
ಹೊಳೆಯೋದೆಲ್ಲ ಚಿನ್ನವಲ್ಲ, ಬೆಳ್ಳಗಿರೋದಲ್ಲ ಹಾಲಲ್ಲ ಎನ್ನುವ ಮಾತಿದೆ. ಜಪಾನ್ (Japan) ಜನರಿಗೆ ಇದು ಅನ್ವಯವಾಗುತ್ತೆ. ಜಪಾನ್ ತಂತ್ರಜ್ಞಾನದಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಬುಲೆಟ್ ರೈಲಿ (bullet train )ನ ಪಿತಾಮಹ ಎಂಬ ಹೆಗ್ಗಳಿಕೆ ಗಳಿಸಿದೆ. ಅಲ್ಲಿನ ಬೆಳವಣಿಗೆ ನೋಡಿ, ಅಲ್ಲಿನ ಜನರು ಖುಷಿಯಾಗಿದ್ದಾರೆ, ಸಂತೋಷವಾಗಿದ್ದಾರೆ ಅಂತ ನೀವು ಭಾವಿಸಿದ್ರೆ ತಪ್ಪು. ಎಲ್ಲ ಸೌಲಭ್ಯ ಇದ್ರೂ ಅಲ್ಲಿನ ಜನ ಭಾವನಾತ್ಮಕ (emotional)ವಾಗಿ ಕುಗ್ಗುತ್ತಿದ್ದಾರೆ. ಜಪಾನ್ ಜನ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಒಂಟಿತನಕ್ಕೆ ಬಲಿಯಾಗ್ತಿದ್ದಾರೆ. ಜಪಾನ್ ನಲ್ಲಿ ಯುವಕರ ಸಂಖ್ಯೆ ಬಹಳ ಕಡಿಮೆ ಇದೆ. ಇಲ್ಲಿ ವೃದ್ಧರ ಸಂಖ್ಯೆ ವಿಪರೀತವಾಗಿದೆ. ಅದ್ರಲ್ಲೂ ಅನೇಕರಿಗೆ ಮದುವೆ ಆಗಿಲ್ಲ. ಮನೆಯಲ್ಲಿ ಒಂಟಿಯಾಗಿರುವ ಜನರಿಗೆ ಯಾರ ಬೆಂಬಲ ಸಿಗ್ತಿಲ್ಲ. ಜಪಾನ್ ನಲ್ಲಿ ಸಾಮಾಜಿಕ ಪ್ರತ್ಯೇಕತೆ ಒಂದು ಸಾಮಾಜಿಕ ಸಮಸ್ಯೆಯಾಗಿ ಅನೇಕ ವರ್ಷಗಳಿಂದ ಕಾಡ್ತಿದೆ. ಇದನ್ನು ಹಿಕಿಕೊಮೊರಿ ಎಂದು ಕರೆಯಲಾಗುತ್ತದೆ. ಇದ್ರಲ್ಲಿ ಜನರು ಸಮಾಜದಿಂದ ಪ್ರತ್ಯೇಕವಾಗಿ ಬದುಕ್ತಾರೆ.
ಗೊಂಬೆಯೇ ಸಂಗಾತಿ : ಜಪಾನ್ ನಲ್ಲಿ ವಯಸ್ಕರಿಗೂ ಮದುವೆ ಆಗ್ತಿಲ್ಲ. ಕೆಲವರು ಈ ಮದುವೆ, ಪ್ರೀತಿ ಸಂಬಂಧದಿಂದ ದೂರ ಉಳಿಯುವ ಪ್ರಯತ್ನ ಮಾಡ್ತಿದ್ದಾರೆ. ಅದ್ರಲ್ಲಿ ನಿರಾಸಕ್ತಿ ಹೊಂದಿದ್ದಾರೆ. ಇಲ್ಲಿನ ಜನರು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಕಾರಣ ಮದುವೆಗೆ ಆದ್ಯತೆ ನೀಡ್ತಿಲ್ಲ. ಇದೇ ಕಾರಣಕ್ಕೆ ಜಪಾನ್ ಜನರಿಗೆ ಒಂಟಿತನ ಎಷ್ಟು ಹೆಚ್ಚಾಗಿದೆ ಅಂದ್ರೆ ಅವರ ಜೊತೆ ಮಾತನಾಡಲು ಜನರಿಲ್ಲ. ಹಾಗಾಗಿ ಅವರು ಗೊಂಬೆಯನ್ನು ತಮ್ಮ ಸಂಗಾತಿಯಂತೆ ನೋಡ್ತಾರೆ.
ಅಮ್ಮನನ್ನು ಮನೆಯಲ್ಲಿ ಕೂಡಿ ಹಾಕಿ, ಪಾಪ ತೊಳೆದುಕೊಳ್ಳಲು ಕುಂಭಮೇಳಕ್ಕೆ ಹೋದ ಪುತ್ರ! ಆಗಿದ್ದೇನು ನೋಡಿ...
ಹಿಂದಿನ ವರ್ಷ ಜಪಾನ್ ನಲ್ಲಿ 40 ಸಾವಿರ ಒಂಟಿ ಜನರು ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಅನೇಕರು ಸತ್ತಿದ್ದಾರೆ ಎಂಬ ಸಂಗತಿಯೇ ಸಮಾಜಕ್ಕೆ ತಿಳಿದಿರಲಿಲ್ಲ. ಒಂದು ತಿಂಗಳ ನಂತ್ರ ಅವ್ರ ಸಾವಿನ ವಿಷ್ಯ ಗೊತ್ತಾಗಿದೆ. 130 ಮಂದಿ ಹೆಣ ಒಂದು ವರ್ಷಗಳ ಕಾಲ ಅವರ ಅಪಾರ್ಟ್ಮೆಂಟ್ ನಲ್ಲಿ ಬಿದ್ದಿತ್ತು ಅಂತ ಪೊಲೀಸರು ವರದಿ ಮಾಡಿದ್ದಾರೆ.
ಒಂಟಿತನ ಹೋಗಲಾಡಿಸಲು ಅಲ್ಲಿನ ಜನರು ತಮ್ಮ ಬಳಿ ಗೊಂಬೆ ಇಟ್ಟುಕೊಳ್ತಾರೆ. ಮನೆಯಲ್ಲಿ ಮಾತ್ರವಲ್ಲ ಮನೆಯಿಂದ ಹೊರಗೆ ಹೋಗುವಾಗ್ಲೂ ಅವರು ಗೊಂಬೆಯನ್ನು ತೆಗೆದುಕೊಂಡು ಹೋಗ್ತಾರೆ. ವಾಕಿಂಗ್, ಪಾರ್ಕ್ ಗಳಲ್ಲಿ ಗೊಂಬೆ ಜೊತೆ ಸುತ್ತಾಡ್ತಾರೆ. ಅನೇಕರು ಜೀವನ ಪೂರ್ತಿ ಮದುವೆ ಆಗದೆ, ಪತ್ನಿ – ಗರ್ಲ್ ಫ್ರೆಂಡ್ ಇಲ್ದೆ, ಗೊಂಬೆ ಜೊತೆ ಜೀವನ ನಡೆಸ್ತಾರೆ.
ಇಲ್ಲಿ ಹೆಚ್ಚಾಗಿ ಕಾಣಿಸ್ತಿದೆ ಗೊಂಬೆ : ಜಪಾನಿನ ನಗೋರೋ ಹಳ್ಳಿ ಗೊಂಬೆಗಳ ಊರಾಗಿದೆ. ಇಲ್ಲಿನ ಜನರು ಗೊಂಬೆ ಜೊತೆ ವಾಸಿಸೋದನ್ನು ರೂಢಿ ಮಾಡ್ಕೊಂಡಿದ್ದಾರೆ. ಹಿಂದೆ ನಗೋರೋ ಹಳ್ಳಿಯಲ್ಲಿ 300 ಜನಸಂಖ್ಯೆ ಇತ್ತು. ಆದ್ರೀಗ ಅದು 27ಕ್ಕೆ ಇಳಿದಿದೆ. ಈ ಹಳ್ಳಿಯಲ್ಲಿ ಜನಕ್ಕಿಂತ ಹೆಚ್ಚು ಗೊಂಬೆಗಳನ್ನು ನೀವು ಕಾಣ್ಬಹುದು. ಒಂದು ಅಂದಾಜಿನ ಪ್ರಕಾರ ಈ ಗ್ರಾಮದಲ್ಲಿ 300 ಗೊಂಬೆಗಳಿವೆ. ಇನ್ನೊಂದು ಇದೇ ರೀತಿಯ ಹಳ್ಳಿ ಕ್ಯೋಟೋ ಬಳಿ ಇದೆ. ಅದ್ರ ಹೆಸರು ಇಚಿನೊನೊದ ಹ್ಯಾಮ್ಲೆಟ್. ಇಲ್ಲಿನ ಜನಸಂಖ್ಯೆ 60. ಇಲ್ಲಿನ ಜನರು ಒಂಟಿತನದಿಂದ ಹೊರಗೆ ಬರಲು ಹತ್ತಿಯಿಂದ ಮಾಡಿದ ಗೊಂಬೆಯನ್ನು ಆಶ್ರಯಿಸಿದ್ದಾರೆ.
ಸೊಸೆಯಂದಿರು ಈ 9 ಕಾರಣಗಳಿಗಾಗಿ ಅತ್ತೆಯನ್ನು ದ್ವೇಷಿಸುತ್ತಾರೆ!
2050 ರ ವೇಳೆಗೆ ಒಂಟಿಯಾಗಿ ವಾಸಿಸುವ ವೃದ್ಧರ ಸಂಖ್ಯೆ 10 ಮಿಲಿಯನ್ ಮೀರುವ ಸಾಧ್ಯತೆ ಇದೆ. ಒಂಟಿಯಾಗಿ ವಾಸಿಸುವವರ ಒಟ್ಟು ಸಂಖ್ಯೆ 2.3 ಕೋಟಿ ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ಜಪಾನ್‌ನಲ್ಲಿ ಜನರು ಒಂಟಿಯಾಗುತ್ತಿರುವ ಬಗ್ಗೆ ಸರ್ಕಾರವೂ ಕಳವಳ ವ್ಯಕ್ತಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಕ್ರಮ ತೆಗೆದುಕೊಳ್ತಿದೆಯಾದ್ರೂ, ಫಲ ನೀಡ್ತಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.