ಡಿಜೆ ಹಾಡಿಗೆ ನೆನಪಾದ ಹಳೇ ಗೆಳತಿ: ಮದುವೆ ಮಂಟಪದಿಂದ ಹೊರ ನಡೆದ ವರ

Published : Apr 29, 2025, 09:52 AM ISTUpdated : Apr 29, 2025, 10:02 AM IST
 ಡಿಜೆ ಹಾಡಿಗೆ ನೆನಪಾದ ಹಳೇ ಗೆಳತಿ:  ಮದುವೆ ಮಂಟಪದಿಂದ ಹೊರ ನಡೆದ ವರ

ಸಾರಾಂಶ

ದೆಹಲಿಯಲ್ಲಿ ನಡೆದ ಮದುವೆಯೊಂದರಲ್ಲಿ 'ಚನಾ ಮೇರಿಯಾ' ಹಾಡು ಕೇಳಿ ಭಾವುಕನಾದ ವರನು ಮದುವೆ ಮಂಟಪದಿಂದ ಹೊರನಡೆದಿದ್ದಾನೆ. ಇದರಿಂದ ಮದುವೆ ಮುರಿದು ಬಿದ್ದಿದೆ. 

ಹಾಡುಗಳನ್ನು ಕೇಳಿದಾಗ ಹಳೆ ನೆನಪುಗಳು ಕಾಡುವುದು ಸಾಮಾನ್ಯ. ಅದೇ ರೀತಿ ಇಲ್ಲೊಂದು ಕಡೆ ಮದುವೆ ಸಮಯದಲ್ಲಿ ಡಿಜೆ ಪ್ಲೇ ಮಾಡಿದ ಚನಾ ಮೇರಿಯಾ ಹಾಡು ಕೇಳಿ ಭಾವುಕನಾದ ವರನೋರ್ವ ಮದುವೆ ಮಂಟಪದಿಂದಲೇ ಹೊರ ನಡೆದಿದ್ದಾನೆ. ಇಂತಹ ಅಚ್ಚರಿಯ ಘಟನೆ ದೆಹಲಿಯಲ್ಲಿ ನಡೆದಿದ್ದಾಗಿ ವರದಿಯಾಗಿದೆ. ಬಾಲಿವುಡ್ ನಟ ರಣ್‌ಬೀರ್ ಕಪೂರ್ ನಿರ್ಮಾಣದ 'ಚನಾ ಮೇರಿಯಾ' ಹಾಡು, ವರನಿಗೆ ತನ್ನ  ಹಳೆಯ ಪ್ರೇಮ ಸಂಬಂಧದ ಬಗ್ಗೆ ನೆನಪು ಮಾಡಿದೆ.  ಇದರಿಂದ ದುಃಖಿತನಾದ ವರ ಮದುವೆ ಮಂಟಪದಿಂದಲೇ ಸೀದಾ ಹೊರ ನಡೆದಿದ್ದಾನೆ ಎಂದು ವರದಿಯಾಗಿದೆ. ಇದಾದ ನಂತರ ಮದುವೆ ನಿಂತು ಹೋಗಿದ್ದು, ವರನ ಸಂಬಂಧಿಕರು ಕೂಡ ಹೊರಟು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿವ ವೈರಲ್ ಆಗುತ್ತಿದ್ದು, ಅನೇಕರು ಈ ಘಟನೆಗೆ ವಿವಿಧ ರೀತಿಯ ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. 

ಅಂದಹಾಗೆ ಈ ಚನಾ ಮೇರಿಯಾ ಹಾಡು ಸಿನಿಮಾಭಿಮಾನಿಗಳಲ್ಲಿ ಬ್ರೇಕಾಪ್‌ ಹಾಡು ಎಂದೇ ಫೇಮಸ್ ಆಗಿದೆ. ಕರಣ್ ಜೋಹರ್ ನಿರ್ಮಾಣದ, ರಣ್‌ ಬೀರ್ ಕಪೂರ್ ಹಾಗೂ ಐಶ್ವರ್ಯಾ ರೈ, ಹಾಗೂ ಅನುಷ್ಕಾ ಶರ್ಮಾ ನಟನೆಯ ಎ ದಿಲ್ ಹೈ ಮುಷ್ಕಿಲ್ ಸಿನಿಮಾದ ಹಾಡು ಇದಾಗಿದೆ. ಈ ಹಾಡನ್ನು ಮದುವೆಯ ಸಂಭ್ರಮದ ವೇಳೆ ಡಿಜಿ ಪ್ಲೇ ಮಾಡಿದ್ದು, ಇದರಿಂದ ವರನಿಗೆ ತನ್ನ ಹಳೆ ಗೆಳತಿಯ ನೆನಪಾಗಿದ್ದು, ಮದುವೆ ಮಂಟಪದಿಂದ ಆತ ಸೀದಾ ಎದ್ದು ಹೋಗಿದ್ದಾನೆ. ಅರ್ಜಿತ್ ಸಿಂಗ್ ಈ ಹಾಡನ್ನು ಹಾಡಿದ್ದಾರೆ. ಇತ್ತ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬಾಲಿವುಡ್ ನಟ ಕರಣ್ ಜೋಹರ್ ಕೂಡ ಈ ವಿಚಾರವನ್ನು ಸ್ವತಃ ಶೇರ್ ಮಾಡಿಕೊಂಡು ಉಹ್ ಎಂದು ಪ್ರತಿಕ್ರಿಯಿಸಿದ್ದಾರೆ. 

ಇದನ್ನೂ ಓದಿ:ಕೋಟ್ಯಾಧಿಪತಿಗಳಾಗಿದ್ದರೂ ತಮ್ಮ ಮಕ್ಕಳಿಗಾಗಿ ತಾವೇ ಅಡುಗೆ ಮಾಡ್ತಾರಂತೆ ವಿರಾಟ್ -ಅನುಷ್ಕಾ!

ಯೇ ದಿಲ್ ಹೈ ಮುಷ್ಕಿಲ್ 2016ರ ಸಿನಿಮಾವಾಗಿದ್ದು, ರಣ್ಬೀರ್ ಹಾಗೂ ಅನುಷ್ಕಾ ಶರ್ಮಾ ಅವರು ಪ್ರೇಮಿಗಳಾಗಿ ನಟಿಸಿದ್ದು ತನ್ನ ಪ್ರೇಯಸಿ ಅನುಷ್ಕಾ ಬೇರೊಬ್ಬರೊಂದಿಗೆ ಮದುವೆಯಾಗಿ ನೆಲೆಸುವುದನ್ನು ರಣಬೀರ್ ನೋಡುವ ನಿರ್ಣಾಯಕ ಘಟ್ಟದಲ್ಲಿ ಈ ಹಾಡು ಪ್ಲೇ ಆಗುತ್ತದೆ. ಆದರೆ ಈ ಹಾಡು ಕೇಳಿ ಮದುವೆಯನ್ನೇ ಮುರಿದುಕೊಂಡಿದ್ದಾರು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಆದರೆ ದೆಹಲಿಯಲ್ಲಿ ಇಂತಹದೊಂದು ಘಟನೆ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅನೇಕರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. 

ಈ ಪೋಸ್ಟ್ ನೋಡಿದ ಅನೇಕರು ಈ ಹಾಡನ್ನು ಇನ್ನು ಪ್ರತಿ ಮದುವೆಯಲ್ಲೂ ಪ್ಲೇ ಮಾಡುವಂತೆ ಮನವಿ ಮಾಡಿದ್ದಾರೆ. ಹಾಗೆಯೇ ಈ ಹಾಡನ್ನು ಪ್ಲೇ ಮಾಡಿ ವರನನ್ನು ದೊಡ್ಡ ಅನಾಹುತದಿಂದ ಪಾರು ಮಾಡಿದ ಡಿಜೆಗೆ ಧನ್ಯವಾದ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆತನಿಗೆ ಈ ಮದುವೆಯನ್ನು ಮರಿಯಬೇಕಿತ್ತು. ಅದಕ್ಕಾಗಿ ಆತ ಡಿಜೆ ಬಳಿ ಈ ಹಾಡು ಪ್ಲೇ ಮಾಡಲು ಹೇಳಿದ. ಹಾಡು ಪ್ಲೇ ಆಗುತ್ತಿದ್ದಂತೆ ಮದುವೆ ಮನೆಯಿಂದ ಹೊರ ನಡೆದ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರೇನು ಮದುವೆಯಾಗುತ್ತಿದ್ದಾರಾ ಅಥವಾ ಮಜಾ ಮಾಡುತ್ತಿದ್ದಾರಾ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಅಂದಹಾಗೆ ಈ ಸುದ್ದಿ ಕೇಳಿ ನಿಮಗೇನನಿಸಿತು ಕಾಮೆಂಟ್ ಮಾಡಿ...

ಇದನ್ನೂ ಓದಿ: ವೈರಲ್ ಆಗ್ತಿದೆ ಕತ್ರಿನಾ-ವಿಕ್ಕಿ ದಂಪತಿಯ ಮುಂದಿನ 3 ವರ್ಷದ ಪ್ಲಾನ್; ಗುಡ್ ಐಡಿಯಾ!

 

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌
Chanakya Niti: ಇಂಥಾ ಮಹಿಳೆಯರ ಕೈ ಹಿಡಿದ್ರೆ ಜೀವನ ಪರ್ಯಂತ ಅಳೋದು ಗ್ಯಾರಂಟಿ: ಮದುವೆ ಬಗ್ಗೆ ಪುರುಷರಿಗೆ ಕಿವಿಮಾತು