ಕೆಲಸ ಯಾವಾಗ ಹೋಗ್ಬಿಡುತ್ತೋ ಅನ್ನೋ ಭಯದಿಂದ ದೂರ ಬಿಟ್ಬಿಡಿ, ಸ್ಕಿಲ್ ಮುಖ್ಯ ನೆನಪಿರಲಿ

By Suvarna NewsFirst Published Dec 28, 2023, 5:41 PM IST
Highlights

ಉದ್ಯೋಗ ಯಾವಾಗ, ಹೇಗೆ ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನೀವೆಷ್ಟೇ ಉತ್ತಮ ಕೆಲಸಗಾರರಾಗಿದ್ದರೂ ನಿರ್ದಯವಾಗಿ ಕೆಲಸದಿಂದ ತೆಗೆದುಹಾಕಬಹುದು ಎನ್ನುವುದು ಸತ್ಯ. ಹೀಗಾಗಿ, ಒಂದು ರೀತಿಯ ಅಭದ್ರತೆ ಕಾಡಬಹುದು. ಸಹೋದ್ಯೋಗಿಯ ಬಗ್ಗೆ ಅಸೂಯೆ ಉಂಟಾಗಬಹುದು.  
 

ವೃತ್ತಿಯಲ್ಲಿ ನೀವೆಷ್ಟೇ ಪರಿಣಿತಿ ಹೊಂದಿದ್ದರೂ ಇಂದಿನ ಅಸ್ಥಿರ ಮಾರುಕಟ್ಟೆ ಹಾಗೂ ಸಡನ್‌ ಲೇಆಫ್‌ ಮಾಡುವ ಕಂಪೆನಿಗಳ ಪ್ರವೃತ್ತಿಯಿಂದಾಗಿ ಯಾರ ಉದ್ಯೋಗ ಎಷ್ಟು ದಿನ ಎನ್ನುವ ಗ್ಯಾರೆಂಟಿ ಇರುವುದಿಲ್ಲ. ಇದರಿಂದಾಗಿ ಹುದ್ದೆ ಉಳಿಯುತ್ತದೆಯೋ ಇಲ್ಲವೋ, ಯಾವಾಗ ಮನೆಗೆ ಹೋಗಿ ಎಂದು ಹೇಳಬಹುದು ಎನ್ನುವ ಆತಂಕ ಕಾಡುತ್ತದೆ. ಇಂತಹ ಅಭದ್ರತೆ ಉದ್ಯೋಗ ಕ್ಷೇತ್ರದಲ್ಲಿ ಇಂದು ವಿಪರೀತ ಎನ್ನುವ ಮಟ್ಟಕ್ಕಿದೆ. ಸ್ಪರ್ಧೆಯೂ ಸಾಕಷ್ಟಿದ್ದು, ಸಹೋದ್ಯೋಗಿಯ ಸಾಮರ್ಥ್ಯ ಹಾಗೂ ಕೌಶಲ ನಿಮ್ಮಲ್ಲಿರದೇ ಹೋಗಬಹುದು. ಇದರಿಂದಾಗಿ ಅಭದ್ರತೆಯ ಭಾವನೆ ಇನ್ನಷ್ಟು ಹೆಚ್ಚಾಗಬಹುದು ಹಾಗೂ ಹೆಚ್ಚು ಸಾಮರ್ಥ್ಯವುಳ್ಳ ಸಹೋದ್ಯೋಗಿಯ ಬಗ್ಗೆ ಅಸೂಯೆಯ ಭಾವನೆ ಉಂಟಾಗಬಹುದು. ಇಂತಹ ಸಮಯದಲ್ಲಿ ವೃತ್ತಿ ಜೀವನವನ್ನು ನೆಮ್ಮದಿಯಿಂದ ಕಳೆಯಲು, ಸಾಮರ್ಥ್ಯದಷ್ಟು ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ನಾವೆಲ್ಲರೂ ಮನುಷ್ಯರು, ನಮ್ಮ ಹುದ್ದೆ ಇಲ್ಲಿ ಗಣನೆಗೆ ಬರುವುದಿಲ್ಲ. ಹಲವು ಸನ್ನಿವೇಶಗಳಲ್ಲಿ ಅಭದ್ರತೆ, ಅಸೂಯೆ ಕಾಡುವುದು ಸಹಜ. ಅಂತಹ ಸಮಯದಲ್ಲಿ ನಮ್ಮನ್ನು ನಾವು ಕಾಪಾಡಿಕೊಳ್ಳುವುದು ಅಗತ್ಯ. ಅಂತಹ ಋಣಾತ್ಮಕ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ಕೆಲವು ತಂತ್ರಗಳನ್ನು ಅಳವಡಿಸಿಕೊಳ್ಳಬೇಕು.

•    ಕಾರಣ-ಪರಿಹಾರ (Reason-Remedy)
ಮೊದಲನೆಯದಾಗಿ, ಯಾವ ಕಾರಣದಿಂದಾಗಿ ಅಭದ್ರತೆ (Insecurity) ಮತ್ತು ಅಸೂಯೆ (Jealousy) ಉಂಟಾಗುತ್ತಿದೆ ಎನ್ನುವುದನ್ನು ಕಂಡುಕೊಳ್ಳಬೇಕು. ನಿಮ್ಮ ಸಾಮರ್ಥ್ಯ (Capacity), ಸಾಧನೆ, ದೌರ್ಬಲ್ಯ (Weakness) ಮತ್ತು ಸುಧಾರಣೆಯಾಗಬೇಕಾದ ಅಂಶಗಳನ್ನು ಪಟ್ಟಿಮಾಡಿಕೊಳ್ಳಿ. ಸಹೋದ್ಯೋಗಿಯ (Co-Worker) ಬದಲು ನಿಮ್ಮತ್ತ ಗಮನಹರಿಸಿ. ಇತರರಿಗೆ ಹೋಲಿಕೆ ಮಾಡಿಕೊಳ್ಳುವ ಬದಲು, ನೀವೇನು ಮಾಡುತ್ತೀರೋ ಅದರ ಬಗ್ಗೆ ಗಮನ ಕೇಂದ್ರೀಕರಿಸಿ. ಇದರಿಂದ ಹೆಚ್ಚು ಶಾಂತವಾಗಿರಲು (Calm) ಹಾಗೂ ಉತ್ಪಾದಕತೆ (Productivity) ಹೊಂದಲು ಸಾಧ್ಯವಾಗುತ್ತದೆ.

Latest Videos

ರಾಜಕೀಯ ಆಯ್ತು, ಐಟಿ ಇಂಡಸ್ಟ್ರೀಯಲ್ಲೂ ಕಿಡಿ ಹೊತ್ತಿಸಿದ 'ಆಪರೇಷನ್‌', ಇನ್ಫೋಸಿಸ್‌-ಕಾಗ್ನಿಜೆಂಟ್‌ ಫೈಟ್‌!

•    ನಿಮಗೆ ನೀವೇ ಸಂಗಾತಿ
ಅಭದ್ರತೆ ಮತ್ತು ಅಸೂಯೆಗಳು ನಿಮ್ಮನ್ನು ಆಳುವ ಸಮಯದಲ್ಲಿ ಧನಾತ್ಮಕ ಖಚಿತತೆ (Positive Affirmations) ಹೊಂದುವತ್ತ ಪ್ರಯತ್ನ ಮಾಡಬೇಕು. “ನಾನು ನನ್ನ ಕೆಲಸದಲ್ಲಿ ಚೆನ್ನಾಗಿದ್ದೇನೆ. ನನ್ನ ಉದ್ಯೋಗದಲ್ಲಿ ಭದ್ರತೆ ಹೊಂದಿದ್ದೇನೆʼ ಎನ್ನುವ ನುಡಿಗಳನ್ನು ಅಂತರಾಳದಿಂದ ಹೇಳಿಕೊಳ್ಳಬೇಕು. ಇವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ.

•    ಪರಿಣಾಮಕಾರಿ ಸಂವಹನ (Communication)
ನಿರ್ದಿಷ್ಟ ಸನ್ನಿವೇಶ (Situation) ಹಾಗೂ ಸಹೋದ್ಯೋಗಿಯಿಂದಾಗಿ ಅಸೂಯೆ ಉಂಟಾಗಿದ್ದರೆ ಅವರೊಂದಿಗೆ ಪ್ರಾಮಾಣಿಕವಾಗಿ ಮಾತುಕತೆ ನಡೆಸಿ. ನಿಮ್ಮ ಭಾವನೆಗಳನ್ನು (Feelings) ಶಾಂತವಾಗಿ ಅವರಿಗೆ ತಿಳಿಸಿ. ಇತರರ ಬಗ್ಗೆ ದೋಷಾರೋಪಣೆ ಮಾಡುವ ಮುನ್ನ ನಿಮ್ಮ ಕುರಿತು ಗಮನ ನೀಡಿ. ಹೇಗೆ ಸುಧಾರಣೆ ಮಾಡಿಕೊಳ್ಳಬಹುದು ಎನ್ನುವುದಕ್ಕೆ ತಜ್ಞರ (Experts) ಸಲಹೆ ಪಡೆದುಕೊಳ್ಳಿ. 

•    ಒತ್ತಡ (Stress) ನಿವಾರಣೆ ತಂತ್ರ
ಒತ್ತಡ ನಿವಾರಿಸಲು ಯೋಗ, ಧ್ಯಾನ, ಆಳವಾದ ಉಸಿರಾಟದ ವ್ಯಾಯಾಮ ಮಾಡಿ. ಮೈಂಡ್‌ ಫುಲ್‌ ನೆಸ್‌ (Mindfulness) ಆಗಿ ಕೆಲಸ ನಿರ್ವಹಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಆ ನಿರ್ದಿಷ್ಟ ಕ್ಷಣದಲ್ಲಿ ಬದುಕುವುದನ್ನು ಅಭ್ಯಾಸ ಮಾಡಿಕೊಂಡಾಗ ಆತಂಕ ಇಲ್ಲವಾಗುತ್ತದೆ. “ಈ ಕ್ಷಣ ನನ್ನದುʼ ಎಂದು ತಿಳಿದು ಸಾಧ್ಯವಾದಷ್ಟೂ ಅದರಲ್ಲಿ ತೊಡಗಿಸಿಕೊಳ್ಳಿ. ವೃತ್ತಿ ಸ್ಥಳದಲ್ಲಿ ನಕಾರಾತ್ಮಕ (Negative) ವಿಚಾರಗಳು ಕಾಡುವ ಸಮಯದಲ್ಲಿ ಮನಸ್ಸನ್ನು ಬೇರೆಡೆ ತಿರುಗಿಸಲು ಯತ್ನಿಸಿ. ಸಣ್ಣ ವಾಕ್‌ ಮಾಡಿ. 

•    ಕೃತಜ್ಞತೆ (Gratitude) ಇರಲಿ
ಆರಂಭದಲ್ಲಿ ಕೃತಕವೆನಿಸಿದರೂ ಸರಿ, ನೀವೇನು ಪಡೆದಿರುವಿರೋ ಅವುಗಳನ್ನೆಲ್ಲ ಸ್ಮರಿಸಿಕೊಂಡು ಕೃತಜ್ಞತೆ ಸಲ್ಲಿಸುವುದನ್ನು ಅಭ್ಯಾಸ ಮಾಡಿ. ಕೃತಜ್ಞತೆಯ ಭಾವನೆ ಮನಸ್ಸಿನ ಮರುಸೃಷ್ಟಿಗೆ ಸಹಾಯ ಮಾಡುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. 

ನಿರುದ್ಯೋಗಿಗಳಿಗೆ 2024ರ ವರ್ಷ ಲಕ್‌, ಭಾರತದಲ್ಲಿ 3.9 ಮಿಲಿಯನ್ ಉದ್ಯೋಗ ಸೃಷ್ಟಿ

•    ಬೆಂಬಲ ವ್ಯವಸ್ಥೆ (Support System)
ನಿಮಗೆ ಯಾರು ಬೆಂಬಲ, ಉತ್ತೇಜನ ನೀಡುತ್ತಾರೋ ಅಂಥವರೊಂದಿಗೆ ಉತ್ತಮ ಮಾತುಕತೆ ನಡೆಸಿ. ನಂಬಿಕಸ್ಥರೊಂದಿಗೆ ನಿಮಗೆ ಬೇಕಾದ ಮಾನಸಿಕ ಸ್ಫೂರ್ತಿ (Inspire) ಹಾಗೂ ಸಹಾಯದ ಬಗ್ಗೆ ಮಾತನಾಡಿ. ಬೆಂಬಲಕ್ಕೆ ನಾಲ್ಕಾರು ಮಂದಿ ಇದ್ದಾರೆ ಎನ್ನುವ ಭಾವನೆ ಆತಂಕ ನಿವಾರಣೆಗೆ ಸಹಕಾರಿ. ಎಲ್ಲರೊಂದಿಗೂ ಸ್ನೇಹಭಾವದಿಂದ ವರ್ತಿಸಿ. ಯಾರೊಂದಿಗೂ ಮುನಿಸು ಮಾಡಿಕೊಳ್ಳದೇ ಆರಾಮಾಗಿರಿ.  

click me!