
ನವದೆಹಲಿ (ಮಾ.25): ಆತ ಅಂತಿಂಥ ವ್ಯಕ್ತಿಯಲ್ಲ. ಅಮೆರಿಕದಲ್ಲಿ ರಿಪ್ಲಿಂಗ್ ಅನ್ನೋ ವರ್ಕ್‌ಫೋರ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ವ್ಯವಹಾರ ನಡೆಸುವ ಕಂಪನಿಯ ಮಾಲೀಕ. ಹೆಚ್ಚೂ ಕಡಿಮೆ ಎಂದರೆ ಕಂಪನಿಯಮೌಲ್ಯವೇ 86 ಸಾವಿರ ಕೋಟಿ ರೂಪಾಯಿ. ಈ ರಿಪ್ಲಿಂಗ್ ಕಂಪನಿಯ ಸ್ಥಾಪಕ ಪ್ರಸನ್ನ ಶಂಕರ್ ಭಾರತದ ತಮಿಳುನಾಡು ಮೂಲದವರು. ಪ್ರಸನ್ನ 10 ವರ್ಷದ ಹಿಂದೆ ದಿವ್ಯಶ್ರೀ ಎನ್ನುವ ಹುಡುಗಿಯನ್ನು ಮದುವೆಯಾಗಿದ್ದರು. ಈ ದಾಂಪತ್ಯದ ಸಾಕ್ಷಿಯಾಗಿ 6 ವರ್ಷದ ಸುಂದರವಾದ ಮಗು ಕೂಡ ಇದೆ. ಈಗ ಇವರಿಬ್ಬರ ನಡುವಿನ ಸಂಬಂಧ ಮುರಿದುಬಿದ್ದುದ್ದು ಮಾತ್ರವಲ್ಲ ಪ್ರಸನ್ನ ಶಂಕರ್ ಮಾಡಿರುವ ಗಂಭೀರ ಆರೋಪಗಳಿಂದ ಮಾಧ್ಯಮಗಳನ್ನೂ ಸಾಕಷ್ಟು ಚರ್ಚೆಯಾಗುತ್ತಿದೆ. ಸಖತ್ ಡಿಫರೆಂಟ್ ಆಗಿರುವ ಗಂಡ-ಹೆಂಡತಿಯ ಗಲಾಟೆ ಅಮೆರಿಕ, ಚೆನ್ನೈ ಅಂತೆಲ್ಲಾ ದಾಟಿ ಈಗ ಸಿಂಗಾಪುರದ ಮಾಧ್ಯಮಗಳಲ್ಲೂ ಸುದ್ದಿಯಾಗಿದೆ.
ರಿಪ್ಲಿಂಗ್ 10 ಬಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯ ಹೊಂದಿರುವ ಕಂಪನಿ. ಇದಕ್ಕೆ ಪ್ರಸನ್ನ ಶಂಕರ್ ಸಹ ಸಂಸ್ಥಾಪಕ. ಇತ್ತೀಚೆಗೆ ಸೋಶಿಯಲ್ ಮೀಡಿಯಾ ವೇದಿಕೆ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡುವವರೆಗೂ ಇವರಿಬ್ಬರ ಸಂಸಾರದ ಬಗ್ಗೆ ಸಣ್ಣ ಸುದ್ದಿಯೂ ಆಚೆ ಬಂದಿರಲಿಲ್ಲ. ನನ್ನ ಹೆಂಡತಿ ನನಗೆ ದ್ರೋಹ ಮಾಡಿ ಬೇರೊಬ್ಬನ ಮೋಹಕ್ಕೆ ಸಿಲುಕಿದ್ದಾಳೆ ಎಂದು ಆರೋಪ ಮಾಡಿದ್ದು, ಇದಕ್ಕೆ ದಾಖಲೆಯನ್ನೂ ಬಿಡುಗಡೆ ಮಾಡಿದ್ದಾರೆ.
ಅಮೆರಿಕದಲ್ಲಿ ಯಶಸ್ವಿ ಉದ್ಯಮಿ ಆಗಿರುವ ಪ್ರಸನ್ನ ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲಿ. ಈ ನಡುವೆ ತಮ್ಮ ಪತ್ನಿ ದಿವ್ಯಶ್ರೀ, ಅನೂಪ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ. ಇದಕ್ಕೆ ಅವರ ವಾಟ್ಸಾಪ್ ಚಾಟ್‌ಗಳನ್ನೂ ಬಹಿರಂಗ ಮಾಡಿದ್ದಾರೆ. ಚಾಟ್‌ನಲ್ಲಿ ದಿವ್ಯಶ್ರಿ, ಅನೂಪ್ ಬಳಿ ಮನೆಗೆ ಬರುವಾಗ ಎಕ್ಸ್‌ಎಲ್ ಸೈಜ್‌ನ ಕಾಂಡೋಮ್ ತರುವಂತೆಯೂ ಕೇಳಿಕೊಂಡಿದ್ದಾರೆ. ಇದರ ಸ್ಕ್ರೀನ್‌ಶಾಟ್‌ಅನ್ನೂ ಪ್ರಸನ್ನ ಹಂಚಿಕೊಂಡಿದ್ದಾರೆ. ಇನ್ನು ಇವರಿಬ್ಬರ ಅಕ್ರಮ ಸಂಬಂಧದ ಬಗ್ಗೆ ಮೊದಲು ಗೊತ್ತಾಗಿದ್ದು ಅನೂಪ್ ಅವರ ಪತ್ನಿಗೆ. ಆಕೆಯೇ ಈ ಬಗ್ಗೆ ಪ್ರಸ್ನನ್ನಗೆ ಮಾಹಿತಿ ನೀಡಿದ್ದರು. ಇವರಿಬ್ಬರ ಮದುವೆ ಚೆನ್ನೈನಲ್ಲಿ ನಡೆದಿದ್ದ ಕಾರಣಕ್ಕೆ ದಿವ್ಯಶ್ರೀಯಿಂದ ವಿಚ್ಛೇದನ ಪಡೆಯಲು ಪ್ರಸನ್ನ ಭಾರತದ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಸುಳ್ಳು ಕೇಸ್ ದಾಖಲಿಸಿದ ಪತ್ನಿ: ಒಂದೆಡೆ ಹೆಂಡತಿಯ ಅಕ್ರಮ ಸಂಬಂಧ ಗೊತ್ತಾದ ಬಳಿಕ ಪ್ರಸನ್ನ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರೆ, ಇನ್ನೊಂದೆಡೆ ದಿವ್ಯಶ್ರಿ ಪತಿಯ ವಿರುದ್ಧ ಸಿಂಗಾಪುರ ಕೋರ್ಟ್‌ನಲ್ಲಿ ಕಿರುಕುಳದ ಕೇಸ್ ದಾಖಲಿಸಿದ್ದಾರ. ನನ್ನ ಅಶ್ಲೀಲ ಫೋಟೋಗಳನ್ನು ಪ್ರಸನ್ನ ವೈರಲ್ ಮಾಡಿದ್ದಾರೆ ಎಂದಿದ್ದರು. ಇದನ್ನು ತನಿಖೆ ಮಾಡಿದ ಸಿಂಗಾಪುರದ ಅಧಿಕಾರಿಗಳು ಪ್ರಸನ್ನಗೆ ಕ್ಲೀನ್ ಚಿಟ್ ನೀಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ದಿವ್ಯಶ್ರೀ, ಪ್ರಸನ್ನ ವಿರುದ್ಧ ಅಮೆರಿಕದ ಕೋರ್ಟ್‌ನಲ್ಲಿ ವಿಚ್ಛೇದನದ ಕೇಸ್ ಹಾಕಿದ್ದಾರೆ. ನನ್ನ ಮಗನನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಅಂತಾರಾಷ್ಟ್ರೀಯ ಕೋರ್ಟ್ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ಕೋರ್ಟ್, ಮಗನನ್ನು ಪತಿ ಪ್ರಸನ್ನ ಅವರ ವಶಕ್ಕೆ ನೀಡಿದೆ.
ಕಟ್ಟಕಡೆಗೆ ಇಬ್ಬರ ನಡುವೆ ರಾಜೀ ಸಂಧಾನ ನಡೆದಿದ್ದು, ಪತ್ನಿಗೆ 9 ಕೋಟಿ ಪರಿಹಾರ ನೀಡಲು ಒಪ್ಪಿಕೊಂಡಿದ್ದಾರ. ಇಬ್ಬರೂ ಕೂಡ ಮಗನನ್ನು ತಲಾ 50 ದಿನಗಳ ಕಾಲ ಇರಿಸಿಕೊಳ್ಳುವಂತೆ ಒಪ್ಪಂದ ಮಾಡಿಕೊಂಡಿದ್ದಾರೆ. ಒಪ್ಪಂದದ ಪ್ರಕಾರ ದಿವ್ಯಶ್ರೀ ಮಗನ ಪಾಸ್‌ಪೋರ್ಟ್‌ಅನ್ನು ಲಾಕರ್‌ನಲ್ಲಿ ಡೆಪಾಸಿಟ್ ಇಡಬೇಕು. ಆದರೆ, ಇದಕ್ಕೆ ಒಪ್ಪದ ಆಕೆ ಅಮೆರಿಕಕ್ಕೆ ತೆರಳಿ ವಿಚ್ಛೇದನ ಕೇಸ್ ಹಾಕಿದ್ದು,ಪ್ರಸನ್ನ ವಿರುದ್ಧ ಭಾರತದಲ್ಲೂ ಸುಳ್ಳು ಕೇಸ್ ಹಾಕಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಪ್ಪು ಪರಿಚಯಿಸಿದ 'ಡಿವೋರ್ಸ್ ಲಾಯರ್' ಕನಸಿನ ಹುಡುಗ ಹೀಗಿರ್ಬೇಕಂತೆ! ನಟಿಯ ಮಾತಿಗೆ ಫ್ಯಾನ್ಸ್ ಫುಲ್ ಖುಷ್...
ಚೆನ್ನೈ ಪೊಲೀಸರಿಂಧಲೂ ಕಿರುಕುಳ: ಪ್ರಸನ್ನ ಶಂಕರ್‌ಗೆ ಇನ್ನೂ ಕೂಡ ಚೆನ್ನೈನಲ್ಲಿ ಸ್ನೇಹಿತರಿದ್ದಾರೆ. ಪ್ರಸನ್ನ ಅವರ ಸ್ನೇಹಿತ ಗೋಕುಲ್ ವಿರುದ್ಧ ಚೆನ್ನೈ ಪೊಲೀಸರಿಗೆ ದೂರು ನೀಡಲಾಗಿದೆ. ಇನ್ನೊಂದೆಡೆ ಭಾರತಕ್ಕೆ ಬಂದಿದ್ದ ಪ್ರಸನ್ನ ಶಂಕರ್ ರಸಹ್ಯ ಸ್ಥಳಕ್ಕೆ ತೆರಳಿ ಅಲ್ಲಿಂದಲೇ ವಿಡಿಯೋ ಮಾಡಿದ್ದಾರೆ. ನಾನು, ನನ್ನ ಮಗ ಸೇಫ್ ಆಗಿದ್ದೇವೆ. ನನಗೆ ಕಿರುಕುಳ ಕೊಡಬೇಡಿ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇನೆ ಎಂದ ಪ್ರಸನ್ನ ಹೇಳಿದ್ದಾರೆ. ಪತ್ನಿಯ ಕಿರುಕುಳದ ಬಗಗ್ಎ ಅವರು ಮಾತನಾಡಿದ್ದು ನಮ್ಮ ಇಡೀ ಕುಟುಂಬ ಸದ್ಯ ತಮಿಳುನಾಡಿನಿಂದ ಹೊರಗೆ ಇದ್ದೇವೆ ಎಂದಿದ್ದಾರೆ. ಪ್ರಸನ್ನ ಅವರ ಪರದಾಟ ಹಾಗೂ ಹೋರಾಟಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಚೆನ್ನೈ ಪೊಲೀಸರು ಪ್ರಸನ್ನ ಸ್ನೇಹಿತ ಗೋಕುಲ್ ಅವರನ್ನು ಠಾಣೆಯಿಂದ ಬಿಟ್ಟು ಕಳುಹಿಸಿದ್ದಾರೆ. 'ಯಾವುದೇ ಬಂಧನಗಳಿಲ್ಲ ಮತ್ತು ಅವರ ವಿರುದ್ಧದ ಆರೋಪಗಳ ತನಿಖೆ ಮುಂದುವರಿಯುತ್ತದೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ. ಎಂದು ಪ್ರಸನ್ನ ಶಂಕರ್ ತಿಳಿಸಿದ್ದಾರೆ. ಅವರ ತಂದೆ ಮನೆಗೆ ಮರಳುತ್ತಿದ್ದಾರೆ ಮತ್ತು ಆರೋಪಗಳಿಲ್ಲದೆ ಬಂಧಿಸಲ್ಪಟ್ಟಿದ್ದ ಅವರ ಸ್ನೇಹಿತ ಗೋಕುಲ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ನಿವೇದಿತಾ ಗೌಡ ಈಗ 'ಮುದ್ದು ರಾಕ್ಷಸಿ'.. ಆ ಖುಷಿಯಲ್ಲಿ ನೋಡಿ ಬಿನ್ನಾಣಗಿತ್ತಿ ಫೋಟೋಸ್!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.