ಮದ್ವೆ ಅಂದ್ರೆ ಎಲ್ಲರ ಪಾಲಿಗೂ ಸ್ಪೆಷಲ್ ದಿನ. ಹೀಗಾಗಿಯೇ ಸಹಜವಾಗಿಯೇ ಖುಷಿ, ಶಾಸ್ತ್ರಗಳಲ್ಲಿ ಭಾಗಿಯಾಗುವ ಸಂಭ್ರಮ ಇರುತ್ತೆ. ಆದ್ರೆ ಇಲ್ಲೊಂದೆಡೆ ವಧು, ಮಂಟಪದಲ್ಲೇ ಕುಳಿತು ನಿದ್ದೆ ಮಾಡಿದ್ದಾಳೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಭಾರತೀಯ ಸಂಪ್ರದಾಯದಲ್ಲಿ ಮದುವೆ ಅಂದ್ರೆ ಗಂಡು-ಹೆಣ್ಣಿನ ನಡುವಿನ ಸುಮಧುರ ಬಾಂಧವ್ಯ. ಇಬ್ಬರ ನಡುವಿನ ಸಂಬಂಧ ಏಳೇಳು ಜನ್ಮದ್ದು ಎಂದೇ ಹೇಳಲಾಗುತ್ತದೆ. ಹೀಗಾಗಿಯೇ ಮದುವೆಯ ಎಲ್ಲಾ ಕಾರ್ಯಕ್ರಮಗಳು ಶಾಸ್ತ್ರಬದ್ಧವಾಗಿ ನಡೆಯುತ್ತವೆ. ಅದರಲ್ಲೂ ಭಾರತೀಯ ಸಂಪ್ರದಾಯದಲ್ಲಿ ಇಂಥಾ ಸಂಪ್ರದಾಯಗಳು, ಶಾಸ್ತ್ರಗಳು ಸ್ಪಲ್ಪ ಜಾಸ್ತಿಯೇ ಇರುತ್ತವೆ. ಮದುವೆಗಿಂತ ವಾರದ ಮೊದಲೇ ಗಂಡು-ಹೆಣ್ಣಿಗೆ ಕೆಲವು ಸೂಚನೆಗಳನ್ನು ನೀಡುತ್ತಾರೆ. ಮದುವೆಯ ಹಿಂದಿನ ದಿನವೂ ರಾತ್ರಿ ಶಾಸ್ತ್ರಗಳು ನಡೆಯುತ್ತದೆ. ಮದುವೆಯ ದಿನ ಬೆಳಗ್ಗೆ ಬೇಗನೇ ಎದ್ದು ಸಹ ಮದುಮಕ್ಕಳು ಸೂಚಿಸಿದ ಕಾರ್ಯಗಳನ್ನು ಮಾಡಬೇಕಾಗುತ್ತದೆ.
ಹೀಗಾಗಿಯೇ ಇಂಡಿಯನ್ ವೆಡ್ಡಿಂಗ್ ಅನ್ನೋದು ಸಂಬಂಧಿಕರು, ರಿಲೇಟಿವ್ಸ್ ಪಾಲಿಗೆ ಎಂಜಾಯ್ ಮಾಡುವ ದಿನವಾದರೆ ಮದುಮಕ್ಕಳಿಗೆ ಈ ಶಾಸ್ತ್ರಗಳೆಲ್ಲಾ ಎಲ್ಲಾ ಮುಗಿದರೆ ಸಾಕಪ್ಪಾ ಅನ್ನೋ ದಿನ. ಮದುವೆಯ (Marriage) ಮುಹೂರ್ತ ಬೆಳಗ್ಗೆ ಬೇಗ ಇದ್ದರಂತೂ ಮುಗಿಯಿತು, ಮದು ಮಕ್ಕಳು ಬೆಳಗ್ಗೆ ಬೇಗ ಏಳುವ ಕಾರಣ ದಿನವಿಡೀ ತೂಕಡಿಸುತ್ತಲೇ ಇರಬೇಕಾಗುತ್ತದೆ. ಹಾಗೆಯೇ ಇಲ್ಲೊಬ್ಬ ವಧು (Bride), ಮಂಟಪದಲ್ಲೇ ಕುಳಿತು ನಿದ್ದೆ (Sleep) ಮಾಡಿದ್ದಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಭಾವೀ ಪತಿ ಹೀಗ್ ಬಿಹೇವ್ ಮಾಡ್ತಾ ಇದ್ದಾನಾ? ಬೇಡ ಮದ್ವೆಯೇ ಅಗ್ಬೇಡಿ
ನಿದ್ದೆ ಮಾಡುತ್ತಿದ್ದ ವಧುವನ್ನು ತಟ್ಟಿ ಎಬ್ಬಿಸಿದ ವರ
ಒಂದೆಡೆ ಮದುವೆ ಶಾಸ್ತ್ರಗಳು ನಡೆಯುತ್ತಿವೆ. ಪುರೋಹಿತರು ವರನಿಗೆ (Groom) ಕೆಲವು ಸೂಚನೆಗಳನ್ನು ನೀಡುತ್ತಿದ್ದಾರೆ ಮತ್ತು ವರನು ಅದನ್ನು ಪಾಲಿಸುತ್ತಿದ್ದೇನೆ. ಆದರೆ ಇನ್ನೊಂದೆಡೆ ವಧು ಮಂಟಪದಲ್ಲಿ ಕುಳಿತಲ್ಲೇ ನಿದ್ದೆ ಮಾಡುವುದನ್ನು ನೋಡಬಹುದು. ಪುರೋಹಿತರು ಹೇಳುವಾಗ ವರ ಆಕೆಯನ್ನು ತಟ್ಟಿ ಎಬ್ಬಿಸುತ್ತಾನೆ. ಆಕೆ ತಕ್ಷಣ ಬೆಚ್ಚಿಬಿದ್ದು ಸುತ್ತಲೂ ನೋಡುವುದನ್ನು ನೋಡಬಹುದು. ನಂತರ ಪರಿಸ್ಥಿತಿಯ ಅರಿವಾಗಿ ನಗುತ್ತಾಳೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ 'ಟಾಪ್ ರಿಪೋರ್ಟ್ಸ್ ಆಫ್ ಕರ್ನಾಟಕ' ಎಂಬ ಪೇಜ್ ಈ ವಿಡಿಯೋವನ್ನು ಹಂಚಿಕೊಂಡಿದೆ. ಹಂಚಿಕೊಂಡ ವೀಡಿಯೋದಲ್ಲಿ 'ಅಕ್ಕಾ ಮದುವೆ ಮಹೂರ್ತ ಮೀರುತ್ತಿದೆ, ಎದ್ದೇಳಿ' ಎಂದು ಕ್ಯಾಪ್ಶನ್ ಹಾಕಲಾಗಿದೆ. ನೂರಾರು ಮಂದಿ ಈ ವಿಡಿಯೋವನ್ನು ಲೈಕ್ ಮಾಡಿ ಕಮೆಂಟ್ ಮಾಡಿದ್ದಾರೆ.
ಅಕ್ಕಾ..ಮದ್ವೆ ಮಹೂರ್ತ ಮೀರ್ತಿದೆ ಎದ್ದೇಳಿ ಎಂದ ನೆಟ್ಟಿಗರು
ಒಬ್ಬ ಬಳಕೆದಾರರು 'ಚಿಂತೆ ಇಲ್ದೆ ಇರೋರಿಗೆ ಸಂತೆಯಲ್ಲೂ ನಿದ್ದೆ ಬರುತ್ತಂತೆ. ಅಂತ್ರದಲ್ಲಿ ಈ ಮದುವೆ ಯಾವ ಲೆಕ್ಕ ಅಲ್ವಾ ಅಕ್ಕಾ' ಎಂದು ಕಮೆಂಟಿಸಿದ್ದಾರೆ. ಮತ್ತೊಬ್ಬರು, ' ಅಕ್ಕಾ..ಮದ್ವೆ ಮಹೂರ್ತ ಮೀರ್ತಿದೆ ಎದ್ದೇಳಿ' ಎಂದಿದ್ದಾರೆ. ಇನ್ನೊಬ್ಬರು 'ನಾಳೆ ಮದುವೆ ಅಂತ ರಾತ್ರಿ ನಿದ್ದೆ ಮಾಡಿಲ್ಲ ಅನಿಸುತ್ತೆ ಪಾಪ' ಎಂದಿದ್ದಾರೆ. ಮತ್ತೊಬ್ಬರು 'ಜೀವನಾನೇ ಸಾಕಾಗಿರ್ಬೇಕು' ಎಂದು ಹಾಸ್ಯಮಯವಾಗಿ ಹೇಳಿದ್ದಾರೆ.
ಇನ್ನೊಬ್ಬರು 'ಅಕ್ಕಾ ಫ್ಯೂಚರ್ ಬಗ್ಗೆ ಚಿಂತೆ ಮಾಡ್ತಾ ಇರಬೇಕು' ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು 'ರಾತ್ರಿಯೆಲ್ಲಾ ಆ ಶಾಸ್ತ್ರ ಈ ಶಾಸ್ತ್ರ ಅಂತ ನಿದ್ದೆ ಕೆಡಿಸಿದ್ರೆ ತಾಳೆ ಕಟ್ಟೋ ಟೈಂನಲ್ಲಿ ಹೀಗೆ ಆಗೋದೆ ಪಾಪ' ಎಂದಿದ್ದಾರೆ. ಮತ್ತೆ ಕೆಲವರು 'ಫಸ್ಟ್‌ನೈಟ್‌ಗೆ ಈಗ್ಲೇ ನಿದ್ದೆ ಮಾಡಿ ರೆಡಿಯಾಗ್ತಿರ್ಬೇಕು' ಎಂದು ಕಾಲೆಳೆದಿದ್ದಾರೆ. ಮತ್ತೆ ಕೆಲವರು, ವಧು ನಿದ್ದೆ ಮಾಡಿ ಎದ್ದು ಕ್ಯೂಟ್ ಸ್ಮೆಲ್ ಕೊಟ್ಟಿರುವುದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಗಂಡನ ಮುಂದೆ ಬಿಂದಾಸ್ ಆಗಿ ಗುಟ್ಕಾ ಸೇವನೆ : ವಧುವಿನ ವೀಡಿಯೋ ವೈರಲ್