ್ರೈಸ್ ನೀಡಿದ್ದಾರೆ.
ಕಳೆದ ವಾರ ನ್ಯಾನ್ಸಿ ಮುಂದೆ ಥಾಮಸ್ ಮೊಣಕಾಲಿನ ಮೇಲೆ ಕುಳಿತು ಪ್ರೇಮ ನಿವೇದನೆ ಮಾಡಿದ್ದಾರೆ. ಈ ವೇಳೆ ಇಬ್ಬರ ಕುಟುಂಬಸ್ಥರು ಹಾಜರಿದ್ದರು. ಈಗ ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲು ಯೋಜಿಸುತ್ತಿದೆ.
'ಬ್ರೋ' ಶಬ್ದಕ್ಕೆ ಅರ್ಥ ತಿಳಿದ್ಮೇಲೆ, ಯಾರನ್ನೂ ಹಾಗೆ ಕರೀತಿಲ್ಲವೆಂದ ಸತ್ಯ ಸೀರಿಯಲ್ 'ಕೀರ್ತನಾ'!
ನ್ಯಾನ್ಸಿ ನನ್ನ ಕ್ರಶ್ ಆಗಿತ್ತು. ಅವಳು ಸುಂದರ ಮತ್ತು ಕರುಣೆಯುಳ್ಳ ಮಹಿಳೆ. ಕಾಲೇಜಿನಲ್ಲಿರುವಾಗ ಡೇಟಿಂಗ್ ಮಾಡ್ತಿದ್ದೆ. ನಂತರ ಇಬ್ಬರ ಮಧ್ಯೆ ಸಂಪರ್ಕವಿರಲಿಲ್ಲ. ಆದರೆ ಅದೃಷ್ಟವಶಾತ್ ಮತ್ತೊಮ್ಮೆ ನಾವು ಮೇಡ್ ಫಾರ್ ಈಚ್ ಅಂತಾ ತೋರುತ್ತಿದೆ. ನಾನು ನ್ಯಾನ್ಸಿಯೊಂದಿಗೆ ನನ್ನ ಉಳಿದ ಜೀವನವನ್ನು ಕಳೆಯಲು ಬಯಸುತ್ತೇನೆ ಎಂದು ಥಾಮಸ್ ಹೇಳಿದ್ದಾರೆ. ನಮ್ಮಿಬ್ಬರ ಮಧ್ಯೆ ಸುದೀರ್ಘ ಜೀವನದ ಅನುಭವವಿದೆ. ನಾವು ಮಾತಾಡ್ತೇವೆ, ಇಮೇಲ್ ಮಾಡ್ತೇವೆ, ಸಂದೇಶ ರವಾನೆ ಮಾಡ್ತೇವೆ ಎಂದು ನ್ಯಾನ್ಸಿ ಹೇಳಿದ್ದಾಳೆ.
ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆದ ವಿಡಿಯೋ : ಈ ಕ್ಷಣದ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. @magicallynews ಹೆಸರಿನ ಖಾತೆಯಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ಒಂದು ದಿನದ ಹಿಂದೆ ಶೇರ್ ಮಾಡಿರುವ ವಿಡಿಯೋವನ್ನು ಈವರೆಗೆ 77 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ವಿಡಿಯೋ ನೋಡಿದ ಬಳಕೆದಾರರು ಸಾಕಷ್ಟು ಕಮೆಂಟ್ ಮಾಡಿದ್ದಾರೆ. ನನಗೆ ಇವರ ಲವ್ ಸ್ಟೋರಿ ಬಗ್ಗೆ ಮಾಹಿತಿ ಬೇಕಿತ್ತು ಎಂದು ಒಬ್ಬರು ಹೇಳಿದ್ರೆ, ಎಂದಿಗೂ ಭರವಸೆ ಕಳೆದುಕೊಳ್ಳಬಾರದು ಎಂದು ಇನ್ನೊಬ್ಬರು ಹೇಳಿದ್ದಾರೆ. ಹಿಂದಿನ ವಾರ ಶಾಪಿಂಗ್ ಗೆ ಹೋಗಿದ್ದ ಈ ಜೋಡಿ ಕ್ಯಾಲಿಫೋರ್ನಿಯಾದಲ್ಲಿ ಮದುವೆಯಾಗುವ ಪ್ಲಾನ್ ಮಾಡಿದ್ದಾರೆ.