ತನ್ನ ಡಿವೋರ್ಸ್ ಪಾರ್ಟಿಯಲ್ಲಿ ದುಪ್ಪಟ್ಟಾ ಎಸೆದು ಕುಣಿದು ಕುಪ್ಪಳಿಸಿದ ಪಾಕಿಸ್ತಾನ ಮಹಿಳೆ!

Published : Jul 28, 2024, 12:22 PM IST
ತನ್ನ ಡಿವೋರ್ಸ್ ಪಾರ್ಟಿಯಲ್ಲಿ ದುಪ್ಪಟ್ಟಾ ಎಸೆದು ಕುಣಿದು ಕುಪ್ಪಳಿಸಿದ ಪಾಕಿಸ್ತಾನ ಮಹಿಳೆ!

ಸಾರಾಂಶ

ಪಾರ್ಟಿಯಲ್ಲಿ ತಲಾಖ್ ಮುಬಾರಕ್, ಡಿವೋರ್ಸ್ ಪಾರ್ಟಿ ಎಂದು ಬರೆಯಲಾಗಿದೆ. ಇಡೀ ಪಾರ್ಟಿ ಹಾಲ್‌ ಬಲೂನ್‌ಗಳಿಂದ ಅಲಂಕರಿಸಲಾಗಿದೆ.

ವಾಷಿಂಗ್ಟನ್ ಡಿಸಿ:  ಮುಸ್ಲಿಂ ಮಹಿಳೆ ವಿಚ್ಛೇದನ ಬಳಿಕ ಸ್ನೇಹಿತರ ಜೊತೆ ಸೇರಿ ಪಾರ್ಟಿ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಪಾರ್ಟಿಯಲ್ಲಿ ಮಹಿಳೆ ಬಾಲಿವುಡ್ ಹಾಡುಗಳಿಗೆ ಬಿಂದಾಸ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಮಹಿಳೆ ಪಾಕಿಸ್ತಾನದ ಮೂಲದವರಾಗಿದ್ದ, ಅಮೆರಿಕಾದಲ್ಲಿ ನೆಲೆಸಿದ್ದಾರೆ ಎಂದು ವರದಿಯಾಗಿದೆ. ಈ ವಿಡಿಯೋ ನೋಡಿದ ಪಾಕಿಸ್ತಾನದ ನೆಟ್ಟಿಗರು, ಅಮೆರಿಕಾದಲ್ಲಿರುವ ಕಾರಣ ಮಹಿಳೆ ಸಂತಸದಿಂದ ಕುಣಿದಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಮಹಿಳೆ ಸಂಭ್ರಮಾಚರಣೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿವೆ. 

ಅಮೆರಿಕಾದಲ್ಲಿ ನೆಲೆಸಿರುವ ಪಾಕಿಸ್ತಾನ ಮೂಲದ ಮಹಿಳೆ ವಿಚ್ಛೇದನ ಬಳಿಕ ತನ್ನ ಅತ್ಯಾಪ್ತರ ಜೊತೆ ಪಾರ್ಟಿ ಮಾಡಿದ್ದಾರೆ. ಪಾರ್ಟಿಯಲ್ಲಿ ತಲಾಖ್ ಮುಬಾರಕ್, ಡಿವೋರ್ಸ್ ಪಾರ್ಟಿ ಎಂದು ಬರೆಯಲಾಗಿದೆ. ಇಡೀ ಪಾರ್ಟಿ ಹಾಲ್‌ ಬಲೂನ್‌ಗಳಿಂದ ಅಲಂಕರಿಸಲಾಗಿದೆ. ಮಹಿಳೆ ನೇರಳೆ ಬಣ್ಣದ ಲೆಹಂಗಾ ಧರಿಸಿದ್ದಾರೆ. ಡ್ಯಾನ್ಸ್ ಮಾಡುತ್ತಾ ದುಪ್ಪಟ್ಟಾ ಸಹ ಎಸೆದು ಕುಣಿದಿದ್ದಾರೆ. ಕಾರ್ಯಕ್ರಮದಲ್ಲಿದ್ದ ಜನರು ಸಹ ಚಪ್ಪಾಳೆ ತಟ್ಟುತ್ತಾ ಮಹಿಳೆಯನ್ನು ಪ್ರೋತ್ಸಾಹಿಸುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದು. 

ಡಿವೋರ್ಸ್ ಬಗ್ಗೆ ನೆಟ್ಟಿಗರ ಅಭಿಪ್ರಾಯ 

ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಕಮೆಂಟ್ ಮಾಡಿರುವ ವ್ಯಕ್ತಿ ಅಥವಾ ಮಹಿಳೆ ವಿಚ್ಛೇದನ ಬಳಿಕ ಈ ರೀತ ಸಂಭ್ರಮಾಚರಣೆ ಮಾಡುತ್ತಾ ಹೋದ್ರೆ ಮುಂದೊಂದು ದಿನ ಮದುವೆ ಎಂಬ ಪರಿಕಲ್ಪನೆಯೇ ಮಾಯವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಡಿವೋರ್ಸ್ ಅನ್ನೋದು ಇಡೀ ಜೀವನವನ್ನು ಬದಲಿಸುವ ನಿರ್ಣಯವಾಗಿರುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. 

ಮದ್ವೆಯಾಗಿ ಒಂದೂವರೆ ವರ್ಷ, ಜೊತೆಯಲ್ಲಿದಿದ್ದು 8 ದಿನ.. ಸಂಬಂಧ ಬೆಳೆಸದ IRS ಅಧಿಕಾರಿ ಗಂಡನ ವಿರುದ್ಧ ಪತ್ನಿ ದೂರು

ವಿಚ್ಛೇದನ ಎಂಬುವುದು ಎಂದಿಗೂ ಸಂಭ್ರಮಾಚರಣೆ ಆಗಬಾರದು. ಆ ನಿರ್ಣಯದ ಬಳಿಕ ಮುಂದೆ ನಾವು ಹೇಗೆ ಇರುತ್ತೆವೆ ಅನ್ನೋದು ಪ್ರಮುಖವಾಗುತ್ತದೆ. ಇದೀಗ ಡಿವೋರ್ಸ್ ಅನ್ನೋದು ಸಾಮಾನ್ಯವಾಗಿದೆ. ಯುವ ಸಮುದಾಯ ಸಣ್ಣ ಸಣ್ಣ ವಿಷಯಗಳಿಗೂ ಡಿವೋರ್ಸ್ ಪಡೆದುಕೊಳ್ಳುವುದು ಆತಂಕದ ವಿಷಯ ಎಂಬಿತ್ಯಾದಿ ಕಮೆಂಟ್‌ಗಳು ಬಂದಿವೆ. 

ಸಿಂಗಲ್ ಪೇರೆಂಟ್ ಬಗ್ಗೆ ಚರ್ಚೆ

ಇನ್ನು ಕೆಲವರು ಮಹಿಳೆಯ ಪರವಾಗಿ ಬ್ಯಾಟ್ ಬೀಸಿದ್ದಾರೆ. ಡಿವೋರ್ಸ್ ಬಳಿಕ ಇದೇ ರೀತಿ ಇರಬೇಕು ಎಂಬ ಕಡ್ಡಾಯ ನಿಯಮಗಳಿ ಲ್ಲ. ಆಕೆ ದಾಂಪತ್ಯ ಜೀವನ ಹೇಗಿರಬಹುದು ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ ಎಂದು ಮಹಿಳೆಯರು ಕಮೆಂಟ್ ಮಾಡಿದ್ದಾರೆ. ಈ ನಡುವೆ ಸಿಂಗಲ್ ಪೇರೆಂಟ್ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಆದ್ರೆ ಈ ಮಹಿಳೆಯ ಹೆಸರೇನು? ಡಿವೋರ್ಸ್ ಪಡೆಯಲು ಕಾರಣ ಏನು ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.  

ಎರಡು ಮಕ್ಕಳ ತಂದೆಯಾಗಿರೋ ಪ್ರಿಯಕರನನ್ನ ಭೇಟಿಯಾಗಲು ಭಾರತಕ್ಕೆ ಬಂದ ಪಾಕಿಸ್ತಾನದ ಚೆಲುವೆ !

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
Chanakya Niti: ಬೆಳಗ್ಗೆ ಎದ್ದಾಗ ಇವನ್ನೆಲ್ಲಾ ನೋಡ್ಬೇಡಿ.. ಚಾಣಕ್ಯ ಹೇಳಿದ ರಹಸ್ಯಗಳು