ಟೀಂ ಇಂಡಿಯಾದ ಸ್ಟಾರ್ ಆಟಗಾರ ಶಿಖರ್ ಧವನ್ ಅವರ ದಾಂಪತ್ಯ ವಿಚ್ಛೇದನದಲ್ಲಿ ಕೊನೆಗೊಂಡಾಗ ರೆಡ್ ಫ್ಲ್ಯಾಗ್ ಕುರಿತು ಮಾತನಾಡಿದ್ದರು. ಏನಿದು? ಸಂಬಂಧದಲ್ಲಿ ರೆಡ್ಫ್ಲ್ಯಾಗ್ ಗುರುತಿಸುವುದು ಹೇಗೆ?
ಟೀಂ ಇಂಡಿಯಾದ ಸ್ಟಾರ್ ಆಟಗಾರರಲ್ಲಿ ಒಬ್ಬರಾಗಿರುವ ಶಿಖರ್ ಧವನ್ (Shikhar Dhawan) ಮದುವೆ ಮುರಿದು ಬಿದ್ದು ಈಗಾಗಲೇ ಎರಡು ವರ್ಷ ಕಳೆದಿದೆ. ವಿಚ್ಛೇದನ ಪಡೆದು ಎರಡು ವರ್ಷಗಳ ನಂತರ ಶಿಖರ್ ಧವನ್, ಇದಕ್ಕೆ ಕಾರಣ ಯಾರು ಹಾಗೆ ಏನಕ್ಕೆ ತನ್ನ ದಾಂಪತ್ಯ ಜೀವನ ಹಳಿ ತಪ್ಪಿದೆ ಎಂಬುದನ್ನು ಇತ್ತೀಚೆಗೆ ವಿವರಿಸಿದ್ದರು. 2014 ರಲ್ಲಿ ಶಿಖರ್ ಧವನ್ ಆಯೇಷಾ ಮುಖರ್ಜಿ (Ayesha Mukharji) ಅವರನ್ನು ಮದುವೆಯಾಗಿದ್ದರು. ಆದರೆ ಈ ದಾಂಪತ್ಯ (Marriage) ಅನೇಕ ದಿನ ಉಳಿಯಲಿಲ್ಲ. 2021ರಲ್ಲಿ ಶಿಖರ್ ಹಾಗೂ ಆಯೇಷಾ ದೂರವಾಗುವ ನಿರ್ಧಾರ ಕೈಗೊಂಡರು. ಒಂಬತ್ತು ವರ್ಷಗಳ ಕಾಲ ನಡೆದ ದಾಂಪತ್ಯದ ಬಗ್ಗೆ ಶಿಖರ್ ಧವನ್ ಮೌನ ಮುರಿದಿದ್ದರು. ಸ್ಪೋರ್ಟ್ಸ್ ಟಾಕ್ ನಲ್ಲಿ ಶಿಖರ್ ಧವನ್, ದಾಂಪತ್ಯ ಮುರಿದು ಬೀಳಲು ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದರು. ನನ್ನ ಸಂಬಂಧದಲ್ಲಿ ನಾನು ಎಂದಿಗೂ ರೆಡ್ ಫ್ಲ್ಯಾಗ್ (Red Flag ) ಕಡೆಗೆ ಗಮನ ಕೊಡಲಿಲ್ಲ. ನಾನು ಮೊದಲು ಯಾವುದೇ ರಿಲೇಷನ್ಷಿಪ್ನಲ್ಲಿ ಇರಲಿಲ್ಲ. ಮದುವೆಯಾದ ಮೇಲೆ ವಿಷಯಗಳನ್ನು ಹೇಗೆ ನಿಭಾಯಿಸಬೇಕೆಂದು ನನಗೆ ತಿಳಿಯಲಿಲ್ಲ. ನನ್ನ ಮದುವೆ ಮುರಿದು ಬೀಳಲು ನಾನೇ ಕಾರಣ ಎಂದಿದ್ದರು. ಅಷ್ಟಕ್ಕೂ ರೆಡ್ ಫ್ಲ್ಯಾಗ್ ಎಂದರೆ, ಸಂಗಾತಿ ಜೊತೆ ಜೀವನ ನಡೆಸುವ ಬಗ್ಗೆ ಮತ್ತೊಮ್ಮೆ ವಿಚಾರ ನಡೆಸುವುದು ಎಂದರ್ಥ. ಸಂಗಾತಿಯ ಪ್ರಮುಖ ವಿಷಯಗಳನ್ನು ಮರೆತುಬಿಡುವುದು, ಅನುಮಾನಿಸುವುದು, ಜಗಳವಾಡುವುದು, ತಪ್ಪುಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳದಿರುವುದು ಸೇರಿದಂತೆ ಕೆಲ ವಿಷಕಾರಿ ವ್ಯಕ್ತಿತ್ವ ಇದರಲ್ಲಿ ಸೇರಿದೆ. ಇವುಗಳನ್ನು ಮೊದಲೇ ಅರಿತಿದ್ದರೆ ದಾಂಪತ್ಯ ಸುಗಮ ಎನ್ನುವುದನ್ನು ರೆಡ್ಫ್ಲ್ಯಾಗ್ ಸೂಚಿಸುತ್ತದೆ. ಮದುವೆಗೆ ಮುನ್ನ ಸಂಗಾತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಇಬ್ಬರ ಸಂಸ್ಕಾರಗಳು ಹೊಂದಿಕೆಯಾಗುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಇಬ್ಬರು ಒಟ್ಟಿಗಿದ್ದಾಗ ಸಂತೋಷಪಡುತ್ತಾರಾ ಎಂಬುದನ್ನು ಗಮನಿಸಬೇಕು. ಯಾವುದೇ ಕಾರಣಕ್ಕೂ ಆತುರದಲ್ಲಿ ಮದುವೆಯಾಗಬಾರದು ಎಂಬುದು ಇದರ ಅರ್ಥ.
ಸಂಬಂಧದಲ್ಲಿ ಅಡಗಿರುವ ರೆಡ್ ಫ್ಲ್ಯಾಗ್ಗಳನ್ನು ಗುರುತಿಸುವ 5 ವಿಧಾನಗಳು ಇಲ್ಲಿವೆ.
1) ನಿಮ್ಮ ಸಂಗಾತಿಯು ಆತ್ಮಶ್ಲಾಘನೆ (narcissistic) ಗುಣಗಳನ್ನು ಪ್ರದರ್ಶಿಸುವುದನ್ನು ನೀವು ಕಂಡುಕೊಂಡರೆ, ವಿಶೇಷವಾಗಿ ಅವರ ಕೋಪವು ನಿಮ್ಮ ಕಡೆಗೆ ಉಂಟಾಗುತ್ತಿದೆ ಎಂದು ಸೂಚನೆ ಸಿಕ್ಕರೆ ಅದು ನಿಮ್ಮ ಸಂಬಂಧದಲ್ಲಿ ಗುಪ್ತವಾಗಿರುವ ರೆಡ್ ಫ್ಲ್ಯಾಗ್ ಸಂಕೇತವಾಗಿರಬಹುದು. ಆತ್ಮಶ್ಲಾಘನೆಯನ್ನು ಹೆಚ್ಚು ಇಷ್ಟಪಡುವವರು ತಮಗೇ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ ಮತ್ತು ಪ್ರಪಂಚವು ಅವರ ಸುತ್ತ ಸುತ್ತುತ್ತದೆ ಎಂದು ನಂಬುತ್ತಾರೆ. ಅವರು ತಮ್ಮ ಸಂಗಾತಿಯ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸುವುದಿಲ್ಲ. ನಿಮಗೂ ಹಾಗೆಯೇ ಅನಿಸಿದರೆ, ಅವರೊಂದಿಗೆ ಚರ್ಚೆ ನಡೆಸುವ ಸಮಯ ಇರಬಹುದು.
2) ಸಂವಹನವು ಯಾವುದೇ ಸಂಬಂಧದ ಅತ್ಯಗತ್ಯ ಅಂಶವಾಗಿದೆ. ನಿಮ್ಮ ಸಂಗಾತಿಗೆ ಸಂವಹನ ಮಾಡಲು ಇಷ್ಟವಿಲ್ಲದಿದ್ದರೆ, ನೀವು ಎಚ್ಚರದಿಂದ ಇರುವುದು ಒಳ್ಳೆಯದು.ಏಕೆಂದರೆ ಇದು ರೆಡ್ ಫ್ಲ್ಯಾಗ್ ಸಂಕೇತವಾಗಿರಬಹುದು. ನಿಮ್ಮ ಸಂಗಾತಿ, ಯಾವುದೇ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಯಾವುದೇ ವಿಷಯದ ಬಗ್ಗೆ ನಿಮ್ಮೊಂದಿಗೆ ಮಾತನಾಡಲು ಉತ್ಸುಕರಾಗಿರಬೇಕು. ಪ್ರಮುಖ ವಿಷಯಗಳೇ ಆಗಿರಲಿ ಅಥವಾ ಸರಳ ವಿಷಯಗಳೇ ಆಗಿರಲಿ, ಅಲ್ಲಿ ಉತ್ಸುಕತೆಯ ಭಾವ ಇರಬೇಕು. ಆದಾಗ್ಯೂ, ನೀವಿಬ್ಬರೂ ಒಬ್ಬರಿಗೊಬ್ಬರು ಮುಕ್ತವಾಗಿ ಮಾತನಾಡಲು ಆಗುತ್ತಿಲ್ಲ ಎಂದಾದರೆ ಸಂಬಂಧವು ಅದರ ಅಂತ್ಯವನ್ನು ತಲುಪಬಹುದು ಎಂದೇ ಅರ್ಥ.
Chanakya Niti: ಪೋಷಕರು ಈ ತಪ್ಪು ಮಾಡಿದ್ರೆ ಮಗುವಿಗೆ ಶತ್ರುಗಳಾಗ್ತಾರೆ!
3) ಸಂಬಂಧದಲ್ಲಿ ನಡವಳಿಕೆಯನ್ನು (Behaviour) ನಿಯಂತ್ರಿಸಬಾರದು. ಕೆಲವೊಮ್ಮೆ ಮಾನಸಿಕವಾಗಿ ವ್ಯವಹರಿಸಲು ಕಷ್ಟವಾಗಬಹುದು. ನಿಮ್ಮ ಸಂಗಾತಿಯು ನಿಮ್ಮ ನಡವಳಿಕೆ ಅಥವಾ ಕಾರ್ಯಗಳನ್ನು ನಿಯಂತ್ರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದರೆ, ಅದು ಒಂದು ಹಂತದಲ್ಲಿ ಅತಿ ಎನ್ನಿಸಬಹುದು. ನೀವು ಏನು ಧರಿಸಬೇಕು, ಎಲ್ಲಿಗೆ ಹೋಗಬೇಕು ಮತ್ತು ಯಾರೊಂದಿಗೆ ಮಾತನಾಡಬೇಕು ಎಂದು ಹೇಳುವುದು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಆರಂಭದಲ್ಲಿ ಇದು ಅಷ್ಟೆಲ್ಲಾ ಸಮಸ್ಯೆ ಎನಿಸದಿದ್ದರೂ, ನಿಮ್ಮ ಸಂಗಾತಿಯ ಸುತ್ತಲೂ ನೀವು ಮೊಟ್ಟೆಯ ಚಿಪ್ಪಿನಂತೆ ಇರಬೇಕು ಎಂದು ಬಯಸುವಂತೆ ಇದು ದೊಡ್ಡದಾಗುತ್ತಾ ಸಾಗುತ್ತದೆ. ನಿಮ್ಮ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಸಂಬಂಧದ ಬಗ್ಗೆ ಇನ್ನೊಮ್ಮೆ ಯೋಚಿಸುವ ಅಗತ್ಯವಿದೆ ಎಂದೇ ಅರ್ಥ.
4) ಸಂಗಾತಿಯ ಮೇಲೆ ಅಗೌರವವು ತೋರುವುದು ಮುಂದಿನ ಹಂತ. ನಿಮ್ಮ ಸಂಗಾತಿಯನ್ನು ಕೀಳಾಗಿ ಕಾಣುವುದು, ಅವಮಾನಿಸುವುದು ಅಥವಾ ಟೀಕಿಸುವುದು ಸೇರಿದಂತೆ ಹಲವು ರೂಪಗಳನ್ನು ಇದು ಒಳಗೊಂಡಿರುತ್ತದೆ. ನಿಮ್ಮ ಸಂಗಾತಿ ನಿರಂತರವಾಗಿ ನಿಮ್ಮನ್ನು ಕೆಳಗಿಳಿಸುತ್ತಿದ್ದರೆ ಅಥವಾ ನಿಮ್ಮ ಬಗ್ಗೆ ಕೆಟ್ಟ ಭಾವನೆ ಮೂಡಿಸುತ್ತಿದ್ದರೆ, ಅದು ದೊಡ್ಡ ರೆಡ್ ಫ್ಲ್ಯಾಗ್ ಎನ್ನುವುದು ನೆನಪಿರಲಿ. ಇದರರ್ಥ ನಿಮ್ಮ ಸಂಗಾತಿಯು (partner) ನಿಮ್ಮನ್ನು ಅಥವಾ ನಿಮ್ಮ ಭಾವನೆಗಳನ್ನು ಗೌರವಿಸುವುದಿಲ್ಲ ಎಂದು ಅರ್ಥ.
ಅಂಡೋತ್ಪತ್ತಿ ಸಮಯದಲ್ಲಿ ಮಹಿಳೆಯರಲ್ಲಿ ಲೈಂಗಿಕ ಬಯಕೆ ಹೆಚ್ಚಾಗುತ್ತದಂತೆ ಹೌದಾ?
5) ಯಾವುದೇ ಆರೋಗ್ಯಕರ ಸಂಬಂಧದ ಪ್ರಮುಖ ಅಂಶವೆಂದರೆ ನಂಬಿಕೆ. ನಿಮ್ಮ ಸಂಗಾತಿಯು ನಿಮ್ಮ ಕ್ರಿಯೆಗಳನ್ನು ನಿರಂತರವಾಗಿ ಪ್ರಶ್ನಿಸುತ್ತಿದ್ದರೆ ಅಥವಾ ನಿಮ್ಮನ್ನು ನಂಬದಿದ್ದರೆ, ಇದು ಸಮಸ್ಯೆಗಳನ್ನು ತಂದೊಡ್ಡುವ ಸಂಕೇತವಾಗಿರಬಹುದು. ಇದು ನಿಮ್ಮ ಫೋನ್ ಅಥವಾ ಸಾಮಾಜಿಕ ಮಾಧ್ಯಮವನ್ನು ಮೇಲ್ವಿಚಾರಣೆ ಮಾಡುವುದರಿಂದ ಹಿಡಿದು ನೀವು ಮೋಸ ಮಾಡುತ್ತಿದ್ದೀರಿ ಎಂದು ಆರೋಪಿಸುವುದನ್ನೂ (accusing) ಒಳಗೊಂಡಿರುತ್ತದೆ. ನಿಮ್ಮ ಸಂಗಾತಿ ನಿಮ್ಮನ್ನು ನಂಬುವುದಿಲ್ಲ ಎಂದು ನೀವು ಭಾವಿಸಿದರೆ, ನಂಬಿಕೆಯ ಕೊರತೆಗೆ ಕಾರಣವೇನು ಎಂಬುದರ ಕುರಿತು ಮುಕ್ತ ಮತ್ತು ಪ್ರಾಮಾಣಿಕ ಸಂಭಾಷಣೆಯನ್ನು ನಡೆಸುವುದು ಮುಖ್ಯ.