
ಸಾಮಾನ್ಯವಾಗಿ ಪ್ರೀತಿ ಕುರುಡು ಎನ್ನುವುದನ್ನು ನಾವು ಹಲವು ಸಂದರ್ಭಗಳಲ್ಲಿ ಕೇಳಿರುತ್ತೇವೆ. ಇನ್ನು ಕೆಲವು ಸಂಗತಿಗಳಲ್ಲಿ ಇದನ್ನು ಕಣ್ಣಾರೆ ಕಂಡಿರುತ್ತೇವೆ. ಅದೇ ರೀತಿ ಇಲ್ಲೊಬ್ಬ 16 ವರ್ಷದ ಯುವಕ ತನಗಿಂತ 7 ವರ್ಷ ದೊಡ್ಡವಳಾದ ಹುಡುಗಿಯನ್ನು ಪ್ರೀತಿ ಮಾಡಿದ್ದಾನೆ. ಈ ಹುಡುಗಿಯನ್ನು ರಾತ್ರಿ ವೇಳೆ ಭೇಟಿ ಮಾಡಲು ಆಕೆಯ ಮನೆಗೆ ಹೋದಾಗ, ಯುವತಿ ಪೋಷಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮುಂದಾಗಿದ್ದು ಮಾತ್ರ ಆ ಯುವಕನ ಜೀವನದ ದುರಂತ ಘಟನೆ ಎಂದೇ ಹೇಳಬಹುದು.
ಜಾತಿ, ಧರ್ಮ, ಬಡತನ-ಶ್ರೀಮಂತಿಕೆ, ವಯಸ್ಸಿನ ಅಂತರ, ಗ್ರಾಮದಿಂದ ದೇಶದ ಗಡಿಗಳನ್ನೂ ನೋಡದೇ ಶುರುವಾಗುವುದಕ್ಕೆ ಪ್ರೀತಿ ಕುರುಡು ಎಂದು ಕರೆಯುತ್ತಾರೆ. ಯಾರಿಗೆ ಯಾವಾಗ, ಯಾರ ಮೇಲೆ ಪ್ರೀತಿ ಯಾವ ಕಾರಣಕ್ಕೆ ಆಗುತ್ತದೆ ಎಂಬುದು ಗೊತ್ತೇ ಆಗುವುದಿಲ್ಲ. ಇಬ್ಬರ ಮನಸ್ಸುಗಳು ಒಪ್ಪಿದರೆ ಸಾಕು, ಅಲ್ಲಿ ಪ್ರೀತಿ ಎಂಬ ಗೋಪುರ ಬೆಳೆಯುತ್ತದೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡ ತನ್ನ 16 ವರ್ಷಕ್ಕೆ ಪ್ರೀತಿಯಲ್ಲಿ ಬಿದ್ದಿದ್ದಾನೆ. ಅದು ಕೂಡ ತನಗಿಂದ 7 ವರ್ಷ ದೊಡ್ಡವಳಾದ ಅಂದರೆ 23 ವರ್ಷದ ಯುವತಿಯನ್ನು ಪ್ರೀತಿ ಮಾಡಿದ್ದಾನೆ. ಇಷ್ಟಕ್ಕೆ ಸುಮ್ಮನಿರದೇ ಹದಿಹರೆಯದ ವಯಸ್ಸಿನಲ್ಲಿ ಇನ್ನಿಲ್ಲದ ಆಸೆಯಿಂದ ಯುವತಿಯನ್ನು ರಾತ್ರಿ ವೇಳೆ ಭೇಟಿ ಮಾಡಲು ಆಕೆಯ ಮನೆಗೇ ನುಗ್ಗಿದ್ದಾನೆ. ಆದರೆ, ಪ್ರೀತಿಯ ಭರದಲ್ಲಿ ಮನೆಯೊಳಗೆ ನುಗ್ಗಿದ ಯುವಕನಿಗೆ ಎಲ್ಲರನ್ನೂ ಎದುರಿಸಿ ಹೊರಗೆ ಬರುವ ತಾಕತ್ತು ಇರಲಿಲ್ಲ. ಹೀಗಾಗಿ ಯುವತಿ ಮನೆಯವರಿಗೆ ಸಿಕ್ಕಿಬಿದ್ದು, ಅವರು ಹೇಳಿದ್ದನ್ನೆಲ್ಲಾ ಮಾಡಿ ಜೀವನದ ಅತ್ಯಂತ ಸಂತಸದ ಕ್ಷಣಗಳನ್ನು ದುಃಖದಿಂದ ಸ್ವೀಕಾರ ಮಾಡಿದ್ದಾನೆ.
ಈ ಘಟನೆ ಗೋರಖ್‌ಪುರದ ಪಿಪ್ರೈಚ್ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿದೆ. ಇಲ್ಲಿ 16 ವರ್ಷದ ಹುಡುಗನೊಬ್ಬ ತನ್ನ ಗೆಳತಿಯನ್ನು ಭೇಟಿಯಾಗಲು ರಾತ್ರಿಯ ಕತ್ತಲೆಯಲ್ಲಿ ಅವಳ ಮನೆಗೆ ಹೋಗಿದ್ದಾನೆ. ಅವಳು ತನಗಿಂತ 7 ವರ್ಷ ದೊಡ್ಡವಳಾಗಿದ್ದಳು. ಆದರೆ ವಿಧಿ ಅವರಿಗಾಗಿ ಬೇರೇನೋ ಕಾದಿರಿಸಿತ್ತು. ಇಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಪೊಲೀಸರ ಮಾಹಿತಿಯ ಪ್ರಕಾರ, 16 ವರ್ಷದ ಹುಡುಗನೊಬ್ಬ ತನ್ನ 23 ವರ್ಷದ ಗೆಳತಿಯನ್ನು ಭೇಟಿಯಾಗಲು ರಾತ್ರಿ ಆಕೆಯ ಮನೆಗೆ ಹೋಗಿದ್ದನು. ಹುಡುಗಿಯ ಮನೆಯವರು ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಾಗ, ಹುಡುಗನನ್ನು ಯಾರು, ಎತ್ತ ಪ್ರಶ್ನೆ ಮಾಡಿದ್ದಾರೆ. ಹುಡುಗನ ಮನೆಯವರು ಒಳ್ಳೆಯ ಜೋರಾಗಿರುವ ಪಾರ್ಟಿ ಎಂಬುದನ್ನು ತಿಳಿದುಕೊಂಡಿದ್ದಾರೆ.
ಇದನ್ನೂ ಓದಿ: ಮಧ್ಯರಾತ್ರಿ 2.30ಕ್ಕೆ ಮಹಿಳೆ ಮನೆಯೊಳಗೆ ನುಗ್ಗಿದ ಶಿಕ್ಷಕ; ಬಟ್ಟೆ ಬಿಚ್ಚುವಾಗಲೇ ಗ್ರಾಮಸ್ಥರಿಗೆ ಲಾಕ್!
ಆಗ ಗ್ರಾಮದ ಜನರು ಗಲಾಟೆಯನ್ನು ಕೇಳಿ ಮನೆಯ ಮುಂದೆ ಜಮಾವಣೆ ಆಗಿದ್ದಾರೆ. ಮದುವೆಯಾಗದ ಹುಡುಗಿಯನ್ನು ರಾತ್ರಿ ವೇಳೆ ಭೇಟಿ ಮಾಡಲು ಒಬ್ಬ ಹುಡುಗ ಬಂದಿದ್ದಾನೆ ಎಂದರೆ ಆಕೆಯನ್ನು ಮುಂದೆ ಯಾರೂ ಮದುವೆ ಮಾಡಿಕೊಳ್ಳುವುದಿಲ್ಲ ಎಂಬ ಆತಂಕದಿಂದ ಯುವತಿ ಮನೆಯವರು ಹುಡುಗನನ್ನು ದೇವರ ಮನೆಮುಂದೆ ಕರೆತಂದು ನಿಲ್ಲಿಸಿ ಅಲ್ಲಿಯೇ ಇಬ್ಬರಿಗೂ ಮದುವೆ ಮಾಡಿಸಿದ್ದಾರೆ. ಯುವಕ ಯುವತಿಯ ಹಣೆಗೆ ಸಿಂಧೂರ ಹಚ್ಚುವ ಮೂಲಕ ಮದುವೆ ಆಗಿದ್ದಾನೆ. ಈ ದೃಶ್ಯವನ್ನು ನೋಡಿ ಯುವಕನ ಮನೆಯವರು ಹಾಗೂ ಗ್ರಾಮಸ್ಥರು ಆಘಾತಕ್ಕೊಳಗಾಗಿದ್ದಾರೆ. ಈ ಮದುವೆ ಅನೂರ್ಜಿತ ಮಾಡುವಂತೆ, ನ್ಯಾಯ ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ರಾತ್ರೋರಾತ್ರಿ ಪೊಲೀಸ್ ಠಾಣೆ ತಲುಪಿದ ಮದುವೆ ವಿಚಾರ:
ಯುವಕ-ಯುವತಿ ಮದುವೆಯ ನಂತರ, ಹದಿಹರೆಯದವರು ಮತ್ತು ಅವರ ಕುಟುಂಬವು ಮದುವೆಗೆ ಕಾನೂನುಬದ್ಧ ಸ್ಥಾನಮಾನ ನೀಡಬೇಕೆಂದು ರಾತ್ರಿ ಪಿಪ್ರೈಚ್ ಪೊಲೀಸ್ ಠಾಣೆಗೆ ತಲುಪಿದರು. ಆದರೆ ಪೊಲೀಸ್ ಠಾಣೆಯಲ್ಲಿ ಹಾಜರಿದ್ದ ಕಾನ್‌ಸ್ಟೇಬಲ್ ಯುವತಿಯ ಕುಟುಂಬ ಸದಸ್ಯರೊಂದಿಗೆ ಅಸಭ್ಯವಾಗಿ ವರ್ತಿಸಿ ಅವರನ್ನು ಪೊಲೀಸ್ ಠಾಣೆಯಿಂದ ಓಡಿಸಿದ್ದಾರೆ. ಇಷ್ಟು ಮಾತ್ರವಲ್ಲದೆ, ಪೊಲೀಸ್ ಠಾಣೆಗೆ ಹೋಗಿ ಗಲಾಟೆ ಮಾಡಿದ್ದರಿಂದ ಮದುವೆ ಮಾಡಿಕೊಂಡಿದ್ದ ಇಬ್ಬರು ಹದಿಹರೆಯದವರನ್ನು ಲಾಕಪ್‌ನಲ್ಲಿ ಕೂಡ ಬಂಧಿಸಲಾಗಿತ್ತು. ಬೆಳಿಗ್ಗೆ ಹೊತ್ತಿಗೆ, ಕುಟುಂಬವು ಮತ್ತೆ ಪೊಲೀಸ್ ಠಾಣೆಗೆ ಹೋಗಿ ಮನವಿ ಮಾಡಿಕೊಂಡ ನಂತರ ಇಬ್ಬರನ್ನೂ ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ: ಮದುವೆ ಮಂಟಪದಲ್ಲಿ ವೇದಿಕೆ ಮೇಲೆಯೇ ರೊಚ್ಚಿಗೆದ್ದ ವರ; ವಧುವಿನ ಸ್ಥಿತಿ ಅಧೋಗತಿ!
ಮದುವೆ ಮತ್ತು ಪೊಲೀಸರ ನಡವಳಿಗೆ ಬಗ್ಗೆ ವಿವಾದ:
ಹುಡುಗನ ಕುಟುಂಬವು ಪಂಚಾಯತಿಯನ್ನು ಸೇರಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಇದಕ್ಕೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಎರಡೂ ಕುಟುಂಬಗಳನ್ನು ಸೇರಿಸಿ ಅಭಿಪ್ರಾಯ ಪಡೆದಿದ್ದಾರೆ. ಆಗ ಇಬ್ಬರನ್ನೂ ಮದುವೆ ಮಾಡಿಸುವಂತೆ ಎರಡೂ ಕುಟುಂಬದವರು ಒಪ್ಪಿಗೆ ಕೊಟ್ಟಿದ್ದಾರೆ. ಇದಾದ ನಂತರ ಹುಡುಗ ಮತ್ತು ಹುಡುಗಿ ಇಬ್ಬರನ್ನೂ ದೇವಸ್ಥಾನಕ್ಕೆ ಕರೆದೊಯ್ದು ಔಪಚಾರಿಕವಾಗಿ ವಿವಾಹ ಮಾಡಿಸಿದ್ದಾರೆ. ಇದಾದ ನಂತರ, ನ್ಯಾಯಾಲಯದಲ್ಲಿಯೂ ಕೂಡ ಇಬ್ಬರ ವಿವಾಹವನ್ನೂ ಊರ್ಜಿತ ಮಾಡುವಂತೆ ಮನೆಯವರು ಮನವಿ ಮಾಡಿಕೊಂಡಿದ್ದಾರೆ. ಗೋರಖ್‌ಪುರ ಪೊಲೀಸರು ಕೂಡ ಈ ಪ್ರಕರಣದಲ್ಲಿ ಹೇಳಿಕೆ ನೀಡಿ, ಎರಡೂ ಕುಟುಂಬಗಳ ಪರಸ್ಪರ ಒಪ್ಪಿಗೆಯೊಂದಿಗೆ ಮದುವೆ ನಡೆದಿದೆ ಎಂದು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.