Trending : ಚಮತ್ಕಾರ..! ಕೊನೆಯವರೆಗೂ ಹೋರಾಟ ನಡೆಸಿ ಪತ್ನಿ ಬದುಕಿಸಿದ ಪತಿ..

By Suvarna NewsFirst Published Dec 28, 2023, 6:41 PM IST
Highlights

ನಮ್ಮ ಆಪ್ತರ ಉಸಿರಾಟ ನಿಂತಾಗ ಭೂಮಿ ಕುಸಿದ ಅನುಭವವಾಗುತ್ತದೆ. ಆ ಕ್ಷಣದಲ್ಲಿ ಏನು ಮಾಡ್ಬೇಕು ಗೊತ್ತಾಗೋದಿಲ್ಲ. ಆಂಬುಲೆನ್ಸ್ ಗೆ ಕರೆ ಮಾಡೋದನ್ನೂ ಅನೇಕರು ಮರೆಯುತ್ತಾರೆ. ಆದ್ರೆ ಈ ಪತಿ, ಪತ್ನಿ ಜೀವನದಲ್ಲಿ ಹಿರೋ ಆಗಿದ್ದಾನೆ.
 

ಆಯಸ್ಸಿದ್ರೆ ಯಮ ಕೂಡ ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಅದು ಇನ್ನೊಮ್ಮೆ ಸಾಭೀತಾಗಿದೆ. ಈಗೀಗ ಸಣ್ಣ ವಯಸ್ಸಿನಲ್ಲೇ ಜನರಿಗೆ ಕಾರ್ಡಿಯಾ ಅರೆಸ್ಟ್ ಕಾಣಿಸಿಕೊಳ್ತಿದೆ. ಚಿಕ್ಕ ವಯಸ್ಸಿನಲ್ಲೇ ಜನರು ಸಾವನ್ನಪ್ಪುತ್ತಿದ್ದಾರೆ. ಹೃದಯಾಘಾತ ಸಂಭವಿಸಿದಾಗ ಮತ್ತೆ ಬದುಕಿ ಬರೋರು ಬಹಳ ಕಷ್ಟ. ನಮ್ಮವರು ಕಣ್ಣ ಮುಂದೆ ಸಾವನ್ನಪ್ಪೋದು ಕಾಣಿಸುವಾಗ ಏನು ಮಾಡ್ಬೇಕು ಎಂಬುದು ಗೊತ್ತಾಗೋದಿಲ್ಲ. ಆಘಾತಕ್ಕೊಳಗಾಗುವ ಜನರು ಮಾಡಬೇಕಾದ ಕೆಲಸವನ್ನೂ ಸರಿಯಾಗಿ ಮಾಡೋದಿಲ್ಲ. ಆದ್ರೆ ಈ ವ್ಯಕ್ತಿ ಟೆನ್ಷನ್ ಮಧ್ಯೆಯೂ ಬುದ್ಧಿವಂತಿಕೆ ಕೆಲಸ ಮಾಡಿದ್ದಾನೆ. ಯಮನ ಜೊತೆ ಹೋರಾಟ ನಡೆಸಿ ಪತ್ನಿಯನ್ನು ಬದುಕಿಸಿದ್ದಾನೆ. 

ಕಾರ್ಡಿಯಾ ಅರೆಸ್ಟ್ (Cardiac Arrest) ಗೆ ಒಳಗಾಗಿದ್ದ 32 ವರ್ಷದ ಪತ್ನಿಯನ್ನು ಬದುಕಿಸುವಲ್ಲಿ ಈತ ಯಶಸ್ವಿಯಾಗಿದ್ದಾನೆ. ಜೆನ್ನಾ ಗುಡ್‌ ಪತಿ ರಾಸ್ ಜೊತೆ ವಾಸವಾಗಿದ್ದಾಳೆ. ಆಕೆಗೆ ಮೂರು ತಿಂಗಳ ಮಗುವಿದೆ.  ರಾತ್ರಿ 3 ಗಂಟೆಗೆ ಇದ್ದಕ್ಕಿದ್ದಂತೆ ರಾಸ್ ತನ್ನ ಪತ್ನಿಯನ್ನು ನೋಡಿದ್ದಾನೆ. ಜೆನ್ನಾ ಉಸಿರಾಟ ನಡೆಸ್ತಿರಲಿಲ್ಲ. ಯಾವುದೇ ಪ್ರತಿಕ್ರಿಯೆ ನೀಡ್ತಿರಲಿಲ್ಲ. ತಕ್ಷಣ ಎಚ್ಚೆತ್ತ ರಾಸ್, ಸಿಪಿಆರ್ (CPR) ನೀಡಲು ಶುರು ಮಾಡಿದ್ದಾನೆ.  ರಾಸ್ ಅಲ್ಲಿಗೆ ಸುಮ್ಮನಾಗಲಿಲ್ಲ. 999ಗೆ ಕರೆ ಮಾಡಿದ್ದಾನೆ. ಕೆಲ ಸಮಯದಲ್ಲೇ ಮೂರು ಆಂಬ್ಯುಲೆನ್ಸ್‌ಗಳಲ್ಲಿ ಆರು ವೈದ್ಯಾಧಿಕಾರಿಗಳ ತಂಡ ಆಗಮಿಸಿದೆ. ವೈದ್ಯಕೀಯ ತಂಡಕ್ಕೆ ಕೂಡ ಜೆನ್ನಾ ಉಸಿರಾಡುತ್ತಿಲ್ಲ ಎಂಬುದು ಗೊತ್ತಾಗಿದೆ. ತಕ್ಷಣ ಚಿಕಿತ್ಸೆ ಶುರು ಮಾಡಿದ್ದಾರೆ. ವೈದ್ಯರ ಚಿಕಿತ್ಸೆಗೆ ಜೆನ್ನಾ ಪ್ರತಿಕ್ರಿಯಿಸಿದ್ದಾಳೆ. ಡಿಫಿಬ್ರಿಲೇಟರ್ ಬಳಸಿದ ಕೆಲವೇ ನಿಮಿಷದಲ್ಲಿ ಆಕೆಯ ಉಸಿರಾಟ ಮತ್ತೆ ಶುರುವಾಗಿದೆ.

Latest Videos

ಅಮೃತಾ ಜೊತೆ ಮದ್ವೆಯಾಗಲು ಮನೆ ಬಿಟ್ಟು ಓಡಿ ಹೋಗಿದ್ದ ಸೈಫ್‌: KWK 8 ಶೋನಲ್ಲಿ ಮಗನ ಕಿತಾಪತಿ ನೆನೆದ ಅಮ್ಮ

ಜೆನ್ನಾ, ಇಂಗ್ಲೆಂಡ್‌ನ ಸರ್ರೆಯಲ್ಲಿರುವ ಸ್ಟೇನ್ಸ್‌ನ ಮಾಧ್ಯಮಿಕ ಶಾಲಾ ಶಿಕ್ಷಕಿ. ಸತ್ತು ಬದುಕಿ ಬಂದ ಜೆನ್ನಾ ಬಹಳ ಸಂತೋಷಗೊಂಡಿದ್ದಾಳೆ. 15 ನೇ ವಯಸ್ಸಿನಿಂದಲೇ ಜೆನ್ನಾ ಮತ್ತು ರಾಸ್ ಇಬ್ಬರು ಒಟ್ಟಿಗೆ ಜೀವನ ನಡೆಸಲು ಶುರು ಮಾಡಿದ್ದಾರೆ. ಹಾಗಾಗಿ ನಾವಿಬ್ಬರು ಪರಸ್ಪರ ಬಹಳ ಅರಿತಿದ್ದೇವೆ. ರಾಸ್, ಸಿಕ್ಸ್ ಸೆನ್ಸ್ ಕೆಲಸ ಮಾಡಿದೆ. ಹಾಗಾಗಿಯೇ ಆತ ಮಧ್ಯರಾತ್ರಿ ನನ್ನನ್ನು ಏಳಿಸುವ ಪ್ರಯತ್ನ ನಡೆಸಿದ್ದಾನೆ. ನಾನು ಆತನ ಜೊತೆ ಮಾತನಾಡಲಿಲ್ಲ. ಉಸಿರಾಟ ನಿಂತಿರುವುದು ಅವನಿಗೆ ಗೊತ್ತಾಗಿದೆ. ತಕ್ಷಣ ಸಿಪಿಆರ್ ನೀಡಲು ಶುರು ಮಾಡಿದ್ದಾನೆ. ಫೋನ್ ಬಳಿ ಹೋದ ರಾಸ್, 999ಗೆ ಕರೆ ಮಾಡಿದ್ದಾನೆ. ಫೋನ್ ಲೌಡ್ ಸ್ಪೀಕರ್ ಹಾಕಿದ್ದಲ್ಲದೆ ಮತ್ತೆ ಸಿಪಿಆರ್ ನೀಡಲು ಶುರು ಮಾಡಿದ್ದಾನೆ. ವೈದ್ಯರ ತಂಡ ಮನೆಗೆ ಬರುವವರೆಗೂ ರಾಸ್, ತನ್ನ ಪತ್ನಿಗೆ ಸಿಪಿಆರ್ ನೀಡುವುದನ್ನು ಮುಂದುವರೆಸಿದ್ದಾನೆ. 

ಐದನೇ ಕ್ಲಾಸಲ್ಲೇ ಸೆಕ್ಸ್ ಬಗ್ಗೆ ಮಾತಾಡೋ ಹುಡುಗ್ರಿಗೆ ಪಿರಿಯಡ್ಸ್ ಬಗ್ಗೆ ಗೊತ್ತಿರೋದು ಬಿಗ್‌ ಜೀರೋ!

ಚೆರ್ಟ್ಸಿಯ ಸೇಂಟ್ ಪೀಟರ್ಸ್ ಆಸ್ಪತ್ರೆಯ ವೈದ್ಯರು ಜೆನ್ನಾ  ಬದುಕುಳಿಯುವಿಕೆಯನ್ನು ಅದ್ಭುತ ಎಂದು ಬಣ್ಣಿಸಿದ್ದಾರೆ.  14 ನಿಮಿಷಗಳ ಕಾಲ ಜೆನ್ನಾ ಹೃದಯ ಬಡಿತ  ಸಂಪೂರ್ಣ ನಿಂತಿತ್ತು. ಈ ಸಂದರ್ಭದಲ್ಲಿ  ಬದುಕುಳಿಯುವವರ ಸಂಖ್ಯೆ ಶೇಕಡಾ ನಾಲ್ಕರಷ್ಟಿರುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಬ್ರೇನ್ ನಲ್ಲಿ ಯಾವುದೇ ಡ್ಯಾಮೇಜ್ ಆಗಿರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. 

ಒಂದ್ವೇಳೆ ರಾಸ್ ಇನ್ನು ಕೆಲ ನಿಮಿಷದ ನಂತ್ರ ಎಚ್ಚರವಾಗಿದ್ದರೆ ಅಥವಾ 10 ನಿಮಿಷ ಸಿಪಿಆರ್ ಮಾಡಿ ನಂತ್ರ ಸೋತು ಕೈಬಿಟ್ಟಿದ್ದರೆ ಜೆನ್ನಾ ಸಾವನ್ನಪ್ಪುತ್ತಿದ್ದಳು ಎಂದು ವೈದ್ಯರು ಹೇಳಿದ್ದಾರೆ. ರಾಸ್ ನನ್ನ ಮಟ್ಟಿಗೆ ಹೀರೋ. ನನ್ನ ಮಗುವಿಗೆ ತಾಯಿಯನ್ನು ನೀಡಿದ್ದಾನೆ ಎಂದು ಜೆನ್ನಾ ಹೇಳಿದ್ದಾಳೆ. ಜೆನ್ನಾ ವರ್ಷಗಳಿಂದ ಅನಿಯಮಿತ ಹೃದಯ ಬಡಿತದ ಸಮಸ್ಯೆಯನ್ನು ಹೊಂದಿದ್ದರು. ಆದರೆ ಅದರಲ್ಲಿ ಯಾವುದೇ ಅಪಾಯವಿದೆ ಎಂದು ವೈದ್ಯರು ಹೇಳಿರಲಿಲ್ಲ. 
ಹೃದಯವು ಇದ್ದಕ್ಕಿದ್ದಂತೆ ಬಡಿತ ನಿಲ್ಲಿಸಿದಾಗ ಹೃದಯ ಸ್ತಂಭನ ಸಂಭವಿಸುತ್ತದೆ. ವ್ಯಕ್ತಿ ಪ್ರಜ್ಞಾಹೀನನಾಗುತ್ತಾನೆ, ಪ್ರತಿಕ್ರಿಯಿಸಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಉಸಿರಾಟ ನಿಲ್ಲುತ್ತದೆ. 
 

click me!