Personality Tips: ಬದಲಾವಣೆ ಬೇಕಾದ್ರೆ ನಿಮಗೆ ನೀವೇ ಇಂತಹ ಕ್ಷಮೆಗಳನ್ನ ಕೊಟ್ಕೊಬೇಡಿ

By Suvarna News  |  First Published Jul 2, 2023, 5:24 PM IST

ಬದಲಾವಣೆ ಬಯಸಿದರೂ ಸಾಧ್ಯವಾಗದ ಬೇಸರ ನಿಮ್ಮದಾ? ಕಂಫರ್ಟ್‌ ವಲಯದಿಂದ ಹೊರ ಹೋಗಲು ನಿಮಗೆ ಕಷ್ಟವೇ? ಹೊಸ ಕಾರ್ಯಕ್ಕೆ ಮುಂದಾಗಲು ಸಮಯವಿಲ್ಲ ಎನಿಸುತ್ತದೆಯೇ? ಇವೆಲ್ಲ ಕೇವಲ ಸಬೂಬುಗಳು. ನಿಮಗೆ ನೀವೇ ಕೊಟ್ಟುಕೊಳ್ಳುವ ವಿನಾಯಿತಿಗಳು.
 


ನಿಮ್ಮಲ್ಲೇ ಇರುವ ಯಾವುದೋ ಕೊರತೆಯನ್ನು ಬದಲಾಯಿಸಿಕೊಳ್ಳಬೇಕೆಂದು ಅಂದುಕೊಂಡರೂ ಅದು ಸಾಧ್ಯವಾಗದ ಬೇಸರದಲ್ಲಿದ್ದೀರಾ? ಹಾಗಾದರೆ ನೀವೇ ಕೆಲವು ಅಡೆತಡೆಗಳನ್ನು ಹಾಕಿಕೊಂಡಿರಬಹುದು. ಬದಲಾವಣೆ ಎನ್ನುವುದು ಕೆಲವೊಮ್ಮೆ ಭಯ ಪಡಿಸುತ್ತದೆ. ಉದ್ಯೋಗ ಬದಲಾವಣೆ, ಮನಸ್ಥಿತಿಯ ಬದಲಾವಣೆ, ಸ್ಥಳ, ಸಂಬಂಧದ ಬದಲಾವಣೆಗಳು ಅಸಾಧ್ಯ ಎನಿಸುವಷ್ಟರ ಮಟ್ಟಿಗೆ ಭಯ ಮೂಡಿಸಬಹುದು. ಹೀಗಾಗಿ, ನಿಮ್ಮ ಮನಸ್ಸು ನಿಮ್ಮ ಅರಿವಿಗೆ ಬಾರದಂತೆ ತಾನೇ ಹಲವಾರು ಅಡೆತಡೆಗಳನ್ನು ನಿರ್ಮಾಣ ಮಾಡಿಕೊಳ್ಳಬಹುದು. ಆದರೆ, ಅದು ನಿಮಗೆ ಅಗತ್ಯವಾಗಿದ್ದರೆ, ಸಕಾರಾತ್ಮಕ ಜೀವನ ನಡೆಸಲು ಬೇಕಾಗಿದ್ದರೆ ಅನಿವಾರ್ಯವಾಗುತ್ತದೆ. ಹೀಗಾಗಿ, ಅಂತಹ ಅಡೆತಡೆಗಳನ್ನು ಹಾಕಿಕೊಳ್ಳುವ ಮನಸ್ಸಿನ ಬಗ್ಗೆ ಎಚ್ಚರದಿಂದಿರಿ. ಯಾವುದೋ ಕೆಲಸ ಮಾಡಬೇಕು ಎಂದುಕೊಂಡಿದ್ದೀರಿ, ಆದರೆ, ಕೆಲಸದ ಒತ್ತಡದಿಂದಾಗಿ ಸಾಧ್ಯವಾಗುತ್ತಿಲ್ಲ ಎಂದುಕೊಂಡರೆ ಅದು ಎಷ್ಟರ ಮಟ್ಟಿಗೆ ಸರಿ ಎಂದು ಯೋಚಿಸಿ. ಕಾರ್ಯಬಾಹುಳ್ಯವಿಲ್ಲದೆಯೂ ಕೆಲವೊಮ್ಮೆ ಬ್ಯುಸಿ ಎನಿಸಬಹುದು. “ನನ್ನಿಂದ ಈ ಕಾರ್ಯ ಸಾಧ್ಯವಾಗುತ್ತದೆಯೋ ಇಲ್ಲವೋʼ ಎನ್ನುವ ಗೊಂದಲವೂ ಮೂಡಿ ಅದರಿಂದ ದೂರ ಉಳಿಯುವಂತೆ ಆಗಬಹುದು. ಅಂದರೆ, ಇದಕ್ಕೆ ಮನಸ್ಥಿತಿಯೇ ಕಾರಣವಾಗಿರುತ್ತದೆ. 

ಬದಲಾವಣೆ (Change) ಅಗತ್ಯವೆಂದಾದರೆ ನಿಮಗೆ ನೀವೇ ವಿನಾಯಿತಿ (Excuse) ಕೊಟ್ಟುಕೊಳ್ಳಲು ಹೋಗಬೇಡಿ. ಕ್ಷಮೆಗಳನ್ನು ನೀಡಲು ಅವಕಾಶ ಕೊಡಬೇಡಿ. ಸಾಮಾನ್ಯವಾಗಿ ಯಾವುದಾದರೂ ಬದಲಾವಣೆ ಒಪ್ಪಿಕೊಳ್ಳಲು ನಮಗೆ ನಾವೇ ಕೊಟ್ಟುಕೊಳ್ಳುವ ಕ್ಷಮೆಗಳು ಹೀಗಿರುತ್ತವೆ. ಅವುಗಳನ್ನು ಅರಿತು ದೂರವಿರುವುದು ಉತ್ತಮ.

Tap to resize

Latest Videos

ನಾನು ಅಷ್ಟೊಂದು ಸಮರ್ಥವಾಗಿಲ್ಲ (Not Able): ಯಾವುದಾದರೂ ಹೊಸ ಕೆಲಸಗಳ (Work) ಆರಂಭದಲ್ಲಿ ಇಂತಹ ಯೋಚನೆ ಅದೆಷ್ಟು ಬಾರಿ ಬರುತ್ತದೆ ಎಂದು ಲೆಕ್ಕ ಹಾಕಿ. ಇದು ನಿಮಗೆ ನೀವೇ ಕೊಡುವ ಕ್ಷಮೆ ಮಾತ್ರ. ಇಲ್ಲಿ ಸಾಮರ್ಥ್ಯದ (Ability) ಸಮಸ್ಯೆ ಇರುವುದೇ ಇಲ್ಲ. ಸಮಸ್ಯೆ (Problems) ಇರುವುದು ನಿಮ್ಮ ಆತ್ಮವಿಶ್ವಾಸದಲ್ಲಿ (Self Confidence). ಯಾವುದೇ ಕೆಲಸವಾದರೂ ಆರಂಭವೊಂದು ಇರಲೇಬೇಕಲ್ಲ, ಹೀಗಾಗಿ, ಧೈರ್ಯದಿಂದ ಆರಂಭಿಸುವುದೊಂದೇ ಉತ್ತಮ ಮಾರ್ಗ.

Personality Tips: ನೀವು ಇಂಟ್ಯೂಷನ್‌ ಹೊಂದಿದ್ದೀರಾ? ನಿಮಗೂ ಹೀಗೆಲ್ಲ ಆಗುತ್ತಾ?

ಸಮಯವೇ ಇಲ್ಲ (No Time): ಇಂದಿನ ದಿನಗಳಲ್ಲಿ ಯಾರಿಗೂ ಸಮಯವೇ (Time) ಇಲ್ಲ. ಹಾಗೆಂದು ಅಂತಹ ಘನಕಾರ್ಯ ಏನಿದೆ ಎಂದು ವಿಚಾರಿಸಿದರೆ ದೈನಂದಿನ ಕೆಲಸ ಕಾರ್ಯಗಳ ಹೊರತಾಗಿ ಬೇರೆ ಏನೂ ಕಾಣುವುದಿಲ್ಲ. ಹೀಗಾಗಿ, ಯಾವುದಾದರೂ ಕೆಲಸ ಆರಂಭಿಸಲು ಅಥವಾ ಬದಲಾವಣೆಗೆ ಸಮಯವಿಲ್ಲ ಎನ್ನುವ ಸಬೂಬನ್ನು ಬಿಟ್ಟುಬಿಡಿ. ಸಮಯ ಮಾಡಿಕೊಂಡಾದರೂ ಆ ಕೆಲಸ ಮಾಡುವುದು ಜಾಣತನ. 

ನನ್ನ ಕೈಲಿ ಆಗದಿದ್ದರೆ?: ಕೆಲವರಿಗೆ ಕಾರ್ಯಗಳಲ್ಲಿ ವಿಫಲವಾಗುವ (Failure) ಭಯ (Fear) ಹೆಚ್ಚು. ಹೀಗಾಗಿ, ಆರಂಭವನ್ನೇ (Start) ಮಾಡುವುದಿಲ್ಲ. ಆದರೆ, ಬದಲಾವಣೆ ಬೇಕಿದ್ದರೆ ನಿಮ್ಮಷ್ಟಕ್ಕೆ ನೀವೇ ಇಂತಹ ಕ್ಷಮೆ ಕೊಟ್ಟುಕೊಳ್ಳುವುದನ್ನು ಬಿಡಬೇಕು. ಹಿಂಜರಿಕೆ ಕಾಡಿದ ಸಮಯದಲ್ಲಿ, ನೀವೇ ಹಿಂದೊಮ್ಮೆ ಭಯಪಟ್ಟಿದ್ದ ಅದೆಷ್ಟೊಂದು ಕೆಲಸಗಳು ಈಗ ಸುಲಭವೆನಿಸಿವೆ ಎಂದು ಯೋಚಿಸಬೇಕು. 

ತಡವಾಗಿ ಹೋಯ್ತು (Late): ವಿಷಾದದಿಂದ ಕೂಡಿರುವ ಈ ಭಾವನೆಯೂ ಸಾಮಾನ್ಯ. ಅವಕಾಶಗಳನ್ನು ಮಿಸ್‌ ಮಾಡಿಕೊಂಡು, ಈಗ ವಿಳಂಬವಾಯಿತು ಎಂದು ಹಲುಬುವ ಸ್ಥಿತಿ. ಆದರೆ, ಜೀವನದಲ್ಲಿ ಬದಲಾವಣೆ ಬೇಕು ಎಂದಾದರೆ ಯಾವುದೇ ವಿಳಂಬ ಎನ್ನುವುದಿಲ್ಲ. ಯಾವಾಗ ಬೇಕಿದ್ದರೂ ಈ ಪಯಣವನ್ನು ಆರಂಭಿಸಬಹುದು. ಜೀವನ ಎನ್ನುವುದು ರೇಸ್‌ ಟ್ರ್ಯಾಕ್‌ (Race Track) ನಂತೆ ನಿರ್ದಿಷ್ಟವಾಗಿಲ್ಲ. ಇಲ್ಲಿ ಮುಕ್ತವಾದ ಮಾರ್ಗಗಳಿವೆ. 

Personality Tips: ನಿಮ್ಮಲ್ಲೂ ಇದೆಯೇ ಪುಟಿದೇಳಬಲ್ಲ ಗುಣ? ಕಷ್ಟಕಾಲದಲ್ಲಿ ನೀವು ಹೇಗಿರ್ತೀರಿ?

ಕಂಫರ್ಟ್‌ (Comfort) ವಲಯದಿಂದ ಹೊರಬರಲು ಯೋಚನೆ: ಬಹಳಷ್ಟು ಜನರಿಗೆ ಕಾಡುವ ಸಮಸ್ಯೆ ಇದು. ನಿಗದಿತ ಉದ್ಯೋಗ ಅಥವಾ ಕಾರ್ಯ ಅಭ್ಯಾಸವಾಗಿರುತ್ತದೆ. ಅದೇ ಸಮಯ, ಕೆಲಸ, ಜನ, ವಾತಾವರಣ ರೂಢಿಯಾಗಿರುತ್ತದೆ. ಅದರಿಂದಾಚೆಗೆ ಹೋಗಬೇಕೆಂದರೆ ಭಯ ಕಾಡುತ್ತದೆ. ಕಂಫರ್ಟ್‌ ವಲಯದಿಂದ ಹೊರಹೋಗಬೇಕು ಎನ್ನುವುದು ದುಃಸ್ವಪ್ನವಾಗುತ್ತದೆ. ಆದರೆ, ನೆನಪಿರಲಿ. ಕಂಫರ್ಟ್‌ ವಲಯದಲ್ಲಿ ಬೆಳವಣಿಗೆ (Growth) ಅಥವಾ ನೀವೇನು ಬಯಸಿದ್ದೀರೋ ಆ ಬದಲಾವಣೆ (Change) ಕಾಣುವುದಿಲ್ಲ. ಕಂಫರ್ಟ್‌ ಎನ್ನುವುದು ನಾವು ಎಲ್ಲಿದ್ದೇವೋ ಅಲ್ಲಿಯೇ ಸ್ಥಗಿತವಾಗುವಂತೆ ಮಾಡುತ್ತದೆ. ಕಂಫರ್ಟ್‌ ವಲಯ ಮುಗಿದಾಗಲೇ ಹೊಸ ಜೀವನ ಆರಂಭವಾಗುತ್ತದೆ. 

click me!