
ಜನನ ನಿಯಂತ್ರಣವನ್ನು ಗರ್ಭನಿರೋಧಕ (Contraception) ಎಂದೂ ಕರೆಯಲಾಗುತ್ತದೆ. ಗರ್ಭನಿರೋಧಕಗಳನ್ನು,ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ಬಳಸಲಾಗುತ್ತದೆ. ಮಹಿಳೆ (woman)ಯರಿಗೆ ಅನೇಕ ರೀತಿಯ ಜನನ ನಿಯಂತ್ರಣ ಲಭ್ಯವಿದೆ. ಮಹಿಳೆಯಾದವಳು ತನಗೆ ಸರಿಯಾದದ್ದನ್ನು ಆಯ್ಕೆ ಮಾಡಿಕೊಳ್ಳೇಕಾಗುತ್ತದೆ. ಆಕೆ ಆರೋಗ್ಯ (Health),ಭವಿಷ್ಯದಲ್ಲಿ ಮಕ್ಕಳು ಸೇರಿದಂತೆ ಅನೇಕ ವಿಷ್ಯಗಳನ್ನು ಗಮನದಲ್ಲಿಟ್ಟುಕೊಂಡು ಗರ್ಭನಿರೋಧಕ ಬಳಸಬೇಕು. ಗರ್ಭನಿರೋಧಕಗಳು ಅನಪೇಕ್ಷಿತ ಗರ್ಭಧಾರಣೆಯನ್ನು ತಡೆಯುವ ಜೊತೆಗೆ ಲೈಂಗಿಕವಾಗಿ ಹರಡುವ ಸೋಂಕುಗಳನ್ನೂ ನಿವಾರಿಸುತ್ತವೆ.
ಗರ್ಭನಿರೋಧಕ ವಿಧಾನಗಳು ವೀರ್ಯಾಣು ಮೊಟ್ಟೆಗಳನ್ನು ಪ್ರವೇಶಿಸದಂತೆ ತಡೆಯುತ್ತದೆ. ಜನನ ನಿಯಂತ್ರಣ ವಿಧಾನಗಳಲ್ಲಿ ಕಾಂಡೋಮ್, ಗರ್ಭಕಂಠದ ಕ್ಯಾಪ್ ಮತ್ತು ಗರ್ಭನಿರೋಧಕಮಾತ್ರೆಗಳು ಸೇರಿವೆ. ಸಂತಾನ ಹರಣ ಶಸ್ತ್ರಚಿಕಿತ್ಸೆ ಗರ್ಭ ಧರಿಸುವುದನ್ನು ಶಾಶ್ವತವಾಗಿ ತಡೆಯುತ್ತದೆ. ಇಂದು ನಾವು ನೈಸರ್ಗಿಕ ಗರ್ಭನಿರೋಧಕ (Natural Contraception)ಗಳ ಬಗ್ಗೆ ಹೇಳುತ್ತೇವೆ.
ನೈಸರ್ಗಿಕ ಗರ್ಭನಿರೋಧಕ : ನೈಸರ್ಗಿಕ ಗರ್ಭನಿರೋಧಕ ಒಂದು ರೀತಿಯ ಜನನ ನಿಯಂತ್ರಣ ವಿಧಾನವಾಗಿದೆ. ಇದು ಮಹಿಳೆಯ ದೇಹ ಮತ್ತು ಋತುಚಕ್ರವನ್ನು ಅವಲಂಬಿಸಿರುತ್ತದೆ. ನೈಸರ್ಗಿಕ ಕುಟುಂಬ ಯೋಜನೆಯಲ್ಲಿ ಆಸಕ್ತಿ ಹೊಂದಿದ್ದರೆ, ಮೊದಲು ಅದರ ಬಗ್ಗೆ ತಜ್ಞರಿಂದ ಮಾಹಿತಿ ತೆಗೆದುಕೊಳ್ಳಬೇಕು. ಪ್ರತಿ ದಿನ ನಿಮ್ಮ ದೇಹದ ತಾಪಮಾನ,ಋತುಚಕ್ರದ ಅವಧಿ ಹಾಗೂ ಗರ್ಭಕಂಠದ ಸ್ರವಿಸುವಿಕೆಯನ್ನು ನೀವು ಗಮನಿಸಬೇಕಾಗುತ್ತದೆ.
ನೈಸರ್ಗಿಕ ಗರ್ಭನಿರೋಧಕ ವಿಧಾನಗಳು :
ಈ ನೈಸರ್ಗಿಕ ವಿಧಾನಗಳು ಹಳೆಯ ಗರ್ಭನಿರೋಧಕ ವಿಧಾನಗಳನ್ನು ಸಹ ಒಳಗೊಂಡಿವೆ. ನೈಸರ್ಗಿಕ ಗರ್ಭನಿರೋಧಕ್ಕೆ ವೆಚ್ಚವಾಗುವುದಿಲ್ಲ. ಯಾವುದೇ ಅಡ್ಡಪರಿಣಾಮವೂ ಇಲ್ಲ.
1. ಫಿಂಗರ್ ಸೆಕ್ಸ್ : ನೈಸರ್ಗಿಕ ಗರ್ಭನಿರೋಧಕವಾಗಿ ಇದು ಕೆಲಸ ಮಾಡುತ್ತದೆ. ಇದರಲ್ಲಿ ಪುರಷರ ಫಿಂಗರ್ ಬಳಸಲಾಗುತ್ತದೆ. ಮಹಿಳೆಗೆ ಸಂಭೋಗ ಸುಖವನ್ನು ಇದು ನೀಡಬಲ್ಲದು. ಆದರೆ ಇದು ಸಂಪೂರ್ಣ ಸುರಕ್ಷಿತವೆನ್ನಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಪುರುಷರ ಬೆರಳಿಗೆ ವೀರ್ಯ ಅಂಟಿಕೊಂಡಿದ್ದರೆ ಗರ್ಭಧರಿಸುವ ಸಾಧ್ಯತೆಯಿರುತ್ತದೆ.
2.ಬ್ರೆಸ್ಟ್ ಫೀಡಿಂಗ್ : ಈ ವಿಧಾನವನ್ನು ಎಲ್ಲ ಮಹಿಳೆಯರು ಅನುಸರಿಸಲು ಸಾಧ್ಯವಿಲ್ಲ. ಹೆರಿಗೆಯಾಗಿ ಬ್ರೆಸ್ಟ್ ಫೀಡ್ ಮಾಡ್ತಿರುವ ಮಹಿಳೆಯರಿಗೆ ಇದು ಒಳ್ಳೆಯ ವಿಧಾನವಾಗಿದೆ. ಹೆರಿಗೆಯಾದ ಆರು ತಿಂಗಳು,ಮತ್ತೆ ಮುಟ್ಟು ಶುರುವಾಗದ ಸಂದರ್ಭದಲ್ಲಿ,ಹಾಲುಣಿಸುವ ಮಹಿಳೆಯರು ಗರ್ಭ ಧರಿಸುವ ಸಾಧ್ಯತೆ ಅತಿ ಕಡಿಮೆಯಿರುತ್ತದೆ. ಹಾಲು ಉತ್ಪಾದನೆ ಅಂಡೋತ್ಪತ್ತಿ ಹಾರ್ಮೋನುಗಳ ಬಿಡುಗಡೆಯನ್ನು ತಡೆಯುತ್ತದೆ.
ಪತ್ನಿ ನಿದ್ರಿಸಿದಾಗ ದೈಹಿಕ ಸಂಪರ್ಕ ಬೆಳೆಸಿದ ಪತಿ, ಆಮೇಲೆ??
3. ಅಂಡೋತ್ಪತ್ತಿ ಸಮಯ : ಮಹಿಳೆಯರು ಪ್ರತಿ ದಿನ ತಾಪಮಾನವನ್ನು ಪರೀಕ್ಷೆ ಮಾಡುತ್ತಿರಬೇಕಾಗುತ್ತದೆ. ಮಹಿಳೆ ತಾಪಮಾನ ಇಳಿಯುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಮಹಿಳೆ ಆ ಸಮಯದಲ್ಲಿ ಅಸುರಕ್ಷಿತ ಸೆಕ್ಸ್ ತಪ್ಪಿಸಬೇಕು.
4. ಋತು ಚಕ್ರದ ಅವಧಿ : ಮಹಿಳೆಯಾದವಳು ಮುಟ್ಟಿನ ಅವಧಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಮುಟ್ಟು ಶುರುವಾದ 14ನೇ ದಿನದಿಂದ ಅಂಡೋತ್ಪತ್ತಿ ಶುರುವಾಗುತ್ತದೆ. ಹಾಗಾಗಿ 14ನೇ ದಿನದಿಂದ 10 ದಿನ ಅಸುರಕ್ಷಿತ ಸಂಭೋಗ ಬೆಳೆಸಬಾರದು. ಒಂದು ತಿಂಗಳು ಮುಟ್ಟಿನ ಲೆಕ್ಕಾಚಾರ ಹಾಕಿ ಈ ಸೆಕ್ಸ್ ವಿಧಾನ ಅನುಸರಿಸುವುದು ತಪ್ಪಾಗುತ್ತದೆ. ನಾಲ್ಕೈದು ತಿಂಗಳು ನಿಮ್ಮ ಮುಟ್ಟಿನ ದಿನಾಂಕ,ಅದರಲ್ಲಿ ಆಗುವ ಏರುಪೇರುಗಳನ್ನು ಗಮನಿಸುವ ಅಗತ್ಯವಿದೆ.
ಗಂಡ ಬೈದರೂ ಅವರೊಟ್ಟಿಗೇ ಹೋಗೋದ್ಯಾಕೆ ಭಾರತೀಯ ನಾರಿಯರು?
5.ವಿತ್ ಡ್ರಾವಲ್ : ಇದು ಪುರುಷರನ್ನು ಅವಲಂಭಿಸಿದೆ. ಅವರ ನಿಯಂತ್ರಣ ಇಲ್ಲಿ ಮುಖ್ಯವಾಗುತ್ತದೆ. ಪರಾಕಾಷ್ಠೆ ತಲುಪಿದ ವೇಳೆ ಹೊರಗೆ ವಿತ್ ಡ್ರಾ ಮಾಡಬೇಕಾಗುತ್ತದೆ. ಈಗಾಗಲೇ ವೀರ್ಯವು ಯೋನಿಯಲ್ಲಿ ಬಿಡುಗಡೆಯಾಗಿದ್ದರೆ ಗರ್ಭಧಾರಣೆ ಸಾಧ್ಯತೆಯಿರುತ್ತದೆ.
6. ಇದಲ್ಲದೆ ಗುದ ಸಂಭೋಗ,ಲೈಂಗಿಕ ಆಟಿಕೆ ಬಳಕೆ ಮೂಲಕ ಸಂಭೋಗ ಸುಖ ಪಡೆಯಬಹುದು.
ನೈಸರ್ಗಿಕ ಗರ್ಭನಿರೋಧಕ ಎಷ್ಟು ಉತ್ತಮ ?: ನೈಸರ್ಗಿಕ ಗರ್ಭನಿರೋಧಕ ಬಗ್ಗೆ ಸರಿಯಾಗಿ ತಿಳಿದಿರಬೇಕಾಗುತ್ತದೆ. ಯಾವುದು ಉತ್ತಮ ಮಾರ್ಗವೆಂಬುದನ್ನು ಅರಿತು,ಲೆಕ್ಕ ತಪ್ಪದೆ ನಡೆದಲ್ಲಿ ಇದು ಶೇಕಡಾ 99ರಷ್ಟು ಸುರಕ್ಷಿತವಾಗಿದೆ. ನೈಸರ್ಗಿಕ ಗರ್ಭನಿರೋಧಕ, ಗರ್ಭಧಾರಣೆ ತಪ್ಪಿಸುತ್ತದೆ. ಆದ್ರೆ ಲೈಂಗಿಕ ರೋಗದಿಂದ ರಕ್ಷಣೆ ನೀಡುವುದಿಲ್ಲ. ಲೈಂಗಿಕ ಸೋಂಕು ಹರಡುವ ಸಾಧ್ಯತೆ ಇದರಲ್ಲಿ ಹೆಚ್ಚಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.