ಛೇ ನಾನು ಫಸ್ಟ್ ನೈಟಲ್ಲಿ ಈ ತಪ್ಪು ಮಾಡಬಾರದಿತ್ತು, ಪುರುಷರ ತಪ್ಪೊಪ್ಪಿಗೆ

By Suvarna News  |  First Published Jun 11, 2023, 3:24 PM IST

ಫಸ್ಟ್ ನೈಟ್ ಎಂದ ಕೂಡಲೇ ವಿಪರೀತ ಕುತೂಹಲವಿರೋ ಗಂಡಸು ಹೆಣ್ಣಿಗೇನು ಬೇಕೆಂಬುದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಫೇಲ್ ಆಗುತ್ತೆನೆ. ಅದು ಅವನಿಗೆ ನೋವು ತರುತ್ತಾ? 


ಅಶ್ಲೀಲ ಚಿತ್ರಗಳನ್ನು ನೋಡಿಯೋ ಅಥವಾ ನಾನು ಗಂಡೆಂಬ ಅಹಂಕಾರವೋ ಪುರುಷರಿಗೆ ಸೆಕ್ಸ್ ಬಗ್ಗೆ ಸಿಕ್ಕಾಪಟ್ಟೆ ಕುತೂಹಲಗಳಿರುತ್ತವೆ. ಜೊತೆಗೆ ಅವಸರವೂ ಹೆಚ್ಚಿರುತ್ತೆ. ಹೆಣ್ಣಿಗೇನು ಬೇಕೆಂದು ಅರ್ಥ ಮಾಡಿಕೊಳ್ಳಲು ಯತ್ನಿಸುವುದೂ ಇಲ್ಲ. ತಮ್ಮಿಷ್ಟ ಬಂದಂತೆ ಹೆಣ್ಣನ್ನು ಅನುಭವಿಸುತ್ತಾನೆ.  ತನ್ನ ಕಂಫರ್ಟ್ ಕಡೆಗೆ ಮಾತ್ರ ಗಮನ ಹರಿಸುವ ಗಂಡು, ಹೆಣ್ಣು ಈ  ವಿಷ್ಯದಲ್ಲಿ ಏನು ಯೋಚಿಸುತ್ತಿರಬಹುದು ಎಂಬುದನ್ನೇ ಮರೆಯುತ್ತಾನೆ. ಹೀಗೆ ಕೆಲವು ಗಂಡಸರಿಗೆ ತಮ್ಮ ಮೊದಲ ರಾತ್ರಿಯ ಅನುಭವದ ಬಗ್ಗೆ ಕೇಳಿದಾಗ ಮಾಡಿದ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ದಾಂಪತ್ಯ ಜೀವನದ ಹಲವು ವರ್ಷಗಳ ನಂತರವೂ ವಿಷಾದವಿದೆ, ಎಂದಿದ್ದಾರೆ. ಅಷ್ಟಕ್ಕೂ ಪುರುಷ ಮಹಾಶಯ ಒಪ್ಪಿಕೊಂಡ ತಪ್ಪುಗಳೇನು? 

ಕಾಂಡೋಮ್ ಬಳಸಲು ಹೇಳಿದರೆ ಸಿಟ್ಟಾದೆ!
ಮೊದಲ ರಾತ್ರಿ. ಸಿಕ್ಕಾಪಟ್ಟೆ ಕನಸುಗಳಿದ್ದವು. ಅಶ್ಲೀಲ ಚಿತ್ರಗಳಲ್ಲಿ ನೋಡಿದ್ದೆಲ್ಲವೂ ಸತ್ಯ ಅಲ್ಲ ಅಂತ ಗೊತ್ತಿತ್ತು. ಆದರೂ ಅವಸರಕ್ಕೆ ಬಿದ್ದೆ. ಹೆಂಡತಿಯ ಮನಸ್ಸು ಅರಿಯುವಲ್ಲಿ ಫೇಲ್ ಆದೆ. ಅವಳಿಗೇನು ಬೇಕು ಅಂತ ಗಮನಿಸಲಿಲ್ಲ. ಅವಳು ಸೆಕ್ಸ್‌ಗೆ ಎಷ್ಟು ಮೆಂಟಲಿ ಪ್ರಿಪೇರ್ (Mentally Prepare) ಆಗಿದ್ದಾಳೆಂಬುದನ್ನೂ ಚಿಂತಿಸಲಿಲ್ಲ. ಉದ್ರೇಕಗೊಂಡಿದ್ದೆ. ಅವಳಿಗೂ ಹಾಗೇ ಆಗಿರಬಹುದೆಂದು ಕೊಂಡು, ದುಡುಕಿದೆ. ಅವಳೆಷ್ಟು ಪ್ರಚೋದಿತಳಾಗಿದ್ದಾಳೆಂದು (Provocation) ಯೋಚಿಸಲೂ ಇಲ್ಲ. ನನ್ನಿಷ್ಟ ಬಂದಂತೆ ವರ್ತಿಸಿಬಿಟ್ಟೆ. ಅಷ್ಟೇ ಅಲ್ಲ ಕಾಂಡೋಮ್ (Condom) ಬಳಸು ಅಂದ್ರೆ ಜಗಳವೂ ಆಡಿದೆ. ನನ್ನ ಸುಖವಷ್ಟೇ ನಂಗೆ ಮುಖ್ಯವಾಗಿತ್ತೆಂಬುವುದು ಇವತ್ತಿಗೂ ನೋವಿದೆ. 

Real Story : ಸಾಯಬೇಕು ಅಂದುಕೊಂಡಿದ್ದೆ, – ಅರೇಂಜ್ಡ್ ಮ್ಯಾರೇಜ್ ಹುಡುಗರ ಕಥೆ ವ್ಯಥೆ

Tap to resize

Latest Videos

ಫೋರ್‌ಪ್ಲೇ ಮಾಡಲೇ ಇಲ್ಲ
ಮದುವೆಯಾಗಿದೆ ಅಷ್ಟೇ. ಹಾಗಂಥ ನನ್ನಂತೆ ನನ್ನ ಹೆಂಡತಿಯೂ ಲೈಂಗಿಕ ಸಾಂಗತ್ಯಕ್ಕೆ ಉತ್ಸುಕಳಾಗಿರುತ್ತಾಳೆ ಎಂಬ ತಪ್ಪು ಕಲ್ಪನೆ ಇತ್ತು. ಅವಳಿಷ್ಟವನ್ನು ಅರ್ಥ ಮಾಡಿ ಕೊಳ್ಳಲೇ ಇಲ್ಲ. ತವರನ್ನು ಬಿಟ್ಟು ಬಂದ ಅವಳಿನ್ನೂ ಲೈಂಗಿಕ ಜೀವನಕ್ಕೆ ಸಿದ್ಧಳಾಗಿರಲಿಲ್ಲ. ಸಿದ್ಧಪಡಿಸುವ ಯತ್ನ ಮಾಡೋ ಬದಲು, ಅವಳನ್ನು ಸೆಕ್ಸ್ ಡಾಲ್‌ನಂತೆ (Sex Doll) ಬಳಸಿಬಿಟ್ಟೆ. ಫೋರ್ ಪ್ಲೇ (Fore Play) ಮಾಡಬೇಕಿತ್ತು. ಅದರ ಸುಖ ಪಡೆಯಬೇಕಿತ್ತು. ಸುಂದರವಾದ ಸೆಕ್ಸ್ ಲೈಫ್‌ಗಾಗಿ (Sexual Life) ಅವಳನ್ನು ಸನ್ನದ್ಧಗೊಳಿಸಬೇಕಿತ್ತು. ಪರಸ್ಪರ ದೇಹವನ್ನು ಅರಿಯಬೇಕಿತ್ತು. ಅದು ಬಿಟ್ಟು ತನ್ನಿಷ್ಟದಂತೆ ವರ್ತಿಸಿ ಬಿಟ್ಟೆ. ಈ ಬಗ್ಗೆ ಗಿಲ್ಟ್ ಸದಾ ಕಾಡುತ್ತೆ ಅಂತಾರೆ ಹಲವು ಪುರುಷರು. 

ಕುಡಿದಿದ್ದೆ, ಛೇ ಎಷ್ಟು ಹಿಂಸೆಯಾಯಿತೋ ಅವಳಿಗೆ
ಸಹಜವಾಗಿಯೇ ಫಸ್ಟ್ ನೈಟ್ ಬಗ್ಗೆ ವಿಪರೀತ ಕನಸುಗಳಿದ್ದವು. ಏಳು ವರ್ಷಗಳ ಡೇಟಿಂಗ್ (Dating) ನಂತರ ದಾಂಪತ್ಯಕ್ಕೆ (Married Life) ಕಾಲಿಟ್ಟ ಜೋಡಿ ನಮ್ಮದು. ಇಬ್ಬರಿಗೂ ಈ ಮೊದಲ ರಾತ್ರಿಯನ್ನು ಸಂಭ್ರಮಿಸಬೇಕೆಂಬ ಹಪಾಹಪಿ ಇತ್ತು. ಈ ದಿನಕ್ಕಾಗಿ ಇಬ್ಬರೂ ಸಾಕಷ್ಟು ಪ್ಲ್ಯಾನ್ ಮಾಡಿಕೊಂಡಿದ್ದೆವು. ಅವಳಿಚ್ಚೆಯಂತೆ ನಾನು ನಡೆದುಕೊಳ್ಳಬೇಕು ಅಂದು ಕೊಂಡಿದ್ದೆ. ಆದರೆ, ಫ್ರೆಂಡ್ಸ್ ಜೊತೆ ಸೇರಿ ಕಂಠ ಪೂರ್ತಿ ಕುಡಿದಿದ್ದೆ. ಅವಳೊಂದಿಗೆ ತುಸು ಹಾರ್ಶ್ ಆಗಿ ವರ್ತಿಸಿದೆ. ಛೇ, ಈ ನಡೆ ಬಗ್ಗೆ ಹಲವು ತಿಂಗಳ ತನಕ ಗಿಲ್ಟ್ ಫೀಲ್ ಆಗಿತ್ತು. ಹಾಗಂಥ ಅವಳೊಂದಿಗೇನೂ ಈ ವಿಷಯ ಹೇಳಿ ಕೊಂಡಿರಲಿಲ್ಲ. ಆದರೆ, ಈ ಗಿಲ್ಟ್ ನನ್ನನ್ನು ಕುಡಿತದಿಂದ ಮುಕ್ತವಾಗಿಸಿತು. ಕುಡಿಯುವುದನ್ನೇ ಬಿಟ್ಟು ಬಟ್ಟೆ. ಆದರೆ, ಮತ್ತೆಂದೂ ಬಾರದ ಆ ಮೊದಲ ರಾತ್ರಿಯಲ್ಲಿ ಸಿಗಬೇಕಾಗಿದ್ದ ಸುಖದಿಂದ ಮಡದಿಯನ್ನು ವಂಚಿಸಿದ್ದೆ ಎಂಬ ದುಃಖ ಕಾಡುತ್ತಲೇ ಇದೆ, ಅಂತಾನೆ ಇನ್ನೊಬ್ಬ ಪತಿ ಮಹಾಶಯ. 

ಫಸ್ಟ್ ನೈಟ್‌ಗೂ ಮುನ್ನ ಪ್ರತಿಯೊಬ್ಬ ಮಹಿಳೆ ಈ ವಿಷ್ಯಗಳನ್ನ ತಿಳಿದಿರಬೇಕು..

ಪರಾಕಾಷ್ಠೆ ನಂತರ ಎದ್ದು ಬಿಟ್ಟೆ
ಸೆಕ್ಸ್ ಸುಖವನ್ನು ಅಂದುಕೊಂಡಂತೆಯೇ ಪಡೆದುಕೊಂಡಿದ್ದೆ. ನಿರೀಕ್ಷೆಗಿಂತಲೂ ಹೆಚ್ಚಿನ ಸುಖ ಸಿಕ್ಕಿತ್ತು. ಆದರೆ, ಪರಾಕಾಷ್ಠೆ ನಂತರ ನನ್ನ ಪಾಡಿಗೆ ಎದ್ದು ಹೋಗಿ ಫ್ರೆಶ್ ಆಗಿ ಬಂದು ಮಲಗಿದೆ. ನನ್ನನ್ನು ದುರುಗುಟ್ಟಿ ನೋಡುತ್ತಿದ್ದಳು ಹೆಂಡತಿ. ಅವಳ ಮನಸ್ಸಲ್ಲಿ ಏನು ನಡೆಯುತ್ತಿದೆ ಎಂಬುದು ನಂಗೆ ಅರ್ಥವೇ ಆಗಲಿಲ್ಲ. ದಾಂಪತ್ಯದ ಹಲವು ವರ್ಷಗಳು ಕಳೆದಿವೆ. ಆದರೆ, ಮೊದಲ ರಾತ್ರಿ ಅವಳಿಷ್ಟವೇನೆಂದು ಕೇಳಲಿಲ್ಲ. ಕೆಟ್ಟ ಅನುಭವ ನೀಡಿದೆ ಎಂಬ ನೋವಿದೆ, ಎನ್ನುತ್ತಾನೆ ಮತ್ತೊಬ್ಬ ಗಂಡ.

ಶೇವ್ ಮಾಡಿರಲೇ ಇಲ್ಲ
ಎಲ್ಲಿಯೂ ಪರ್ಸನಲ್ ಹೈಜಿನ್ (Personal Hygiene) ಬಗ್ಗೆ ಗಮನ ಹರಿಸುವುದನ್ನು ಇಗ್ನೋರ್ ಮಾಡಿದೆ. ಅವಳು ನೀಟಾಗಿ ಶೇವ್ ಮಾಡಿಕೊಂಡು ಬಂದಿದ್ದಳು. ಛೀ ನಾನು ಆ ಜಾಗವನ್ನು ಕ್ಷೌರ ಮಾಡಿಸಿಕೊಂಡಿಯೇ ಇರಲಿಲ್ಲ. ನನ್ನ ಬುದ್ಧಿಯಿಂದ ನಂಗೆ ಸಿಕ್ಕಾಪಟ್ಟೆ ಬೇಜಾರಾಗಿದೆ. ಇವತ್ತಿಗೂ ಆ ದಿನವನ್ನು ನೆನಪಿಸಿಕೊಂಡರೆ ನವಿರಾದ ಭಾವಗಳ ಬದಲು ಏನೋ ಅವ್ಯಕ್ತ ನೋವು ನನ್ನನ್ನು ಕಾಡುತ್ತೆ. ಅತ್ಯಮೂಲ್ಯವಾದ ದಿನವನ್ನು ಹೀಗೆ ವೇಸ್ಟ್ ಮಾಡಿಕೊಂಡನಲ್ಲ ಅನ್ನೋ ಸಂಕಟವಿದೆ ಎನ್ನುತ್ತಾನೆ ಮತ್ತೊಬ್ಬ ಪುರುಷ. 

click me!