ವರ ಕೈಹಿಡಿದಾಗ ಹೀಗೆ ರಿಯಾಕ್ಷನ್​ ಕೊಡೋದಾ ವಧು? ಸುಟ್ಟು ಭಸ್ಮವಾಗೋಗ್ತಿ ಕಣೋ ಅಂತಿರೋ ನೆಟ್ಟಿಗರು!

Published : Feb 20, 2025, 04:42 PM ISTUpdated : Feb 20, 2025, 05:58 PM IST
ವರ ಕೈಹಿಡಿದಾಗ ಹೀಗೆ ರಿಯಾಕ್ಷನ್​ ಕೊಡೋದಾ ವಧು? ಸುಟ್ಟು ಭಸ್ಮವಾಗೋಗ್ತಿ ಕಣೋ ಅಂತಿರೋ ನೆಟ್ಟಿಗರು!

ಸಾರಾಂಶ

ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ಪ್ರೇಮ ವಿವಾಹಗಳು ಏರುತ್ತಿದ್ದರೂ, ಇಷ್ಟವಿಲ್ಲದ ವಿವಾಹಗಳು ನಡೆಯುತ್ತಿವೆ, ಇದರಿಂದ ಯುವತಿಯರು ಬಲಿಯಾಗುತ್ತಿದ್ದಾರೆ. ಹೆಣ್ಣುಮಕ್ಕಳನ್ನು ಬಲವಂತವಾಗಿ ಮದುವೆ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ವಧುವೊಬ್ಬಳು ಅಸಮಾಧಾನದಿಂದ ಪ್ರತಿಕ್ರಿಯಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಅವಿವಾಹಿತ ಪುರುಷರಲ್ಲಿ ಆತಂಕ ಮೂಡಿಸಿದೆ.

ಮದುವೆ ಎನ್ನುವುದು ಏಳೇಳು ಜನ್ಮಗಳ ಅನುಬಂಧ ಎನ್ನುವುದು ಉಂಟು. ಮದುವೆ ಸ್ವರ್ಗದಲ್ಲಿಯೇ ನಡೆದಿರುತ್ತದೆ, ಭೂಮಿಯ ಮೇಲೆ ನಡೆಯುವುದು ನಿಮಿತ್ತ ಮಾತ್ರ ಅಂತೆಲ್ಲಾ ಹೇಳುವುದು ಉಂಟು. ಆದರೆ, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಡಿವೋರ್ಸ್ ಪ್ರಕರಣಗಳನ್ನು ನೋಡಿದರೆ ಮದುವೆ ಎಲ್ಲಿ ಆಗಿರುತ್ತದೆ ಎಂದು ಕೇಳುವವರೂ ಹೆಚ್ಚಿದ್ದಾರೆ. ಲವ್​ ಮ್ಯಾರೇಜ್​ಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಡಿವೋರ್ಸ್​ ಸಂಖ್ಯೆಯೂ ಅಷ್ಟೇ ಏರುತ್ತಿದ್ದರೂ, ಅದೇ ಇನ್ನೊಂದೆಡೆ, ಇಷ್ಟವಿಲ್ಲದ ಅರೇಂಜ್ಡ್​ ಮ್ಯಾರೇಜ್​ಗಳೂ ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ಬಲಿಪಶುವಾಗುವುದು ಯುವತಿ ಎನ್ನುವುದು ಮಾತ್ರ ಸತ್ಯ. 

ಎರಡೂ ಕುಟುಂಬದವರು ಮೊದಲೇ ಮಾತನಾಡಿಕೊಂಡಿರುವ ಕಾರಣಕ್ಕೋ, ಮಗಳು ಯಾರನ್ನೋ ಲವ್​ ಮಾಡುತ್ತಿದ್ದಾಳೆ ಎಂದು ಗೊತ್ತಾದ ಕಾರಣದಿಂದಲೋ   ಇಲ್ಲವೇ ಇನ್ನಾವುದೋ ಕಾರಣಕ್ಕೆ ತಮ್ಮ ಮಕ್ಕಳನ್ನು ಅದರಲ್ಲಿಯೂ ಹೆಚ್ಚಾಗಿ ಮಗಳನ್ನು ಇಷ್ಟವಿಲ್ಲದ ಕಡೆಗೆ ಮದುವೆ ಮಾಡಿಕೊಡುತ್ತಿರುವ ಘಟನೆಗಳು ಇಂದಿಗೂ ನಡೆಯುತ್ತಲೇ ಇವೆ. ಇಂಥ ಮದುವೆಗಳಿಂದ ಗಂಡು-ಹೆಣ್ಣು ಇಬ್ಬರೂ ದಾಂಪತ್ಯ ಜೀವನದಲ್ಲಿ ಕಹಿಯನ್ನೇ ಅನುಭವಿಸಬೇಕಾಗುತ್ತದೆ ಎಂದು ತಿಳಿದಿದ್ದರೂ ದೊಡ್ಡವರು ಎನ್ನಿಸಿಕೊಂಡವರು ಮದುವೆ ಮಾಡಿದ ಬಳಿಕ ಎಲ್ಲವೂ ಸರಿಯಾಗುತ್ತೆ ಎನ್ನುವ ಮಾತಿಗೆ ಕಟ್ಟುಬಿದ್ದು ಮದುವೆ ಮಾಡಿಸುವುದು ಇದೆ.

ಕಣ್ಣೀರು ಒರೆಸಲು ಬೇಕಾಗಿದ್ದಾರೆ ಸುಂದರ ಯುವಕರು! ದಿನಕ್ಕೆ 5 ಸಾವಿರ ರೂ: ಇಲ್ಲಿದೆ ಫುಲ್​ ಡಿಟೇಲ್ಸ್​..

ಈಗ ಮದುಮಗಳಿಗೆ ಇಷ್ಟವಿಲ್ಲದ ಮದುವೆಯೋ ಅಥವಾ ಇನ್ನೇನೋ ತಿಳಿಯದು. ಆದರೆ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ಈ ವಿಡಿಯೋ ನೋಡಿ ನೆಟ್ಟಿಗರು ಅದರಲ್ಲಿಯೂ ಬ್ಯಾಚುಲರ್ಸ್​ ಮಾತ್ರ ಸುಸ್ತಾಗಿ ಹೋಗಿದ್ದಾರೆ. ಮದುವೆಯಾಗದಿದ್ದರೂ ಪರವಾಗಿಲ್ಲ, ಈ ರೀತಿ ರಿಯಾಕ್ಷನ್​ ಕೊಡುವ ಹುಡುಗಿ ಬೇಡಪ್ಪಾ ಬೇಡ ಎನ್ನುತ್ತಿದ್ದಾರೆ ಅವಿವಾಹಿತ ಪುರುಷರು! 

ಮನಸ್ಸಿನಲ್ಲಿ ಕಿರಿಕಿರಿ ಅನುಭವಿಸುತ್ತಿರುವ, ಎದುರಿಗೆ ನಗುಮೊಗ ಹೊತ್ತ ವಧುವಿನ ಮನಸ್ಸಿಗೆ ಹಿಡಿದ ಕನ್ನಡಿಯಾಗಿದೆ ಈ ವಿಡಿಯೋ. ವರ ಆಕೆಯ ಕೈ ಹಿಡಿಯುತ್ತಿದ್ದಂತೆಯೇ ಮದುಮಗಳು ದುರುಗುಟ್ಟು ನೋಡುತ್ತಿದ್ದಾಳೆ. ಇದನ್ನು ನೋಡಿದರೆ ಅಕೆಗೆ ಒತ್ತಾಯಪೂರ್ವಕವಾಗಿ ಮದುವೆ ಮಾಡಲಾಗುತ್ತಿದೆಯೇ ಎನ್ನುವ ಸಂದೇಹ ಕಾಡುವುದಂತೂ ನಿಜ. ಆದರೆ ಸಹಜವಾಗಿ ಮದುವೆಯ ದಿನ ಗಾಬರಿಯಿಂದ ಈ ರೀತಿ ರಿಯಾಕ್ಟ್​ ಮಾಡಿರಬಹುದು ಎನ್ನುವುದು ಕೆಲವು ನೆಟ್ಟಿಗರ ಅಭಿಮತವಾದರೂ,  ಈ ರೀತಿ ಆಕೆ ಮೂರನೆಯ ಕಣ್ಣನ್ನು ತೆರೆದವರಂತೆ ರಿಯಾಕ್ಷನ್​ ಕೊಟ್ಟಿರುವುದಿಂದ ವರ ಸುಟ್ಟು ಭಸ್ಮವಾಗಿದಿದ್ದರೆ ಸಾಕು ಅಂತಿದ್ದಾರೆ ನೆಟ್ಟಿಗರು. ವಧುವನ್ನು ನೋಡಿ, ಪಕ್ಕದಲ್ಲಿ ಇರುವ ಮಹಿಳೆ ಆಕೆಯನ್ನು ದುರುಗುಟ್ಟುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಬಹುಶಃ ಆಕೆ ವಧುವಿನ ತಾಯಿ ಇರಲಿಕ್ಕೆ ಸಾಕು, ಮಗಳು ಎಲ್ಲಿ ಓಡಿ ಹೋಗುತ್ತಾಳೋ ಎಂದು ಹದ್ದಿನ ಕಣ್ಣು ನೆಟ್ಟಿದ್ದಾಳೆ ಎಂದೆಲ್ಲಾ ತಮ್ಮದೇ  ಆದ ರೀತಿಯಲ್ಲಿ ಕಮೆಂಟ್​ ಸುರಿಮಳೆಯಾಗುತ್ತಿದೆ. 

ಮಗಳ ಮಗುವಿಗೇ ಅಮ್ಮನಾದ ಅಜ್ಜಿ! ಮುಟ್ಟು ನಿಂತರೂ ಗರ್ಭಿಣಿಯಾಗೋ ಸಾಹಸ ಮಾಡಿದ ಈಕೆ ರೋಚಕ ಕಥೆ ಕೇಳಿ

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!