ಮನೆ ಅಂದ್ಮೇಲೆ ಒಂದು ವಿಷ್ಯ ಬರುತ್ತೆ ಒಂದು ವಿಷ್ಯ ಹೋಗುತ್ತೆ. ಕಡ್ಡಿ ಉದ್ದ ಮಾಡುವ ಬದಲು ಅಲ್ಲೇ ಪರಿಹರಿಸಿಕೊಳ್ಬೇಕು. ಅತ್ತೆ – ಸೊಸೆ ವಿಷ್ಯದಲ್ಲಿ ಇದಾಗೋದೇ ಇಲ್ಲ. ಸದಾ ಕಿತ್ತಾಡುವ ಅತ್ತೆ – ಸೊಸೆ ಒಂದಾಗ್ಬೇಕೆಂದ್ರೆ ಸದ್ಗುರು ಮಾತು ಕೇಳಿ.
ಮದುವೆ ವಯಸ್ಸಿಗೆ ಬಂದಾಗ ಹುಡುಗಿಗೆ ನಾನಾ ಚಿಂತೆ ಕಾಡಲು ಶುರುವಾಗುತ್ತೆ. ಯೋಗ್ಯ ಪತಿ ಜೊತೆ ಆತನ ಸಂಸಾರವನ್ನು ಆಕೆ ಒಪ್ಪಿಕೊಳ್ಳಬೇಕು. ಇದ್ರಲ್ಲಿ ಅತ್ತೆ ಮುಖ್ಯ ಪಾತ್ರವಹಿಸ್ತಾಳೆ. ಅನೇಕ ಬಾರಿ ಅತ್ತೆ – ಸೊಸೆಯನ್ನು ಹಾವು- ಮುಂಗುಸಿಗೆ ಹೋಲಿಕೆ ಮಾಡೋದಿದೆ. ಎರಡು ಜಡೆಗಳು ಒಂದಾಗೋದೇ ಇಲ್ಲ, ಅತ್ತೆಗೆ ಸೊಸೆಯೇ ಶತ್ರು ಎಂಬೆಲ್ಲ ಮಾತುಗಳನ್ನು ನಾವು ಕೇಳ್ತೇವೆ. ನನಗೆ ಸಿಗುವ ಅತ್ತೆ ಕೂಡ ಹೀಗೆ ಇದ್ರೆ ಎಂಬ ಭಯ ಹುಡುಗಿಗೆ ಇದ್ದೇ ಇರುತ್ತೆ.
ಮದುವೆ (Marriage) ಯಾದ್ಮೇಲೆ ಅತ್ತೆ – ಸೊಸೆ ಸಂಬಂಧ ಗಟ್ಟಿಯಾಗಿರೋದು ಬಹಳ ಅಪರೂಪ. ಅತ್ತೆ – ಸೊಸೆ ಗಲಾಟೆಯ ಅನೇಕ ಸುದ್ದಿಗಳನ್ನು ನಾವು ಕೇಳ್ತೇವೆ. ಪ್ರತಿಯೊಬ್ಬ ಅತ್ತೆಗೆ ಸೊಸೆ ಮೇಲೆ ದೂರಿದ್ರೆ, ಪ್ರತಿಯೊಬ್ಬ ಸೊಸೆಗೆ ಅತ್ತೆ (Mother In Law) ಮೇಲೆ ದೂರಿರುತ್ತದೆ. ಅದಕ್ಕೆ ನಾನಾ ಕಾರಣವಿದೆ.
WOMEN HEALTH : ಮುಟ್ಟು ನಿಂತ್ಮೆಲೂ ಹೆಣ್ಣಿಗೆ ಲೈಂಗಿಕಾಸಕ್ತಿ ಇರೋದು ಮಾತ್ರವಲ್ಲ, ಹೆಚ್ಚಾಗುತ್ತೆ!
ಸದಾ ಮನೆಯಲ್ಲಿ ತನ್ನದೇ ರಾಜ್ಯಬಾರ ಮಾಡಿಕೊಂಡು ಬಂದಿದ್ದ ಅತ್ತೆಗೆ ಏಕಾಏಕಿ ಸೊಸೆಗೆ ಅಧಿಕಾರ ನೀಡಲು ಇಷ್ಟವಾಗದೆ ಇರಬಹುದು. ಮಗನ ಪ್ರೀತಿ (Love) ಕಳೆದುಕೊಳ್ಳುವ ಭಯವೂ ಕಾಡಬಹುದು. ಇನ್ನೊಂದೆಡೆ ತವರು ಮನೆಯನ್ನು ತೊರೆದು ಬೇರೆ ಮನೆಗೆ ಬಂದ ಹುಡುಗಿಗೆ ಇಲ್ಲಿನ ಜನರು, ಸಂಸ್ಕೃತಿಗೆ ಹೊಂದಿಕೊಳ್ಳೋದು ಕಷ್ಟವಾಗಬಹುದು. ತನ್ನ ಪತಿಯ ಮೇಲೆ ಅತ್ತೆಯ ಪ್ರೀತಿ ಅತಿಯಾಯ್ತು ಎನ್ನಿಸುವುದೂ ಇದೆ. ಸಂಸಾರದ ವಿಷ್ಯದಲ್ಲಿ ಅತ್ತೆ ಮೂಗು ತೂರಿಸಿಕೊಂಡು ಬಂದ್ರೆ ಕೋಪ ನೆತ್ತಿಗೇರುತ್ತದೆ. ಇದು ಇಬ್ಬರ ಮಧ್ಯೆ ಭಿನ್ನಾಭಿಪ್ರಾಯವನ್ನು ಮತ್ತಷ್ಟು ಹೆಚ್ಚಿಸಬಹುದು. ಅತ್ತೆ – ಸೊಸೆ ಹೇಗಿರಬೇಕು ಎನ್ನುವ ಬಗ್ಗೆ ಸದ್ಗುರು ಸಲಹೆ ನೀಡಿದ್ದಾರೆ. ಅದನ್ನು ಪಾಲಿಸಿದ್ರೆ ಅತ್ತೆ – ಸೊಸೆಯಲ್ಲಿ ತಾಯಿ – ಮಗಳ ಪ್ರೀತಿ ಚಿಗುರೋದ್ರಲ್ಲಿ ಅನುಮಾನವಿಲ್ಲ. ನಾನು ಅತ್ತೆ ಜೊತೆ ವಾಸವಾಗಿದ್ದೇನೆ. ಅತ್ತೆ ಹಾಗೂ ನಾನು ಇಬ್ಬರೂ ಖುಷಿಯಾಗಿರಬೇಕೆಂದ್ರೆ ಏನು ಮಾಡ್ಬೇಕು ಎಂದು ಮಹಿಳೆಯೊಬ್ಬಳು ಕೇಳಿದ ಪ್ರಶ್ನೆಗೆ ಸದ್ಗುರು ಉತ್ತರ ನೀಡಿದ್ದಾರೆ.
ಸೊಸೆಯಾದವಳು ಇದನ್ನು ಅರ್ಥ ಮಾಡಿಕೊಳ್ಳಬೇಕು : ಗಂಡ ಹಾಗೂ ಅತ್ತೆ ಮಧ್ಯೆ ಇರುವ ಸಂಬಂಧವನ್ನು ಸೊಸೆಯಾದವಳು ಅರ್ಥಮಾಡಿಕೊಳ್ಳಬೇಕು. ಸದ್ಗುರು ಪ್ರಕಾರ, ನಿಮ್ಮ ಕೈಹಿಡಿದ ಪತಿ ನಿಮಗಿಂತ ಮೊದಲು ನಿಮ್ಮ ಅತ್ತೆಗೆ ಮಗ. ಇಲ್ಲಿಯವರೆಗೂ ಆತ ತನ್ನ ತಾಯಿಯನ್ನು ಆಶ್ರಯಿಸಿದ್ದ. ಈ ವಾಸ್ತವವನ್ನು ಸೊಸೆಯಾದವಳು ತಿಳಿಯಬೇಕು. ಅತ್ತೆಗೆ ನನ್ನಿಂದ ಏನೂ ಸಮಸ್ಯೆಯಿಲ್ಲ, ಮಗನ ಮೇಲಿನ ಪ್ರೀತಿಯಿಂದ ಆತನಿಗೆ ಹತ್ತಿರವಾಗಿದ್ದಾಳೆ ಎಂಬುದನ್ನು ಸೊಸೆ ತಿಳಿಯಬೇಕು.
ಪುರುಷರ ಗರ್ಭ ನಿರೋಧಕ ಮಾತ್ರೆ ಹೆಚ್ಚು ಪರಿಣಾಮಕಾರಿ, ಆದ್ರೆ ಇದರ ಸೇವನೆಗೆ ಹಿಂದೇಟು ಹಾಕೋದ್ಯಾಕೆ?
ಮಗನ ಬದಲಾವಣೆ ತಾಯಿಗೆ ಒಪ್ಪಿಗೆಯಾಗಲ್ಲ : ಮಕ್ಕಳು ಎಷ್ಟೇ ದೊಡ್ಡವರಾದ್ರೂ ತಾಯಿಗೆ ಅವರು ಮಕ್ಕಳೇ ಆಗಿರ್ತಾರೆ. ಮಗ ಮದುವೆಯಾದ ತಕ್ಷಣ ಆತ ದೊಡ್ಡವನಾಗಿದ್ದಾನೆ ಎಂಬುದನ್ನು ತಾಯಿ ಒಪ್ಪಿಕೊಳ್ಳೋದಿಲ್ಲ. ಅಮ್ಮ ಎನ್ನುತ್ತಿದ್ದ ಮಗ, ಪತ್ನಿ ಹೆಸರು ಹೇಳಿ ಕರೆದಾಗ ಆತನಲ್ಲಿ ಆದ ಬದಲಾವಣೆಯನ್ನು ಆಕೆ ಸುಲಭವಾಗಿ ಸ್ವೀಕರಿಸೋದಿಲ್ಲ. ಮಗ ತನ್ನಿಂದ ದೂರವಾಗ್ತಿದ್ದಾನೆಂದು ಭಾವಿಸ್ತಾಳೆ.
ಅತ್ತೆ ಖುಷಿಯಾಗಿರ್ಬೇಕೆಂದ್ರೆ ಸೊಸೆಯಾದವಳು ಹೀಗೆ ಮಾಡಬೇಕು : ನಿಮ್ಮದಲ್ಲದ ವಸ್ತುವಿನ ಮೇಲೆ ನಿಮಗೆ ಅಧಿಕಾರವಿರೋದಿಲ್ಲ. ಅದನ್ನು ಬದಲಿಸಲೂ ಸಾಧ್ಯವಿಲ್ಲ. ಅದು ಹೇಗಿದೆಯೋ ಹಾಗೆಯೇ ಅದನ್ನು ಒಪ್ಪಿಕೊಳ್ಳುವುದು ಮುಖ್ಯವಾಗುತ್ತದೆ. ನಿಮ್ಮಿಂದ ಯಾರಿಗೂ ನೋವಾಗದಂತೆ ನೀವು ನೋಡಿಕೊಳ್ಳಬೇಕು. ಜೀವನದ ಸತ್ಯಗಳನ್ನು ನೀವು ಒಪ್ಪಿಕೊಳ್ಳಬೇಕಾಗುತ್ತದೆ. ಅತ್ತೆಯ ಸ್ಥಾನದಲ್ಲಿ ನೀವು ನಿಂತು ನೋಡಬೇಕಾಗುತ್ತದೆ. ಮುಂದೊಮ್ಮೆ ನೀವು ಅತ್ತೆಯಾಗಲಿದ್ದೀರಿ ಎಂಬುದು ನಿಮಗೆ ನೆನಪಿರಲಿ. ನೀವು ಈ ಸತ್ಯ ಅರಿತರೆ, ಅತ್ತೆಯಾಗ್ಲಿ, ತಾಯಿಯಾಗ್ಲಿ ಇಲ್ಲ ಮತ್ತೆ ಯಾವುದೋ ಮಹಿಳೆಯಾಗ್ಲಿ ಆಕೆಯನ್ನು ನೀವು ಸಂತೋಷವಾಗಿಡಬಹುದು ಎನ್ನುತ್ತಾರೆ ಸದ್ಗುರು.