ಗಂಡ ಅವನಲ್ಲ ಅವಳು! ಪತಿ ಈ ಹಿಂದೆ ಹೆಂಗಸಾಗಿದ್ದನಂತೆ, 8 ವರ್ಷದ ಬಳಿಕ ತಿಳಿದು ಹೆಂಡತಿ ಶಾಕ್‌

Published : Sep 17, 2022, 03:29 PM ISTUpdated : Sep 17, 2022, 03:34 PM IST
ಗಂಡ ಅವನಲ್ಲ ಅವಳು! ಪತಿ ಈ ಹಿಂದೆ ಹೆಂಗಸಾಗಿದ್ದನಂತೆ, 8 ವರ್ಷದ ಬಳಿಕ ತಿಳಿದು ಹೆಂಡತಿ ಶಾಕ್‌

ಸಾರಾಂಶ

ಕಾಲ ಕೆಟ್ಹೋಗಿದೆ. ಮದ್ವೆ ಹೆಸರಲ್ಲಿ ಮೋಸ ಮಾಡುವುದು ಸಾಮಾನ್ಯವಾಗಿದೆ. ಇಲ್ಲೊಬ್ಬಾಕೆಗೆ ಆಗಿದ್ದು ಅದೇ. ಮದ್ವೆಯಾಗಿ 8 ವರ್ಷವಾದರೂ ಗಂಡ ಮಹಿಳೆಯೆಂಬ ವಿಚಾರ ಗೊತ್ತೇ ಆಗಿರಲ್ಲಿಲ್ಲ. ಹನಿಮೂನ್‌ಗೆ ಹೋಗಿದ್ದರು ರಹಸ್ಯ ಬಯಲಾಗಿರಲ್ಲಿಲ್ಲ. ಪತಿಯ ಲಿಂಗ ಸಮಸ್ಯೆ ಕುರಿತ ವೈದ್ಯಕೀಯ ವರದಿ ನೋಡಿ ದಂಗಾಗಿದ್ದಾರೆ. ತನ್ನನ್ನು ವಂಚಿಸಿದ್ದಕ್ಕಾಗಿ ಪೊಲೀಸರಿಗೆ ಪತಿ ಹಾಗೂ ಅವರ ಕುಟುಂಬದ ವಿರುದ್ಧ ದೂರು ನೀಡಿದ್ದಾರೆ.

ಗುಜರಾತ್‍: ಗುಜರಾತ್‍ನ 40 ವರ್ಷ ವಯಸ್ಸಿನ ಮಹಿಳೆಯೊಬ್ಬರಿಗೆ ವಿವಾಹವಾಗಿ ಎಂಟು ವರ್ಷದ ಬಳಿಕ ತನ್ನ ಪತಿ  ಮಹಿಳೆ ಎಂಬ ಸತ್ಯ ತಿಳಿದು ಬಂದಿರೋ ಅಪರೂಪದ ಪ್ರಕರಣ ವರದಿಯಾಗಿದೆ. ಮಹಿಳೆ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಪುರುಷ ರೂಪ ಪಡೆದು ಈ ಮಹಿಳೆಯನ್ನು ವಿವಾಹವಾಗಿದ್ದ ಅಂಶ ಬೆಳಕಿಗೆ ಬಂದಿದೆ. ಗೋತ್ರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಶೀತಲ್ ಎಂಬ ಮಹಿಳೆ ದೂರು ನೀಡಿದ್ದಾರೆ. ವಿರಾಜ್ ವರ್ಧನ್ ವಿರುದ್ಧ ದೂರು ದಾಖಲಿಸಲಾಗಿದೆ. ವಿರಾಜ್ ವರ್ಧನ್ ಈ ಹಿಂದೆ ಈ ಮೊದಲು ವಿಜೈತಾ ಆಗಿದ್ದರು. ಹೀಗಾಗಿ ಇವರ ವಿರುದ್ಧ ಶೀತಲ್‌, ಅಸಹಜ ಲೈಂಗಿಕತೆ ಮತ್ತು ವಂಚನೆ ಆರೋಪ ಹೊರಿಸಿದ್ದಾರೆ. ಪತಿಯ ಕುಟುಂಬದವರ ವಿರುದ್ಧವೂ ಎಫ್‍ಐಆರ್ ದಾಖಲಿಸಲಾಗಿದೆ.

ವೈವಾಹಿಕ ವೆಬ್‍ಸೈಟ್ ಮೂಲಕ ವಿರಾಜ್ ವರ್ಧನ್‍ ಭೇಟಿಯಾಗಿದ್ದ ಶೀತಲ್‌
ಒಂಬತ್ತು ವರ್ಷದ ಹಿಂದೆ ವೈವಾಹಿಕ ವೆಬ್‍ಸೈಟ್ ಒಂದರ ಮೂಲಕ ವಿರಾಜ್ ವರ್ಧನ್‍ನನ್ನು ಶೀತಲ್ ಭೇಟಿಯಾಗಿದ್ದರು. ಶೀತಲ್ ಅವರ ಮಾಜಿ ಪತಿ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟ ಬಳಿಕ 14 ವರ್ಷದ ಮಗಳನ್ನು ಶೀತಲ್‌ ಒಂಟಿಯಾಗಿದ್ದುಕೊಂಡು ಸಾಕುತ್ತಿದ್ದರು. ಹೀಗಾಗಿ ಮರುಮದುವೆಯಾಗಲೆಂದು ಯೋಜನೆ ರೂಪಿಸಿದ್ದರು. 2014ರಲ್ಲಿ ಕುಟುಂಬ ಸದಸ್ಯರ (Family members) ಸಮ್ಮುಖದಲ್ಲಿ ವಿರಾಜ್ ವರ್ಧನ್ ಮತ್ತು ಶೀತಲ್‌ ವಿವಾಹ (Marriage)ವಾಗಿತ್ತು. ಈ ಜೋಡಿ ಕಾಶ್ಮೀರಕ್ಕೆ ಮಧುಚಂದ್ರಕ್ಕೆ (Honeymoon) ತೆರಳಿತ್ತು. 

Weird Wedding: ಇಲ್ಲಿ ವರನಲ್ಲ, ಅವನ ಸಹೋದರಿ ಜೊತೆ ವಧು ಸಪ್ತಪದಿ ತುಳಿಯುತ್ತಾಳೆ !

ಆದರೆ ವಿರಾಜ್‌ ವರ್ಧನ್‌ ಒಂದಲ್ಲ ಒಂದು ಕಾರಣ ನೀಡಿ ಹಲವು ದಿನಗಳ ಕಾಲ ವೈವಾಹಿಕ ಸಂಬಂಧವನ್ನು ಪರಿಪೂರ್ಣಗೊಳಿಸಿರಲಿಲ್ಲ. ಮಹಿಳೆ ಒತ್ತಾಯಪಡಿಸಿದಾಗ, ಕೆಲ ವರ್ಷಗಳ ಹಿಂದೆ ರಷ್ಯಾದಲ್ಲಿ ಅಪಘಾತವೊಂದರಲ್ಲಿ ಗಾಯವಾಗಿದ್ದ ಕಾರಣ ಲೈಂಗಿಕತೆಗೆ (Sex) ಅಸಮರ್ಥ ಎಂದು ತಿಳಿಸಿದ್ದಾಗಿ ಮಹಿಳೆ (Woman) ದೂರಿದ್ದಾರೆ ಎಂದು ಪೊಲೀಸರು ವಿವರ ನೀಡಿದ್ದಾರೆ.

ಅಸಹಜ ಲೈಂಗಿಕತೆಗೆ ಒತ್ತಾಯಿಸಿದ್ದ, ಪತ್ನಿಯಿಂದ ಪೊಲೀಸರಿಗೆ ದೂರು
ಪುಟ್ಟ ಶಸ್ತ್ರಚಿಕಿತ್ಸೆ ಬಳಿಕ ಸಂಪೂರ್ಣವಾಗಿ ಚೇತರಿಸಿಕೊಳ್ಳುವುದಾಗಿ ವಿರಾಜ್ ವರ್ಧನ್‌ ಮಹಿಳೆಗೆ ಭರವಸೆ ನೀಡಿದ್ದ. 2020ರ ಜನವರಿಯಲ್ಲಿ ಬೊಜ್ಜು ನಿವಾರಣೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದಾಗಿ ಹೇಳಿದ. ಆದರೆ ವಿದೇಶದಲ್ಲಿದ್ದಾಗ ತಾನು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗಿ ಸ್ಪಷ್ಟಪಡಿಸಿದ. ಬಳಿಕ ಪತ್ನಿ ಜತೆ ಅಸಹಜ ಲೈಂಗಿಕತೆಗೆ ತೊಡಗಿದ. ಈ ಸತ್ಯವನ್ನು ಬಯಲುಗೊಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದ ಎಂದು ದೂರಲಾಗಿದ್ದು, ಆರೋಪಿ (Accuse) ದೆಹಲಿಯ ನಿವಾಸಿ ಎಂದು ತಿಳಿದುಬಂದಿದೆ. ಆರೋಪಿಯನ್ನು ವಡೋದರಾಕ್ಕೆ ಕರೆತರಲಾಗಿದೆ ಎಂದು ಗೋತ್ರಿ ಇನ್ಸ್‌ಪೆಕ್ಟರ್‌ ಎಂಕೆ ಗುರ್ಜರ್ ತಿಳಿಸಿದ್ದಾರೆ. 

16 ವರ್ಷದ ಬಾಲಕಿಯನ್ನು ಮದುವೆಯಾದ 52ರ ವರ: 3 ತಿಂಗಳಾದ್ಮೇಲೆ ಗೊತ್ತಾಯ್ತು ಆಕೆ ಅಪ್ರಾಪ್ತೆಯೆಂದು

ಬರೋಬ್ಬರಿ ಆರು ವರ್ಷ ತಮ್ಮನ ಜೊತೆಯೇ ಡೇಟಿಂಗ್ ಮಾಡಿದ್ಲು !
ಮದುವೆಯಾಗುವ ಮೊದಲು ಇತ್ತೀಚಿನ ವರ್ಷಗಳಲ್ಲಿ ಡೇಟಿಂಗ್ ಮಾಡುವುದು ಸಾಮಾನ್ಯ. ಹುಡುಗ-ಹುಡುಗಿ ಪರಸ್ಪರ ಡೇಟ್ ಮಾಡಿ ಇಬ್ಬರ ಬಗ್ಗೆಯೂ ತಿಳಿದುಕೊಳ್ಳುತ್ತಾರೆ. ಹೊಂದಾಣಿಕೆಯಾದರೆ ಮದುವೆಯಾಗುತ್ತಾರೆ. ಇಲ್ಲವಾದರೆ ಬ್ರೇಕಪ್‌ ಮಾಡಿಕೊಳ್ಳುತ್ತಾರೆ. ಇಲ್ಲೊಬ್ಬಾಕೆ ಬರೋಬ್ಬರಿ ಆರು ವರ್ಷದಿಂದ ಹುಡುಗನ ಜೊತೆ ಡೇಟಿಂಗ್ ಮಾಡ್ತಿದ್ಲು. ಆದ್ರೆ ಡಿಎನ್‌ಎ ಪರೀಕ್ಷೆ ನಡೆಸಿದಾಗ ಶಾಕಿಂಗ್ ವಿಚಾರ ಬದಲಾಗಿದೆ. ಆರು ವರ್ಷಗಳಿಂದ ಬಾಯ್‌ಫ್ರೆಂಡ್‌ನೊಂದಿಗೆ ಡೇಟಿಂಗ್ ಮಾಡುತ್ತಿರುವ ಮಹಿಳೆ ಅವನು ತನ್ನ ಜೈವಿಕ ಸಹೋದರ ಎಂಬುದನ್ನು ಕಂಡುಕೊಂಡಿದ್ದಾಳೆ. ತನ್ನ ಆರು ವರ್ಷಗಳ ಗೆಳೆಯ ನಿಜವಾಗಿ ತನ್ನ ಸಹೋದರ ಎಂಬುದನ್ನು ಸಾಮಾಜಿಕ ಮಾಧ್ಯಮದ ಮೂಲಕ ಜಗತ್ತಿಗೆ ಬಹಿರಂಗಪಡಿಸಿದ್ದಾಳೆ.

ರೆಡ್ಡಿಟ್‌ನಲ್ಲಿ ಸುದೀರ್ಘ ಪೋಸ್ಟ್‌ನಲ್ಲಿ, ಅನಾಮಧೇಯ ಮಹಿಳೆ (woman) ಡಿಎನ್‌ಎ ಪರೀಕ್ಷೆಯ ನಂತರ ತನ್ನ ಸಂಗಾತಿಯ ಬಗ್ಗೆ ಸತ್ಯವನ್ನು ಕಂಡುಕೊಂಡಿದ್ದಾಳೆ ಎಂದು ಬರೆದಿದ್ದಾರೆ. 'ನಮ್ಮ ಸಂಬಂಧವು (Relationship) ಉತ್ತಮವಾಗಿದೆ. ನಾವು ಒಬ್ಬರನ್ನೊಬ್ಬರು ಬಹಳ ವೇಗವಾಗಿ ಅರ್ಥಮಾಡಿಕೊಂಡಿದ್ದೇವೆ. ನಾವು ಪರಸ್ಪರ ಬೇಗನೆ ಆಕರ್ಷಿತರಾಗಿದ್ದೇವೆ. ಪರಿಚಿತತೆಯನ್ನು ಅನುಭವಿಸಿದೆ' ಎಂದು ಅವರು ಬರೆದಿದ್ದಾರೆ. ನಾವು ಸಾಮಾನ್ಯ ದಂಪತಿಗಳಂತೆ ಇದ್ದೆವು ಎಂದು ರೆಡ್ಡಿಟ್ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.  ಆದರೆ ಅವರು ತಮ್ಮ ಪೂರ್ವಜರನ್ನು ಕಂಡುಹಿಡಿಯಲು ಡಿಎನ್ಎ ಪರೀಕ್ಷೆಗೆ ಹೋಗಲು ನಿರ್ಧರಿಸಿದಾಗ ಎಲ್ಲವೂ ಬದಲಾಯಿತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!
ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ