ಅರೆರೆ... ಇದೇನಿದು? ಬೋಟ್ಮ್ಯಾನ್ ಜೊತೆ ಮದುಮಗನ ಪ್ರೀ ವೆಡ್ಡಿಂಗ್ ಶೂಟ್ ನಡೀತಿದೆ... ವೇಟ್.. ವೇಟ್.. ಅಸಲಿಯತ್ತು ಏನೆಂದು ಇಲ್ಲಿದೆ ನೋಡಿ...
ಕೆಲ ದಶಕಗಳ ಹಿಂದೆ ಮದುವೆಯ ದಿನ ಫೋಟೋ ತೆಗೆಸಿಕೊಂಡರೆ ಅದೇ ದೊಡ್ಡ ಸಂಭ್ರಮವಾಗಿತ್ತು. ಆದರೆ ಬರಬರುತ್ತಾ ಮದುವೆಯ ಬಳಿಕವೂ ಒಂದಿಷ್ಟು ಫೋಟೋಶೂಟ್, ವಿಡಿಯೋ ಶೂಟ್ಗಳು ನಡೆದವು. ತಮಗೆ ಬೇಕಾದ ರೀತಿಯಲ್ಲಿ, ಬೇಕಾದ ಜಾಗವನ್ನು ಆಯ್ಕೆ ಮಾಡಿಕೊಂಡು ವಿವಿಧ ಭಂಗಿಗಳಲ್ಲಿ ಫೋಟೋ, ವಿಡಿಯೋಶೂಟ್ ಮಾಡಿಸಿಕೊಂಡರು. ಆದರೆ ಕಾಲ ಕ್ರಮೇಣ ಈ ಫೋಟೋ- ವಿಡಿಯೋ ಹುಚ್ಚು ಯಾರ ಮಟ್ಟಿಗೆ ಬೆಳೆಯಿತು ಎಂದರೆ ಈಗಂತೂ ಮದುವೆಗೂ ಮೊದಲಿನ ಫೋಟೋಶೂಟ್ (ಪ್ರೀ-ವೆಡ್ಡಿಂಗ್ ಫೋಟೋಶೂಟ್) ಮಾಮೂಲಾಗಿ ಬಿಟ್ಟಿದೆ. ಯಾರೂ ಮಾಡದ ರೀತಿಯಲ್ಲಿ ತಾವು ಫೋಟೋಶೂಟ್ ಮಾಡಿಸಬೇಕು ಎಂದು ಎಷ್ಟೋ ಭಾವಿ ದಂಪತಿ ಸಾಹಸಮಯ ಕೃತ್ಯಕ್ಕೂ ಕೈಹಾಕುವುದು ಇದೆ. ನದಿಯ ಮಧ್ಯೆ, ಬೆಟ್ಟದ ತುದಿಯಲ್ಲಿ... ಹೀಗೆ ಏನೇನೋ ಫೋಟೋಶೂಟ್ ಮಾಡಿಸಲು ಹೋಗಿ ಎಡವಟ್ಟಾಗಿ ಸಾವನ್ನಪ್ಪಿರುವ ಉದಾಹರಣೆಗಳೂ ಇವೆ.
ಅದೇನೇ ಇದ್ದರೂ ಮದುವೆಗೆ ಮುನ್ನ ಫೋಟೋಶೂಟ್ ಅಂತೂ ಬೇಕೇ ಬೇಕು. ಇದೇ ಕಾರಣಕ್ಕಾಗಿಯೇ ಕೆಲವೊಂದು ಜಾಗಗಳನ್ನು ಆಯ್ಕೆ ಮಾಡಿಕೊಳ್ಳುವುದು ಇದೆ. ಅದರಲ್ಲಿಯೂ ಹೆಚ್ಚಾಗಿ ಸಮುದ್ರ ತೀರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಭಾವಿ ದಂಪತಿ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್ ಆಗಿದೆ. ಇದರಲ್ಲಿ ಬೋಟ್ಮ್ಯಾನ್ ಮತ್ತು ಮದುಮಗಳ ಪ್ರೀ ವೆಡ್ಡಿಂಗ್ ಶೂಟ್ ತಯಾರಿ ನಡೆಸಿದ್ದಾರೆ. ನಿಲ್ಲಿ... ನಿಲ್ಲಿ... ಹಾಗಂತ ತಪ್ಪು ತಿಳಿದುಕೊಳ್ಳುವ ಅಗತ್ಯವಿಲ್ಲ. ಇವರೇನೂ ಮದ್ವೆಯಾಗ್ತಿಲ್ಲ. ಈಗ ಸಲಿಂಗಕಾಮಿಗಳ ಮದುವೆ ಸದ್ದು ಮಾಡ್ತಿರೋ ನಡುವೆಯೇ ಈ ಫೋಟೋ ನೋಡಿ ನೀವು ಹಾಗೆಲ್ಲಾ ಅಂದುಕೊಳ್ಳಬೇಡಿ ಮತ್ತೆ.
ಬಾಳೆ ಎಲೆ ಮುಚ್ಚಿಕೊಂಡು ಪ್ರೀ ವೆಡ್ಡಿಂಗ್ ಶೂಟ್! ಮದ್ವೆಯಾದ್ಮೇಲಿನ ಫೋಟೋ ನೋಡಲು ತುದಿಗಾಲಲ್ಲಿ ನಿಂತ ನೆಟ್ಟಿಗರು
ಅಷ್ಟಕ್ಕೂ ಇಲ್ಲಿ ಬೋಟ್ಮ್ಯಾನ್, ಮದುಮಗನಿಗೆ, ಮದುಮಗಳನ್ನು ಹೇಗೆ ಹಿಡಿದುಕೊಳ್ಳಬೇಕು, ಯಾವ ರೀತಿಯಲ್ಲಿ ಪೋಸ್ ಕೊಡಬೇಕು ಎನ್ನುವುದನ್ನು ಹೇಳಿಕೊಡುತ್ತಿದ್ದಾನಷ್ಟೇ. ಇದರ ಅರ್ಥ ಇಲ್ಲಿ ಬೋಟ್ಮ್ಯಾನ್ ಕೋರಿಯೋಗ್ರಫಿ ಮಾಡುತ್ತಿದ್ದಾನೆ. ಪ್ರತಿನಿತ್ಯವೂ ಇಲ್ಲಿಗೆ ಬರುವವರನ್ನು ನೋಡಿ ನೋಡಿ, ಮದುಮಕ್ಕಳು ಹೇಗೆಲ್ಲಾ ಪೋಸ್ ಕೊಡಬೇಕು ಎನ್ನುವುದನ್ನು ನೋಡಿ ಕಲಿತಿದ್ದಾನೆ ಈತ. ಇಂದು ಪ್ರೀ ವೆಡ್ಡಿಂಗ್ ಶೂಟ್ಗೆ ಅಂತಲೇ ಮದುವೆಯಷ್ಟೇ ಖರ್ಚು ಮಾಡುವುದು ಇದೆ. ಇವರಿಗೆ ಕೋರಿಯೋಗ್ರಫಿ ಮಾಡುವವರಿಗೂ ಸಕತ್ ಡಿಮಾಂಡ್ ಇದೆ. ಆದರೆ ಇಲ್ಲಿ ಬೋಟ್ಮ್ಯಾನೇ ತರಬೇತಿ ನೀಡುತ್ತಿದ್ದು, ಅದರ ವಿಡಿಯೋ ಮಾಡಿ ಶೇರ್ ಮಾಡಲಾಗಿದೆ.
ಇದೀಗ ಸಕತ್ ವೈರಲ್ ಆಗುತ್ತಿದ್ದು, ಬೋಟ್ಮ್ಯಾನ್ನ ಕೋರಿಯೋಗ್ರಫಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಯಾವ ತರಬೇತುದಾರರಿಗೂ ಕಡಿಮೆ ಇಲ್ಲದಂತೆ ಬೋಟ್ಮ್ಯಾನ್ ತರಬೇತಿ ನೀಡುತ್ತಿರುವುದಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಇದೊಂದು ರೀತಿಯಲ್ಲಿ ಸ್ಟಾರ್ಟ್ಅಪ್ ಎಂದೇ ಹೇಳುತ್ತಿದ್ದಾರೆ. ಕೋರಿಯೋಗ್ರಫಿ ತರಬೇತಿ ಪಡೆದು ಅದಕ್ಕೆ ಲಕ್ಷಗಟ್ಟಲೆ ಫೀಸ್ ಕೊಟ್ಟು, ಬಳಿಕ ಮದುಮಕ್ಕಳಿಂದ ಲಕ್ಷ ಲಕ್ಷ ಪಡೆಯುವವರು ಮಾತ್ರ ಸುಸ್ತಾಗೋದು ಗ್ಯಾರೆಂಟಿ! ಇಲ್ಲಿದೆ ನೋಡಿ ವೈರಲ್ ವಿಡಿಯೋ.
ಇದು ಕೋಳಿಯಲ್ಲ, ಕೊಕ್ಕೊಕ್ಕೋ ಎನ್ನೋ ಗಿಳಿ... ನಿಜಾರೀ... ಆನ್ಲೈನ್ನಲ್ಲೂ ಲಭ್ಯ! ಇಲ್ಲೇ ಟೆಸ್ಟ್ ಮಾಡಿ ನೋಡಿ...