ಎಲ್ಲವೂ ಪ್ರೀತಿಯ ಹೆಂಡ್ತಿಗಾಗಿ... ಪ್ರತಿದಿನ 320 ಕಿಮೀ ಪ್ರಯಾಣಿಸುವ ಗಂಡ

By Mahmad Rafik  |  First Published Jul 20, 2024, 3:26 PM IST

ಲಿನ್ 5.20ಕ್ಕೆ ಮನೆಯಿಂದ ಹೊರಡುತ್ತಾರೆ. ಎಲೆಕ್ಟ್ರಿಕ್ ಬೈಕ್ ಮೂಲಕ ಮನೆಯಿಂದ 30 ನಿಮಿಷದಲ್ಲಿ ರೈಲ್ವೆ ನಿಲ್ದಾಣ ತಲುಪುತ್ತಾರೆ. ಸರಿಯಾಗಿ ಬೆಳಗ್ಗೆ 6.15ಕ್ಕೆ ಲಿನ್ ರೈಲು ಪ್ರಯಾಣ ಆರಂಭವಾಗುತ್ತದೆ. 7.46ಕ್ಕೆ ಕ್ವಿಂಡ್ಗೊ ರೈಲು ನಿಲ್ದಾಣ ತಲುಪುತ್ತಾರೆ.


ಬೀಜಿಂಗ್: 31 ವರ್ಷದ ವ್ಯಕ್ತಿಯೋರ್ವ ತನ್ನ ಪ್ರೀತಿಯ ಮಡದಿಗಾಗಿ ಪ್ರತಿನಿತ್ಯ 320 ಕಿ.ಮೀ ಪ್ರಯಾಣಿಸುತ್ತಾರೆ. ತಮ್ಮ ಸುದೀರ್ಘ ಪ್ರಯಾಣದ ಮೂಲಕವೇ ಈ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ. ಲಿನ್ ಶು ಎಂಬವರು ಕೆಲಸಕ್ಕೆ ಹಾಜರಾಗಲು 160 ಕಿಮೀ ದೂರದಿಂದ ಬರುತ್ತಾರೆ. ಎರಡು ಕಡೆಯ ಪ್ರಯಾಣ 320 ಕಿಮೀ ಆಗಿದೆ. 

ಲಿನ್ ಶು ಪೂರ್ವ ಚೀನಾದ ಶಾಂಡಾಂಗ್ ಪ್ರಾಂತ್ಯದ ವೈಫಾಂಗ್ ನಿವಾಸಿಯಾಗಿದ್ದು, ಇಲ್ಲಿಂದಲೇ ಪ್ರತಿದಿನದ ಪ್ರಯಾಣವನ್ನು ಆರಂಭಿಸುತ್ತಾರೆ. ಬೆಳಗ್ಗೆ 5 ಗಂಟೆಗೆ ಏಳುವ ಲಿನ್, 5.20ಕ್ಕೆ ಮನೆಯಿಂದ ಹೊರಡುತ್ತಾರೆ. ಎಲೆಕ್ಟ್ರಿಕ್ ಬೈಕ್ ಮೂಲಕ ಮನೆಯಿಂದ 30 ನಿಮಿಷದಲ್ಲಿ ರೈಲ್ವೆ ನಿಲ್ದಾಣ ತಲುಪುತ್ತಾರೆ. ಸರಿಯಾಗಿ ಬೆಳಗ್ಗೆ 6.15ಕ್ಕೆ ಲಿನ್ ರೈಲು ಪ್ರಯಾಣ ಆರಂಭವಾಗುತ್ತದೆ. 7.46ಕ್ಕೆ ಕ್ವಿಂಡ್ಗೊ ರೈಲು ನಿಲ್ದಾಣ ತಲುಪುತ್ತಾರೆ. ಇಲ್ಲಿಂದ 15 ನಿಮಿಷ ಸಬ್‌ವೇಯಲ್ಲಿ ತೆರಳಿದ್ರೆ ಕಚೇರಿ ತಲುಪುತ್ತಾರೆ. 

Tap to resize

Latest Videos

ಕೆಲಸಕ್ಕೂ ಮುನ್ನ ತಿಂಡಿ, ವಿಶ್ರಾಂತಿ

9 ಗಂಟೆಗೆ ಕೆಲಸ ಆರಂಭಿಸುವ ಮೊದಲು ಲಿನ್ ತಿಂಡಿ ಸೇವಿಸುತ್ತಾರೆ. ಇದೇ ಸಮಯದಲ್ಲಿ ವಿಶ್ರಾಂತಿ ಪಡೆದುಕೊಂಡ ನಂತರ ಸರಿಯಾಗಿ 9 ಗಂಟೆಗೆ ಕೆಲಸಕ್ಕೆ ಹಾಜರಾಗುತ್ತಾರೆ. ಮನೆಯಿಂದ ಕಚೇರಿಗೆ ಬಂದು ಕೆಲಸ ಆರಂಭಿಸಲು ಲಿನ್ ಶು ಅವರಿಗೆ ಬರೋಬ್ಬರಿ ನಾಲ್ಕು ಗಂಟೆಗಳ ಸಮಯ ಬೇಕಾಗುತ್ತದೆ. ಮತ್ತೆ ಮನೆಗೆ ಹಿಂದಿರುಗಲು ಇದೇ ಮಾರ್ಗವನ್ನು ಬಳಸುತ್ತಾರೆ. 

ಇಷ್ಟು ದೀರ್ಘ ಪ್ರಯಾಣದ ಬಗ್ಗೆ ಲಿನ್ ಶು ಅವರನ್ನು ಕೇಳಿದರೆ ಎಲ್ಲವೂ ತನ್ನ ಪ್ರೀತಿಗಾಗಿ ಎಂದು ಹೇಳಿ ಮುಗಳ್ನಗುತ್ತಾರೆ. ಪತ್ನಿಯ ಪ್ರೀತಿಯಿಂದ ಪ್ರಯಾಣ ಬೇಸರವನ್ನುಂಟು ಮಾಡಲ್ಲ. ಪರಸ್ಪರ ಏಳು ವರ್ಷ ಪ್ರೀತಿಸಿದ ನಂತರ ಮೇನಲ್ಲಿ ಲಿನ್  ಮದುವೆಯಾಗಿದ್ದಾರೆ.  ಲಿನ್ ಮಡದಿ ವೈಫಾಂಗ್‌ನಲ್ಲಿ ವಾಸವಾಗಿದ್ದರು. ಮದುವೆಗೂ ಮುನ್ನ ಬಾಡಿಗೆಯ ಫ್ಲ್ಯಾಟ್‌ನಲ್ಲಿ ಲಿನ್ ವಾಸವಾಗಿದ್ದು, ಇಲ್ಲಿಂದ ಕಚೇರಿಗೆ ಒಂದು ಗಂಟೆ ಪ್ರಯಾಣ ಮಾಡಬೇಕಿತ್ತು. ಮದುವೆ ಬಳಿಕ ವೈಫಾಂಗ್‌ನಲ್ಲಿಯೇ ಉಳಿಯಲು ಲಿನ್ ನಿರ್ಧರಿಸಿ, ಪ್ರೀತಿಯಿಂದ ಸುದೀರ್ಘವಾದ ಪ್ರಯಾಣವನ್ನು ಆಯ್ಕೆ ಮಾಡಿಕೊಂಡೆ ಎಂದು ಲಿನ್ ಹೇಳುತ್ತಾರೆ.

ಟೈಟ್ ಜೀನ್ಸ್ ಧರಿಸಿ ಬೈಕ್ ಏರಿ ಬಂದ ಯುವತಿಯನ್ನು ಓರೆಗಣ್ಣಿನಲ್ಲಿ ನೋಡಿದ ಅಂಕಲ್ 

ಪ್ರಯಾಣದ ಪ್ರತಿ ಕ್ಷಣವನ್ನು ಆನಂದಿಸುತ್ತೇನೆ

ಇದೇ ವೇಳೆ ಸುಗಮವಾದ ಸಾರಿಗೆ ವ್ಯವಸ್ಥೆ ಕಲ್ಪಿಸಿರೋ ಸರ್ಕಾರಕ್ಕೆ ಧನ್ಯವಾದವನ್ನು ಸಲ್ಲಿಸುತ್ತಾರೆ. ಸರಳವಾದ ಸಾರಿಗೆ ವ್ಯವಸ್ಥೆಯಿರೋ ಕಾರಣ ತುಂಬಾ ದೀರ್ಘವಾದ ಪ್ರಯಾಣ ಕೆಲವೇ ಗಂಟೆಗಳಲ್ಲಿ ಮುಗಿಯುತ್ತದೆ. ನನ್ನ ಪ್ರಯಾಣದ ಪ್ರತಿ ಕ್ಷಣವನ್ನು ಆನಂದಿಸುತ್ತೇನೆ. ನನ್ನ ಪ್ರಯಾಣದ ಬಗ್ಗೆ ತಿಳಿದುಕೊಂಡಿರುವ ನಮ್ಮ ಮ್ಯಾನೇಜರ್ ಸಹ ಹೆಚ್ಚಿನ ಸಮಯ ಕಚೇರಿಯಲ್ಲಿರುವಂತೆ ಆದೇಶಿಸಲ್ಲ ಎಂಬ ವಿಷಯವನ್ನು ಲಿನ್ ಹಂಚಿಕೊಳ್ಳುತ್ತಾರೆ. 

ಪತ್ನಿ ಸಹ ಕ್ವಿಂಡ್ಗೊದಲ್ಲಿ ಕೆಲಸ ಹುಡುಕುತ್ತಿದ್ದಾರೆ. ಕೆಲಸ ಸಿಕ್ಕ ಬಳಿಕ ಶಾಶ್ವತವಾಗಿ ಕ್ವಿಂಡ್ಗೊ ಅಥವಾ ಅದರ ಸಮೀಪದಲ್ಲಿಯೇ ಸುಂದರವಾದ ಮನೆ ಮಾಡ್ಕೊಂಡು ಜೀವನ ನಡೆಸಲು ಪ್ಲಾನ್ ಮಾಡಿಕೊಂಡಿದೆ. ಇದು ತಾತ್ಕಾಲಿಕ ಪ್ರಯಾಣವಾಗಿದೆ. ಆದ್ರೆ ಈ ದಿನಗಳು ನನ್ನ ಜೀವನದಲ್ಲಿ ಸದಾ ಅಚ್ಚಳಿಯದೇ ಉಳಿಯುವಂತೆ ಅನ್ನೋದು ನನ್ನ ನಂಬಿಕೆಯಾಗಿದೆ ಎಂದು ಲಿನ್ ಹೇಳುತ್ತಾರೆ.

ಬಚ್ಚೂಸ್ ದೇವರ ಪ್ರತಿಮೆ ಜೊತೆ ಯುವತಿಯ ಅಶ್ಲೀಲ ಭಂಗಿ ಫೋಟೋ ವಿವಾದ!

70 ಲಕ್ಷ ಅಧಿಕ ವ್ಯೂವ್ 

ಲಿನ್ ಶು ಕಥೆಯ ವಿಡಿಯೋ 70 ಲಕ್ಷ ಅಧಿಕ ವ್ಯೂವ್ ಪಡೆದುಕೊಂಡಿದೆ. ಲಿನ್ ಶು ಅವರ ಪ್ರೀತಿಯ ಪ್ರಯಾಣವನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಪ್ರತಿದಿನ ಆರು ಗಂಟೆಗೂ ಅಧಿಕ ಪ್ರಯಾಣ ನಮ್ಮಿಂದ ಆಗಲಾರದು ಎಂದು ಕಮೆಂಟ್ ಮಾಡಿದ್ರೆ, ಕೆಲವರು ಪ್ರತಿದಿನ ಆರು ಗಂಟೆಗೂ ಅಧಿಕ ಕಾಲ ಪ್ರಯಾಣ ಮಾಡೋರು ಬಹಳಷ್ಟು ಜನರಿದ್ದಾರೆ. ಎಲ್ಲರಿಗೂ ಒಂದೊಂದು ಕಾರಣಗಳಿರುತ್ತವೆ. ಸುಗಮ ಸಾರಿಗೆ ವ್ಯವಸ್ಥೆಯಿಂದಾಗಿ ಇದೆಲ್ಲವೂ ಸಾಧ್ಯವಾಗಿದೆ ಎಂದು ಬಹುತೇಕರು ಕಮೆಂಟ್ ಮಾಡಿದ್ದಾರೆ.

click me!