No sex after childbirth: ಮಗು ಬಂದ ಬಳಿಕ ಸೆಕ್ಸ್ ಇಲ್ಲ, ಹೀಗಾದರೆ ಏನು ದಾರಿ?

By Suvarna NewsFirst Published Dec 31, 2021, 7:46 PM IST
Highlights

ಮಗು ಜನಿಸಿದ ಬಳಿಕ ಸುಗಮ ಸೆಕ್ಸ್‌ಗೆ ಗಂಡ- ಹೆಂಡತಿ ನಡುವೆ ಅಡಚಣೆ ಆಗುವುದು ಸಹಜ. ಹಾಗಾದರೆ ಏನು ಮಾಡಬೇಕು?

ಪ್ರಶ್ನೆ: ನನ್ನ ಮದುವೆಯಾಗಿ 10 ವರ್ಷವಾಗಿದೆ. 4 ವರ್ಷದ ಮಗುವಿದೆ. ನಾವು ಕಳೆದ 4 ವರ್ಷಗಳಿಂದ ಯಾವುದೇ ಸೆಕ್ಸ್ ಲೈಫ್ (Sex Life) ಹೊಂದಿಲ್ಲ. ಅಂದರೆ ಕಳೆದ 4 ವರ್ಷಗಳಲ್ಲಿ ನಾಲ್ಕಾರು ಬಾರಿ ಮಾತ್ರ ಸಂಭೋಗ (Intercourse) ಮಾಡಿರಬಹುದು. ಇದು ಅಸಹಜವೇ? ನಮ್ಮ ದಾಂಪತ್ಯ ತೊಂದರೆಯಲ್ಲಿದೆಯೇ? ದಯವಿಟ್ಟು ಏನು ಮಾಡಬೇಕೆಂದು ಸಲಹೆ ನೀಡಿ.

ಉತ್ತರ: ನಿಮ್ಮಿಬ್ಬರ ಲೈಂಗಿಕ ಜೀವನದ ಕೊರತೆಯ ಅವಧಿಗೂ ನಿಮ್ಮ ಮಗುವಿನ ವಯಸ್ಸಿಗೂ ಹೊಂದಿಕೆಯಾಗುತ್ತಿದೆ. ನಿಮ್ಮಿಬ್ಬರ ಹೆಚ್ಚಿನ ಶಕ್ತಿ ಮತ್ತು ಗಮನ ಮಗುವಿನ ಪಾಲನೆ ಪೋಷಣೆಯ (Parenting) ಕಡೆಗೆ ಹೋಗಿರಬಹುದು. ಪಾಲನೆಯ ಆರಂಭಿಕ ವರ್ಷಗಳು ಬಹಳ ಡಿಮ್ಯಾಂಡ್ ಮಾಡುತ್ತವೆ ಮತ್ತು ಅನೇಕ ದಂಪತಿಗಳಿಗೆ ಇಂಥ ವೇಳೆಯಲ್ಲಿ ಲೈಂಗಿಕ ಜೀವನವು ಕನಿಷ್ಠ ಆದ್ಯತೆಯಾಗಿರುತ್ತದೆ. ನೀವಿಬ್ಬರೂ ಲೈಂಗಿಕ ಜೀವನವನ್ನು ದೂರವಿಡಲು ಪರಸ್ಪರ ಒಪ್ಪಿಕೊಂಡಿದ್ದರೆ ಮತ್ತು ನೀವು ಇಬ್ಬರೂ ಈ ನಿರ್ಧಾರದ ಬಗ್ಗೆ ಸಂತೋಷವಾಗಿದ್ದರೆ ಏನೂ ತೊಂದರೆಯಿಲ್ಲ. ಆದರೆ, ನಿಮ್ಮಿಬ್ಬರ ನಡುವೆ ಈ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ, ಅದರಿಂಧ ತೊಂದರೆಯಿದೆ. ಮತ್ತು ಅದನ್ನು ಪರಿಹರಿಸಬೇಕು.

ನೀವು ಸೆಕ್ಸ್ ಲೈಫ್ ಅನ್ನು ಹೇಗೆ ವ್ಯಾಖ್ಯಾನಿಸುತ್ತೀರಿ? ಸೆಕ್ಸ್ ಲೈಫ್ ಎಂದರೆ ಕೇವಲ ಸಂಭೋಗ ಎಂದು ನಿಮ್ಮ ಅಭಿಪ್ರಾಯವೇ? ಅದು ಅದರ ಒಂದು ಭಾಗ ಅಷ್ಟೇ. ಮಿಲನ ಮಾತ್ರವೇ ಸೆಕ್ಸ್ ಲೈಫ್ ಅಲ್ಲ. ಪರಸ್ಪರ ಒಟ್ಟಿಗೇ ಬೆತ್ತಲೆಯಾಗಿ ಮಲಗುವುದು, ಒಬ್ಬರನ್ನೊಬ್ಬರು ಮುದ್ದಿಸುವುದು, ಪರಸ್ಪರ ಹಸ್ತಮೈಥುನ (Masturbation) ಮಾಡಿಕೊಳ್ಳುವುದು, ಇತ್ಯಾದಿ ರೀತಿಗಳಿಂದ ಅನ್ಯೋನ್ಯವಾಗಿ ಇರುವುದು ಕೂಡ ನಿಮ್ಮ ಸೆಕ್ಸ್ ಲೈಫ್ ಅನ್ನು ಉತ್ತಮವಾಗಿಡುತ್ತದೆ. ನೀವು ಇದನ್ನೆಲ್ಲ ಮಾಡುತ್ತಿದ್ದರೆ ಮತ್ತು ಕೇವಲ ಸಂಭೋಗವನ್ನು ಹೊಂದಿಲ್ಲದಿದ್ದರೆ, ನಿಮ್ಮಲ್ಲಿ ಸಾಕಷ್ಟು ಸೆಕ್ಸ್ ಲೈಫ್ ಇದೆ ಎಂದರ್ಥ.

Menstruation and Sex: ಮುಟ್ಟಾದಾಗ ಸೆಕ್ಸ್‌ಗೆ ಒತ್ತಾಯಿಸುವ ಗಂಡ, ಇದೇನು ವಿಚಿತ್ರ!

ಇನ್ನೊಂದು ಸಮಸ್ಯೆ ನಿಮ್ಮಿಬ್ಬರ ನಡುವಿನ ಸಂವಹನ. ಲೈಂಗಿಕತೆಗೆ ಸಂಬಂಧಿಸಿದಂತೆ ನಿಮ್ಮ ಅಗತ್ಯತೆಗಳು ಮತ್ತು ಸಂಗಾತಿಯ (Spouse) ಅಗತ್ಯಗಳು ಏನೆಂದು ನೀವಿಬ್ಬರೂ ಸ್ಪಷ್ಟವಾಗಿ ಹೇಳಿದ್ದೀರಾ? ಇಲ್ಲದಿದ್ದರೆ, ಆ ಬಗ್ಗೆ ಸಂಭಾಷಣೆ ಆರಂಭಿಸಿ. ಬಹುಶಃ, ನಿಮ್ಮಿಬ್ಬರಿಗೂ ಲೈಂಗಿಕತೆಯ ಅಗತ್ಯವಿದೆ. ಆದರೆ ಮಗುವಿನ ಕಾರಣದಿಂದಾಗಿ ಸಮಯವಾಗುತ್ತಿಲ್ಲ. ಹೀಗಿದ್ದರೆ, ನೀವಿಬ್ಬರೂ ನಿಮ್ಮ ಪೋಷಕತ್ವಕ್ಕೆ ಸ್ವಲ್ಪ ಸಮಯ ರಜೆ ತೆಗೆದುಕೊಳ್ಳಬೇಕು. ಲೈಂಗಿಕತೆ, ಅನ್ಯೋನ್ಯತೆ ಮತ್ತು ಅನುರಾಗದಿಂದ ತುಂಬಿದ ಮದುವೆಯ ಆರಂಭದ ದಿನಗಳನ್ನು ನೆನಪಿಸಿಕೊಳ್ಳಿ. ಮಗುವನ್ನು ಅಜ್ಜ- ಅಜ್ಜಿಯರ ಬಳಿ ಬಿಟ್ಟು ಒಂದೆರಡು ದಿನ ಎಲ್ಲಾದರೂ ಎರಡನೇ ಮಧುಚಂದ್ರಕ್ಕೆ ಹೋಗಬಹುದು.

ಸೆಕ್ಸ್ ಬಗ್ಗೆ ನೀವು ಏನಿಷ್ಟಪಡುತ್ತೀರಿ ಎಂಬುದನ್ನು ನೀವಿಬ್ಬರೂ ಸ್ಪಷ್ಟವಾಗಿ ಮಾತನಾಡದಿದ್ದರೆ ನಿಮ್ಮ ದಾಂಪತ್ಯಕ್ಕೆ ತೊಂದರೆಯಿದೆ. ಸಂವಹನದ ಕೊರತೆಯು ದೊಡ್ಡ ತೊಂದರೆಯನ್ನು ಉಂಟುಮಾಡಬಹುದು.

Feelfree Bi Sexual: ನೀವು ಬೈಸೆಕ್ಸುಯಲ್ ಆಗಿದ್ದರೆ ತಪ್ಪೇನಿಲ್ಲ, ಆದರೆ ?

ಪ್ರಶ್ನೆ: ನನಗೆ 55 ವರ್ಷ. ನನಗೆ ಸೆಕ್ಸ್ ಇಷ್ಟ. ಪತ್ನಿಗೂ ಇಷ್ಟ. ಆದರೆ ನನ್ನ ಶಿಶ್ನದ ನಿಮಿರುವಿಕೆ (Erection) ಹೊಂದಲು ಮತ್ತು ಅದನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ದಿನಕ್ಕೆ ಒಂದು ಪ್ಯಾಕೆಟ್ ಸಿಗರೇಟ್ ಸೇದುತ್ತೇನೆ. ಇದರಿಂದ ಸಮಸ್ಯೆ ಆಗಿರಬಹುದೇ?

ಉತ್ತರ: ಹೌದು, ನಿಮ್ಮ ಧೂಮಪಾನದ (Smoking) ಚಟ ನಿಮ್ಮ ಸೆಕ್ಸ್ ಬದುಕಿನ ಮೇಲೆ ಖಂಡಿತವಾಗಿಯೂ ಕೆಟ್ಟ ಪ್ರಭಾವ ಬೀರುತ್ತದೆ. ಧೂಮಪಾನ ನಿಮ್ಮ ಶ್ವಾಸಕೋಶದ (Lungs) ಮೇಲೆ ದುಷ್ಪ್ರಭಾವ ಬೀರುವುದರಿಂದ, ಹೆಚ್ಚುಕಾಲ ನಿಮ್ಮ ನಿಮ್ಮ ಶಿಶ್ನದ ನಿಮಿರುವಿಕೆಯನ್ನು ತಡೆದುಕೊಳ್ಳಲು ನಿಮ್ಮ ಶ್ವಾಸಕೋಶಗಳಿಗೂ ಹೃದಯಕ್ಕೂ ಸಾಧ್ಯವಾಗದು. ಆದ್ದರಿಂಧ ಉತ್ತಮ ಸೆಕ್ಸ್ ಲೈಫ್ ಬೇಕೆಂದರೆ ಧೂಮಪಾನ ತ್ಯಜಿಸುವುದೇ ಮಾರ್ಗ. ಜೊತೆಗೆ, ಯಾವ ಮಹಿಳೆಯೂ ಸಿಗರೇಟ್ ಪರಿಮಳ ಬೀರವ ತುಟಿಗಳನ್ನು ಚುಂಬಿಸಲು ಇಷ್ಟಪಡಲಾರಳು!

ಧೂಮಪಾನದ ಪ್ರಭಾವ ಶಿಶ್ನದ ನಿಮಿರುವಿಕೆಯ ಮೇಲೆ ಉಂಟಾಗುತ್ತದೆ. ಇದಕ್ಕೆ "ಇಡಿ' ಅಥವಾ "ನಿಮಿರು ದೌರ್ಬಲ್ಯ' (Erectile dysfunction) ಅನ್ನುತ್ತಾರೆ. ಶಿಶ್ನಕ್ಕೆ ರಕ್ತದ ಹರಿವಿನ ಕೊರತೆಯಿಂದಾಗಿ ನಿಮಿರುವಿಕೆಯನ್ನು ಕಾಪಾಡಿಕೊಳ್ಳಲು ಅಸಮರ್ಥತೆ ಉಂಟಾಗುತ್ತದೆ. ಬೇರೆ ಬೇರೆ ಔಷಧಿಗಳು, ಮದ್ಯಪಾನ, ಸ್ಥೂಲಕಾಯ, ಮಾದಕ ವ್ಯಸನದಂತಹ ವಿವಿಧ ಕಾರಣಗಳಿಗಾಗಿ ಇದು ಸಂಭವಿಸಬಹುದು. ನಿರಂತರ ಧೂಮಪಾನವು ನಿಮ್ಮ ರಕ್ತನಾಳಗಳನ್ನು ಸಂಕುಚಿತಗೊಳಿಸಬಹುದು, ಇದು ರಕ್ತವು ಶಿಶ್ನಕ್ಕೆ ಹರಿಯಲು ತಡೆಯುಂಟು ಮಾಡುತ್ತದೆ. ಕೆಲವೊಮ್ಮೆ ನಿಮಿರು ದೌರ್ಬಲ್ಯವು ಮಧುಮೇಹ ಅಥವಾ ಹೃದಯ ಸಂಬಂಧಿ ಕಾಯಿಲೆಯ ಲಕ್ಷಣವೂ ಆಗಿರಬಹುದು. ಹೀಗಾಗಿ ನೀವು ಆರೋಗ್ಯ ತಪಾಸಣೆ ಸಹ ಮಾಡಿಸಿಕೊಳ್ಳುವುದು ಒಳ್ಳೆಯದು.

click me!