ಐದು ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಪತ್ನಿ ಓಡಿ ಹೋಗಿದ್ದಕ್ಕೆ ತನ್ನದೇ ಮನೆಗೆ ಬೆಂಕಿ ಹಚ್ಚಿದ ಗಂಡ

Published : Jul 21, 2024, 12:49 PM IST
ಐದು ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಪತ್ನಿ ಓಡಿ ಹೋಗಿದ್ದಕ್ಕೆ ತನ್ನದೇ ಮನೆಗೆ ಬೆಂಕಿ ಹಚ್ಚಿದ ಗಂಡ

ಸಾರಾಂಶ

ಮನೆಗೆ ಬೆಂಕಿ ಹಚ್ಚಿದ ಗಂಡ, ಪೊಲೀಸರ ಮುಂದೆ ಹೊಸ ಕಥೆಯೊಂದನ್ನು ಹೇಳಿದ್ದನು. ಬೆಂಕಿ ಕಾಣಿಸುತ್ತಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲಕ್ನೋ: ಐದು ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಪತ್ನಿ ಓಡಿ ಹೋಗಿದ್ದಕ್ಕೆ ಗಂಡ ತನ್ನದೇ ಮನೆಗೆ ಬೆಂಕಿ ಹಚ್ಚಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಗೆ ಪಕ್ಕದೂರಿನ ಯುವಕನ ಜೊತೆ ಅಕ್ರಮ ಸಂಬಂಧ ಇತ್ತು. ಈ ವಿಷಯ ಆಕೆಯ ಗಂಡನಿಗೂ ಗೊತ್ತಿತ್ತು. ಇದರಿಂದ ಮಹಿಳೆಗೆ ಪಕ್ಕದೂರಿನಲ್ಲಿರುವ ಗೆಳೆಯನನ್ನು ಭೇಟಿಯಾಗಲು ಆಕೆ ಗಂಡ ಅವಕಾಶ ನೀಡುತ್ತಿರಲಿಲ್ಲ. ಇದರಿಂದಾಗಿ ಮಹಿಳೆ ಹೆತ್ತ ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು. ಈ ವಿಷಯ ತಿಳಿಯುತ್ತಲೇ ತನ್ನದೇ ಮನೆಗೆ ಬೆಂಕಿ ಹಚ್ಚಿದ ಗಂಡ, ಪೊಲೀಸರ ಮುಂದೆ ಹೊಸ ಕಥೆಯೊಂದನ್ನು ಹೇಳಿದ್ದನು. ಬೆಂಕಿ ಕಾಣಿಸುತ್ತಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಯಲ್ಲಿದ್ದ ಐವರು ಮಕ್ಕಳು ಮತ್ತು ಮಹಿಳೆ ಪ್ರಾಣಾಪಾಯಾದಿಂದ ಪಾರಾಗಿದ್ದಾರೆ. 

ಬಾಂದಾ ಜಿಲ್ಲೆಯ ಕರ್ತಲ್ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಲಲ್ಲು ಎಂಬ ಮಹಿಳೆ ಶುಕ್ರವಾರ ತಡರಾತ್ರಿ ಮನೆ ತೊರೆದು ಇನಿಯನ ಜೊತೆ ಪರಾರಿಯಾಗಿದ್ದಾಳೆ. ಇತ್ತ ಲಲ್ಲು ಗಂಡ ತನ್ನ ಮನೆಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಜನರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಆ ಬಳಿಕ ಪೊಲೀಸರ ಸಹಾಯದೊಂದಿಗೆ ಸಣ್ಣ ಪ್ರಮಾಣದಲ್ಲಿದ್ದ ಬೆಂಕಿ ನಂದಿಸಿದ್ದಾರೆ. ಬೆಂಕಿ ಹತೋಟಿಗೆ ಬಂದಿದ್ದರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ. 

ಗಂಡಸರೇ ಹುಷಾರ್‌! ಎದುರಿಗೆ ಗಂಡ ಇದ್ದಾನೆಂದು ಕಲ್ಪಿಸಿಕೊಂಡು ಈ ಪತ್ನಿಯರು ಏನ್‌ ಮಾಡ್ತಿದ್ದಾರೆ ನೋಡಿ..

ಪೊಲೀಸರ ಮುಂದೆ ಕಥೆ ಕಟ್ಟಿದ್ದ!

ನನ್ನ ಪತ್ನಿಯನ್ನು ಪಕ್ಕದೂರಿನ ವ್ಯಕ್ತಿ ಅಪಹರಣ ಮಾಡಿದ್ದಾನೆ. ಅವನೇ ನನ್ನ ಮನೆಗೆ ಬೆಂಕಿ ಹಾಕಿದ್ದಾನೆ ಎಂದು ಲಲ್ಲು ಪತಿ ಪೊಲೀಸರ ಮುಂದೆ ಮೊದಲು ಹೇಳಿಕೆ ದಾಖಲಿಸಿದ್ದನು. ಆದ್ರೆ ಪೊಲೀಸರಿಗೆ ಲಲ್ಲು ಗಂಡನ ಮೇಲೆಯೇ ಅನುಮಾನ ಬಂದಿದ್ದರಿಂದ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ತಾನೇ ಮನೆಗೆ ಬೆಂಕಿ ಹಚ್ಚಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಮನೆಗೆ ಬೆಂಕಿ ತಗುಲಿರುವ ವಿಷಯ ತಿಳಿಯುತ್ತಿದ್ದಂತೆ ಊರಿನ ಜನರೆಲ್ಲಾ ಲಲ್ಲು ಮನೆ ಮುಂದೆಯೇ ಜಮಾಯಿಸಿದ್ದರು. ಬೆಂಕಿಯಲ್ಲಿ ಸಿಲುಕಿದ ಮಕ್ಕಳು ಮತ್ತು ತಾಯಿಯನ್ನು ರಕ್ಷಿಸಿದ ಬಳಿಕವೇ ಜನರು ಹಿಂದಿರುಗಿದ್ದಾರೆ. ಪರಾರಿಯಾಗಿರುವ ಮಹಿಳೆ ಎಲ್ಲಿದ್ದಾಳೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

76 ಲಕ್ಷ ರೂ ಖರ್ಚು ಮಾಡಿ ಪತ್ನಿ ವಿದೇಶಕ್ಕೆ ಕಳುಹಿಸಿದ ಗಂಡ, ಕೆನಡಾ ತಲುಪುತ್ತಿದ್ದಂತೆ ಪತಿ ನಂಬರ್ ಬ್ಲಾಕ್!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!
ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ