ದೀಪಿಕಾ ಕತ್ರಿನಾಗೆ ಕೈ ಕೊಟ್ಟ ಬಳಿಕ ತನಗೆ ಸಿಕ್ಕ ಸ್ತ್ರೀಲೋಲ ಇಮೇಜ್ ಬಗ್ಗೆ ರಣ್ಬೀರ್ ಬಿಚ್ಚುಮಾತು

Published : Jul 21, 2024, 05:10 PM ISTUpdated : Jul 21, 2024, 05:11 PM IST
ದೀಪಿಕಾ ಕತ್ರಿನಾಗೆ ಕೈ ಕೊಟ್ಟ ಬಳಿಕ ತನಗೆ ಸಿಕ್ಕ ಸ್ತ್ರೀಲೋಲ ಇಮೇಜ್ ಬಗ್ಗೆ ರಣ್ಬೀರ್ ಬಿಚ್ಚುಮಾತು

ಸಾರಾಂಶ

ಬಾಲಿವುಡ್ ನಟ ರಣ್ಬೀರ್ ಕಪೂರ್ ಓರ್ವ ಉತ್ತಮ ನಟ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಸಿನಿಮಾದಷ್ಟೇ ಅವರ ವೈಯಕ್ತಿಕ ಜೀವನವೂ ಸಾಕಷ್ಟು ಚರ್ಚೆಯಲ್ಲಿತ್ತು. ಇದಕ್ಕೆ ಕಾರಣ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಾದ ದೀಪಿಕಾ ಪಡುಕೋಣೆ ಹಾಗೂ ಕತ್ರೀನಾ ಕೈಫ್ ಜೊತೆಗೆ ಅವರು ಹೊಂದಿದ್ದ ಸಂಬಂಧ.

ಬಾಲಿವುಡ್ ನಟ ರಣ್ಬೀರ್ ಕಪೂರ್ ಓರ್ವ ಉತ್ತಮ ನಟ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಸಿನಿಮಾದಷ್ಟೇ ಅವರ ವೈಯಕ್ತಿಕ ಜೀವನವೂ ಸಾಕಷ್ಟು ಚರ್ಚೆಯಲ್ಲಿತ್ತು. ಇದಕ್ಕೆ ಕಾರಣ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಾದ ದೀಪಿಕಾ ಪಡುಕೋಣೆ ಹಾಗೂ ಕತ್ರೀನಾ ಕೈಫ್ ಜೊತೆಗೆ ಅವರು ಹೊಂದಿದ್ದ ಸಂಬಂಧ. ದೀಪಿಕಾ, ಕತ್ರೀನಾ ಎಲ್ಲರಿಗೂ ಕೈಕೊಟ್ಟ ರಣ್ಬೀರ್ ಕೆಲ ವರ್ಷಗಳ ಹಿಂದೆ ನಟಿ ಆಲಿಯಾ ಭಟ್ ಅವರನ್ನು ಮದುವೆಯಾಗಿ ಮುದ್ದಾ ಹೆಣ್ಣುಮಗುವಿನ ತಂದೆಯಾಗಿದ್ದಾರೆ. ಪ್ರಸ್ತುತ ಅವರದ್ದು ಸುಖಿ ಜೀವನ. ಆದರೂ ಅವರೀಗ ತಮ್ಮ ಹಳೆಯ ಗೆಳತಿಯರನ್ನು ಮೆಲುಕು ಹಾಕಿದ್ದಾರೆ. 

ಅವರು ಇತ್ತೀಚೆಗೆ  ನಟಿಯರಾದ ದೀಪಿಕಾ ಪಡುಕೋಣೆ ಹಾಗೂ ಕತ್ರೀನಾ ಕೈಫ್ ಜೊತೆಗೆ ಹೊಂದಿದ್ದ ಸಂಬಂಧದ ಬಗ್ಗೆ ಬಿಚ್ಚು ಮಾತನಾಡಿದ್ದಾರೆ. ಕತ್ರೀನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ಜೊತೆ ತಮ್ಮ ಸಂಬಂಧ ಕೆಟ್ಟ ನಂತರ ತಮ್ಮ ಇಮೇಜ್ ಎಷ್ಟು ಹಾಳಾಯ್ತು ಎಂಬುದನ್ನು ರಣ್ಬೀರ್‌ ಹೇಳಿಕೊಂಡಿದ್ದಾರೆ. 

ನಿಖಿಲ್ ಕಾಮತ್ ಜೊತೆಗಿನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅನಿಮಲ್ ನಟ, ತನಗೆ ಈ ನಟಿಯರ ಜೊತೆಗೆ ಬ್ರೇಕಾಫ್ ಆದ ನಂತರ ಸ್ತ್ರೀಲೋಲ ಎಂಬ ಕಳಂಕ ಅಂಟಿಕೊಂಡಿತ್ತು ಹಾಗೂ ಇಂದಿಗೂ ಮೋಸಗಾರ  ಎಂಬ ಕಳಂಕ ಅಂಟಿಕೊಂಡಿದೆ ಎಂಬುದನ್ನು ಹೇಳಿದ್ದಾರೆ.  ನಾನು ಇಬ್ಬರೂ ಯಶಸ್ವಿ ನಟಿಯರ ಜೊತೆಗೆ ಡೇಟಿಂಗ್ ಮಾಡಿದ್ದೇನೆ, ಇದರಿಂದಲೇ 'ಆತ ಸ್ತ್ರೀಲೋಲ' ಎಂಬ ಗುರುತು ನನ್ನದಾಯ್ತು, ನನ್ನ ಜೀವನದ ಬಹುಪಾಲು ಕಾಲ ನನ್ನನ್ನು ಮೋಸಗಾರ ಎಂದೇ ಗುರುತಿಸಲಾಯಿತು ಹಾಗೂ ಈಗಲೂ ಅದೇ ಮುಂದುವರೆದಿದೆ ಎಂದು ರಣ್ಬೀರ್ ಹೇಳಿದ್ದಾರೆ. ಈ ವಿಚಾರದ ಬಗ್ಗೆ ನೀವು ತಲೆಕೆಡಿಸಿಕೊಂಡಿರಾ ಎಂದು ಕೇಳಿದ ಪ್ರಶ್ನೆಗೆ ಕೇವಲ ನಕ್ಕು ಸುಮ್ಮನಾಗಿದ್ದಾರೆ ಬ್ರಹ್ಮಾಸ್ತ್ರ ನಟ.

250 ರೂಪಾಯಿಂದ 50 ಕೋಟಿ ಸಂಭಾವನೆವರೆಗೆ ರಣಬೀರ್​ ಪಯಣ... ಮೊದಲ ಸಂಬಳದ ಭಾವುಕ ಕಥೆ ಇಲ್ಲಿದೆ...

ಅಲ್ಲದೇ ಜೀವನದ ಒಂದು ಭಾಗದಲ್ಲಿ ತಾನು ಕೂಡ ಥೆರಪಿಗೆ ಒಳಗಾಗಿದೆ, ಆದರೆ ತಾನು ಮನಬಿಚ್ಚಿ ಮಾತನಾಡಲು ಹೆದರಿದ  ಕಾರಣ ಅದು ನನಗೆ ಅಷ್ಟೊಂದು ಯಶಸ್ವಿಯಾಗಲಿಲ್ಲ ಎಂದು ರಣ್ಬೀರ್ ಹೇಳಿದ್ದಾರೆ. ನಾನು ಥೆರಪಿ (ಆಪ್ತ ಸಮಾಲೋಚನೆ)ಗೆ ಒಳಗಾಗಿದ್ದೇನೆ. ನಾನು ಥೆರಪಿಯ ವಿರೋಧಿ ಅಲ್ಲ, ಇದರಲ್ಲಿ ನಾನು ನನ್ನ ಬಗ್ಗೆ ಮನಬಿಚ್ಚಿ ಹೇಳಬೇಕು. ಆದರೆ ನಾನು ಮನಸ್ಸು ಬಿಚ್ಚಿ ಮಾತನಾಡುವ ಬಗ್ಗೆಯೇ ಭಯಗೊಂಡಿದ್ದೆ ಎಂದು ರಣ್ಬೀರ್ ಕಪೂರ್ ಹೇಳ್ಕೊಂಡಿದ್ದಾರೆ. 

ರಣ್ಬೀರ್ ಹಾಗೂ ದೀಪಿಕಾ ಪಡುಕೋಣೆಯ ರೋಮಾನ್ಸ್‌ ಬಹುಶಃ ಬಾಲಿವುಡ್‌ನ ಇದುವರೆಗಿನ ಬಹುಚರ್ಚಿತವಾದ ಸಂಬಂಧಗಳಲ್ಲಿ ಒಂದು. ಇವರಿಬ್ಬರ ಕೋಟ್ಯಾಂತರ ಅಭಿಮಾನಿಗಳು ಇವರಿಬ್ಬರನ್ನು ಪರದೆ ಮೇಲೆ ಜೊತೆಯಾಗಿ  ನೋಡುವುದಕ್ಕೆ ಖುಷಿಪಡುತ್ತಾರೆ. ಅಂದಹಾಗೆ ಒಂದು ಕಾಲದ ಬಾಲಿವುಡ್‌ನ ಜೋಡಿ ಹಕ್ಕಿಗಳಾದ ಇವರಿಬ್ಬರು ಬಚ್ನಾ ಆಯೆ ಹಸೀನೋ ಸಿನಿಮಾದ ಶೂಟಿಂಗ್ ಸಮಯದಲ್ಲಿ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. ರಣ್ಬೀರ್‌ ಜೊತೆ ಗಾಢವಾಗಿ ಪ್ರೀತಿಯಲ್ಲಿ ಬಿದ್ದಿದ್ದ ದೀಪಿಕಾ ಪಡುಕೋಣೆ ಆತನ ಹೆಸರನ್ನು ಬೆನ್ನ ಹಿಂದೆ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದರು. ಆದರೆ 2009ರ ಸಮಯದಲ್ಲಿ ರಣ್ಬೀರ್‌ಗೆ ಕತ್ರೀನಾ ಸಿಕ್ಕಿದ್ದು, ಆಕೆಗಾಗಿ ದೀಪಿಕಾಳ ಜೊತೆ ರಣ್ಬೀರ್ ಬ್ರೇಕಾಫ್ ಮಾಡಿಕೊಂಡರು ಎಂದು ವರದಿ ಆಗಿತ್ತು. 2010ರಿಂದ 2016ರವರೆಗೂ ಕತ್ರೀನಾ ಹಾಗೂ ರಣ್ಬೀರ್ ಕಪೂರ್ ಡೇಟಿಂಗ್‌ನಲ್ಲಿದ್ದರು. ಅಲ್ಲದೇ ಇವರಿಬ್ಬರೂ ಮದುವೆಯೂ ಆಗಲಿದ್ದಾರೆ ಎಂದು ರೂಮರ್ಸ್‌ಗಳು ಕೂಡ ಹಬ್ಬಿದ್ದವು. ಆದರೆ ಅದೇನಾಯ್ತೋ ಏನು ರಣ್ಬೀರ್ ಹಾಗೂ ಕತ್ರೀನಾ 2016ರಲ್ಲಿ ದೂರಾದರು. 

ಅನಂತ್​ ಅಂಬಾನಿ ಮದುವೆಯಲ್ಲಿ ಗರ್ಭಿಣಿ ದೀಪಿಕಾ ಝಗಮಗ... ಫಿಟ್​ನೆಸ್​ ತಲೆ ಕೆಡಿಸಿಕೊಂಡ ಫ್ಯಾನ್ಸ್​

ನಂತರ ರಣ್ಬೀರ್‌ಗೆ ಸಿಕ್ಕಿದ್ದೆ ಆಲಿಯಾ, 5ವರ್ಷಗಳ ಕಾಲ ಡೇಟಿಂಗ್‌ನಲ್ಲಿದ್ದ ಈ ಜೋಡಿ 2022ರಲ್ಲಿ ಮದ್ವೆಯಾಗಿದ್ದು ರಾಹಾ ಹೆಸರಿನ ಮುದ್ದಾದ ಹೆಣ್ಣುಮಗುವಿನ ಪೋಷಕರಾಗಿದ್ದಾರೆ. ಇತ್ತ ದೀಪಿಕಾ ಪಡುಕೋಣೆ ಕೂಡ ರಣ್ವೀರ್ ಕಪೂರ್ ಅವರನ್ನು ಮದುವೆಯಾಗಿದ್ದು, ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತ ಕತ್ರೀನಾ ಕೈಫ್ ಕೂಡ ನಟ ವಿಕ್ಕಿ ಕೌಶಲ್ ಅವರನ್ನು ಮದುವೆಯಾಗಿ ಸುಖವಾಗಿದ್ದಾರೆ.

ಕತ್ರಿನಾಗೆ ಹುಟ್ಟುಹಬ್ಬ ಸಂಭ್ರಮ: ಅಪ್ಪ ಮುಸ್ಲಿಂ, ಅಮ್ಮ ಕ್ರೈಸ್ತ... ನಟಿ ಭಾರತದ ಪ್ರಜೆಯೇ ಅಲ್ಲ! ರೋಚಕ ಸ್ಟೋರಿಯಿದು..

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌