ಫೋಟೋ ಪರ್ಫೆಕ್ಟ್ ಆಗ್ಬೇಕೆಂದು ಏನೆಲ್ಲ ಕಸರತ್ತು ಮಾಡ್ತಾರೆ. ಮದುವೆಯ ಸಂದರ್ಭದಲ್ಲಿ ಚೆಂದದ ಫೋಟೋವನ್ನು ಹುಡುಗಿಯರು ಬಯಸ್ತಾರೆ. ಅಂದುಕೊಂಡಂತೆ ಫೋಟೋ ಬಂದಿಲ್ಲ ಎಂದಾಗ ಕೋಪ ಬರುತ್ತೆ. ಮಂಟಪದಲ್ಲಿ ವಧು ಕೋಪ ನೋಡಿದ ವರ ಮಾಡಿದ್ದೇನು ಗೊತ್ತಾ?
ಅಪರೂಪಕ್ಕೆ ಸಿಗ್ಲಿ, ದಿನಕ್ಕೆ ಎರಡು ಬಾರಿ ಸಿಗ್ಲಿ, ಒಂದಾದ್ರೂ ಫೋಟೋ ಕ್ಲಿಕ್ಕಿಸ್ಲೇಬೇಕು. ಈಗಿನ ದಿನಗಳಲ್ಲಿ ಫೋಟೋ, ವಿಡಿಯೋ ಕ್ರೇಜ್ ಹೆಚ್ಚಾಗಿದೆ. ಜನರು ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಿದ್ದಾರೆ. ಇನ್ನು ಮದುವೆ ಸಂದರ್ಭದಲ್ಲಿ ಹೇಗೆ ಫೋಟೋ, ವಿಡಿಯೋ ಕ್ಲಿಕ್ಕಿ ಮಾಡೋದನ್ನು ಬಿಡೋಕೆ ಸಾಧ್ಯ? ಫ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಜೊತೆಗೆ ವೆಡ್ಡಿಂಗ್ ಸಂದರ್ಭದಲ್ಲಿ ಸುಂದರ ವಿಡಿಯೋ, ಫೋಟೋಗಳನ್ನು ಕ್ಲಿಕ್ಕಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗ್ತಿದೆ. ಕೆಲ ವಿಡಿಯೋಗಳು ಭಿನ್ನವಾಗಿರುತ್ತವೆ. ಇದನ್ನು ಜನರು ಇಷ್ಟಪಡ್ತಾರೆ. ಅದೇ ರೀತಿ ತಮ್ಮ ವೆಡ್ಡಿಂಗ್ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ಇಷ್ಟಪಡ್ತಾರೆ. ಮತ್ತೆ ಕೆಲ ಫೋಟೋ, ವಿಡಿಯೋಗಳು ಫನ್ನಿಯಾಗಿರ್ತವೆ. ಅದನ್ನು ಕೂಡ ಜನರು ವೈರಲ್ ಮಾಡಿ, ನಕ್ಕು ಸಂತೋಷ ವ್ಯಕ್ತಪಡಿಸ್ತಾರೆ.
ಛಾಯಾಗ್ರಾಹಕರಿಲ್ಲದೆ ಇಂಥ ವಿಡಿಯೋ (Video) ಗಳನ್ನು ಶೂಟ್ ಮಾಡೋದು ಕಷ್ಟ. ಈಗ ಮೊಬೈಲ್ ಬಂದಿದೆ ನಿಜ. ಆದ್ರೆ ಪರಿಣಿತ ಛಾಯಾಗ್ರಾಹಕ (Photographer) ರಿಲ್ಲದೆ ಇಂಥ ವಿಡಿಯೋ ಶೂಟ್ ಮಾಡೋದು ಕಷ್ಟ. ಛಾಯಾಗ್ರಾಹಕರ ಕೆಲಸ, ಜನಮೆಚ್ಚುವ ಫೋಟೋಗಳನ್ನು, ವಿಡಿಯೋಗಳನ್ನು ಸೆರೆಹಿಡಿಯುವುದಾಗಿದೆ. ಛಾಯಾಗ್ರಾಹಕ ನೋಡುವ ದೃಷ್ಟಿಯಲ್ಲಿ ಬೇರೆ ವ್ಯಕ್ತಿಗಳು ನೋಡಲು ಸಾಧ್ಯವಿಲ್ಲ. ಆದ್ರೆ ಅನೇಕ ಛಾಯಾಗ್ರಾಹಕರು ಸೆರೆ ಹಿಡಿದ ಫೋಟೋ ಕೂಡ ಜನರಿಗೆ ಇಷ್ಟವಾಗೋದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈಗ ಅಂಥ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ವರನೇ ಕ್ಯಾಮರಾ ಹಿಡಿದು ವಧು (Bride) ವಿನ ಫೋಟೋ ಕ್ಲಿಕ್ಕಿಸುತ್ತಿದ್ದಾನೆ.
ಅಮ್ಮನಾಗಿ ಮೊದಲ ಬಾರಿಗೆ ಬೋಲ್ಡ್ ಫೋಟೋಶೂಟ್‌ಗೆ ಪೋಸ್ ನೀಡಿದ ಸೋನಂ ಕಪೂರ್
ವೈರಲ್ ಆದ ವಿಡಿಯೋದಲ್ಲಿ ಏನಿದೆ? : ವೆಡ್ಡಿಂಗ್ ಫೋಟೋಗ್ರಾಫರ್ ಸಿಲೆನ್ ಹೆಸರಿನ ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮದುವೆ ಸಂದರ್ಭದಲ್ಲಿ ಕ್ಯಾಮರಾ ಮೆನ್ ತೆಗೆಯುತ್ತಿದ್ದ ಫೋಟೋ ವಧುವಿಗೆ ಇಷ್ಟವಾಗಲಿಲ್ಲ. ಕ್ಯಾಮರಾಮೆನ್, ವಧುವಿನ ಉತ್ತಮ ಫೋಟೋ ತೆಗೆಯುತ್ತಿರಲಿಲ್ಲವಂತೆ. ಇದರಿಂದ ವಧುವಿಗೆ ತುಂಬಾ ಕೋಪ ಬಂದಿದೆ. ನಂತರ ಕ್ಯಾಮರಾ ಮೆನ್ ನಿಂದ ಕ್ಯಾಮರಾ ಪಡೆಯುವ ವರ, ತಾನೇ ವಧುವಿನ ಫೋಟೋ ಕ್ಲಿಕ್ಕಿಸಲು ಶುರು ಮಾಡ್ತಾನೆ. ವರ ಫೋಟೋ ತೆಗೆಯಲು ಆರಂಭಿಸಿದಾಗ ವಧು ಕೂಡ ವಿವಿಧ ಭಂಗಿಗಳನ್ನು ಫೋಟೋಕ್ಕೆ ಫೋಸ್ ನೀಡ್ತಾಳೆ. ವಧು-ವರರ ಈ ವಿಡಿಯೋ ಇನ್ಸ್ಟಾಗ್ರಾಮ್ ಬಳಕೆದಾರರ ಮನ ಕದಿಯುವಲ್ಲಿ ಯಶಸ್ವಿಯಾಗಿದೆ.
ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು, ವಧು, ಕ್ಯಾಮರಾಮೆನ್ ಮೇಲೆ ಮುನಿಸಿಕೊಂಡಿದ್ದಳು. ಇದಾದ ನಂತ್ರ ವರ, ಕ್ಯಾಮರಾ ಜವಾಬ್ದಾರಿ ತೆಗೆದುಕೊಳ್ತಾನೆ. ವಿಡಿಯೋದಲ್ಲಿ ಕಾಣುವ ವರನ ಹೆಸರು ಅಯಾನ್ ಸೇನ್. ವಧುನಿನ ಹೆಸರು ಪ್ರಿಯಾ. ಒಂದು ಕೈನಲ್ಲಿ ಮೊಬೈಲ್ ಹಿಡಿದು, ಇನ್ನೊಂದು ಕೈನಲ್ಲಿ ಕ್ಯಾಮರಾ ಹಿಡಿದು ವರ, ಫೋಟೋ ಕ್ಲಿಕ್ಕಿಸುವ ಪ್ರಯತ್ನ ನಡೆಸ್ತಿದ್ದಾನೆ. ಮೊಬೈಲ್ ನಿಂದ ಟಾರ್ಚ್ ಬಿಡುವ ವರ, ವಧುವಿನ ಸೆರಗನ್ನು ಸರಿ ಮಾಡ್ತಾ, ಫೋಟೋ ಕ್ಲಿಕ್ಕಿಸುತ್ತಾನೆ. ವರ ಫೋಟೋ ಹೊಡೆಯುತ್ತಿದ್ದಂತೆ ವಧುವಿನ ಮುಖದಲ್ಲಿ ಸಂತೋಷ ಕಾಣಿಸುತ್ತದೆ. ನೀವು ಫೋಟೋ ಗ್ರಾಫರ್ ರನ್ನು ಮದುವೆಯಾದಾಗ ಎಂದು ಶೀರ್ಷಿಕೆ ಹಾಕಿ, ವಿಡಿಯೋ ಹಂಚಿಕೊಳ್ಳಲಾಗಿದೆ.
ನಿಧಿ ಸುಬ್ಬಯ್ಯ ಹಾಟ್ ಲುಕ್; ಬಟ್ಟೆ ತಗೋಳಕ್ಕೆ ದುಡ್ಡಿಲ್ವಾ ತಾಯಿ ಎಂದು ಕಾಲೆಳೆದ ನೆಟ್ಟಿಗರು
ಸಾಮಾಜಿಕ ಜಾಲತಾಣದಲ್ಲಿ ಇಷ್ಟು ಲೈಕ್ಸ್ ಪಡೆದ ವಿಡಿಯೋ : ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಪೋಸ್ಟ್ ಆಗ್ತಿದ್ದಂತೆ ವೈರಲ್ ಆಗಿದೆ. ವಿಡಿಯೋವನ್ನು 3 ಮಿಲಿಯನ್ ಬಾರಿ ವೀಕ್ಷಣೆ ಮಾಡಲಾಗಿದೆ. 271 ಸಾವಿರ ಲೈಕ್ಸ್ ಸಿಕ್ಕಿದೆ. 2 ಸಾವಿರ ಕಮೆಂಟ್ ಬಂದಿದೆ. ಇನ್ಸ್ಟಾಗ್ರಾಮ್ ನಲ್ಲಿ ನವಜೋಡಿಗೆ ಅಭಿನಂದನೆ ಹಾಗೂ ಶುಭಾಶಯಗಳ ಸುರಿಮಳೆಯಾಗಿದೆ. ನನಗೂ ಇಂಥ ಪತಿ ಬೇಕು ಅಂತಾ ಒಬ್ಬ ಬಳಕೆದಾರ ಬರೆದ್ರೆ ಮತ್ತೊಬ್ಬರು ನನ್ನ ಮದುವೆಯಲ್ಲೂ ಇದೇ ಆಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.