Real Story : ನಾನು ಬ್ಯುಸಿಯಾಗ್ತಿದ್ದಂತೆ ಬದಲಾಗಿದ್ದಾನೆ ಪತಿ

By Suvarna NewsFirst Published Sep 17, 2022, 3:59 PM IST
Highlights

ಮದುವೆ ನಂತ್ರ ವೃತ್ತಿ ಜೀವನ ನಡೆಸುವುದು ಮಹಿಳೆಯರಿಗೆ ಒಂದು ಸವಾಲಿನ ಕೆಲಸ. ಪತಿಯ ಬೆಂಬಲ ಇಲ್ಲಿ ಅತ್ಯಗತ್ಯ. ಪತ್ನಿ ಕೆಲಸದಲ್ಲಿ ಏಳ್ಗೆ ಕಾಣ್ತಿದ್ದಂತೆ ಹೊಟ್ಟೆ ಉರಿದುಕೊಳ್ಳುವ ಪತಿಯರಿದ್ದಾರೆ. ಮಹಿಳೆಯೊಬ್ಬಳು ತನ್ನ ಪತಿ ವರ್ತನೆಯಿಂದ ಬೇಸತ್ತಿದ್ದು, ಮುಂದೇನ್ಮಾಡ್ಬೇಕು ಎಂದು ಕೇಳಿದ್ದಾಳೆ.
 

ಕೆಲಸ ಹಾಗೂ ಕುಟುಂಬ ನಿರ್ವಹಣೆ ಹೇಳಿದಷ್ಟು ಸುಲಭವಲ್ಲ. ಅದ್ರಲ್ಲೂ ಮಹಿಳೆಯರು ಎರಡನ್ನೂ ಸಂಭಾಳಿಸುವಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಮಹಿಳೆಯರ ಯಶಸ್ಸನ್ನು ಅನೇಕ ಪುರುಷರು ಸ್ವೀಕರಿಸುವುದಿಲ್ಲ. ಪತಿಗಿಂತ ಪತ್ನಿ ಜೀವನದಲ್ಲಿ ಯಶಸ್ಸು ಸಾಧಿಸಿದ್ರೆ, ಆಕೆ ಗಳಿಕೆ ಹೆಚ್ಚಾದ್ರೆ ಅದನ್ನು ಈಗ್ಲೂ ಭಾರತದ ಸಮಾಜದಲ್ಲಿ ಪುರುಷರು ಒಪ್ಪಿಕೊಳ್ಳುವುದಿಲ್ಲ. ಇದ್ರಿಂದ ಅನೇಕ ಸಂಬಂಧಗಳು ಮುರಿದು ಬಿದ್ದಿವೆ. ಇಲ್ಲೊಬ್ಬ ಮಹಿಳೆ ಕೂಡ ತನ್ನ ಜೀವನದಲ್ಲಿ ಎದುರಾಗಿರುವ ಸಮಸ್ಯೆಯನ್ನು ಎಲ್ಲರ ಮುಂದೆ ಹೇಳಿಕೊಂಡಿದ್ದಾಳೆ. ವ್ಯವಹಾರದಲ್ಲಿ ಏಳ್ಗೆ ಕಾಣ್ತಿದ್ದಂತೆ ಗಂಡನ ವರ್ತನೆ ಬದಲಾಗಿದೆ ಎಂದು ಮಹಿಳೆ ಹೇಳಿದ್ದಾಳೆ.

ಆಕೆಗೆ ಮದುವೆ (Marriage) ಯಾಗಿ ಅನೇಕ ವರ್ಷ ಕಳೆದಿದೆ. ಆಕೆಗೆ ಒಂದು ಹೆಣ್ಣು ಮಗುವಿದೆ. ಸಂಸಾರದಲ್ಲಿ ಬೇರೆ ಯಾವುದೇ ಸಮಸ್ಯೆಯಿಲ್ಲ. ಆದ್ರೆ ಇತ್ತೀಚಿಗೆ ಪತಿ (husband) ವರ್ತನೆ ಬದಲಾಗಿದೆ ಎನ್ನುತ್ತಾಳೆ ಮಹಿಳೆ. ಕೆಲ ವರ್ಷಗಳ ಹಿಂದೆ ಸ್ವಂತ ವ್ಯವಹಾರ ಶುರು ಮಾಡುವಂತೆ ಪತಿ, ಪತ್ನಿಗೆ ಸಲಹೆ ನೀಡಿದ್ದನಂತೆ. ಪತಿ ಎಲ್ಲ ಕೆಲಸಕ್ಕೂ ಪ್ರೋತ್ಸಾಹ ನೀಡ್ತಿದ್ದನಂತೆ. ಸ್ವಂತ ಕಾಲಿನ ಮೇಲೆ ನಿಲ್ಲುವ ನಿರ್ಧಾರ ತೆಗೆದುಕೊಂಡ ಮಹಿಳೆ ವ್ಯವಹಾರ (business) ಶುರು ಮಾಡಿದ್ದಳಂತೆ. ದಿನ ಕಳೆದಂತೆ ವ್ಯವಹಾರದಲ್ಲಿ ಯಶಸ್ಸು ಸಿಗಲು ಶುರುವಾಗಿತ್ತಂತೆ. ಅನೇಕರು ಮಹಿಳೆ ಕೆಲಸವನ್ನು ಶ್ಲಾಘಿಸಿದ್ದರಂತೆ. ಕೆಲಸ ಮತ್ತು ಮನೆ ಎರಡನ್ನೂ ನೋಡಿಕೊಳ್ತಿದ್ದ ಮಹಿಳೆ, ಕೆಲಸದ ಮೀಟಿಂಗ್ (meeting), ಪಾರ್ಟಿ (Party) ಗಾಗಿ ಹೊರಗೆ ಹೋಗ್ತಿದ್ದಳಂತೆ. ಆರಂಭದಲ್ಲಿ ಪಾರ್ಟಿ, ಸಭೆಯನ್ನು ಸಹಜವಾಗಿ ಸ್ವೀಕರಿಸುತ್ತಿದ್ದ ಪತಿ ಈಗ ಮಾತು ಬದಲಿಸಿದ್ದಾನಂತೆ. ನಾನು ಹಾಗೂ ನನ್ನ ಮಗಳಿಗೆ ನೀಡಲು ನಿಮಗೆ ಸಮಯವಿಲ್ಲ. ಕೆಲಸದ ನೆಪದಲ್ಲಿ ಕುಟುಂಬದ ಜವಾಬ್ದಾರಿ ಮರೆಯುತ್ತಿದ್ದೀಯಾ ಎಂದು ಪತಿ ಆರೋಪ ಮಾಡ್ತಿದ್ದಾನಂತೆ. ನಾನು ಎರಡನ್ನೂ ಒಂದೇ ಸಮನೆ ನೋಡ್ತಿದ್ದೇನೆ. ಆದ್ರೆ ಮೊದಲಿನ ಪ್ರೀತಿ (love) ಈಗ ನನ್ನ ಮೇಲೆ ಪತಿಗಿಲ್ಲ. ಪತಿಯನ್ನು ಹೇಗೆ ಮತ್ತೆ ಸರಿದಾರಿಗೆ ತರಬೇಕು ಎಂದು ಮಹಿಳೆ ಪ್ರಶ್ನೆ ಮಾಡಿದ್ದಾಳೆ.

ತಜ್ಞ (Expert) ರ ಸಲಹೆ : ಮನೆ ಹಾಗೂ ಕೆಲಸವನ್ನು ಒಂದೇ ರೀತಿ ನೋಡುವುದು ಕಷ್ಟ. ಆದ್ರೆ ಎರಡಕ್ಕೂ ಪ್ರಾಮುಖ್ಯತೆ ನೀಡುವುದು ಬಹಳ ಮುಖ್ಯವೆಂದು ತಜ್ಞರು ಹೇಳಿದ್ದಾರೆ. ಬರೀ ಕೆಲಸಕ್ಕೆ ಪ್ರಾಮುಖ್ಯತೆ ನೀಡಿದ್ರೆ ದಾಂಪತ್ಯ ಹಾಳಾಗುತ್ತದೆ. ಹಾಗಾಗಿ ಕಷ್ಟವೆನ್ನಿಸಿದ್ರೂ ಎರಡಕ್ಕೂ ಮಹತ್ವ ನೀಡ್ಬೇಕೆಂದು ತಜ್ಞರು ಹೇಳಿದ್ದಾರೆ. ವ್ಯವಹಾರದಲ್ಲಿ ನೀವು ಬ್ಯುಸಿ (Busy) ಯಾಗಿರುವ ಕಾರಣ ಪತಿ ಒಂಟಿತನ ಅನುಭವಿಸುತ್ತಿರಬಹುದು. ಇದ್ರಿಂದ ಅವರಿಗೆ ಹಿಂಸೆಯಾಗ್ತಿರಬಹುದು. ಹಾಗಾಗಿ ನಿಮ್ಮ ವ್ಯವಹಾರದಲ್ಲಿ ಅವರ ಸಹಾಯ ಪಡೆಯಿರಿ ಎಂದು ತಜ್ಞರು ಹೇಳಿದ್ದಾರೆ.

Men Psycology: ಮಹಿಳೆಯರಲ್ಲಿನ ಈ ವಿಷಯಕ್ಕೆ ಪುರುಷರು ಹೆಚ್ಚು ಆಕರ್ಷಿಸುತ್ತಾರೆ!

ನಿಮ್ಮ ಪತಿಯೊಂದಿಗೆ ಮೊದಲಿನಂತೆ ಮಾತನಾಡಲು ಪ್ರಾರಂಭಿಸಿ. ವೈಯಕ್ತಿಕ ಚಟುವಟಿಕೆಗಳಲ್ಲಿಯೂ ಅವರನ್ನು ತೊಡಗಿಸಿಕೊಳ್ಳಿ. ಇಷ್ಟೇ ಅಲ್ಲ  ನೀವಿಬ್ಬರೂ ಒಟ್ಟಾಗಿ ವೇಳಾಪಟ್ಟಿಯನ್ನು ಸಿದ್ಧಪಡಿಸಿ. ವಾರಾಂತ್ಯದಲ್ಲಿ ಇಬ್ಬರು ಒಟ್ಟಿಗೆ ಸಮಯ ಕಳೆಯಿರಿ. ಪ್ರತಿ ವಾರ ಕೆಲವೇ ಗಂಟೆಗಳಾದರೂ ನಿಮ್ಮ ಮಗಳಿಗಾಗಿ ಸ್ವಲ್ಪ ಸಮಯ ಮೀಸಲಿಡಿ. ಮೊದಲಿನಿಂದಲೂ ಪತಿ ನಿಮಗೆ ಬೆಂಬಲ ನೀಡ್ತಾರೆ ಎಂದು ನೀವೇ ಹೇಳಿದ್ದೀರಿ. ಹಾಗಾಗಿ ಈಗ್ಲೂ ಅವರು ನಿಮ್ಮನ್ನು ಬೆಂಬಲಿಸ್ತಾರೆ. ಆದ್ರೆ ನಿಮ್ಮ ಜೊತೆ ನಾನಿದ್ದೇನೆ ಎಂದು ನೀವು ಭರವಸೆ ನೀಡ್ಬೇಕೆಂದು ತಜ್ಞರು ಹೇಳ್ತಾರೆ.

43 ವರ್ಷದಲ್ಲಿ 53 ಮದ್ವೆಯಾದ ಸೌದಿಯ ಅಬ್ದುಲ್ಲಾ: ಕಾರಣ ಕೇಳಿ ಬೆಚ್ಚಿದ ಸಿಂಗಲ್ಸ್!

ವ್ಯವಹಾರದಲ್ಲಿ ಯಶಸ್ವಿಯಾಗಲು ಬೆಂಬಲ ಅತ್ಯಗತ್ಯ. ಈ ಸಮಯದಲ್ಲಿ ನೀವು ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಲು ಕಲಿಯಬೇಕು. ನೀವು ವ್ಯವಹಾರಕ್ಕಿಂತ ಕುಟುಂಬಕ್ಕೆ ಹೆಚ್ಚು ಮಹತ್ವ ನೀಡ್ತೀರಿ. ನಿಮ್ಮ ಮೊದಲ ಆದ್ಯತೆ ಕುಟುಂಬಕ್ಕೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಿ ಎಂದು ತಜ್ಞರು ಹೇಳ್ತಾರೆ.
 

click me!