Cheating Wife : ಈ ಎಲ್ಲ ಕಾರಣಕ್ಕೆ ಪತಿಗೆ ಮೋಸ ಮಾಡ್ತಾಳೆ ಪತ್ನಿ

By Suvarna News  |  First Published Jan 1, 2022, 3:45 PM IST

ಕೊರಳಿಗೆ ಮೂರು ಗಂಟು ಬಿದ್ಮೇಲೆ ಪತಿಯೇ ಜಗತ್ತು ಎಂದು ಬಾಳ್ವೆ ಮಾಡುವವರಿದ್ದಾರೆ. ಕಷ್ಟ-ಸುಖದ ಮಧ್ಯೆ ಸಂಸಾರ ಸರಿದೂಗಿಸುವ ಪ್ರಯತ್ನ ನಡೆಸುತ್ತಾರೆ. ಆದ್ರೆ ಸಹನಾಮಯಿ ಎಂದೇ ಕರೆಯಿಸಿಕೊಳ್ಳುವ ಹೆಣ್ಣಿನ ಸಹನೆಯ ಕಟ್ಟೆ ಒಡೆದಾಗ ಮಾತ್ರ ಆಕೆ ಊಹಿಸಲಾರದಷ್ಟು ಬದಲಾಗಿರ್ತಾಳೆ.


ಪುರುಷ (Male)ರು ಹೆಚ್ಚು ಮೋಸ (Cheating) ಮಾಡ್ತಾರೆ ಎಂದು ಬಹುತೇಕರು ನಂಬಿದ್ದಾರೆ. ಆದ್ರೆ ಮಹಿಳೆ (Woman)ಯರು ಸಹ ತಮ್ಮ ಪತಿಗೆ ಮೋಸ ಮಾಡುತ್ತಾರೆ. ಪ್ರೀತಿ (Love) ಇದ್ದಲ್ಲಿ ಮೋಸಕ್ಕೆ ಜಾಗವಿಲ್ಲ. ಸಂತೋಷದ ವೈವಾಹಿಕ ಜೀವನ ನಡೆಸಲು ಪ್ರೀತಿ ಬಹಳ ಮುಖ್ಯ. ಆದರೆ ಸಂಬಂಧದಲ್ಲಿ ಪ್ರೀತಿ ಮರೆಯಾದಾಗ, ಜನರು ಪರಸ್ಪರ ಮೋಸ ಮಾಡಲು ಪ್ರಾರಂಭಿಸುತ್ತಾರೆ. ಹೆಂಡತಿಗೆ ತನ್ನ ಗಂಡನಿಂದ ಪ್ರೀತಿ ಸಿಗದಿದ್ದಾಗ, ಅವಳು ಬೇರೆ ಕಡೆ ಪ್ರೀತಿ ಹುಡುಕಲು ಶುರು ಮಾಡ್ತಾಳೆ. ಆಕೆಗೆ ಬೇರೆ ಕಡೆಯಿಂದ ಪ್ರೀತಿ ಸಿಕ್ಕಲ್ಲಿ ಗಂಡನಿಗೆ ಮೋಸ ಮಾಡಲು ಪ್ರಾರಂಭಿಸುತ್ತಾಳೆ. ಪತ್ನಿ ತನ್ನ ಪತಿಗೆ ಮೋಸ ಮಾಡಲು ಕಾರಣಗಳು ಏನೆಲ್ಲ ನೋಡೋಣ.    

ಪತಿಯ ಮದ್ಯಪಾನ : ಮಹಿಳೆ ಎಷ್ಟೇ ಸೋಶಿಯಲ್ ಆಗಿರಲಿ. ಆಕೆಗೆ ಪತಿ ಮದ್ಯಪಾನ ಮಾಡುವುದು ಇಷ್ಟವಾಗುವುದಿಲ್ಲ. ಅದರಲ್ಲೂ ಆಕೆ ಮುಂದೆ ಮತ್ತು ವಿಪರೀತ ಮದ್ಯಪಾನ ಮಾಡುವ ಪತಿಯ ಮೇಲೆ ಆಕೆಗೆ ಪ್ರೀತಿ ಹುಟ್ಟಲು ಸಾಧ್ಯವಿಲ್ಲ. ಮದ್ಯಪಾನ ಮಾಡಿ,ಮನೆಗೆ ಬಂದು ಹೊಡೆದಾಡುವ ಪತಿಯಿಂದ ದೂರವಿರಲು ಬಯಸುತ್ತಾಳೆ. ಇದೇ ಪತಿಗೆ ಮೋಸ ಮಾಡಲು ಕಾರಣವಾಗುತ್ತದೆ.   

Tap to resize

Latest Videos

undefined

ಪತಿಯಿಂದ ಸಿಗದ ಪ್ರೀತಿ : ಪ್ರತಿಯೊಂದು ಸಂಬಂಧದಲ್ಲೂ ಪ್ರೀತಿ ಮುಖ್ಯವಾಗುತ್ತದೆ. ಪ್ರೀತಿ ಇಲ್ಲದ ಮೇಲೆ ಸಂಬಂಧಕ್ಕೆ ಬೆಲೆ ಇರುವುದಿಲ್ಲ. ಗಂಡನಿಂದ ಹೆಂಡತಿ ಪ್ರೀತಿ ಬಯಸುತ್ತಾಳೆ. ಪತಿಯಿಂದ ಆಕೆ ಬಯಸಿದಷ್ಟು ಪ್ರೀತಿ ಸಿಗದೆ ಹೋದಾಗ ಆಕೆ ಬೇರೆ ಕಡೆ ಪ್ರೀತಿ ಅರಸಲು ಶುರು ಮಾಡ್ತಾಳೆ. ಮದುವೆಯಾದ ಆರಂಭದಲ್ಲಿ ಪತಿಯ ಪ್ರೀತಿ ಅತಿಯಾಗಿರುತ್ತದೆ. ವರ್ಷಗಳು ಕಳೆದಂತೆ ಜವಾಬ್ದಾರಿ ಮೈಮೇಲೆ ಬಂದಂತೆ ಪತಿ,ಪತ್ನಿಯನ್ನು ಮೊದಲಿನಂತೆ ನೋಡಲಾರ. ಮನಸ್ಸಿನಲ್ಲಿ ಪ್ರೀತಿಯಿದ್ದರೂ ಅನೇಕ ಪುರುಷರಿಗೆ ಅದನ್ನು ತೋರ್ಪಡಿಸಲು ಸಮಯವಿರುವುದಿಲ್ಲ. ಅದನ್ನು ತೋರ್ಪಡಿಸುವ ಅಗತ್ಯವಿಲ್ಲ ಎಂದುಕೊಳ್ಳುವವರಿದ್ದಾರೆ. ಆದ್ರೆ ಮಹಿಳೆಯಾದವಳು ಎಷ್ಟೇ ಜವಾಬ್ದಾರಿಯಿದ್ದರೂ ಗಂಡನ ಪ್ರೀತಿಯನ್ನು ಸದಾ ಬಯಸುತ್ತಾಳೆ. ಪತಿ ಮೊದಲಿನಂತೆ ತನ್ನನ್ನು ನೋಡಬೇಕೆಂದು ಕನಸು ಕಾಣುತ್ತಾಳೆ. ಆದ್ರೆ ಪತಿಯಲ್ಲಿ ಆ ಹಳೆ ಪ್ರೀತಿ,ಹೊಗಳಿಕೆ ಕಾಣದೆ ಹೋದಾಗ ಪತ್ನಿ ಮೋಸಕ್ಕೆ ಇಳಿಯುತ್ತಾಳೆ.  

ಮನೆಯಿಂದ ಹೊರಗಿರುವ ಪತಿ : ಅನೇಕ ಪುರುಷರು ದಿನದ 15 ಗಂಟೆ ಮನೆಯಿಂದ ಹೊರಗೆ ಇರ್ತಾರೆ. ಕೆಲಸದಲ್ಲಿ ಬ್ಯುಸಿಯಾಗಿರ್ತಾರೆ. ಆದ್ರೆ ಮನೆಯಲ್ಲಿ ಇರುವ ಪತ್ನಿಗೆ ಒಂಟಿತನ ಕಾಡುತ್ತದೆ. ಆರಂಭದಲ್ಲಿ ಬೇಗ ಮನೆಗೆ ಬರುವಂತೆ ಪತಿ ಜೊತೆ ಜಗಳಕ್ಕಿಳಿಯುವ ಪತ್ನಿ ನಂತ್ರ ತಾನೇ ಬದಲಾಗುತ್ತಾಳೆ. ತನ್ನ ಒಂಟಿತನ ಹೋಗಲಾಡಿಸಲು ಹೊಸ ದಾರಿ ಹಿಡಿಯುತ್ತಾಳೆ.   

ಪತಿಯಿಂದ ಸಿಗದ ತೃಪ್ತಿ :  ಪತಿಗೆ ತನ್ನ ಹೆಂಡತಿಯನ್ನು ಹೇಗೆ ಸಂತೋಷಪಡಿಸಬೇಕೆಂದು ತಿಳಿದಿಲ್ಲದಿದ್ದರೆ, ಹೆಂಡತಿ ತನ್ನ ಗಂಡನಿಗೆ ಮೋಸ ಮಾಡುತ್ತಾಳೆ. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ದೈಹಿಕ ಅಗತ್ಯಗಳನ್ನು ಹೊಂದಿದ್ದಾನೆ. ಗಂಡನಾದವನು  ಹೆಂಡತಿಯ ದೈಹಿಕ ಅಗತ್ಯಗಳನ್ನು ಪೂರೈಸದಿದ್ದರೆ ಅಥವಾ ಅವಳನ್ನು ತೃಪ್ತಿಪಡಿಸದಿದ್ದರೆ  ಅವಳು ಗಂಡನಿಗೆ ಮೋಸ ಮಾಡುವುದು ನಿಶ್ಚಿತ.   
Massage For Sex Power : ಈ ರೀತಿ ಮಸಾಜ್ ಮಾಡಿದ್ರೆ ಕಾಮಾಸಕ್ತಿ ಹೆಚ್ಚೋದು ಖಂಡಿತ

ಪತಿ-ಪತ್ನಿ ಮಧ್ಯೆ ಗಲಾಟೆ : ದಾಂಪತ್ಯದಲ್ಲಿ ಪ್ರತಿ ದಿನ ಗಲಾಟೆ-ಜಗಳವಾಗ್ತಿದ್ದರೆ ಅದು ಕೂಡ ಒಂದು ಕಾರಣವಾಗುತ್ತದೆ. ಜಗಳ  ಇಬ್ಬರ ನಡುವಿನ ಪ್ರೀತಿ ಕೊನೆಗೊಳಿಸಿ, ಅಂತರ ಹೆಚ್ಚಿಸುತ್ತದೆ.  

ಪತಿಯ ನಿರ್ಲಕ್ಷ್ಯ : ಪತಿ ತನ್ನ ಹೆಂಡತಿಯತ್ತ ಗಮನ ಹರಿಸದೆ ಅವಳನ್ನು ನಿರ್ಲಕ್ಷ್ಯಿಸಿದಾಗ  ಪತ್ನಿ  ಪತಿಗೆ ಮೋಸ ಮಾಡುವ ಸಾಧ್ಯತೆಗಳಿರುತ್ತವೆ. 

ಆರ್ಥಿಕ ಸಮಸ್ಯೆ : ಕೆಲವೊಮ್ಮೆ ಆರ್ಥಿಕ ಸಮಸ್ಯೆಯೂ ಪತ್ನಿಯ ಮೋಸಕ್ಕೆ ಕಾರಣವಾಗುತ್ತದೆ. ಪತ್ನಿಯ ಅಗತ್ಯತೆಗಳನ್ನು ಪತಿ ಪೂರೈಸದೆ ಹೋದಾಗ, ತನ್ನ ಆಸೆಗಳನ್ನು ಈಡೇರಿಸಿಕೊಳ್ಳಲು ಪತ್ನಿ ಬೇರೆಯ ಮಾರ್ಗ ಹುಡುಕಿಕೊಳ್ತಾಳೆ. 

No sex after childbirth: ಮಗು ಬಂದ ಬಳಿಕ ಸೆಕ್ಸ್ ಇಲ್ಲ, ಹೀಗಾದರೆ ಏನು ದಾರಿ?

ಗಂಡನ ಅನುಮಾನ : ಹೆಜ್ಜೆ ಹೆಜ್ಜೆಗೂ ಪತ್ನಿಯನ್ನು ಅನುಮಾನಿಸುವವರಿದ್ದಾರೆ. ಆಕೆಗೆ ಯಾವುದೇ ಕೆಲಸ ಮಾಡಲು ಸ್ವಾತಂತ್ರ ನೀಡುವುದಿಲ್ಲ. ಇದು ಪತ್ನಿಯನ್ನು ಬದಲಿಸಬಹುದು.  

click me!