ಯುವತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ರೆಹಮಾನ್ ಪತ್ನಿ, ಆಕೆಯ ಮೂಲದ ಬಗ್ಗೆ ಪತ್ತೆ ಮಾಡುವಂತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಜೈಪುರ: ಎರಡು ಮಕ್ಕಳ ತಂದೆಯಾಗಿರುವ ವ್ಯಕ್ತಿಯ ಪ್ರೇಮಪಾಶದಲ್ಲಿ ಸಿಲುಕಿದ ಯುವತಿ ಪಾಕಿಸ್ತಾನದಿಂದ ಭಾರತಕ್ಕೆ (Pakistan To India) ಬಂದಿದ್ದಾಳೆ. ಭಾರತಕ್ಕೆ ಬಂದಿರುವ ಯುವತಿಯನ್ನು 25 ವರ್ಷದ ಮೆಹ್ವಿಶ್ ಎಂದು ಗುರುತಿಸಲಾಗಿದೆ. ರಾಜಸ್ಥಾದ ಚೂರೂ (Chooroo, Rajasthan) ಜಿಲ್ಲೆಯ ನಿವಾಸಿಯಾಗಿರುವ ರೆಹಮಾನ್ ಎಂಬ ವ್ಯಕ್ತಿ ಕುವೈತ್‌ನಲ್ಲಿ (Kuwait) ಕೆಲಸ ಮಾಡಿಕೊಂಡಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ (Social Media Love) ಮೆಹ್ವೀಶ್ ಮತ್ತು ರೆಹಮಾನ್‌ಗೆ ಪರಿಚಯವಾಗಿತ್ತು. ಪರಿಚಯ ಪ್ರೀತಿಯಾಗಿ ಬದಲಾಗಿತ್ತು. ಇದೀಗ ಪ್ರಿಯಕರ ರೆಹಮಾನ್‌ನನ್ನ ಹುಡುಕಿಕೊಂಡು ಬಂದಿರುವ ಯುವತಿ ಮೆಹ್ವೀಸ್ ಚೂರೂ ನಗರ ತಲುಪಿದ್ದಾಳೆ.
ಮೆಹ್ವಿಶ್ ಬರುತ್ತಿದ್ದಂತೆ ರೆಹಮಾನ್ ಪತ್ನಿ ಫರೀದಾ ಸ್ಥಳೀಯ ಪೊಲೀಸರಿಗೆ ಪಾಕಿಸ್ತಾನದ ಯುವತಿ ಬಂದಿರುವ ಮಾಹಿತಿಯನ್ನು ನೀಡಿದ್ದಾರೆ. ಯುವತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ರೆಹಮಾನ್ ಪತ್ನಿ, ಆಕೆಯ ಮೂಲದ ಬಗ್ಗೆ ಪತ್ತೆ ಮಾಡುವಂತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. ಗ್ರಾಮದ ಮುಖಂಡ ಜಂಗಶೇರ್ ಖಾನ್ ಎಂಬ ವ್ಯಕ್ತಿಯೇ ಅಟಾರಿ ಗಡಿಗೆ ತೆರಳಿ ಯುವತಿಯನ್ನು ಕರೆದುಕೊಂಡು ಬಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
undefined
ಪೊಲೀಸರು ಹೇಳೋದೇನು?
ಮೆಲ್ವಿಶ್ ಮತ್ತು ರೆಹಮಾನ್ ಇಬ್ಬರಿಗೂ ಸೋಶಿಯಲ್ ಮೀಡಿಯಾ ಮುಖೇನ ಲವ್ ಆಗಿತ್ತು. ಕೆಲವೇ ದಿನಗಳಲ್ಲಿಯೇ ರೆಹಮಾನ್ ಭಾರತಕ್ಕೆ ಬರಲಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮಹ್ವೀಶ ಪಾಕಿಸ್ತಾನ ಗೂಢಚಾರಿ ಆಗಿರಬಹುದು ಎಂದು ಫರೀದಾ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ರೆಹಮಾನ್ ಆಗಮನಕ್ಕಾಗಿ ಕಾಯುತ್ತಿದ್ದು, ಇತ್ತ ಪಾಕಿಸ್ತಾನದಿಂದ ಬಂದಿರೋ ಮೆಹ್ವಿಶ್ ಹಿನ್ನೆಲೆ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಫೇಸ್‌ಬುಕ್ ಬಾಯ್‌ಫ್ರೆಂಡ್‌ನ ಮದುವೆಯಾಗೋಕೆ ನಕಲಿ ದಾಖಲೆ ಬಳಸಿ ಪಾಕ್‌ಗೆ ಹೋಗಿದ್ದ ಮಹಿಳೆ ಅರೆಸ್ಟ್!
ಇದೇ ರೀತಿ ಅಲ್ವರ ನಗರದ ಮಂಜು ಎಂಬಾಕೆ ಪಾಕಿಸ್ತಾನದ ಪಖ್ತೂನ್ ಪ್ರಾಂತ್ಯದ ಮೂಲಕ ನಸರೂಲ್ಲಾಹ ಎಂಬವರ ಮನೆ ಸೇರಿದ್ದಳು. ಧರ್ಮ ಬದಲಿಸಿಕೊಂಡು ಮದುವೆ ಸಹ ಆಗಿದ್ದಳು. ನಂತರ ಈಕೆಯ ವಿಷಯ ಮುನ್ನಲೆಗೆ ಬರುತ್ತಿದ್ದಂತೆ ಮಂಜು ದೆಹಲಿಗೆ ಶಿಫ್ಟ್ ಆಗಿದ್ದಳು. ಇದೀಗ ತನ್ನ ಪಾಕಿಸ್ತಾನದ ಪತಿ ಜೊತೆ ಅಮೆರಿಕಾದಲ್ಲಿ ನೆಲೆಸಲು ತಯಾರಿ ನಡೆಸುತ್ತಿದ್ದಾಳೆ.
ಪಾಕ್‌ನಿಂದ ಹಿಂದಿರುಗಿರುವ ಯುವತಿ ಮೇಲೆ ಶಂಕೆ
ಕೆಲ ದಿನಗಳ ಹಿಂದೆಯಷ್ಟೇ ಮಾಹಾರಾಷ್ಟ್ರದ ಥಾಣೆಯ ನಗ್ಮಾ ಹೆಸರಿನ ಮಹಿಳೆ ಜುಲೈ 17ರಂದು ಪಾಕಿಸ್ತಾನದಿಂದ ಹಿಂದಿರುಗಿದ್ದಳು. ಅಧಿಕಾರಿಗಳ ಪ್ರಕಾರ ಮಹಿಳೆ ಪಾಕಿಸ್ತಾನಕ್ಕೆ ತೆರಳಲು ಆಧಾರ್ ಕಾರ್ಡ್ ಸೇರಿದಂತೆ ನಕಲಿ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದಳು. ಈ ಸಂಬಂಧ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಹಿಳೆ ತಾಯಿ, ಅಧಿಕಾರಿಗಳು ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಮೊದಲ ಪತಿ ಜೊತೆಗಿನ ಬಳಿಕ ಮಗಳ ಹೆಸರಿನಲ್ಲಿ ಕೆಲವು ಬದಲಾವಣೆಗಳಾಗಿವೆ ಎಂದು ಹೇಳಿದ್ದಾರೆ.
ಭಾರತದ ಕಾಶ್ಮೀರ & ಮಣಿಪುರಕ್ಕೆ ಭೇಟಿ ನೀಡದಿರಿ: ತನ್ನ ನಾಗರಿಕರಿಗೆ ಅಮೆರಿಕಾ ಸೂಚನೆ