ರಶ್ಮಿಕಾ-ವಿಜಯ್ ದೇವರಕೊಂಡ ಮದ್ವೆಯಾದ್ರೆ ಡಿವೋರ್ಸ್ ಗ್ಯಾರಂಟಿ; ಶಾಕಿಂಗ್​ ಹೇಳಿಕೆ ಕೊಟ್ಟ ಸೆಲೆಬ್ರಿಟಿ ಜ್ಯೋತಿಷಿ!

Published : Dec 29, 2023, 09:43 AM ISTUpdated : Dec 30, 2023, 11:01 AM IST
 ರಶ್ಮಿಕಾ-ವಿಜಯ್ ದೇವರಕೊಂಡ ಮದ್ವೆಯಾದ್ರೆ ಡಿವೋರ್ಸ್ ಗ್ಯಾರಂಟಿ; ಶಾಕಿಂಗ್​ ಹೇಳಿಕೆ ಕೊಟ್ಟ ಸೆಲೆಬ್ರಿಟಿ ಜ್ಯೋತಿಷಿ!

ಸಾರಾಂಶ

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ್​ ದೇವರಕೊಂಡ ಪರಸ್ಪರ ಪ್ರೀತಿಸುತ್ತಿದ್ದಾರೆ ಅನ್ನೋ ವಿಚಾರ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಸದ್ಯದಲ್ಲೇ ಮದ್ವೆಯಾಗ್ತಾರೆ ಅನ್ನೋ ಮಾತು ಸಹ ಇದೆ. ಈ ಮಧ್ಯೆ ಸೆಲೆಬ್ರಿಟಿ ಸ್ವಾಮೀಜಿ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ್​ ದೇವರಕೊಂಡ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಸೂಪರ್‌ ಹಿಟ್ ಸಿನಿಮಾ 'ಅನಿಮಲ್‌'ನ ಹೈದ್ರಾಬಾದ್‌ ಪ್ರಮೋಶನ್ ಕಾರ್ಯಕ್ರಮದಲ್ಲಿಯೂ ರಶ್ಮಿಕಾ ಲೈವ್ ಆಗಿ ವಿಜಯ್‌ ಆಗಿ ಕಾಲ್ ಮಾಡಿ ಬ್ಲಶ್ ಆಗಿ ಈ ಹಿಂಟ್ ಕೊಟ್ಟಿದ್ದರು. ಇಬ್ಬರು ಲಿವ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದಾರೆ ಎಂಬ ಮಾತು ಸಹ ಇದೆ. ಆದರೆ, ಈ ಇಬ್ಬರು ನಾವಿಬ್ಬರು ಬರಿ ಫ್ರೆಂಡ್ಸ್​ ಅಷ್ಟೇ ಎಂದು ಹೇಳುವ ಮೂಲಕ ತಮ್ಮ ಬಗೆಗಿನ ಸುದ್ದಿಗಳನ್ನು ಅಲ್ಲಗಳೆಯುತ್ತಿರುತ್ತಾರೆ. ಗೀತ ಗೋವಿಂದಂ, ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ರಶ್ಮಿಕಾ-ವಿಜಯ್‌ ಜೊತೆಯಾಗಿ ನಟಿಸಿದ್ದಾರೆ. ಅದರಲ್ಲೂ ಗೀತಗೋವಿಂದಂ ಚಿತ್ರದಲ್ಲಿ ಇಬ್ಬರ ಲಿಪ್‌ಲಾಕ್‌ ಸೀನ್ ಹೆಚ್ಚು ವೈರಲ್ ಆಗಿತ್ತು.

ಆದ್ರೆ ಹೊಸ ವಿಚಾರ ಏನಪ್ಪಾ ಅಂದ್ರೆ, ಸದ್ಯ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸೆಲೆಬ್ರಿಟಿ ಜ್ಯೋತಿಷಿ ಎಂದೇ ಖ್ಯಾತಿ ಪಡೆದಿರುವಂತಹ ವೇಣು ಸ್ವಾಮಿ ಈ ಜೋಡಿಯ ಬಗ್ಗೆ ಶಾಕಿಂಗ್ ಹೇಳಿಕೆಯನ್ನು ಕೊಟ್ಟಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ವೇಣು ಸ್ವಾಮಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದು, ಈ ವಿಚಾರ ವೈರಲ್ ಆಗಿದೆ. 

ಸೀರೆಯುಟ್ಟು ಮದುಮಗಳ ಲುಕ್​ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ: ವಿಜಯ ದೇವರಕೊಂಡ ಜೊತೆಗೆ ಮದ್ವೆ ಫಿಕ್ಸ್‌?

ವಿವಾಹವಾದ ಬಳಿಕ ಇಬ್ಬರೂ ದೂರವಾಗುತ್ತಾರೆ ಎಂದು ಭವಿಷ್ಯ ನುಡಿದ ಸ್ವಾಮೀಜಿ
ಇತ್ತೀಚಿಗೆ ಖಾಸಗಿ ಚಾನೆಲ್​ ಒಂದರ ಸಂದರ್ಶನದಲ್ಲಿ ಮಾತನಾಡಿದ ವೇಣು ಸ್ವಾಮಿ, 'ರಶ್ಮಿಕಾ ಹಾಗೂ ವಿಜಯ್ ದೇವರೊಂಡ ಪರಸ್ಪರ ಪ್ರೀತಿಯಲ್ಲಿರುವುದು ಗುಟ್ಟಾಗಿರುವ ವಿಚಾರ ಏನಲ್ಲ. ಅವರಿಬ್ಬರೂ ಮದುವೆಯಾಗಲಿದ್ದಾರೆ. ಆದರೆ ವಿವಾಹವಾದ ಬಳಿಕ ಇಬ್ಬರೂ ದೂರಾಗಲಿದ್ದಾರೆ ಎಂಬುದು ಖಚಿತ. ವಿಜಯ್ ದೇವರಕೊಂಡ ಜೊತೆ ಮದುವೆಯಾದರೆ ವಿಚ್ಛೇದನ ಆಗಲಿದೆ ಎಂದು ನಾನು ನೇರವಾಗಿ ರಶ್ಮಿಕಾ ಮಂದಣ್ಣ ಅವರಿಗೆ ಹೇಳಿದ್ದೇನೆ. ಇದೇ ಕಾರಣಕ್ಕೆ ಅವರು ನನ್ನೊಂದಿಗೆ ಮಾತನಾಡುವುದು ಬಿಟ್ಟು, ನನ್ನ ಸಂಪರ್ಕ ಕಡಿದುಕೊಂಡಿದ್ದಾರೆ' ಎಂದು ತಿಳಿಸಿದ್ದಾರೆ.

'ರಶ್ಮಿಕಾ ಮಂದಣ್ಣ ಹೀರೋಯಿನ್ ಆಗಿರಬಹುದು ಆದರೆ ನನಗೆ ಕೇವಲ ಕ್ಲೈಂಟ್ ಅಷ್ಟೆ. ಅವರ ಜನಪ್ರಿಯತೆ ನೋಡಿ ನಾನು ಭವಿಷ್ಯ ಹೇಳುವುದಿಲ್ಲ, ಅವರ ಗ್ರಹಗತಿ ನೋಡಿ ಭವಿಷ್ಯ ಹೇಳುತ್ತೇನೆ. ನಾನು ಹೇಳಿದ ಭವಿಷ್ಯ ಅವರಿಗೆ ಇಷ್ಟವಾಗಲ್ಲಿಲ್ಲ' ಎಂದು ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದಾರೆ. ಇವರು ಭವಿಷ್ಯ ನುಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ನಡುವೆ ಪರ-ವಿರೋಧದ ಚರ್ಚೆ ಜೋರಾಗಿದೆ.

ಬೇರೊಬ್ಬಳು ಬಾಲಿವುಡ್ ನಾಯಕಿಗೆ ಕೊಕ್ ಕೊಡಿಸಿ ಅನಿಮಲ್ 'ಗೀತಾಂಜಲಿ'ಯಾದ್ರಾ ರಶ್ಮಿಕಾ ಮಂದಣ್ಣ!

ಟಾಲಿವುಡ್ ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಭವಿಷ್ಯ ನುಡಿಯೋ ವೇಣು ಸ್ವಾಮಿ
ಚಿತ್ರರಂಗದ ವ್ಯಕ್ತಿಗಳಿಗೆ ಜಾತಕ ವಿಶ್ಲೇಷಣೆಯನ್ನು ನೀಡುವ ಜ್ಯೋತಿಷಿ ವೇಣು ಸ್ವಾಮಿ ಹಲವಾರು ಬಾರಿ ಹೀಗೆ ಭವಿಷ್ಯವಾಣಿಗಳನ್ನು ಹೇಳಿ ಜನರ ಗಮನ ಸೆಳೆದಿದ್ದಾರೆ. ವಿಶೇಷವಾಗಿ ಟಾಲಿವುಡ್ ಸೆಲೆಬ್ರಿಟಿಗಳಿಗೆ ಸಂಬಂಧಿಸಿದಂತೆ  ಅವರ ಜ್ಯೋತಿಷ್ಯದ ಒಳನೋಟಗಳು ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ.

ರಶ್ಮಿಕಾ ಮಂದಣ್ಣ ಕನ್ನಡ 'ಕಿರಿಕ್‌ ಪಾರ್ಟಿ' ಸಿನಿಮಾದಿಂದ ಸಿನಿ ಜರ್ನಿ ಆರಂಭಿಸಿದ ನಟಿ. ಈ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾಗೆ ಎಂಗೇಜ್‌ಮೆಂಟ್‌ ಆಗಿತ್ತು. ನಂತರದ ದಿನಗಳಲ್ಲಿ ಕಾರಣಾಂತರಗಳಿಂದ ಇವರಿಬ್ಬರೂ ಬ್ರೇಕಪ್ ಮಾಡಿಕೊಂಡರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?