ಗಂಡ ಸತ್ತ ಮೇಲೆ 8 ವರ್ಷ ಮಗನನ್ನು ಬಂಧಿಸಿಟ್ಟು ತನ್ನ ಕಾಮಾಸಕ್ತಿ ತೀರಿಸಿಕೊಳ್ತಿದ್ದ ತಾಯಿ!

By Vinutha Perla  |  First Published Jul 9, 2023, 10:13 AM IST

ತಾಯಿ-ಮಗುವಿನ ಸಂಬಂಧವೆಂದರೆ ಅತ್ಯಂತ ಪವಿತ್ರವಾದುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಕ್ಕಳೇ ತಾಯಿಯ ಮೇಲೆ ದೌರ್ಜನ್ಯವೆಸಗಿರುವ ಹಲವಾರು ಘಟನೆಗಳು ನಡೆದಿವೆ. ಹೀಗೆಯೇ ತಾಯಿ-ಮಕ್ಕಳ ಸಂಬಂಧಕ್ಕೆ ಕಳಂಕವೆಸಗಿರುವ ಘಟನೆಯೊಂದು ಅಮೆರಿಕಾದಲ್ಲಿ ನಡೆದಿದೆ. ಇಲ್ಲಿ ತಾಯಿ ತನ್ನ ಮಗನನ್ನು ಕೂಡಿಟ್ಟು ಲೈಂಗಿಕ ದೌರ್ಜನ್ಯವೆಸಗಿದ್ದಾಳೆ.


ತಾಯಿಯ ಗರ್ಭದಿಂದ ಹೊರಬಂದ ಮಗು ತಾಯಿಯ ಎದೆ ಹಾಲು ಕುಡಿದು ಬೆಳೆಯುತ್ತದೆ. ಆದರೆ ಮಗು ದೊಡ್ಡವನಾದ ತಕ್ಷಣ ಅವನಿಗೆ ತಾಯಿಯ ದೇಹವು ಪವಿತ್ರವಾಗುತ್ತದೆ. ತಾಯಿ-ಮಗುವಿನ ಸಂಬಂಧವೆಂದರೆ ಅತ್ಯಂತ ಪವಿತ್ರವಾದುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಕ್ಕಳೇ ತಾಯಿಯ ಮೇಲೆ ದೌರ್ಜನ್ಯವೆಸಗಿರುವ ಹಲವಾರು ಘಟನೆಗಳು ನಡೆದಿವೆ. ಹೀಗೆಯೇ ತಾಯಿ-ಮಕ್ಕಳ ಸಂಬಂಧಕ್ಕೆ ಕಳಂಕವೆಸಗಿರುವ ಘಟನೆಯೊಂದು ಅಮೆರಿಕಾದಲ್ಲಿ ನಡೆದಿದೆ. ಇಲ್ಲಿ ತಾಯಿ ತನ್ನ ಮಗನನ್ನು ಕೂಡಿಟ್ಟು ಲೈಂಗಿಕ ದೌರ್ಜನ್ಯವೆಸಗಿದ್ದಾಳೆ. ಗಂಡ ಸತ್ತ ಬಳಿಕ ಬರೋಬ್ಬರಿ  8 ವರ್ಷಗಳ ಕಾಲ ಮಗನನ್ನು ಬಂಧಿಸಿಟ್ಟು ಹಾಸಿಗೆಯಲ್ಲಿ ಗಂಡನಾಗುವಂತೆ ಮಗನನ್ನು ಒತ್ತಾಯಿಸಿದ್ದಾಳೆ.

ಲೈಂಗಿಕ ಬಯಕೆ ತೀರಿಸಿಕೊಳ್ಳಲು ಮಗನನ್ನೇ ಬಂಧಿಸಿಟ್ಟಿದ್ದ ತಾಯಿ
ಅಮೆರಿಕದ ಟೆಕ್ಸಾಸ್‌ನಲ್ಲಿ ನೆಲೆಸಿದ್ದ ಹುಡುಗ 8 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ. ಈತನ ಹೆಸರು ರೂಡಿ ಫರಿಯಾಸ್, 17 ವರ್ಷ. ಆತನ ತಾಯಿಯೇ (Mother) ಈ ಬಗ್ಗೆ ದೂರು ನೀಡಿದ್ದಳು. ರೂಡಿ 2015ರಲ್ಲಿ ಈಶಾನ್ಯ ಹೂಸ್ಟನ್‌ನಲ್ಲಿರುವ ತನ್ನ ಕುಟುಂಬದ ಮನೆಯ ಬಳಿ ತನ್ನ ಎರಡು ನಾಯಿಗಳನ್ನು ವಾಕಿಂಗ್ ಕರೆದೊಯ್ದ ಸಂದರ್ಭ ನಾಪತ್ತೆಯಾಗಿದ್ದ. ಈ ಬಗ್ಗೆ ಪೊಲೀಸರಿಗೆ ದೂರು (Complaint) ನೀಡಿದ ನಂತರ ನಾಯಿಗಳು ಪತ್ತೆಯಾಗಿದ್ದವು. ಆದರೆ ರೂಡಿ ಪತ್ತೆಯಾಗಿರಲ್ಲಿಲ್ಲ. ಈಗ ಹಲವಾರು ವರ್ಷಗಳ ನಂತರ ರೂಡಿ ಪತ್ತೆಯಾಗಿದ್ದು, ಆತನಿಗೆ 25 ವರ್ಷವಯಸ್ಸಾಗಿದೆ. ಆತನ ತಾಯಿಯೇ  ತನ್ನ ಕಾಮಾಸಕ್ತಿ (Sexual desire) ತೀರಿಸಿಕೊಳ್ಳಲು ಈತನನ್ನು ಬಂಧಿಸಿಟ್ಟಿದ್ದಳು ಎಂಬುದು ಬಯಲಾಗಿದೆ. 

Tap to resize

Latest Videos

ಬಾಡಿಗೆಗಿದ್ದ ಯುವತಿ ಜೊತೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗಂಡ, ಹಿಗ್ಗಾಮುಗ್ಗಾ ಹೊಡೆದ್ಲು ಹೆಂಡ್ತಿ!

ಪತಿ ಮೃತಪಟ್ಟ ಬಳಿಕ ಮಹಿಳೆ ತನ್ನ ಮಗನನ್ನು ಹಾಸಿಗೆಯಲ್ಲಿ ಗಂಡನ (Husband) ಪಾತ್ರ ನಿರ್ವಹಿಸುವಂತೆ ಒತ್ತಾಯಿಸುತ್ತಿದ್ದಳು ಎಂದು ರೂಡಿ ಹೇಳಿದ್ದಾನೆ. ಚರ್ಚ್‌ನ ಹೊರಗೆ ಪತ್ತೆಯಾಗಿರುವ ರೂಡಿ, ಒಂದು ವಾರದ ನಂತರ ತನ್ನ ತಾಯಿಯ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದನು. ಆಕೆಯ ತಾಯಿ, ಜೆನ್ನಿ ಸಂತಾನಾ, ಅವಳನ್ನು ಸುಮಾರು 8 ವರ್ಷಗಳ ಕಾಲ ಲೈಂಗಿಕ ಗುಲಾಮನಾಗಿ ಇಟ್ಟುಕೊಂಡಿದ್ದಳು ಎಂದು ತಿಳಿಸಿದ್ದಾನೆ.

ಹಾಸಿಗೆಯಲ್ಲಿ ಗಂಡನಾಗುವಂತೆ ಒತ್ತಾಯ, ಯಾರಿಗೂ ಹೇಳದಂತೆ ಬೆದರಿಕೆ
ರೂಡಿ 2015 ರಲ್ಲಿ ಈಶಾನ್ಯ ಹೂಸ್ಟನ್‌ನಲ್ಲಿರುವ ತನ್ನ ಕುಟುಂಬದ ಮನೆಯ ಬಳಿ ತನ್ನ ಎರಡು ನಾಯಿಗಳನ್ನು ವಾಕಿಂಗ್ ಮಾಡಿದ ನಂತರ ನಾಪತ್ತೆಯಾಗಿದ್ದನು. ವರದಿಯನ್ನು ಸಲ್ಲಿಸಿದ ನಂತರ, ಅವನ ನಾಯಿಗಳು ಕಂಡುಬಂದವು ಆದರೆ ರೂಡಿ ನಾಪತ್ತೆಯಾಗಿದ್ದರು. ರೂಡಿ ಪತ್ತೆಯಾದ ನಂತರ, ಅವನನ್ನು ವಿಚಾರಣೆಗೆ (Enquiry) ಒಳಪಡಿಸಲಾಗುತ್ತಿದೆ. ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಕ್ವಾನೆಲ್ ಎಕ್ಸ್, ರೂಡಿ ಅವರ ತಾಯಿ ಜೆನ್ನಿ ರೂಡಿಯನ್ನು ಹಾಸಿಗೆಯಲ್ಲಿ ತಂದೆಯಂತೆ ಇರಬೇಕೆಂದು ಕೇಳಿಕೊಂಡಿದ್ದಳು. ನನ್ನ ಗಂಡನಾಗಿ ಇರು ಎಂದು ಒತ್ತಾಯಿಸಿದ್ದಳು. ಅಷ್ಟೇ ಅಲ್ಲ ಯಾರಿಗೂ ಏನನ್ನೂ ಹೇಳದಂತೆ ಬೆದರಿಕೆ ಹಾಕುತ್ತಿದ್ದಳು. ಪೊಲೀಸರಿಗೆ ಏನಾದರೂ ಹೇಳಿದರೆ ತೊಂದರೆಯಾಗುತ್ತದೆ ಎಂದು ಬೆದರಿಕೆ ಹಾಕಿದ್ದಳು. 

ಎರಡು ಮಕ್ಕಳ ತಾಯಿಗೆ ಮೂರು ಮಕ್ಕಳ ತಂದೆ ಮೇಲೆ ಪ್ರೀತಿ! ಪತಿಗೆ ಗೊತ್ತಾದ್ಮೇಲೆ?

ರೂಡಿ ಪತ್ತೆಯಾದಾಗ, ಹೂಸ್ಟನ್ ಪೊಲೀಸರು ಕ್ವಾನೆಲ್ ಎಕ್ಸ್ ಅವರ ಉಪಸ್ಥಿತಿಯಲ್ಲಿ ತಾಯಿ ಜೆನ್ನಿ ಮತ್ತು ರೂಡಿಯನ್ನು ಮುಖಾಮುಖಿಯಾಗಿ ವಿಚಾರಣೆ ನಡೆಸಿದರು. ನಂತರ ಘಟನೆಯ ಸತ್ಯಾಸತ್ಯತೆ ತಿಳಿದು ಪೊಲೀಸರು ತಾಯಿಯನ್ನು ವಶಕ್ಕೆ ತೆಗೆದುಕೊಂಡರು. ರೂಡಿಯ ತಾಯಿ ಬಾಲಕನನ್ನು ಎಂಟು ವರ್ಷಗಳ ಕಾಲ ಸುಳ್ಳು ಹೆಸರುಗಳನ್ನು ಬಳಸಿ ಬಚ್ಚಿಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಮಗು ರೂಡಿ ಇನ್ನೂ ಕಾಣೆಯಾಗಿದೆ ಎಂದು ಪೊಲೀಸರನ್ನು ವಂಚಿಸುತ್ತಲೇ ಇದ್ದಳು. ಇದೀಗ ಮಹಿಳೆಯನ್ನು ಲೈಂಗಿಕ ದೌರ್ಜನ್ಯ ಮತ್ತು ಅಪಹರಣದ ಆರೋಪದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ, ಪೊಲೀಸರು ರೂಡಿಗೆ ಕೌನ್ಸೆಲಿಂಗ್ ಮಾಡುತ್ತಿದ್ದಾರೆ. 

ಸಂಬಂಧಗಳನ್ನು ನಂಬುವುದು ಹೇಗೆ?
ಅಮ್ಮ ಎಂದರೆ ಮಕ್ಕಳ ಪಾಲಿನ ದೇವರು. ಆದರೆ ಈ ಮಹಿಳೆ ಮಾತ್ರ ಎಲ್ಲಾ ತಾಯಂದಿರು ಮುಜುಗರ ಪಟ್ಟುಕೊಳ್ಳುವಂಥಾ ಕೆಲಸ ಮಾಡಿದ್ದಾನೆ. 8 ವರ್ಷಗಳ ಕಾಲ ಮನೆಯೊಳಗೆ ಲೈಂಗಿಕ ಗುಲಾಮನಾಗಿ ಉಳಿದ ಆ ಹದಿಹರೆಯದ ವ್ಯಕ್ತಿಯ ಮಾನಸಿಕ ಸ್ಥಿತಿ ಹದಗೆಟ್ಟಿದೆ ಎಂದು ಹೇಳಲಾಗುತ್ತಿದೆ. ಪ್ರತಿ ಬಾರಿಯೂ ತನ್ನ ತಾಯಿಯ ಕೈಯಿಂದ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದ ಬಾಲಕ ಸಂಬಂಧಗಳಲ್ಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾನೆ.

click me!