ಹೆಣ್ಮಕ್ಕಳು (Woman) ಒಂದ್ ನಿಮಿಷ ಒಂದೆಡೆ ಸೇರಿದ್ರೆ ಸಾಕಪ್ಪಾ ಅದೆಷ್ಟು ಮಾತನಾಡ್ತಾರಪ್ಪಾ. ಇದು ಸಾಮಾನ್ಯವಾಗಿ ಗಂಡು ಮಕ್ಕಳಿಂದ (Men) ಕೇಳಿ ಬರೋ ಕಂಪ್ಲೇಂಟ್. ನಿಜಾನೇ ಒಪ್ಕೊಳ್ಳೋಣ ಹೆಣ್ಮಕ್ಳು ಹೆಚ್ಚು ಮಾತನಾಡ್ತಾರೆ (Men). ಆದ್ರೆ ಇದಕ್ಕೇನು ಕಾರಣ ಅನ್ನೋದು ನಿಮ್ಗೊತ್ತಾ?
ಮಹಿಳೆ (Woman)ಯರಿಬ್ಬರು ಒಂದೆಡೆ ಸೇರಿದರೂ ಸಾಕು ಅಲ್ಲಿ ಬರೀ ಮಾತು ಮಾತು ಮಾತು (Talk). ಮಾತನಾಡಿದಷ್ಟೂ ಮುಗಿಯುವುದಿಲ್ಲ. ಇನ್ನು ಹೆಣ್ಮಕ್ಕಳ ಗುಂಪು ಇದ್ದದಂತೂ ಅವ್ರು ಊಟ, ತಿಂಡಿ ಎಲ್ಲವನ್ನೂ ಬಿಟ್ಟು ಬೇಕಾದರೆ ಮಾತನಾಡುತ್ತಲೇ ಕುಳಿತುಬಿಡುತ್ತಾರೆ. ಗಂಡನ ಕೋಪ, ಮಕ್ಕಳ ರಗಳೆ, ಅತ್ತೆ-ಸೊಸೆಯರ ಜಗಳ, ಸೀರಿಯಲ್‌ನ ಹೀರೋ, ವಿಲನ್ ಎಲ್ಲರೂ ಅಲ್ಲಿ ಬಂದು ಹೋಗುತ್ತಾರೆ. ಹತ್ತು ಊರು-ಕೇರಿಯ ವಿಚಾರವೂ ಅಲ್ಲಿ ಚರ್ಚೆಯಾಗುತ್ತಿರುತ್ತದೆ. ಸೀರೆ, ಒಡವೆಗಳ ಚರ್ಚೆಯಂತೂ ಬೇರೇನೆ ಇದೆ ಬಿಡಿ. ಒಟ್ನಲ್ಲಿ ಹೆಣ್ಮಕ್ಳು ಮಾತನಾಡೋಕೆ ಶುರು ಮಾಡಿಬಿಟ್ರೆ ಅದ್ಕೆ ಕೊನೇನೆ ಇಲ್ಲ. ನಿರಂತರವಾಗಿ ಮಾತನಾಡ್ತಾನೆ ಇರ್ತಾರೆ. ಯಾರಾದ್ರೂ ಮಾತನಾಡಿ ಮಾತನಾಡಿ ಸುಸ್ತಾಗಲ್ವಾ ಅಂದ್ರೂ ಅವರ ಮಾತು ನಿಲ್ಲಲ್ಲ.
ಹೆಣ್ಮಕ್ಕಳು ಸಿಕ್ಕಾಪಟ್ಟೆ ಮಾತನಾಡ್ತಾರೆ ಅನ್ನೋದು ಗಂಡಸರ (Men) ಹಲವು ಕಾಲದ ಕಂಪ್ಲೇಟ್ (Complaint). ಹೆಣ್ಮಕ್ಕಳ ಈ ಅತಿಯಾಗಿ ಮಾತನಾಡೋ ಅಭ್ಯಾಸ 9Habit) ದಿಂದಾಗಿ ಗಂಡಂದಿರು ಅಡುಗೆ ರೆಡಿಯಾಗದೆ ಊಟಾನೂ ಮಾಡದೆ ಒದ್ದಾಡ್ತಾರೆ. ಹೀಗಾಗಿಯೇ ಹೆಣ್ಮಕ್ಕಳು ಯಾಕಪ್ಪಾ ಇಷ್ಟು ಮಾತನಾಡ್ತಾರೆ ಅಂತ ತಿಳಿಯೋ ಕುತೂಹಲ ಅವ್ರಿಗೆ ಖಂಡಿತ ಇರುತ್ತೆ.
ಮದ್ವೆಯಾಗಿ ಒಂದು ವರ್ಷ ಆದ್ರೂ ಹೆಂಡ್ತಿಯ ಅಸಲಿ ಮುಖವನ್ನೇ ನೋಡಿಲ್ವಂತೆ ಗಂಡ..!
ಹೆಣ್ಮಕ್ಕಳು ಇಷ್ಟೆಲ್ಲಾ ಮಾತನಾಡ್ತಾರಲ್ಲ ಅದ್ರಲ್ಲಿ ಅವ್ರ ತಪ್ಪೇನು ಇಲ್ಲ ಬಿಡಿ. ಹೆಣ್ಮಕ್ಕಳು ಹಾಗೆ ನಿರಂತರವಾಗಿ ಮಾತನಾಡೋದು ಯಾಕೆ ಅನ್ನೋದನ್ನು ವಿಜ್ಞಾನವೇ (Science) ಹೇಳುತ್ತದೆ. ಹೆಣ್ಣು ಮಕ್ಕಳು ಅತಿಯಾಗಿ ಮಾತನಾಡೋದರ ಹಿಂದಿರುವ ವೈಜ್ಞಾನಿಕ ಕಾರಣವೇನು ತಿಳಿದುಕೊಳ್ಳೋಣ.
ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಹೊಸ ಅಧ್ಯಯನದ ಪ್ರಕಾರ, ಸರಾಸರಿ ಮಹಿಳೆ ದಿನಕ್ಕೆ ಸುಮಾರು 20,000 ಪದಗಳನ್ನು ಮಾತನಾಡುತ್ತಾರೆ. ಸರಾಸರಿ ಮನುಷ್ಯ, ಏತನ್ಮಧ್ಯೆ, ಕೇವಲ 7,000 ಪದಗಳನ್ನು ಮಾತನಾಡುತ್ತಾನೆ. ಅಧ್ಯಯನವು ಮಹಿಳೆಯರ ಮಿದುಳಿನಲ್ಲಿ ಸುಮಾರು 30 ಪ್ರತಿಶತದಷ್ಟು ಭಾಷೆಯ ಪ್ರೋಟೀನ್ ಇದೆ ಎಂದು ಹೇಳುತ್ತದೆ. ಮಹಿಳೆಯರು ಅವರು ಉತ್ತಮ ಸಂವಹನಕಾರರು ಮತ್ತು ಅವರು ಮನಸ್ಸು ಬಿಚ್ಚಿ ಹೆಚ್ಚು ಮಾತನಾಡಲು ಇಷ್ಟಪಡುತ್ತಾರೆ ಎಂಬುದು ಅಧ್ಯಯನದಿಂದ ಬಹಿರಂಗವಾಗಿದೆ.
ಹೆಣ್ಣುಗಳು ಪುರುಷರಿಗಿಂತ ಹೆಚ್ಚು ಸಾಮಾಜಿಕವಾಗಿರುತ್ತಾರೆ ಎಂದು ಸಂಶೋಧನೆಯು ತೋರಿಸಿದೆ-ಅಂದರೆ, ಅವರು ಇತರ ಜನರಿಗೆ ಹೆಚ್ಚು ಸಹಾಯ ಮಾಡುತ್ತಾರೆ. ಸಾಮಾನ್ಯವಾಗಿ ಸ್ನೇಹಪರ ಮತ್ತು ಹೆಚ್ಚು ಆಹ್ಲಾದಕರರು. ಸಾಮಾಜಿಕತೆಯು ಮುಖಾಮುಖಿ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೀಗಾಗಿ ಸಹಜವಾಗಿಯೇ ಹೆಣ್ಮಕ್ಕಳು ಮಾತನಾಡುವ ಪ್ರಮಾಣ ಪುರುಷರಿಗಿಂತ ಅಧಿಕವಾಗಿದೆ.
ಗರ್ಭಿಣಿಯಾಗಿದ್ದಾಗಲೇ ಮತ್ತೊಮ್ಮೆ ಗರ್ಭಿಣಿಯಾದ ಮಹಿಳೆ ! ಅರೆ ಇದು ಹೇಗೆ ಸಾಧ್ಯ?
ಪುರುಷರು ಕೆಲಸಗಳನ್ನು ಮಾಡಲು ಮಾತನಾಡುತ್ತಾರೆ; ಮಹಿಳೆಯರು ಭಾವನಾತ್ಮಕ ಸಂಪರ್ಕವನ್ನು ಮಾಡಲು ಮಾತನಾಡುತ್ತಾರೆ. ಪುರುಷರು ವಿಷಯಗಳ ಬಗ್ಗೆ ಮಾತನಾಡುತ್ತಾರೆ, ಮಹಿಳೆಯರು ಜನರು, ಸಂಬಂಧಗಳು ಮತ್ತು ಭಾವನೆಗಳ ಬಗ್ಗೆ ಮಾತನಾಡುತ್ತಾರೆ. ಪುರುಷರು ತಿಳಿಸಲು, ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಮತ್ತು ಸ್ಥಾನಮಾನವನ್ನು ಕಾಪಾಡಿಕೊಳ್ಳಲು ಸ್ಪರ್ಧಿಸಲು ಭಾಷೆಯನ್ನು ಬಳಸುತ್ತಾರೆ, ಆದರೆ ಮಹಿಳೆಯರು ಸಹಕಾರವನ್ನು ಹೆಚ್ಚಿಸಲು ಭಾಷೆಯನ್ನು ಬಳಸುತ್ತಾರೆ, ಸಮಾನತೆ ಮತ್ತು ಸಾಮರಸ್ಯಕ್ಕಾಗಿ ಅವರ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ. ಹೀಗಾಗಿಯೇ ಮಹಿಳೆಯರಿಗೆ ಮಾತನಾಡಲು ಹೆಚ್ಚು ವಿಷಯಗಳಿರುತ್ತವೆ. ಹೆಚ್ಚೆಚ್ಚು ಮಾತನಾಡುತ್ತಾರೆ ಎಂಬುದು ಅಧ್ಯಯನದಿಂದ ಬಹಿರಂಗಗೊಂಡಿದೆ.
ಟ್ಯಾನೆನ್ ಒಬ್ಬ ಗೌರವಾನ್ವಿತ ಭಾಷಾಶಾಸ್ತ್ರಜ್ಞ. ಅವರು ಭಾಷೆ, ಸಂವಹನ ಮತ್ತು ಲಿಂಗಗಳ ಕುರಿತು ಸುಮಾರು 30 ವರ್ಷಗಳ ನಡೆಸಿದ ಸಂಶೋಧನೆಯಿಂದ ಮಹಿಳೆಯರು ಈ ಕಾರಣಕ್ಕಾಗಿ ಹೆಚ್ಚು ಮಾತನಾಡುತ್ತಾರೆ ಎಂಬುದನ್ನು ಗುರುತಿಸಿಕೊಂಡಿದ್ದಾರೆ.