ಮದುವೆಯಾದ ಹೆಣ್ಣುಮಕ್ಕಳು ಏಕೆ ಅತ್ತೆಯನ್ನು ದ್ವೇಷಿಸುತ್ತಾರೆ. ಉತ್ತಮ ಸೊಸೆಯಾಗಲು ಪ್ರಯತ್ನಿಸದಿರಲು ಕೆಲವು ಕಾರಣಗಳಿವೆ.
ಅತ್ತೆ, ಸೊಸೆ ಜಗಳಕ್ಕೆ ಮುಖ್ಯ ಕಾರಣ ಅತ್ತೆಯ ಅಭದ್ರತೆಯ ಭಾವನೆ. ಮಗನನ್ನು ತನ್ನಲ್ಲೇ ಇಟ್ಟುಕೊಳ್ಳಬೇಕೆಂಬ ಮನೋಭಾವ.
ಹೊಸ ಸೊಸೆ ಮನೆಗೆ ಬಂದಾಗ ಅತ್ತೆ ಖಾಲಿಯಾದ ಭಾವನೆ ಅನುಭವಿಸುತ್ತಾರೆ. ಸೊಸೆ ತಮ್ಮಿಂದ ಮಗನನ್ನು ಕಸಿದುಕೊಳ್ಳುತ್ತಾಳೆ ಎಂಬ ಭಯ. ಮಗ ನನ್ನ ಮಾತು ಕೇಳುತ್ತಿಲ್ಲ ಎಂಬ ಆತಂಕ.
ಸೊಸೆ ಏನು ಮಾಡಿದರೂ ತೃಪ್ತಿಪಡದೆ ಅವಳನ್ನು ಟೀಕಿಸುತ್ತಲೇ ಇರುವುದು. ಅವಳ ಸ್ವಾಭಿಮಾನವನ್ನು ಕೆಣಕಿ ಅವಮಾನಿಸುವುದು.
ಅತ್ತೆ ತನ್ನ ಮಗ ಮತ್ತು ಸೊಸೆಯ ನಡುವೆ ಜಗಳವನ್ನು ಸೃಷ್ಟಿಸುತ್ತಾರೆ. ಇದರಿಂದ ಸೊಸೆಗೆ ಅಸಮಾಧಾನ ಉಂಟಾಗುತ್ತದೆ.
ಸೊಸೆಯ ಪ್ರತಿ ನಡೆಯನ್ನೂ ನಿಯಂತ್ರಿಸಲು ಕೆಲವು ಅತ್ತೆಯಂದಿರು ಪ್ರಯತ್ನಿಸುತ್ತಾರೆ. ಅನೇಕ ನಿರ್ಬಂಧಗಳನ್ನು ಪದೇ ಪದೇ ವಿಧಿಸಲಾಗುತ್ತದೆ.
ಅತ್ತೆ ತನ್ನ ಸೊಸೆಯ ಮೇಲೆ ಕೋಪಗೊಂಡು ಅವಳ ಅಪ್ಪ, ಅಮ್ಮನನ್ನು ಬೈಯುವುದು. ಯಾವಾಗಲೂ ವನ್ಮದಿಂದ ನಡೆದುಕೊಳ್ಳುವುದು.
ನಿರಂತರ ಕಿರಿಕಿರಿಯಿಂದ ಅತ್ತೆಯೇ ತನ್ನ ಪ್ರೀತಿಗೆ ವಿಲನ್ ಎಂದು ಸೊಸೆ ಭಾವಿಸುತ್ತಾಳೆ. ಆದ್ದರಿಂದ ಅತ್ತೆಯನ್ನು ಗೌರವಿಸುವುದಿಲ್ಲ.
ಸೊಸೆಗೆ ಪ್ರಾಮುಖ್ಯತೆ ನೀಡದೆ, ಅತ್ತೆ ಅಧಿಕಾರ ಮಾಡುವುದು. ಸೊಸೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು.
ತನ್ನ ಮನೆಗೆ ಬರುವ ಹೆಣ್ಣನ್ನು ಸೊಸೆಯೆಂದು ಭಾವಿಸದೆ ತನ್ನ ಮಗಳೆಂದು ಭಾವಿಸಿದರೆ ಅತ್ತೆ ಸೊಸೆಯ ಸಂಬಂಧ ಸುಧಾರಿಸುತ್ತದೆ.
ಭಗವಾನ್ ಶಿವನಿಗಿರುವ ಜನಪ್ರಿಯ ಹೆಸರುಗಳು, ಮುದ್ದಾದ ಗಂಡು ಮಗುವಿಗೆ ಈ ಹೆಸರಿಡಿ
ಮದುವೆಗೆ ಮುನ್ನ ಕನ್ನಡದ ನಟಿ ಸೇರಿ ಮೂವರ ಜೊತೆ ಕೊಹ್ಲಿ ಡೇಟಿಂಗ್!
ಮಕ್ಕಳ ಲವ್‌ಸ್ಟೋರಿನ ಹ್ಯಾಂಡಲ್ ಮಾಡೋದು ಹೇಗೆ? ಪೋಷಕರಿಗೆ ಪ್ರೇಮಾನಂದ್ ಕಿವಿಮಾತು
ಗಂಡ ಹೆಂಡತಿ ಒಬ್ಬರಿಗೊಬ್ಬರು ಕ್ಷಮೆ ಕೇಳದಿದ್ದರೆ ಏನಾಗುತ್ತೆ?