ದೈಹಿಕ ಸಂಬಂಧಕ್ಕೆ ಪ್ರೇರೇಪಿಸಲು ರಾತ್ರಿ 10ರಿಂದ ಪವರ್ ಕಟ್, ಜನಸಂಖ್ಯೆ ಹೆಚ್ಚಿಸಲು ಈ ಪ್ಲ್ಯಾನ್

By Roopa Hegde  |  First Published Nov 12, 2024, 3:32 PM IST

ರಷ್ಯಾದಲ್ಲಿ ತಡರಾತ್ರಿಯವರೆಗೆ ಟಿವಿ, ಇಂಟರ್ನೆಟ್ ನೋಡುವಂತಿಲ್ಲ. ರಾತ್ರಿ ಹತ್ತು ಗಂಟೆಯಾಗ್ತಿದ್ದಂತೆ ಪವರ್ ಕಟ್ ಮಾಡಲಾಗುತ್ತದೆ.  ಇಂಟರ್ನೆಟ್ ತೆಗೆಯಲಾಗುತ್ತದೆ. ಆ ದೇಶದಲ್ಲಿ ಯಾಕೆ ಈ ಎಲ್ಲ ರೂಲ್ಸ್ ಫಾಲೋ ಮಾಡ್ತಿದೆ ಗೊತ್ತಾ? 
 


ರಷ್ಯಾ (Russia) ಒಂದ್ಕಡೆ ಯುದ್ಧದ ಟೆನ್ಷನ್ನಲ್ಲಿದ್ರೆ ಇನ್ನೊಂದ್ಕಡೆ ಕುಸಿಯುತ್ತಿರುವ ಜನನ ಪ್ರಮಾಣ (birth rate) ದೇಶಕ್ಕೆ ದೊಡ್ಡ ಚಿಂತೆಯಾಗಿದೆ.  ಜನಸಂಖ್ಯೆಯ ಹೆಚ್ಚಳಕ್ಕೆ ಶತಪ್ರಯತ್ನವನ್ನು ಅಲ್ಲಿನ ಸರ್ಕಾರ ಮಾಡ್ತಿದೆ. ಇಲ್ಲಿಯವರೆಗೆ ಯಾವ ದೇಶವೂ ಜಾರಿಗೆ ತರದಂತಹ ರೂಲ್ಸ್ಗಳನ್ನು ಇಲ್ಲಿನ ಸರ್ಕಾರ ಜಾರಿಗೆ ತರ್ತಿದೆ. ದೈಹಿಕ ಸಂಬಂಧ ಬೆಳೆಸಲು ಜನರನ್ನು ಪ್ರೋತ್ಸಾಹಿಸುವ ಜೊತೆಗೆ ಮೊದಲ ಡೇಟ್ಗೆ ಹೋಗಲು ನೆರವಾಗುವವರೆಗೆ ಎಲ್ಲ ಪ್ರಯತ್ನವನ್ನೂ ಸರ್ಕಾರ ಮಾಡ್ತಿದೆ. ರಷ್ಯಾದ ಒಂದೊಂದು ಪ್ರದೇಶದಲ್ಲಿ ಒಂದೊಂದು ಹೊಸ ನಿಯಮಗಳು ಜಾರಿಗೆ ಬರ್ತಿವೆ. ಸ್ಥಳೀಯ ಸರ್ಕಾರಕ್ಕೆ ಜನಸಂಖ್ಯೆ ಹೆಚ್ಚಳದ ಜವಾಬ್ದಾರಿ ನೀಡಲಾಗಿದೆ. 

ರಷ್ಯಾದಲ್ಲಿ ಜಾರಿಯಾಗಿದೆ ವಿಚಿತ್ರ ನಿಯಮ : ದಂಪತಿ ನಡುವೆ ಅನ್ಯೋನ್ಯತೆಯನ್ನು ಉತ್ತೇಜಿಸಲು ಅಡಚಣೆ-ಮುಕ್ತ  ವಾತಾವರಣವನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ಇದೇ ಕಾರಣಕ್ಕೆ ರಾತ್ರಿ 10 ರಿಂದ ಬೆಳಗಿನ ಜಾವ 2 ಗಂಟೆಯವರೆಗೆ ಮನೆಯಲ್ಲಿ ಇಂಟರ್ನೆಟ್ (Internet) ಮತ್ತು ಕರೆಂಟ್ (current) ತೆಗೆಯುವ ಪ್ರಸ್ತಾವನೆ ಇಡಲಾಗಿದೆ. ಈ ಸಮಯದಲ್ಲಿ ದೈಹಿಕ ಸಂಬಂಧ (physical relationship) ಬೆಳೆಸಲು ನಾಗರಿಕರನ್ನು ಪ್ರೋತ್ಸಾಹಿಸುವುದು ಸರ್ಕಾರದ ಯೋಜನೆಯಲ್ಲಿ ಒಂದಾಗಿದೆ. ಹಿಂದೆ ಟಿವಿ, ಇಂಟರ್ನೆಟ್ ಸೇರಿದಂತೆ ಯಾವುದೇ ಮನರಂಜನೆ ಜನರಿಗೆ ಇರಲಿಲ್ಲ. ಹಾಗಾಗಿ ಅವರು ಹೆಚ್ಚಿನ ಮಕ್ಕಳನ್ನು ಪಡೆಯುತ್ತಿದ್ದರು ಎನ್ನುವ ಮಾತೊಂದಿದೆ. ನೆಟ್, ಟಿವಿ ಜನರ ಗಮನವನ್ನು ಬೇರೆ ಕಡೆ ಸೆಳೆಯುತ್ತದೆ. ತಡರಾತ್ರಿಯಾದ್ರೂ ಜನರು ಬೆಡ್ಗೆ ಹೋಗುವುದಿಲ್ಲ. ಇವೆಲ್ಲವನ್ನು ಗಮನಿಸಿರುವ ಸರ್ಕಾರ, ರಾತ್ರಿ ಹತ್ತು ಗಂಟೆಯಾಗ್ತಿದ್ದಂತೆ ಕರೆಂಟ್ ತೆಗೆದು, ನೆಟ್ ಬಂದ್ ಮಾಡುವ ವ್ಯವಸ್ಥೆ ಮಾಡ್ತಿದೆ.

Latest Videos

undefined

ಬರೋಬ್ಬರಿ 2,600 ಲೀಟರ್ ಎದೆಹಾಲು ದಾನದಿಂದ ಗಿನ್ನೆಸ್ ದಾಖಲೆ ಮಾಡಿದ ಮಹಿಳೆ

ಫಸ್ಟ್ ನೈಟ್ ವೆಚ್ಚ ಸರ್ಕಾರದ ಮೇಲೆ !: ನವವಿವಾಹಿತರ ಮದುವೆಯ ರಾತ್ರಿಯ ವೆಚ್ಚವನ್ನು ರಾಜ್ಯ ಭರಿಸಬೇಕೆಂದು ಒಂದು ಶಿಫಾರಸ್ಸಿನಲ್ಲಿ ಸೂಚಿಸಲಾಗಿದೆ. ಅಷ್ಟೇ ಅಲ್ಲ ಸಂಗಾತಿಯ ಮೊದಲ ಡೇಟ್ ಗೆ ಸರ್ಕಾರವೇ ಹಣ ನೀಡಲಿದೆ. ಮೊದಲ ಬಾರಿ ಡೇಟ್ ಗೆ ಹೋಗುವ ಜೋಡಿಗೆ ಸರ್ಕಾರ 5,000 ರೂಬಲ್ ಅಂದ್ರೆ ಸುಮಾರು 4,302 ರೂಪಾಯಿ ನೀಡಲಿದೆ. 

ದಂಪತಿ ಹೊಟೇಲ್ನಲ್ಲಿ ತಮ್ಮ ಸುಮಧುರ ಸಮಯವನ್ನು ಕಳೆಯಲು ಅವಕಾಶವನ್ನು ಸರ್ಕಾರ ಒದಗಿಸಿದೆ. ಹೊಟೇಲ್ ರೂಮಿದ ದರವನ್ನು ಕಡಿಮೆ ಮಾಡಿದೆ. ಗರ್ಭಧಾರಣೆ ಸಾಧ್ಯತೆಯನ್ನು ಹೆಚ್ಚಿಸಲು ಹೋಟೆಲ್ ವೆಚ್ಚಗಳನ್ನು 26,300 ರೂಬಲ್ ಅಂದ್ರೆ 22,632 ರೂಪಾಯಿಗೆ ಸೀಮಿತಗೊಳಿಸಬೇಕೆಂದು ಶಿಪಾರಸ್ಸು ಮಾಡಲಾಗಿದೆ.

ಗೃಹಿಣಿಯರಿಗೆ ಧನ ಸಹಾಯ : ಮನೆಯಲ್ಲಿ ಮಕ್ಕಳಿದ್ರೆ ಮಹಿಳೆಯರ ವೃತ್ತಿ ಹಾಗೂ ಆರ್ಥಿಕತೆಯ ಮೇಲೆ ಹೊಡೆತ ಬೀಳುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಮನೆಯಲ್ಲಿರುವ ಮಹಿಳೆಯರಿಗೆ ಮನೆ ಕೆಲಸಕ್ಕಾಗಿ ಆರ್ಥಿಕ ನೆರವು ನೀಡಲು ಮುಂದಾಗಿದೆ. ಕೆಲ ಪ್ರದೇಶದಲ್ಲಿ ಈ ಯೋಜನೆಯ ಲಾಭ ಮಹಿಳೆಯರಿಗೆ ಈಗಾಗಲೇ ಸಿಗ್ತಿದೆ. ಖಬರೋವ್ಸ್ಕ್‌ನಲ್ಲಿ 18 ರಿಂದ 23 ವರ್ಷ ವಯಸ್ಸಿನ ಯುವತಿಯರಿಗೆ ಮಗುವನ್ನು ಹೊಂದಲು ಪ್ರೋತ್ಸಾಹ ಧನವಾಗಿ  900 ಯೂರೊ ಅಂದ್ರೆ ಸುಮಾರು 98,029 ರೂಪಾಯಿ ನೀಡಲಾಗ್ತಿದೆ. ಚೆಲ್ಯಾಬಿನ್ಸ್ಕ್‌ನಲ್ಲಿ, ಮೊದಲ ಮಗುವಿಗೆ ಬಹುಮಾನವಾಗಿ  8,500 ಯೂರೊ 9.26 ಲಕ್ಷ ಸಿಗ್ತಿದೆ. 

ಸಂಬಂಧ ಬೆಳೆಸಲು ನಿರಾಕರಿಸ್ತಾಳೆ ಪತ್ನಿ ! ವಿಚ್ಛೇದನ ಕೋರಿ ಕೋರ್ಟ್‌ಗೆ ಹೋದವನಿಗೆ ಸಿಕ್ಕ

ಇದಕ್ಕೂ ಮುನ್ನ ಪ್ರಾದೇಶಿಕ ಆರೋಗ್ಯ ಸಚಿವ ಡಾ. ಯೆವ್ಗೆನಿ ಶೆಸ್ಟೋಪಾಲೋವ್ ಅವರು ತಮ್ಮ ಜೀವನದಲ್ಲಿ ಸೆಕ್ಸ್ ಅಟ್ ವರ್ಕ್  ಯೋಜನೆಯನ್ನು ಅಳವಡಿಸಿಕೊಳ್ಳುವಂತೆ ರಷ್ಯನ್ನರಿಗೆ ಕರೆ ನೀಡಿದ್ದರು. ಊಟ ಮತ್ತು ಕಾಫಿ ವಿರಾಮದ ಸಮಯದಲ್ಲಿ ಮಕ್ಕಳನ್ನು ಹೊಂದಲು ಸಲಹೆ ನೀಡಿದ್ದರು. ನೀವು ವಿರಾಮದ ಸಮಯದಲ್ಲಿಯೂ ಸಹ ಸಂತಾನೋತ್ಪತ್ತಿ ಮಾಡಬಹುದು, ಏಕೆಂದರೆ ಜೀವನವು ತುಂಬಾ ವೇಗವಾಗಿ ಚಲಿಸುತ್ತದೆ ಎಂದು ಶೆಸ್ಟೋಪಾಲೋವ್ ಹೇಳಿದ್ದರು. 
 

click me!