Chanakya Niti: ನಿಮ್ಮ ಗೆಳೆತನ ಪರೀಕ್ಷಿಸೋ 11 ಸನ್ನಿವೇಶಗಳು ಇವು, ಚಾಣಕ್ಯ ನೀತಿ ಕೇಳಿ

Published : Feb 20, 2025, 06:41 PM ISTUpdated : Feb 21, 2025, 10:01 AM IST
Chanakya Niti: ನಿಮ್ಮ ಗೆಳೆತನ ಪರೀಕ್ಷಿಸೋ 11 ಸನ್ನಿವೇಶಗಳು ಇವು, ಚಾಣಕ್ಯ ನೀತಿ ಕೇಳಿ

ಸಾರಾಂಶ

ನಿಮ್ಮ ಸ್ನೇಹಿತರು ನಿಜವಾಗಿಯೂ ನಿಮ್ಮ ಸ್ನೇಹಿತರಾ? ಬಿಕ್ಕಟ್ಟಿನ ಸಂದರ್ಭಗಳಲ್ಲಿ ನಿಮ್ಮ ಜೊತೆ ನಿಲ್ತಾರಾ? ನಿಮಗೆ ಸಂತೋಷ ಆದಾಗ ಅವರಿಗೂ ಸಂತೋಷ ಆಗುತ್ತಾ? ಸ್ನೇಹವನ್ನು ಪರೀಕ್ಷಿಸುವುದು ಹೇಗೆ?  ಆಚಾರ್ಯ ಚಾಣಕ್ಯರು ಸ್ನೇಹವನ್ನು ಪರೀಕ್ಷಿಸುವ 11 ಸನ್ನಿವೇಶಗಳನ್ನು ಪಟ್ಟಿ ಮಾಡಿದ್ದಾರೆ. 

ಕೆಲವು ಗೆಳೆಯ/ತಿಯರು ನಿಮಗೆ ಆಪ್ತರಾಗಿರಬಹುದು. ಸಂಕಷ್ಟದ ಸಮಯದಲ್ಲಿ ನಿಮ್ಮ ನೆರವಿಗೆ ಬರ್ತಾರೆ ಇವ್ರು ಅಂತ ನೀವು ಅಂದುಕೊಂಡಿರಬಹುದು. ಆದ್ರೆ ನಿಮ್ಮ ಸ್ನೇಹ ಎಷ್ಟು ಪ್ರಬಲ ಮತ್ತು ನೈಜ? ಈ ಸನ್ನಿವೇಶಗಳು ನಿಮ್ಮ ಸ್ನೇಹದ ಅಸಲಿಯತ್ತನ್ನು ಪರೀಕ್ಷಿಸಿ ಬೆಳಕಿಗೆ ತರುತ್ತವಂತೆ! ಚಾಣಕ್ಯ ಅವುಗಳನ್ನು ಪಟ್ಟಿ ಮಾಡಿದ್ದಾರೆ. ಅವು ಯಾವುವು ಅಂತ ನೋಡಿ. 

1) ನಿಮಗೆ ಹಣಕಾಸಿನ ಸಹಾಯ ಬೇಕಾದಾಗ. ಅಗತ್ಯಕ್ಕೆ ಒದಗುವ ಸ್ನೇಹಿತ ನಿಜವಾಗಿಯೂ ಸ್ನೇಹಿತ. ಅಂತಹ ಸಂದರ್ಭಗಳಲ್ಲಿ, ನಿಮ್ಮ ನಿಜವಾದ ಸ್ನೇಹಿತರು ಯಾರೆಂದು ನಿಮಗೆ ತಿಳಿಯುತ್ತದೆ. ಇದ್ದರೂ ಹಣ ಕೊಡಲು ಒಪ್ಪದವರು, ಇಲ್ಲದಿದ್ದರೂ ಹಣ ಹೊಂದಿಸಿ ಕೊಡುವವರು, ಇವರಲ್ಲಿ ನಿಜವಾದ ಸ್ನೇಹಿತ ಯಾರು ಎಂಬುದು ನಿಮಗೇ ಗೊತ್ತಾಗುತ್ತದೆ.

2) ಆಹಾರದ ವಿಷಯದಲ್ಲಿ ಬರುವ ಬಿಕ್ಕಟ್ಟುಗಳು. ಆಹಾರದಿಂದಾಗಿ ಕೊನೆಗೊಂಡ ಸ್ನೇಹಗಳಿವೆ. ಇದು ಗಂಭೀರ ಸಂಗತಿ, ತಮಾಷೆ ಇಲ್ಲ. ಸಸ್ಯಾಹಾರಿಯಾದ ನಿಮಗೆ ಒತ್ತಾಯಿಸಿ ಮಾಂಸಾಹಾರ ತಿನಿಸಿದರೆ, ನಿಮಗೆ ಇಷ್ಟವಾದ ತಿನಿಸು ಕಸಿದುಕೊಂಡು ತಿಂದರೆ, ನಿಮಗಿಷ್ಟವಿಲ್ಲದ್ದನ್ನು ಒತ್ತಾಯವಾಗಿ ತಿನ್ನಿಸಿ ಕುಡಿಸಿದರೆ, ಆಗ ಸ್ನೇಹ ಕುಸಿಯುತ್ತದೆ.  

3) ನೀವಿಬ್ಬರೂ ಒಂದೇ ಹುಡುಗಿ ಅಥವಾ ಹುಡುಗನನ್ನು ಲವ್‌ ಮಾಡಿದಾಗ. ಬಹುಶಃ ಇದನ್ನು ವಿವರಿಸಬೇಕಿಲ್ಲ. ಇದು ಸ್ವಲ್ಪ ಟ್ರಿಕಿ ವಿಷಯ. ನೀವು ನಿಜವಾಗಿಯೂ ನಿಮ್ಮ ಸ್ನೇಹಿತ/ತೆಯನ್ನು ಪ್ರೀತಿಸುತ್ತಿದ್ದರೆ, ಹುಡುಗ/ಗಿಯನ್ನು ಬಿಟ್ಟುಕೊಡುತ್ತೀರಿ. ಆದರೆ ನಿಮ್ಮ ಸ್ನೇಹಿತ/ತೆಯೂ ಇದೇ ನಿರ್ಧಾರ ತಗೋತಾರಾ? 

4) ಪರೀಕ್ಷೆಯಲ್ಲಿ ನಿಮ್ಮ ಸ್ನೇಹಿತ ನಿಮಗಿಂತ ಹೆಚ್ಚು ಅಂಕಗಳನ್ನು ಗಳಿಸಿದಾಗ. ಅಥವಾ ನಿಮ್ಮದೇ ಕ್ಷೇತ್ರದಲ್ಲಿ ನಿಮಗಿಂತ ಹೆಚ್ಚಿನ ಸಾಧನೆಯನ್ನು ಮಾಡಿದಾಗ. 
ಅಸೂಯೆ ಎಂಬುದು ಸ್ನೇಹದ ಕೊಲೆಗಾರ. ನಿಮ್ಮ ಸ್ನೇಹಿತನ ಸಂತೋಷದಲ್ಲಿ ಸಂತೋಷವನ್ನು ಕಂಡುಕೊಳ್ಳಲು ನಿಮಗೆ ದೊಡ್ಡ ಹೃದಯ ಬೇಕು.

5) ನಿಮ್ಮ ಸ್ನೇಹಿತನ ಗೆಳೆಯ/ಗೆಳತಿಯನ್ನು ನೀವು ಇಷ್ಟಪಡದಿದ್ದಾಗ. ನಿಮ್ಮ ಸ್ನೇಹಿತ ತನ್ನ ಗೆಳತಿ/ಗೆಳೆಯನ ಬಗ್ಗೆ ನಿಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ಇಷ್ಟಪಡದಿರಬಹುದು. ಆದರೆ ನಂತರ, ಅವರು ನಿಮ್ಮ ಕಠೋರವಾದ ‘ನಾನು ನಿನಗೆ ಮೊದಲೇ ಹೇಳಿದ್ದೆʼ ಎಂಬ ಮಾತು ಕೇಳಿಸಿಕೊಳ್ಳಲು ಹಿಂತಿರುಗಿದ್ದಾನೆ ಎಂದರೆ, ಅಂಥವರನ್ನು ಸ್ವೀಕರಿಸಿ.

6) ನಿಮಗಾಗಿ ಅವರ ಪರ್ಸನಲ್‌ ಯೋಜನೆ ರದ್ದುಪಡಿಸುತ್ತಾರಾ? ನಿಮಗೇನೋ ಸಮಸ್ಯೆಯಾದಾಗ, ಅದನ್ನು ಅಟೆಂಡ್ ಮಾಡೋಕೆ ತನ್ನ ವೈಯಕ್ತಿಕ ಕೆಲಸವನ್ನು ಬದಿಗಿಟ್ಟು ಬರುವವರು ನಿಜವಾದ ಸ್ನೇಹಿತರು. 

7) ನೀವು ಮದುವೆಯಾಗುವ ಮೊದಲಿಗರಾದಾಗ. ಆಗ ಗೆಳೆಯ/ತಿಯರಲ್ಲಿ ಅಸೂಯೆ ತನ್ನ ಕೊಳಕು ತಲೆ ಎತ್ತಬಹುದು.   

Chanakya Niti: ನಿಮ್ಮ ಬಾಸ್‌ ದಡ್ಡರಾಗಿದ್ದರೆ ನೀವು ಜಾಣತನ ತೋರಿಸಬೇಡಿ ಅಂತಾನೆ ಚಾಣಕ್ಯ!

8) ನಿಮಗೆ ಅವಮಾನವಾದಾಗ ನಿಮ್ಮ ಗೆಳೆಯರು ಎಲ್ಲಿರುತ್ತಾರೆ ಗಮನಿಸಿ. ನಿಮ್ಮನ್ನು ಸಮರ್ಥಿಸಿಕೊಂಡು ನಿಮ್ಮ ಪರವಾಗಿ ನಿಲ್ಲುತ್ತಾರೋ, ಅಥವಾ ಅವಮಾನಿಸಿದವರ ಜೊತೆಗೆ ನಿಲ್ಲುತ್ತಾರೋ? 

9) ನೀವು ಅವರಿಗೆ ಉಡುಗೊರೆಯನ್ನು ಕೊಡುವ ಬಗೆ ಹೇಗೆ? ಇಂದು ನಿಮ್ಮ ಬೆಸ್ಟ್‌ ಫ್ರೆಂಡ್‌ ಜನ್ಮದಿನ, ಅವರು ನಗುತ್ತಿರುವುದನ್ನು ನೀವು ನೋಡಲು ಬಯಸುತ್ತೀರಿ. ನೀವು ಆಗ ಅಗ್ಗವಾಗಿ ವರ್ತಿಸುತ್ತೀರಾ ಅಥವಾ ಅರ್ಥವತ್ತಾದ ಉಡುಗೊರೆಯ ಮೂಲಕ ಅವರನ್ನು ಸಂತೋಷವಾಗಿಡಲು ಪ್ರಯತ್ನಿಸುತ್ತೀರಾ?

10) ನೀವು ಮುಂಜಾನೆ 4 ಗಂಟೆಗೆ ಕರೆ ಮಾಡಿದಾಗ. ರಾತ್ರಿ ನಿದ್ರೆಯ ಬಗ್ಗೆ ಕೊರಗದೆ ಸ್ನೇಹಿತರು ನಿಮ್ಮ ಅರ್ಜೆಂಟ್‌ ಕರೆಗಳನ್ನು ತೆಗೆದುಕೊಂಡರೆ, ಅಭಿನಂದನೆಗಳು. ನೀವು ಜೀವ ಸ್ನೇಹಿತರನ್ನು ಕಂಡುಕೊಂಡಿದ್ದೀರಿ. ಅವರಿಗೆ ಬೇಕಾದಾಗ ಮಾತ್ರ ಕರೆ ಮಾಡಿದರೆ ಅಥವಾ ಎತ್ತಿದರೆ, ಅವರು ಅವಕಾಶವಾದಿಗಳು. 

11) ನೀವು ಕೆಟ್ಟ ಬ್ರೇಕಪ್‌ನಿಂದ ಹತಾಶರಾಗಿದ್ದಾಗ. ನಿಮ್ಮ ಪಕ್ಕದಲ್ಲಿ ನೀವು ಒಳ್ಳೆಯ ಸ್ನೇಹಿತರನ್ನು ಹೊಂದಿದ್ದರೆ, ನೀವು ಎಷ್ಟೇ ಕಠಿಣವಾದ ಬ್ರೇಕಪ್‌ನಿಂದಲೂ ಹೊರಬರಬಹುದು!

Chanakya Niti: ಚಾಣಕ್ಯ ಪ್ರಕಾರ ಈ 4 ಜಾಗದಲ್ಲಿ ಇದ್ರೆ ಶ್ರೀಮಂತರಾಗಲ್ಲ
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!