ಶೋಯೆಬ್ ಮಲೀಕ್ ಹಾಗೂ ಸಾನಿಯಾ ಮಿರ್ಜಾ ಬೇರೆ ಬೇರೆ ಆಗಿರುವ ಬಗ್ಗೆ ಸಾನಿಯಾ ಮಿರ್ಜಾ ತಂಡ ಇಮ್ರಾನ್ ಮಿರ್ಜಾ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಹೈದರಾಬಾದ್ (ಜ.20): ಸಾನಿಯಾ ಮಿರ್ಜಾ ಅಅವರಿಂದ ವಿಚ್ಛೇದನ ಪಡೆದ ಬಳಿಕ ಕರಾಚಿಯಲ್ಲಿ ಪಾಕಿಸ್ತಾನದ ಜನಪ್ರಿಯ ನಟಿ ಸಜಾ ಜಾವೇದ್ ಅವರನ್ನು ವಿವಾಹವಾಗಿರುವುದಾಗಿ ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲೀಕ್ ಶನಿವಾರ ಹೇಳಿದ್ದಾರೆ. ಶೋಯೆಬ್ ಮಲೀಕ್ ಅವರೊಂದಿಗೆ 14 ವರ್ಷ ದಾಂಪತ್ಯ ಮಾಡಿದ್ದ ಸಾನಿಯಾ ಮಿರ್ಜಾಗೆ ಇಝಾನ್ ಹೆಸರಿನ ಪುತ್ರನಿದ್ದಾನೆ. ನಾವು ನಮ್ಮನ್ನು ಹೊಸ ಜೋಡಿಯಾಗಿ ರೂಪಿಸಿಕೊಂಡಿದ್ದೇವೆ ಎಂದು ಶೀರ್ಷಿಕೆಯೊಂದಿಗೆ ಹೊಸ ಪತ್ನಿಯೊಂದಿಗೆ ಶೋಯೆಬ್ ಮಲೀಕ್ ತಮ್ಮ ಮದುವೆಯ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಐದು ವರ್ಷದ ಇಜಾನ್ ಸಾನಿಯಾ ಅವರ ಜೊತೆಯಲಿದ್ದಾನೆ. ಸಾನಿಯಾ ಮಿರ್ಜಾ ಅವರಿಗೆ ಶೋಯೆಬ್ ಮಲೀಕ್ ತಲಾಖ್ ನೀಡಿದ್ದಾರೆಯೇ ಎನ್ನುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾನಿಯಾ ಮಿರ್ಜಾ ತಂದೆ ಇಮ್ರಾನ್ ಮಿರ್ಜಾ, 'ಇದು ಖುಲಾ' ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ. ಮುಸ್ಲಿಂ ನಿಖಾ ಅಂದರೆ ಮದುವೆಗಳಲ್ಲಿ ಖುಲಾ ಎಂದರೆ, ಹೆಣ್ಣಿಗೆ ಇರುವ ಅಧಿಕಾರವಾಗಿದೆ. ಗಂಡನೊಂದಿಗೆ ತನಗೆ ಬಾಳ್ವೆ ಮಾಡಲು ಇಷ್ಟವಿಲ್ಲ ಎಂದಾದಲ್ಲಿ ಆಕೆ ಖುಲಾ ನೀಡಿ ಬೇರೆ ಆಗಬಹುದಾಗಿದೆ. ಅದನ್ನೇ ಗಂಡು ನೀಡಿದಲ್ಲಿ ಅದನ್ನು ತಲಾಕ್ ಎನ್ನಲಾಗುತ್ತದೆ.
ಸಾನಿಯಾ ಮಿರ್ಜಾಗೆ ಶೋಯೆಬ್ ಮಲೀಕ್ ವಿಚ್ಛೇದನ ನೀಡುತ್ತಾರೆ ಎನ್ನುವ ರೂಮರ್‌ಗಳ ನಡುವೆಯೇ, ಶನಿವಾರ ಶೋಯೆಬ್ ಮಲೀಕ್ ಪಾಕಿಸ್ತಾನಿ ಮೂಲದ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿ ಅದರ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
2022ರಲ್ಲಿಯೇ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲೀಕ್ ಬೇರೆ ಬೇರೆ ಆಗಲಿದ್ದಾರೆ ಎನ್ನುವ ದೊಡ್ಡ ವದಂತಿಗಳು ಎಬ್ಬಿದ್ದವು. ಅದಲ್ಲದೆ, 2018ರಲ್ಲಿ ಪುತ್ರನ ಜನನವಾದ ಬಳಿಕ ಇಬ್ಬರೂ ಹೆಚ್ಚಾಗಿ ಎಲ್ಲೂ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಅದಲ್ಲದೆ, ಇನ್ಸ್‌ಟಾಗ್ರಾಮ್‌ನಲ್ಲೂ ಇಬ್ಬರೂ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದರು.
ಮದುವೆಯಾಗಿ ಎರಡು ತಿಂಗಳಿಗೆ ವಿಚ್ಛೇದನ ತೆಗೆದುಕೊಂಡಿದ್ದ ಸನಾ ಜಾವೇದ್: ಇನ್ನು ಪಾಕಿಸ್ತಾನಿ ನಟಿ ಸನಾ ಜಾವೇದ್‌ಗೂ ಇದು ಮೊದಲ ವಿವಾಹವಲ್ಲ. ಇದಕ್ಕೂ ಮುನ್ನ ಉಮರ್ ಜೈಸ್ವಾಲ್ ಎನ್ನುವವರನ್ನು ವಿವಾಹವಾಗಿದ್ದ ಸನಾ ಜಾವೇದ್ ಮದುವೆಯಾದ ಎರಡೇ ತಿಂಗಳಿಗೆ ವಿಚ್ಛೇದನ ಪಡೆದುಕೊಂಡಿದ್ದರು. ಇನ್ನು ಶೋಯೆಬ್ ಮಲೀಕ್ ಹಾಗೂ ಸಾನಿಯಾ ಮಿರ್ಜಾ 2010ರ ಏಪ್ರಿಲ್ 12 ರಂದು ಹೈದರಾಬಾದ್‌ನಲ್ಲಿ ವಿವಾಹವಾಗಿದ್ದರು. ಶೋಯೆಬ್ ಮಲೀಕ್‌ರನ್ನು ವಿವಾಹವಾಗುವ ನಿಟ್ಟಿನಲ್ಲಿ ಸಾನಿಯಾ ಮಿರ್ಜಾ ಅಕ್ಷರಶಃ ಇಡೀ ದೇಶವನ್ನೇ ಎದುರುಹಾಕಿಕೊಂಡಿದ್ದರು. ಮದುವೆಯಾದ ಬಳಿಕ ಹೆಚ್ಚಿನ ಸಮಯವನ್ನು ದಂಪತಿಗಳು ದುಬೈನಲ್ಲಿ ಕಳೆಯುತ್ತಿದ್ದರು. ಇನ್ನು ಸನಾ ಜಾವೇದ್ ಸಾಕಷ್ಟು ಪಾಕಿಸ್ತಾನಿ ಸೀರಿಯಲ್‌ಗಳಲ್ಲಿ ನಟಿಸಿದ್ದು, ಕೆಲವು ಪಾಕಿಸ್ತಾನಿ ಚಿತ್ರಗಳನ್ನೂ ನಟಿಸಿದ್ದಾರೆ. 2020ರಲ್ಲಿ ಕೊರೋನಾವೈರಸ್ ಸಾಂಕ್ರಾಮಿಕದ ನಡುವೆ ಉಮರ್ ಜೈಸ್ವಾಲ್ ಅವರನ್ನು ಸರಳ ಸಮಾರಂಭದಲ್ಲಿ ಮದುವೆಯಾಗಿದ್ದರು. ಆದರೆ, ಮದುವೆಯಾದ ಎರಡೇ ತಿಂಗಳಿಗೆ ಇಬ್ಬರೂ ಬೇರೆ ಬೇರೆಯಾಗಿದ್ದರು.
Breaking: ಸಾನಿಯಾಗೆ ಕೈಕೊಟ್ಟ ಶೋಯೆಬ್ ಮಲೀಕ್, ನಟಿ ಸನಾ ಜಾವೇದ್ ಕೈಹಿಡಿದ ಪಾಕ್ ಕ್ರಿಕೆಟಿಗ!
ಭಾರತದ ಶ್ರೇಷ್ಠ ಟೆನಿಸ್ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ಸಾನಿಯಾ ಮಿರ್ಜಾ ಕಳೆದ ವರ್ಷವಷ್ಟೇ ವೃತ್ತಿಪರ ಟೆನಿಸ್‌ಗೆ ವಿದಾಯ ಘೋಷಣೆ ಮಾಡಿದ್ದರು. 20 ವರ್ಷಗಳ ಟೆನಿಸ್ ಜೀವನದಲ್ಲಿ ಸಾನಿಯಾ ಮಿfಜಾ 43 ಡಬ್ಲ್ಯುಟಿಎ ಡಬಲ್ಸ್ ಹಾಗೂ 1 ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದಾರೆ.
ವಿವಾದದ ನಡುವೆ ಶೋಯೆಬ್ ಮಲೀಕ್ ವಿವಾಹವಾಗಿದ್ದ ಸಾನಿಯಾ, 14 ವರ್ಷದ ದಾಂಪತ್ಯದಲ್ಲಿ ಆಗಿದ್ದೇನು?