ಹೆಣ್ಣಿಗಿಂತಲೂ ಗಂಡಿಗೆ ಕಾಮ ತೃಷೆ ಹೆಚ್ಚಾ? ಏನಂತಾರೆ ಸದ್ಗುರು?

By Suvarna NewsFirst Published Jun 11, 2023, 6:08 PM IST
Highlights

 ಕಾಮವಿಲ್ಲದೇ ಬದುಕಿ ಬಿಡುಬಹುದು. ಕಷ್ಟವಾದರೂ ಅಸಾಧ್ಯವೇನಲ್ಲ ಎನ್ನುತ್ತಾರೆ ಅನುಭವಸ್ಥರು. ಆದರೆ, ಆ ಅನುಭವ ಇಲ್ಲದ ಮನುಷ್ಯನನ್ನು ಜೀವನ ಪ್ರವೃತ್ತಿಯಾಗಿ ಕಾಮ ಹಿಂಬಾಲಿಸೋದು ಸುಳ್ಳಲ್ಲ. 

ವಯಸ್ಸು 40 ಆಗುತ್ತಿದ್ದರೂ, ಮದುವೆಯಾಗದ ಯುವಕರನ್ನು ಗಮನಿಸಿದ್ದೀರಾ? ಸುಮ್ ಸುಮ್ಮನೆ ಸಿಡಿ ಮಿಡಿ ಮಾಡುತ್ತಿರುತ್ತಾರೆ. ಯಾವುದೋ ಫ್ರಸ್ಟ್ರೇಷನ್ ಅವರನ್ನು ಬೆಂಬಿಡದೇ ಕಾಡುತ್ತಿರುತ್ತದೆ. ನೋ ಡೌಟ್. ಅವರು ಲೈಂಗಿಕ ಅತೃಪ್ತರು. ಸೂಕ್ತ ಸಮಯದಲ್ಲ ಸಿಗದ ಲೈಂಗಿಕ ಸುಖ ಅವರನ್ನು ಆ ರೀತಿ ಬಿಹೇವ್ ಮಾಡುವಂತೆ ಪ್ರಚೋದಿಸುತ್ತೆ. ಪ್ರೇಮ ತುಂಬಿದ ಲೈಂಗಿಕ ಅನುಭದಿಂದ ಮನುಷ್ಯ ಪರಿಪಕ್ವನಾಗುತ್ತಾನೆ. ಹೆಣ್ಣಾಗಲಿ, ಗಂಡಾಗಲಿ ಆ ಸುಖ ಬಯಸೋದು ಸಹಜ ಪ್ರಾಕೃತಿಕ ನಿಮಯ. ಅದರಲ್ಲೇನೂ ತಪ್ಪಿಲ್ಲ ಬಿಡಿ. 

ಪ್ರತಿಯೊಬ್ಬ ಮನುಷ್ಯನಲ್ಲೂ ಲೈಂಗಿಕ ವಾಂಛೆ (Sexual Eagerness) ಇದ್ದೇ ಇರುತ್ತದೆ. ಕೆಲವು ಸಮಯದವರೆಗೂ ಅದನ್ನು ಅದುಮಿಟ್ಟುಕೊಳ್ಳೋದು ಕಷ್ಟವೂ ಅಲ್ಲ. ಆದರೆ, ಜೀವನ ಪರ್ಯಂತ ಅಡಗಿಸಿ ಇಡೋದು ಸುಲಭವಲ್ಲ. ಸೂಕ್ತ ಸಮಯದಲ್ಲಿ ತಕ್ಕ ಸಂಗಾತಿ (Companion) ಅಗತ್ಯ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ, ಇಷ್ಟು ಸಹಜ ಲೈಂಗಿಕ ತೃಷೆಯನ್ನು ಧರ್ಮವೋ, ಧರ್ಮ ಗುರುಗಳೋ ಅಥವಾ ಸಮಾಜವೋ ನಿಷಿದ್ಧವಾದದ್ದು ಎಂಬಂತೆ ಬಿಂಬಿಸುತ್ತವೆ. ಈ ಬಗ್ಗೆ ಪ್ರಶ್ನೆ ಕೇಳುವ ಧೈರ್ಯವೇ ಮಕ್ಕಳಿಗೆ ಇರೋಲ್ಲ. ಇರೋ ಬರೋ ಧೈರ್ಯವನ್ನೆಲ್ಲಾ ಒಟ್ಟಾಗಿಸಿ ಅವು ಏನನ್ನಾದರೂ ಕೇಳಿದರೂ ಪೋಷಕರು ತಪ್ಪೆಂಬುವಂತೆ ಬಿಂಬಿಸುತ್ತಾರೆ. ಯಾವ ರೀತಿಯ ಉತ್ತರವನ್ನು ವಯೋ ಸಹಜವಾಗಿ ಮಕ್ಕಳು ನಿರೀಕ್ಷಿಸುತ್ತಾರೋ ಅವನ್ನು ಪೋಷಕರು ಕೊಡೋಲ್ಲ. ಕೆಟ್ಟ ಕುತೂಹಲದಿಂದ ಹದಿ ವಯಸ್ಸಿನ ಮಕ್ಕಳು ದಾರಿ ತಪ್ಪೋದು ಕಾಮನ್ ಆಗಿಬಿಟ್ಟಿದೆ. ಬೇಕಾಗಿರುವ ಉತ್ತರಕ್ಕೆ ಯೂ ಟ್ಯೂಬ್‌ನಂಥ ಸಾಮಾಜಿಕ ಜಾಲತಾಣದ ಮೊರೆ ಹೋಗುತ್ತಿದ್ದಾರೆ. 

Life Mantras: ಮನಸ್ಸಿನ ನೆಮ್ಮದಿಗಾಗಿ ಈ ಗುರುಗಳ ಜೀವನ ಮಂತ್ರ ಕೇಳಿ..

Latest Videos

ದೇವಸ್ಥಾನಗಳಲ್ಲೇಕೆ ಲೈಂಗಿಕ ಶಿಲ್ಪ?
ಕೊನಾರ್ಕ್‌ನ ಸೂರ್ಯ ದೇವಾಲಯ ಸೇರಿ ಖಜುರಾಹೋದಂಥ ದೇವಸ್ಥಾನಗಳ ಹೊರಗೋಡೆಗಳಲ್ಲಿ ಲೈಂಗಿಕ ಸಂಬಂಧಿ ಕೆತ್ತನೆಗಳು ಸಹಜವಾಗಿಯೋ ಇವೆ. ಅಲ್ಲಿ ಮಿತಿ ಇಲ್ಲದಷ್ಟು ಲೈಂಗಿಕ, ಮಿಥುನ ಶಿಲ್ಪಗಳನ್ನು ಕೆತ್ತಿದ್ದಾರೆ. ಈ ಲೈಂಗಿಕತೆ ನಿಷಿದ್ಧ ಎನ್ನುವುದಾದರೆ ಈ ಲೈಂಗಿಕ ಶಿಲ್ಪಗಲೇಕೆ ಕೆತ್ತಲ್ಪಟ್ಟಿವೆ? ಅದೂ ಪವಿತ್ರವಾದ ದೇವಾಲಯಗಳಲ್ಲಿ? ಇಲ್ಲಿಗೆ ಬರೋರು ಸಂಸಾರಸ್ಥರಲ್ವಾ?  ಆದರೂ ಅಲ್ಯಾಕೆ ಇಂಥ ಶಿಲ್ಪಗಳನ್ನು ಕೆತ್ತಿಸಿದರು? ಆರೋಗ್ಯಕರ ಲೈಂಗಿಕತೆ (Healthy Sexual Relationship) ಪ್ರತಿಯೊಬ್ಬರ ಜೀವನದಲ್ಲಿಯೂ ಅತ್ಯಗತ್ಯ ಎಂಬುದನ್ನು ಸೂಚಿಸುವ ಪ್ರತೀಕವಲ್ಲವೇ?

ದೇಹದಂತೆ ಮನುಷ್ಯನಿಗೆ ಆತನ ಪ್ರಜ್ಞೆ ಬಗ್ಗೆಯೂ ಅರಿವು ಇರಬೇಕು. ದೇಹದ ಬಗ್ಗೆ ಗಮನ ಕಡಿಮೆ ಮಾಡಿ, ಮನಸ್ಸು, ಪ್ರಜ್ಞೆ, ಆತ್ಮದ ಬಗ್ಗೆ ಗಮನ ಕೇಂದ್ರೀಕರಿಸಬೇಕು. ಅದು ಅಧ್ಯಾತ್ಮ (Spirituality). ಪಶುವಿಗೂ ದೇಹದ ಬಗ್ಗೆ ಗಮನ ಕೊಡುವ ಶಕ್ತಿ ಇದೆ. ಆದರೆ ಆತ್ಮವನ್ನು (Soul) ಪರಿಶೋಧಿಸುವುದು ಮನುಷ್ಯನಿಗೆ ಮಾತ್ರ ಸಾಧ್ಯ. ಹೀಗಾಗಿಯೇ ಮಾನವ ಜನ್ಮ ದೊಡ್ಡದು ಹಾನಿ ಮಾಡದಿರೋ ಹುಚ್ಚಪ್ಪಗಳಿರಾ ಎಂದಿದ್ದು ಪುರಂದರ ದಾಸರು. 

ಸೆಕ್ಸ್ ಒಂದು ಸಹಜವಾದ ಬೇಸಿಕ್ ಇನ್‌ಸ್ಟಿಂಕ್ಟ್ (Basic Instrict) ಅಥವಾ ಪ್ರವೃತ್ತಿ ಎಂದೇ ನೋಡಲಾಗುತ್ತದೆ. ಬದಲಾಗಿ ಎಲ್ಲವನ್ನೂ ಪ್ರಜ್ಞಾಪೂರ್ವಕವಾಗಿಯೇ ಮಾಡಬೇಕು. ಸಹಜ ಪ್ರವೃತ್ತಿ ನೆಲೆಯಿಂದ ಮೇಲಕ್ಕೆತ್ತಿ, ಒಂದ ಪ್ರಜ್ಞಾಪೂರ್ವಕ ಕ್ರಿಯೆಯಾಗಿ ಮಾರ್ಪಡಿಸಬಹುದು. ಆಗದು ನಿಮ್ಮನ್ನು ನಿಯಂತ್ರಿಸುವ ಸ್ವಭಾವ ಆಗೋಲ್ಲ. ಬದಲಾಗಿ ನೀವದನ್ನು ನಿಯಂತ್ರಿಸುತ್ತೀರಿ. 

ಮಹಿಳೆ, ಪುರುಷ ಎನ್ನೋದು ಬಾತ್‌ರೂಮ್‌ಗೆ ಸೀಮಿತವಾಗಲಿ ಸಾಕು ಎಂದ Sadhguru

ಸಂಸಾರದಲ್ಲೇಕೆ ಸುಮ್ಮನೆ ಜಗಳ? 
ಭಾರತದಲ್ಲಿ ಕೌಟುಂಬಿಕ ಜೀವನಕ್ಕೆ ನೀಡಿದಷ್ಟು ಬೆಲೆ ಯುರೋಪ್ ದೇಶಗಳಲ್ಲಿ ನೀಡುವುದಿಲ್ಲ. ಆದರೂ ನಮ್ಮ ದೇಶದಲ್ಲೇ ಏಕೆ ಕೌಟುಂಬಿಕ ಹಿಂಸಾ ಪ್ರಕರಣಗಳು ಹೆಚ್ಚು. ಗಂಡೇಕೆ ತನ್ನ ಸಂಗಾತಿಗೆ ಮಾನಸಿಕ, ದೈಹಿಕ ಹಿಂಸೆ (Physical Harasment) ಕೊಡುತ್ತಾನೆ? ಅಲ್ಲಿಯೂ ಲೈಂಗಿಕತೆ ಎಂಬ ಅಗತ್ಯ ಅಂಶವೊಂದು ಕೆಲಸ ಮಾಡುತ್ತಿರುತ್ತದೆ. ಗಂಡಸು ಕಾಮವನ್ನು ಆಳವಾಗಿ ಬಯಸುತ್ತಿರುತ್ತಾನೆ. ಹಗಲಲ್ಲಿ ಪುರುಷ ಹೇಗೆ ಬಿಹೇವ್ ಮಾಡುತ್ತಾನೋ ಅದರ ಆಧಾರದ ಮೇಲೆ ಗಂಡಸಿನ ಲೈಂಗಿಕ ವರ್ತನೆಯೂ (Sexual Behaviour) ಅವಲಂಬಿತವಾಗಿರುತ್ತದೆ. ಈ ಕಾರಣಗಳಿಂದಲೇ ಸಂಸಾರಗಳು ವಿಷಕಾರುತ್ತಿರುತ್ತವೆ. ಹಾಗಂಥ ಹೆಣ್ಣನ್ನು ಈ ಸಮಸ್ಯೆ ಕಾಡೋಲ್ಲ ಅಂಥ ಅರ್ಥವಲ್ಲ. ಅವಳಿಗೂ ಭಾವನೆಗಳಿಗಿರುತ್ತವೆ. ಲೈಂಗಿಕೆ ವಾಂಛೆ ಸಹಜವಾಗಿಯೇ ಇರುತ್ತದೆ. ಆದರೆ, ಗಂಡ, ಮಕ್ಕಳು, ಮನೆಗೆಲಸ ಅಂತ ಗಂಡಿಗಿಂತ ಹೆಚ್ಚು ಆಕ್ಯುಪೈ ಆಗಿರುತ್ತಾಳೆ. ಅದಕ್ಕೆ ಹೃದಯ ಸಂಬಂಧಿ ರೋಗಗಳೂ ಗಂಡಿಗೆ ಕಂಪೇರ್ ಮಾಡಿದರೆ ಹೆಣ್ಣಿಗೆ ತುಸು ಕಡಿಮೆ. 

ಆದ್ದರಿಂದ ಪುರುಷರಿಗೆ ಬೇಕಾಗಿರುವುದು ವೆರಿ ಸಿಂಪಲ್. ಗಂಡಸು ತನ್ನಲ್ಲಿರುವ ಕಾಮದ ಗುಣವನ್ನು ಸಹಜವೆಂದು ಪರಿಗಣಿಸುವುದು. ಇದನ್ನು ಪ್ರಜ್ಞಾಪೂರ್ವಕವಾಗಿ ನಿರ್ಧರಿಸಬೇಕು ಎನ್ನುತ್ತಾರೆ ಸದ್ಗುರು.

ಸಲಿಂಗಕಾಮ: ಸದ್ಗುರುಗೆ ಉರ್ಫಿ ಜಾವೇದ್ ಹೇಳಿದ್ದೇನು, ಕೇಳಿದ್ದೇನು?

click me!