ಇವತ್ತಿನ ಕಾಲದಲ್ಲಿ ನಡೆಯುವ ಮದ್ವೆಗಳು ಯಾವ ಹೈಡ್ರಾಮಕ್ಕೂ ಕಡಿಮೆಯಿಲ್ಲ. ವಧು-ವರರು ಶಾಸ್ತ್ರ ಪ್ರಕಾರವಾಗಿ ಮದುವೆಯಾಗುವುದು ಬಿಟ್ಟು ಮತ್ತೆಲ್ಲವೂ ರಂಪಾಟಗಳು ನಡೆಯುತ್ತವೆ. ಹಾಗೆಯೇ ಇಲ್ಲೊಂದು ಮದ್ವೆಯ ಹೈಡ್ರಾಮ ಮದುವೆ ಮಂಟಪದಿಂದ ಪೊಲೀಸ್ ಠಾಣೆಯ ವರೆಗೂ ಬಂದು ತಲುಪಿದೆ.
ಹಿಂದೆಲ್ಲಾ ಮದುವೆ ಅಂದ್ರೆ ನೂರಾರು ಜನ್ಮದ ಬಂಧ ಎಂಬಂತೆ ಇರುತ್ತಿತ್ತು. ಹಿರಿಯರು ನಿಂತು ಮಾಡಿದ ಮದುವೆಯಲ್ಲಿ ಗಂಡ-ಹೆಂಡತಿ ಸಾಯೋವರೆಗೂ ಪ್ರೀತಿ, ನಂಬಿಕೆಯಿಂದ ಜೊತೆಯಾಗಿ ಇರ್ತಾ ಇದ್ರು. ಮದುವೆಯನ್ನು ನಾಲ್ಕೈದು ದಿನಗಳ ಕಾಲ ಹಬ್ಬದಂತೆ ಆಚರಿಸಲಾಗ್ತಿತ್ತು. ಆದರೆ ಈಗಂತೂ ಬೇಕಾ ಬೇಡ್ವಾ ಎಂಬಂತೆ ಮದುವೆ ನಡೆಯುತ್ತೆ. ಈಗಾಗ್ಲೇ ಲವ್, ಬ್ರೇಕಪ್ ಅಂತ ಆಗಿರೋರು ಯಾರದ್ದೋ ಒತ್ತಾಯಕ್ಕೆ ಆಗುವಂತೆ ಮದುವೆ ಆಗ್ತಾರೆ. ಮನೆಯವರು ತೋರಿಸಿದ ಹುಡುಗ-ಹುಡುಗಿಗೆ ತಾಳಿ ಕಟ್ಟುತ್ತಾರೆ. ಮದುವೆಯ ಶಾಸ್ತ್ರಗಳನ್ನು ಪಾಲಿಸುವ ವ್ಯವಧಾನವೂ ಅವರಿಗಿರುವುದಿಲ್ಲ. ಅದರಲ್ಲೂ ಭಾರತೀಯ ಮದುವೆ ಯಾವಾಗಲೂ ಹಲವು ಹೈಡ್ರಾಮಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ಅದಕ್ಕೆ ಸಂಬಂಧಿಸಿದ ವೀಡಿಯೋಗಳು ವೈರಲ್ ಆಗುತ್ತದೆ. ಸದ್ಯ ಅಂಥದ್ದೇ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.
ಮದುವೆಯಾದ ತಕ್ಷಣ ಪ್ರಿಯಕರನೊಂದಿಗೆ ಮದುವೆ ಮಾಡಲು ವಧುವಿನ ಒತ್ತಾಯ
ನವವಿವಾಹಿತೆಯೊಬ್ಬಳು ಮದುವೆ (Marriage)ಯಾದ ಕೆಲವೇ ಕ್ಷಣಗಳಲ್ಲಿ ತನ್ನ ಪ್ರಿಯಕರನೊಂದಿಗೆ ಮದುವೆ ಮಾಡುವಂತೆ ಒತ್ತಾಯಿಸಿ ಪೊಲೀಸ್ ಠಾಣೆಯಲ್ಲಿ ಹೈವೋಲ್ಟೇಜ್ ಡ್ರಾಮಾ ಸೃಷ್ಟಿಸಿದ್ದಾಳೆ. ಯುವತಿ ಮನೆಯವರ ಒತ್ತಾಯಕ್ಕೆ ಅವರು ತೋರಿಸಿದ ಹುಡುಗನನ್ನು ಮದುವೆಯಾಗಿದ್ದಳು. ಮದುವೆಯಾದ ತಕ್ಷಣವೇ ಪೊಲೀಸ್ ಸ್ಟೇಷನ್‌ಗೆ ಬಂದು ಲವರ್ ಜೊತೆ ಮದುವೆ ಮಾಡಿ ಕೊಡಿ ಎಂದು ಪೊಲೀಸರಿಗೆ ದುಂಬಾಲು ಬಿದ್ದಿದ್ದಾಳೆ. ಮಾತ್ರವಲ್ಲ ಠಾಣೆಯಲ್ಲಿ ರಂಪಾಟ ನಡೆಸಿದ್ದಾಳೆ. ಸದ್ಯ ಈ ವೀಡಿಯೋ ಎಲ್ಲೆಡೆ ಹರಿದಾಡ್ತಿದೆ.
Viral Post : ಅಯ್ಯೋ, ಕ್ಯಾಮರಾಮನ್ ಮದ್ವೆಯಾದ್ರೆ ಕಥ ಇಷ್ಟೇ!
ವಧು ಕೆಂಪು ಮತ್ತು ಚಿನ್ನದ ಬಣ್ಣದ ಸೀರೆಯನ್ನು ಧರಿಸಿ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗಿದೆ. ವೀಡಿಯೋದಲ್ಲಿ ವಧು 'ಎರಡು ಮದುವೆಯಾಗ್ತೇನೆ. ಎರಡು ಮದುವೆಯಾದರೆ ಏನಾಗುತ್ತದೆ' ಎಂದು ಕಿರುಚಾಡುವುದನ್ನು ಕೇಳಬಹುದು. ವಧುವನ್ನು (Bride) ನಿಯಂತ್ರಿಸಲು ಮಹಿಳಾ ಕಾನ್‌ಸ್ಟೆಬಲ್‌ಗಳು ಪ್ರಯತ್ನಿಸುತ್ತಾರೆ. ಆದರೆ ಆಕೆ ಪೇಪರ್, ಮೊಬೈಲ್ ಫೋನ್ ಎಸೆದು ಗಲಾಟೆ ಮಾಡುತ್ತಾಳೆ. ವಿಡಿಯೋ ಮುಗಿಯುವ ಮುನ್ನವೇ ಮಹಿಳಾ ಪೇದೆಯೊಬ್ಬರು ಆಕೆಯನ್ನು ಕೋಣೆಗೆ ಎಳೆದೊಯ್ಯುವುದನ್ನು ನೋಡಬಹುದು. ವಧು ಮದ್ಯದ ಅಮಲಿನಲ್ಲಿದ್ದಂತೆ ತೋರುತ್ತದೆ.
ಗುಂಡಿನ ಗಮ್ಮತ್ತು..ಫುಲ್ ಟೈಟ್ ಆಗಿ ತನ್ನದೇ ಮದ್ವೆಗೆ ಬರಲು ಮರೆತ ವರ!
"Do shaadi karenge Do Shaadi"
Woman demands marriage with lover soon after her wedding with a man
Police watches as mute spectators
Feeling so bad for her Husband
EQUALITY ! pic.twitter.com/S6zbiqE731
ಈ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, 77,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಅನೇಕ ನೆಟಿಜನ್‌ಗಳು ವಧುವಿನ ವಿಚಿತ್ರ ವರ್ತನೆಗೆ ಭೂಲ್ ಭುಲೈಯಾ ಅವರ ಮಂಜುಲಿಕಾವನ್ನು ನೆನಪಿಸಿಕೊಂಡರು. ಒಬ್ಬ ಬಳಕೆದಾರರು, 'ಹುಡುಗಿಯು ತುಂಬಾ ದುಃಖದಲ್ಲಿದ್ದಾಳೆ, ಪ್ರೇಮಿಯೊಂದಿಗೆ ಮತ್ತೆ ಸೇರಿಸಬೇಕು' ಎಂದು ಹೇಳಿದ್ದಾರೆ. ಇನ್ನೊಬ್ಬರು 'ಅವಳ ಮದುವೆಯನ್ನು ಬಲವಂತವಾಗಿ ಮಾಡಿದ್ದು ತಪ್ಪು' ಎಂದಿದ್ದಾರೆ. ಮತ್ತೊಬ್ಬರು 'ಬಹುಶಃ ಅವಳ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಲಾಗಿದೆ. ಇದು ಪೋಷಕರ ತಪ್ಪು' ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು ಮದ್ಯಪಾನದಿಂದ ವಧು ಹೀಗೆಲ್ಲಾ ವರ್ತಿಸುತ್ತಿದ್ದಾಳೆ ಎಂದು ದೂರಿದ್ದಾರೆ.
4 ಕಾರು ಬುಕ್ ಮಾಡಿದ್ರೂ, ರಾತ್ರಿಯಿಡೀ 28 ಕಿ.ಮೀ ನಡೆದು ಮದುವೆ ಮಂಟಪ ತಲುಪಿದ ವರ!