ಕೆಲವೊಮ್ಮೆ ನಾವು ಮಾಡುವ ಕೆಲಸವೇ ನಮಗೆ ವಾಪಸ್ ಹೊಡೆಯತ್ತೆ. ಸುಂದರ ಸಂಸಾರ ಇರೋವಾಗ ಅದ್ರ ಮೂಲ ಪತ್ತೆ ಮಾಡೋಕೆ ಹೋದ ವ್ಯಕ್ತಿಯೊಬ್ಬನಿಗೆ ಈಗ ಅದೇ ನುಂಗಲಾರದ ತುತ್ತಾಗಿದೆ.
ಭಾರತದಲ್ಲಿ ಅನಾಥ ಮಕ್ಕಳನ್ನು ಬಿಟ್ಟರೆ ಬಹುತೇಕ ಎಲ್ಲರಿಗೂ ತಮ್ಮ ಕುಟುಂಬದ ಬಗ್ಗೆ ಮಾಹಿತಿ ಇರುತ್ತದೆ. ತಮ್ಮ ಕುಟುಂಬದವರಾರು, ಅವರ ಮಕ್ಕಳು, ಮರಿ ಮಕ್ಕಳು, ಸಂಬಂಧಿಕರ ಬಗ್ಗೆ ಮಾಹಿತಿ ಹೊಂದಿರುತ್ತಾರೆ. ಅನೇಕ ಕಾರ್ಯಕ್ರಮಗಳಲ್ಲಿ ಸಂಬಂಧಿಕರೆಲ್ಲ ಒಂದಾಗಿ ಸೇರುವ ಕಾರಣ ಎಲ್ಲರ ಪರಿಚಯವಿರುತ್ತದೆ. ವಿದೇಶದಲ್ಲಿರುವವರು ಅಥವಾ ಕುಟುಂಬದಿಂದ ಸಂಪೂರ್ಣ ಬೇರೆಯಾಗಿ, ಬೇರೆ ಊರಿನಲ್ಲಿ ಇರುವವರ ಮಕ್ಕಳಿಗೆ, ಅವರ ರಕ್ತ ಸಂಬಂಧಿಗಳ ಬಗ್ಗೆ ಹೆಚ್ಚು ಮಾಹಿತಿ ಇರೋದಿಲ್ಲ. ವಿದೇಶದಲ್ಲಿ ಇದು ಕಾಮನ್. ವಿದೇಶದಲ್ಲಿ ಸಂಬಂಧಿಕರು ಒಟ್ಟುಗೂಡೋದು ಬಹಳ ಅಪರೂಪ. ಅದ್ರಲ್ಲೂ ತಲೆ ತಲೆಮಾರಿನ ಸಂಬಂಧಿಗಳ ಜೊತೆ ನಂಟಿರೋದಿಲ್ಲ. ಹಾಗಾಗಿಯೇ ಅನೇಕ ಕುಟುಂಬಗಳ ರಹಸ್ಯ ಎಷ್ಟೋ ವರ್ಷಗಳ ಮೇಲೆ ಹೊರ ಬೀಳುತ್ತಿರುತ್ತದೆ. ತನ್ನ ತಂದೆ ಯಾರು ಎಂಬುದನ್ನು ಹುಡುಕುವ ಮಕ್ಕಳಿದ್ದಾರೆ. ಸಹೋದರ ಸಂಬಂಧಿ ಜೊತೆಯೇ ಮದುವೆಯಾಗು ಕೆಲ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಈಗ ಮತ್ತೊಂದು ಇಂಥ ಘಟನೆ ಬೆಳಕಿಗೆ ಬಂದಿದೆ.
ನಮ್ಮ ಕುಟುಂಬ (Family )ದ ಇತಿಹಾಸವನ್ನು ತಿಳಿಯಲು ನಾವು ಡಿಎನ್ ಪರೀಕ್ಷೆಗೆ ಒಳಗಾಗ್ತೇವೆ. ಅಮೆರಿಕ (America) ಮತ್ತು ಬ್ರಿಟನ್ (Britain) ಸೇರಿದಂತೆ ಪ್ರಪಂಚದ ಅನೇಕ ದೇಶಗಳ ಡಿಎನ್‌ಎ (DNA) ಪರೀಕ್ಷೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಡಿಎನ್ ಎ ಪರೀಕ್ಷೆ ಮಾಡಿ ಎಷ್ಟೋ ವರ್ಷಗಳಿಂದ ದೂರವಿದ್ದ ಮಕ್ಕಳು, ಪೋಷಕರನ್ನು ಸೇರಿಕೊಳ್ಳೋದಿದೆ.
ಜನನ ನಿಯಂತ್ರಣ ಮಾತ್ರೆ ಸೇವಿಸೋದ್ರಿಂದ ಕಾಮಾಸಕ್ತಿಯೇ ಕಡಿಮೆಯಾಗುತ್ತಾ?
ಡಿಎನ್ ಎ ಪರೀಕ್ಷೆಯನ್ನು ಅಗತ್ಯವಿರುವಾಗಷ್ಟೆ ಮಾಡಿಸಬೇಕು. ಅನಗತ್ಯವಾಗಿ ಮಾಡಿಸಿದ್ರೆ ಸಮಸ್ಯೆ ಹೆಚ್ಚು. ಇದಕ್ಕೆ ಈ ವ್ಯಕ್ತಿ ಉತ್ತಮ ನಿದರ್ಶನ. ಆರಾಮವಾಗಿದ್ದ ಅವನ ಜೀವನದಲ್ಲಿ ಡಿಎನ್ ಎ ಪರೀಕ್ಷೆ ವಿಲನ್ ಆಗಿದೆ. ತನ್ನ ಹಾಗೂ ಪತ್ನಿಯ ಡಿಎನ್ ಎ ಪರೀಕ್ಷೆ ಮಾಡಿಸಿದ ವ್ಯಕ್ತಿ ಈಗ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ. ಮುಂದೇನು ಮಾಡ್ಬೇಕು ಎಂದು ಜನರನ್ನು ಕೇಳಿದ್ದಾನೆ.
ಅಷ್ಟಕ್ಕೂ ಆತನ ಡಿಎನ್ ಎ ಪರೀಕ್ಷೆ ವರದಿ ಅಚ್ಚರಿಯುಂಟು ಮಾಡುತ್ತದೆ. ಡಿಎನ್ ಎ ಮಾಡಿಸಿದ ನಂತ್ರ ನಾನು ಸಹೋದರ ಸಂಬಂಧಿಯನ್ನೇ ಮದುವೆಯಾಗಿದ್ದೇನೆ ಎಂಬುದು ಆತನಿಗೆ ಗೊತ್ತಾಗಿದೆ. ಇದ್ರಿಂದ ತುಂಬಾ ಟೆನ್ಷನ್ ಆಗ್ತಿದೆ. ಏನು ಮಾಡ್ಬೇಕು ಎಂಬುದು ಗೊತ್ತಾಗ್ತಿಲ್ಲ ಎಂದು ಆತ ಆನ್‌ಲೈನ್ ಪ್ಲಾಟ್‌ಫಾರ್ಮ್ ಕ್ಯೂರಾದಲ್ಲಿ (Online Platfrom Quora) ಹೇಳಿಕೊಂಡಿದ್ದಾನೆ. ಆರು ವರ್ಷಗಳ ಹಿಂದೆ ಆಕೆಯನ್ನು ಮದುವೆಯಾದ ಈತನ ಜೀವನದಲ್ಲಿ ಈವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಇಬ್ಬರು ಸಂತೋಷದಿಂದ ಜೀವನ ನಡೆಸುತ್ತಿದ್ದರು. ಈಗ ಡಿಎನ್ ಎ ಪರೀಕ್ಷೆ ನಿದ್ರೆ ಹಾಳು ಮಾಡಿದೆ. ನಾನು ನನ್ನ ಕುಟುಂಬ ಹಾಗೂ ಪತ್ನಿಗೆ ಈ ವಿಷ್ಯವನ್ನು ಹೇಳಿಲ್ಲ. ಅವರಿಗೆ ಗೊತ್ತಾದ್ರೆ ಸಮಸ್ಯೆ ಆಗ್ಬಹುದು. ಹಾಗಂತ ಇದನ್ನು ದೀರ್ಘಕಾಲ ಮುಚ್ಚಿಡಲು ಸಾಧ್ಯವಿಲ್ಲ. ಒಂದಲ್ಲ ಒಂದು ಸಮಯದಲ್ಲಿ ಇದು ಅವರಿಗೆ ತಿಳಿಯುತ್ತದೆ. ಏನು ಮಾಡ್ಲಿ ಎಂದು ಆತ ಪ್ರಶ್ನೆ ಕೇಳಿದ್ದಾನೆ.
ಪತ್ನಿ ನಿಷ್ಠೆಗೆ ಮನಸೋತ ಪತಿ! ಸಿಕ್ತು ಭರ್ಜರಿ ಗಿಫ್ಟ್
ಅನೇಕರು ಈತನ ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನ ನಡೆಸಿದ್ದಾರೆ. ನಿನ್ನ ಹೃದಯದ ಮಾತು ಕೇಳು ಎಂದು ಒಬ್ಬರು ಹೇಳಿದ್ದಾರೆ. ಕುಟುಂಬದ ಮುಂದೆ ಕುಳಿತು ನಿಧಾನವಾಗಿ ಈ ವಿಷ್ಯವನ್ನು ಅವರಿಗೆ ಹೇಳುವುದು ಉತ್ತಮ ಎಂದು ಇನ್ನೊಬ್ಬರು ಹೇಳಿದ್ದಾರೆ. ನೀವು ಯಾವ ರೀತಿಯ ಸಹೋದರ ಸಂಬಂಧಿ ಎಂಬುದನ್ನು ಪತ್ತೆ ಮಾಡಿ. ಮೊದಲ ತಲೆಮಾರಾಗಿದ್ದರೆ ಮಕ್ಕಳಿಗೆ ಸಮಸ್ಯೆ ಆಗಬಹುದು. ಅದೇ ಎರಡು, ಮೂರು ತಲೆಮಾರಿನವರಾಗಿದ್ದರೆ ಚಿಂತಿಸುವ ಅಗತ್ಯವಿಲ್ಲ ಎಂದಿದ್ದಾರೆ. ಇನ್ನೊಬ್ಬ ವ್ಯಕ್ತಿ ನೀವು ಈಗ ಸಂತೋಷವಾಗಿದ್ದೀರಿ ಎಂದಾದ್ರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಏನಾದ್ರೂ ಸಮಸ್ಯೆ ಆಗಬಹುದು ಎನ್ನುವ ಭಯವಿದ್ದರೆ ವೈದ್ಯರನ್ನು ಸಂಪರ್ಕಿಸಿ ಎಂದು ಇನ್ನೊಬ್ಬ ಬಳಕೆದಾರ ಸಲಹೆ ನೀಡಿದ್ದಾನೆ.