ಹನಿಮೂನ್ ಗೆ ಯಾರು ಹೋಗ್ತಾರೆ ಅಂತಾ ಕೇಳಿದ್ರೆ ಈಗಿನ ಕಾಲದಲ್ಲಿ ಮಕ್ಕಳು ಹೇಳ್ತಾರೆ. ಪತಿ – ಪತ್ನಿಗೆಂದೇ ಮೀಸಲಿರುವ ಈ ಹನಿಮೂನ್ ಗೆ ಇನ್ನೊಬ್ಬರು ತಾನು ಬರ್ತೆನೆ ಅಂತಾ ಹಠ ಹಿಡಿದ್ರೆ ಹೇಗಾಗಬೇಡ..?
ನವ ವಿವಾಹಿತರಿಗೆ ಹನಿಮೂನ್ ವಿಶೇಷವಾಗಿರುತ್ತದೆ. ಒಬ್ಬರನ್ನೊಬ್ಬರು ಅರಿಯಲು, ಪರಸ್ಪರ ಇಷ್ಟಕಷ್ಟಗಳನ್ನು ಹಂಚಿಕೊಳ್ಳಲು ಹನಿಮೂನ್ ಅತ್ಯುತ್ತಮ ಸಮಯ ಎಂದು ಭಾವಿಸುತ್ತಾರೆ. ಮದುವೆಗೆ ಮುನ್ನವೇ ಹನಿಮೂನ್ ಗೆ ಎಲ್ಲಿ ಹೋಗ್ಬೇಕು ಎನ್ನುವ ಬಗ್ಗೆ ಅನೇಕ ಜೋಡಿ ನಿರ್ಧರಿಸಿರುತ್ತಾರೆ. ಹನಿಮೂನ್ ಅನೇಕರ ಕನಸೂ ಹೌದು. ಹಾಗಾಗಿಯೇ ಕೆಲವರು ಹನಿಮೂನ್ ಗಾಗಿ ಸ್ವಲ್ಪ ಹಣವನ್ನು ಎತ್ತಿಡುತ್ತಾರೆ. ಹನಿಮೂನ್ ಗೆ ಪತಿ – ಪತ್ನಿ ಇಬ್ಬರೇ ಹೋಗ್ಬೇಕು. ಕುಟುಂಬದ ಯಾವುದೇ ಸದಸ್ಯರು ಹನಿಮೂನ್ ಗೆ ಹೋಗೋದಿಲ್ಲ. ಇದು ಅಲಿಖಿತ ನಿಯಮ. ಹನಿಮೂನ್ ಗೆ ನವವಿವಾಹಿತ ಜೋಡಿ ಜೊತೆ ಬೇರೆಯವರು ಹೊರಟ್ರೆ ಅದು ಹನಿಮೂನ್ ಎನ್ನಿಸಿಕೊಳ್ಳೋದಿಲ್ಲ. ಫ್ಯಾಮಿಲಿ ಟ್ರಿಪ್ ಎನ್ನಿಸಿಕೊಳ್ಳುತ್ತದೆ. ಹನಿಮೂನ್ ವಿಷ್ಯಕ್ಕೆ ಈಗ ಇಲ್ಲೊಬ್ಬ ಮಹಿಳೆ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಪತಿ ಜೊತೆ ಹನಿಮೂನ್ ಎಂಜಾಯ್ ಮಾಡುವ ಖುಷಿಯಲ್ಲಿದ್ದವಳಿಗೆ ನಿರಾಸೆಯಾಗಿದೆ. ಮುಂದೆ ಏನು ಮಾಡ್ಬೇಕು ಎನ್ನುವ ಗೊಂದಲ ಆಕೆಯನ್ನು ಕಾಡ್ತಿದೆ. ಅಷ್ಟಕ್ಕೂ ಆಕೆ ಹನಿಮೂನ್ ಗೆ ಅಡ್ಡಿ ಮಾಡಿದ್ದು ಯಾರು, ಅವರ ಸಮಸ್ಯೆ ಏನು ಅನ್ನೋದು ಇಲ್ಲಿದೆ.
ಸಾಮಾಜಿಕ ಜಾಲತಾಣ (Social Media ) ದಲ್ಲಿ ಬಹುತೇಕರು ತಮ್ಮ ಸಮಸ್ಯೆಯನ್ನು ಹೆಸರು ಬದಲಿಸಿ ಹಂಚಿಕೊಳ್ತಾರೆ. ಈ ಮಹಿಳೆ ಕೂಡ ಅದನ್ನೇ ಮಾಡಿದ್ದಾಳೆ. ಆಕೆ ಪ್ರಕಾರ ಆಕೆಯ ಹನಿಮೂನ್ (Honeymoon) ಗೆ ಅಡ್ಡಿ ಮಾಡ್ತಿರೋದು ಮತ್ತ್ಯಾರು ಅಲ್ಲ ಆಕೆಯ ಸಹೋದರ.
ವಿವಾದದ ನಡುವೆ ಶೋಯೆಬ್ ಮಲೀಕ್ ವಿವಾಹವಾಗಿದ್ದ ಸಾನಿಯಾ, 14 ವರ್ಷದ ದಾಂಪತ್ಯದಲ್ಲಿ ಆಗಿದ್ದೇನು?
ಮಹಿಳೆ 25 ವರ್ಷ. ಪತಿಗೆ 27 ವರ್ಷ. ಒಂದು ವರ್ಷದ ಹಿಂದೆ ಇಬ್ಬರ ಮದುವೆ ನಡೆದಿದೆ. ಮದುವೆ ಸಮಯದಲ್ಲಿ ಹಣವಿಲ್ಲದ ಕಾರಣ ಅವರು ಹನಿಮೂನ್ ಮುಂದೂಡಿದ್ದರು. ಸ್ವಲ್ಪ ಉಳಿತಾಯ ಮಾಡಿ, ಹನಿಮೂನ್ ಪ್ಲಾನ್ ಮಾಡಿದ್ದಾರೆ. ಇಬ್ಬರೂ ಅಮೆರಿಕಾ (America) ಕ್ಕೆ ಹೋಗುವ ಪ್ಲಾನ್ ಮಾಡಿದ್ದಾರೆ. ಈ ವಿಷ್ಯ ಆಕೆಯ ಸಹೋದರನಿಗೆ ಗೊತ್ತಾಗಿದೆ. ಸಹೋದರ ಕೂಡ ಹನಿಮೂನ್ ಗೆ ಬರೋದಾಗಿ ಪಟ್ಟು ಹಿಡಿದಿದ್ದಾನೆ.
ಮಹಿಳೆಗೆ ಈ ಸಂದರ್ಭದಲ್ಲಿ ಗೊಂದಲ ಎದುರಾಗಿದೆ.ಸಹೋದರನಿಗೆ ಹನಿಮೂನ್ ಗೆ ಬರದಂತೆ ಮನವಿ ಮಾಡಿದ್ದಾಳೆ. ಸಹೋದರನಿಗೆ ಹನಿಮೂನ್ ಅಂದ್ರೆ ಏನು, ಅಲ್ಲಿಗೆ ಯಾರು ಹೋಗ್ಬೇಕು ಎಂಬುದನ್ನು ಹೇಳಿದ್ದಾಳೆ. ಇದೆಲ್ಲವನ್ನೂ ಕೇಳಿದ ಸಹೋದರ, ತನ್ನ ಬಾಯ್ ಫ್ರೆಂಡ್ ಜೊತೆ ಬರೋದಾಗಿ ಹೇಳಿದ್ದಾನೆ. ನೀವಿಬ್ಬರು ಜೊತೆಗಿದ್ದರೆ ನಮಗೆ ಪ್ರೈವಸಿ ಸಿಗೋದಿಲ್ಲ ಎಂದು ಮಹಿಳೆ ಹೇಳಿದ್ದಾಳೆ. ನಾನು ಎಲ್ಲರಂತೆ ನನ್ನ ಬಾಯ್ ಫ್ರೆಂಡ್ ಕೈ ಹಿಡಿದು ಓಡಾಡಬೇಕು. ಹನಿಮೂನ್ ಹೇಗಿರುತ್ತೆ ಅನ್ನೋದನ್ನು ನೋಡ್ಬೇಕು. ಸಲಿಂಗಕಾಮ (HomoSexuality) ಎಲ್ಲ ಕಡೆ ಮಾನ್ಯವಾಗಿಲ್ಲ. ನಾನು ನಮ್ಮೂರಿನಲ್ಲಿ ಸುತ್ತಾಡಲು ಸಾಧ್ಯವಿಲ್ಲ. ಬೇರೆ ಕಡೆಯಲ್ಲೂ ನಮ್ಮಿಬ್ಬರನ್ನು ಎಲ್ಲರೂ ಸ್ವೀಕರಿಸುತ್ತಾರೆ ಎನ್ನುವ ಗ್ಯಾರಂಟಿ ಇಲ್ಲ. ಹಾಗಾಗಿ ನಾವು ನಿಮ್ಮ ಜೊತೆ ಬರುತ್ತೇವೆ ಎಂದು ಸಹೋದರ ಹೇಳ್ತಿದ್ದಾನೆ.
ವಿಚಿತ್ರ ಅಂದ್ರೆ ಮಹಿಳೆ ಪಾಲಕರಿಗೆ ಈ ಸಂಗತಿ ತಿಳಿದಿದೆ. ಅವರು ಮಗನ ಬೆಂಬಲಕ್ಕೆ ನಿಂತಿದ್ದಾರೆ. ಹನಿಮೂನ್ ಗೆ ಹೋಗ್ತಿರೋ ವಿಷ್ಯವನ್ನು ನಾವು ಸಹೋದರನಿಗೆ ಹೇಳ್ಬಾರದಿತ್ತು. ತಪ್ಪು ಮಾಡಿದೆ ಎಂದಿರುವ ಮಹಿಳೆ ನನಗೆ ಏನು ಮಾಡ್ಬೇಕು ತಿಳಿಯುತ್ತಿಲ್ಲ ಎಂದಿದ್ದಾಳೆ.
ಮಹಿಳೆ ಪ್ರಶ್ನೆಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಉತ್ತರ ನೀಡಿದ್ದಾರೆ. ಸಹೋದರ ಮಾಡುತ್ತಿರುವುದು ತಪ್ಪು ಎಂದು ಬಹುತೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೀವು ನಿಮ್ಮ ಸ್ಥಾನದಲ್ಲಿ ನಿಂತು ಮಾಡ್ತಿರೋದು ಸರಿ ಎಂದ ಬಳಕೆದಾರರು, ನಿಮ್ಮ ಗಮ್ಯ ಸ್ಥಾನದ ಬಗ್ಗೆ ಸಹೋದರನಿಗೆ ಮಾಹಿತಿ ನೀಡಬೇಡಿ. ನಿಮ್ಮ ಟಿಕೆಟ್ ಹಾಗೂ ವಾಸದ ಬಗ್ಗೆಯೂ ಅವರಿಗೆ ಯಾವುದೇ ವಿವರ ನೀಡಬೇಡಿ ಎಂದು ಸಲಹೆ ನೀಡಿದ್ದಾರೆ.