ಕೆಲಸ, ಆದಾಯ ಇಲ್ಲದ ಮೇಲೆ ಮದುವೆ ಆಗಿದ್ದೇಕೆ?ನ್ಯಾಯಾಧೀಶರ ಮಾತಿಗೆ ಭಾರಿ ಚರ್ಚೆ

ನ್ಯಾಯಾಧೀಶರೊಬ್ಬರು ಆದಾಯವಿಲ್ಲದ ವ್ಯಕ್ತಿ ಮದುವೆಯಾಗಬಾರದು ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.


ಮದುವೆಯಾಗುವ ಹುಡುಗನಿಗೊಂದು, ಈಗಿನ ಸಂದರ್ಭದಲ್ಲಿ ಹುಡುಗಿಗೂ ಕೆಲಸವೊಂದು ಇರಬೇಕು ಒಳ್ಳೆಯ ಆದಾಯ ಇರಬೇಕು ಎಂಬುದು ಬಹುತೇಕರ ಅಭಿಮತ. ಆದರೆ ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆಯಂತೆ ಮದುವೆಯ ವೇಳೆ ಕೆಲವು ಸುಳ್ಳುಗಳು ಸಾಮಾನ್ಯ ಎನಿಸಿಬಿಟ್ಟಿವೆ. ಹುಡುಗನ/ಹುಡುಗಿಯ ವಯಸ್ಸು, ಅವರ ಆದಾಯ ಉದ್ಯೋಗದ ಬಗ್ಗೆ ಸುಳ್ಳನ್ನು ಕೆಲವರು ಸಾಮಾನ್ಯ ಎಂಬಂತೆ ಹೇಳುತ್ತಾರೆ. ವಿಶೇಷವಾಗಿ ಹಳ್ಳಿಗಳ ಕಡೆ ಈಗ ಎಲ್ಲಾ ಸರಿಯಾಗಿದ್ದ ಹುಡುಗರಿಗೆ ಹುಡುಗಿ ಸಿಗುವುದಿಲ್ಲ, ಹೀಗಿರುವಾಗ ಒಂದು ಮದುವೆಗಾಗಿ ಜನ ಹಲವು ಸುಳ್ಳುಗಳನ್ನು ಹೇಳುತ್ತಾರೆ. ಅದೃಷ್ಟ ಚೆನ್ನಾಗಿದ್ದಾರೆ ಮುಂದೆ ಸುಳ್ಳುಗಳು ಮಾಫಿಯಾಗಿ ಚೆನ್ನಾಗಿರ್ತಾರೆ, ಇಲ್ಲದೇ ಹೋದರೆ ಹೇಗಿದ್ದರೂ ವಿಚ್ಚೇದನಕ್ಕೆ ಕೌಟುಂಬಿಕ ನ್ಯಾಯಾಲಯ  ಇದ್ದೇ ಇದೆ. 

ಇನ್ನು ವರನಿಗೆ ಸರಿಯಾದ ಉದ್ಯೋಗವಿಲ್ಲ ಎಂಬ ಕಾರಣಕ್ಕೆ ಹಲವು ಯುವತಿಯರು ಮದುವೆ ಮುರಿದುಕೊಂಡಿರುವ ಉದಾಹರಣೆಗಳಿವೆ. ಮದುವೆಯ ನಂತರ ವೆಚ್ಚ ಹೆಚ್ಚಾಗುವುದರಿಂದ ಕನಿಷ್ಠ ವರನಿಗೊಂದು ಉದ್ಯೋಗ ಇರಬೇಕು ಎಂಬುದು ಬಹುತೇಕರ ಅಭಿಪ್ರಾಯ. ಹೀಗಾಗಿ ಪೋಷಕರು ತಮ್ಮ ಮಕ್ಕಳ ಮದುವೆಯನ್ನು ನಿರ್ಧರಿಸುವಾಗ, ವರ ಅಥವಾ ವಧುವಿಗೆ ಉದ್ಯೋಗವಿದೆಯೇ ಅಥವಾ ಸ್ಥಿರ ಆದಾಯವಿದೆಯೇ ಎಂದು ವಿಚಾರಿಸುತ್ತಾರೆ. ಕುಟುಂಬವು ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಇಂತಹ ತನಿಖೆಯನ್ನು ನಡೆಸುತ್ತದೆ.  ಆದ್ದರಿಂದ, ಇಂದು ಮದುವೆ ಮಾರುಕಟ್ಟೆಗೆ ಪ್ರವೇಶಿಸುವ ಯುವಕರ ಗುರಿ ಮೊದಲು ಉದ್ಯೋಗವನ್ನು ಹುಡುಕುವುದು ಮತ್ತು ನಂತರ ಮದುವೆಯಾಗುವುದು. ಆದರೆ, ಅಧಿಕಾರದಲ್ಲಿರುವ ಯಾರಾದರೂ ಅದು ಕಾನೂನು ಮದುವೆಯಾಗುವ ವರ ಅಥವಾ ವಧುವಿಗೆ ಕಡ್ಡಾಯವಾಗಿ ಕೆಲಸ ಅಥವಾ ಆದಾಯ ಇರಬೇಕು ಎಂದು ಹೇಳಿದರೆ ಜನ ಅದನ್ನು ಸ್ವೀಕರಿಸಲು ಹಿಂಜರಿಯುತ್ತಾರೆ.

Latest Videos

ಹೀಗಿರುವಾಗ ನ್ಯಾಯಾಧೀಶರೊಬ್ಬರು ಮದುವೆ ಹಾಗೂ ಆದಾಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.  ಜನ ನ್ಯಾಯಾಧೀಶರ ಮಾತನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧರಿಲ್ಲ, ಅಲ್ಲದೇ ಅದರ ಬಗ್ಗೆ ವ್ಯಾಪಕ ಚರ್ಚೆಯನ್ನು ಮಾಡಿದ್ದಾರೆ. ಕೆಲವರು ನ್ಯಾಯಾಧೀಶರು ಹೇಳಿದ್ದು ಸರಿ ಎಂದರೆ ಮತ್ತೆ ಕೆಲವರು ಅದೂ ಕಾನೂನಲ್ಲ ಎಂದಿದ್ದಾರೆ. ನ್ಯಾಯಾಲಯವೊಂದರ ವಿಚಾರಣೆಯ ತುಣಕು ಇದಾಗಿದ್ದು, ಟ್ವಿಟ್ಟರ್‌ನಲ್ಲಿ ShoneeKapoor ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 

ರಹಸ್ಯ ಮದುವೆ, ಬ್ರೇಕಪ್‌: ಸಾವಿಗೆ ಶರಣಾದ 18ರ ಹುಡುಗಿ: ದುರಂತ ಅಂತ್ಯಕಂಡ ಟೀನೇಜ್ ಲವ್‌

ಹಳೆಯ ವೀಡಿಯೊವೊಂದರ ತುಣುಕು ಇದಾಗಿದ್ದು, ಇದರಲ್ಲಿ, ನ್ಯಾಯಾಧೀಶರು ಮತ್ತು ಅವರ ಮುಂದೆ ಹಲವಾರು ವಕೀಲರೊಂದಿಗೆ ನಿಂತಿರುವ ವ್ಯಕ್ತಿ, ಇಬ್ಬರೂ ಜೂಮ್ ಕರೆಯಲ್ಲಿ (ಆನ್‌ಲೈನ್ ವಿಚಾರಣೆ) ಕಾಣಿಸಿಕೊಳ್ಳುತ್ತಾರೆ. ವಿಚ್ಛೇದನ ಪ್ರಕರಣವನ್ನು ಆನ್‌ಲೈನ್‌ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಇಬ್ಬರ ನಡುವಿನ ಸಂಭಾಷಣೆ ಹೀಗೆ ಮುಂದುವರಿಯುತ್ತದೆ. 

ನ್ಯಾಯಾಧೀಶರು: ನಿಮಗೆ ಕೆಲಸವಿಲ್ಲವೇ? 

ವ್ಯಕ್ತಿ: ಇಲ್ಲ ಸರ್, ವೈದ್ಯರು ಯಾವಾಗ  ನಮ್ಮನ್ನು ಕರೆದರೂ ನಾವು ಸೇವೆ ಸಲ್ಲಿಸಲು ಬರುತ್ತೇವೆ ಎಂದು ನಾನು ಬರೆದಿದ್ದೆ.  

ನ್ಯಾಯಾಧೀಶರು: ಅವರು ಜಾಮೀನು ತೆಗೆದುಕೊಳ್ಳಲು ಬಂದಾಗ, ನೀವು ಎಲ್ಲವನ್ನೂ ತಪ್ಪಾಗಿ ಬರೆದಿದ್ದೀರಿ. ನಿಮ್ಮ ಆದಾಯದ ಬಗ್ಗೆ ನೀವು ಏನು ಹೇಳುತ್ತೀರಿ? 

ವ್ಯಕ್ತಿ: ಸರ್, ನನಗೆ ಈಗ ಕೆಲಸವಿಲ್ಲ ಎಂದು ನಾನು ನಿಮಗೆ ಹೇಳಿದ್ದೆ. ಅವರು ನನಗೆ ಕರೆ ಮಾಡಿದಾಗ, ನನಗೆ ಕೆಲಸವಿತ್ತು ಎಂದು ಬರೆದೆ. 

ನ್ಯಾಯಾಧೀಶರು: ನೀವು ವೈದ್ಯರು. ನಿಮಗೆ ಯಾವುದೇ ಅಧಿಕಾರವಿಲ್ಲ. ಆದಾಯವಿಲ್ಲದೆ ಮದುವೆಯಾಗುವ ಹಕ್ಕು ವಕೀಲರಿಗೆ ಮಾತ್ರ ಇದೆ. ವೈದ್ಯರಿಗೆ ಅಂತಹ ಅಧಿಕಾರವಿಲ್ಲ. ಆದಾಯವಿಲ್ಲದಿದ್ದಾಗ ನೀವು ಹೇಗೆ ಮದುವೆಯಾದಿರಿ? ಎಂದು ನ್ಯಾಯಾಧೀಶರು ಕಟಕಟೆಯಲ್ಲಿ ನಿಂತಿರುವ ವ್ಯಕ್ತಿಗೆ ಹೇಳಿದ್ದಾರೆ.

ವೀಡಿಯೋದಲ್ಲಿ ಇರುವುದು ಇಷ್ಟೇ.. 

ಆದರೆ ನ್ಯಾಯಾಧೀಶರ ಈ ಮಾತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ಆದಾಯವಿಲ್ಲದ ವ್ಯಕ್ತಿ ಮದುವೆಯಾಗಬಾರದು ಎಂಬ ನಿರ್ಧಾರವನ್ನು ದೇಶದ ಯಾವ ಕಾನೂನಿನ ಆಧಾರದ ಮೇಲೆ ನ್ಯಾಯಾಧೀಶರು ತೆಗೆದುಕೊಂಡಿದ್ದಾರೆ ಎಂಬುದನ್ನು ನ್ಯಾಯಾಧೀಶರು ವಿವರಿಸಬೇಕೆಂದು ಸಾಮಾಜಿಕ ಜಾಲತಾಣ ಬಳಕೆದಾರರು ಒತ್ತಾಯಿಸಿದರು. ಮತ್ತೆ ಕೆಲವರು ನ್ಯಾಯಾಧೀಶರ ಮಾತನ್ನು ಬೆಂಬಲಿಸಿದ್ದು, ಸರಿಯಾದ ಉದ್ಯೋಗ ಆದಾಯ ಇಲ್ಲದ ಹೊರತು ಮದುವೆ ಆಗಲೇಬಾರದು ಎಂದು ಕಾಮೆಂಟ್ ಮಾಡಿದ್ದಾರೆ. ಕೆಲಸ ಇಲ್ಲದವರು ಮದುವೆಯಾಗಬಾರದು ಎಂದರೆ ಮಹಿಳೆಯರು ಮದುವೆಯೇ ಆಗಲಾರರು ಎಂದು ಒಬ್ಬ ಕಾಮೆಂಟ್ ಮಾಡಿದ್ದಾನೆ. ಅದೇನೇ ಇರಲಿ. ಮದುವೆಯಾಗುವ ಮೊದಲು ಸ್ಥಿರ ಆದಾಯ ಬೇಕೆ ಬೇಡವೇ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ...

ಮುರಿದ ಎಂಗೇಜ್ಮೆಂಟ್, ಬ್ರೇಕಪ್ ಬಗ್ಗೆ ಮಾತನಾಡಿದ ಮೆಹ್ವಾಶ್‌: ಚಹಾಲ್‌ ಜೊತೆ ಕಾಣಿಸಿಕೊಂಡು ಸುದ್ದಿಯಲ್ಲಿರುವ ಆರ್‌ಜೆ

ಕೋರ್ಟ್ ವಿಚಾರಣೆಯ ವೀಡಿಯೋ ಇಲ್ಲಿದೆ ನೋಡಿ

Why did you get married without any income? pic.twitter.com/iwqf0K5Sea

— ShoneeKapoor (@ShoneeKapoor)

 

 

click me!